JAWAN: ನಯನತಾರಾ ಜತೆ ನಟಿಸುವಾಗ ಶಾರುಖ್ಗೆ ಅವ್ರ ಮೇಲೆ ಮನಸ್ಸಾಗಿತ್ತಾ? ನಟ ಹೇಳಿದ್ದೇನು?
ಜವಾನ್ ಚಿತ್ರದಲ್ಲಿ ನಟಿಸುವಾಗ ಶಾರುಖ್ ಖಾನ್ಗೆ ನಟಿ ನಯನತಾರಾ ಜೊತೆ ಲವ್ ಆಗಿತ್ತಾ? ಫ್ಯಾನ್ಸ್ ಕೇಳಿದ ಪ್ರಶ್ನೆಗೆ ಶಾರುಖ್ ಉತ್ತರಿಸಿದ್ದೇನು?
ಶಾರುಖ್ ಖಾನ್ ಅಭಿನಯದ 'ಜವಾನ್' (Jawan) ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 7ರಂದು ಜವಾನ್ ಬಿಡುಗಡೆಯಾಗಲಿದ್ದು, ಶಾರುಖ್ ಫ್ಯಾನ್ಸ್ ತುದಿಗಾಲಿನಲ್ಲಿ ಚಿತ್ರ ನೋಡಲು ನಿಂತಿದ್ದಾರೆ. ‘ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದೆ. ಈ ಚಿತ್ರವನ್ನು ದಕ್ಷಿಣದ ಹಿಟ್ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ ಮತ್ತು ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ನಟಿಸಿದ್ದಾರೆ. ಚಿತ್ರದ ಮುನ್ನೋಟ ಮತ್ತು ಟ್ರೇಲರ್ ಇದಾಗಲೇ ಬಿಡುಗಡೆಯಾಗಿದ್ದು ಸಕತ್ ಹಿಟ್ ಆಗಿವೆ. ಚಿತ್ರದಲ್ಲಿ ಶಾರುಖ್ ಮಾತ್ರವಲ್ಲದೆ 10 ವಿಶೇಷ ಮುಖಗಳಿದ್ದು, ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಲ್ಲದೇ ಮೂರು ಸೂಪರ್ ಸ್ಟಾರ್ಗಳ ಅತಿಥಿ ಪಾತ್ರವೂ ಪ್ರೇಕ್ಷಕರನ್ನು ರಂಜಿಸಲಿದೆ. ಶಾರುಖ್ ಖಾನ್ ಚಿತ್ರದಲ್ಲಿ ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಕ್ಷಿಣದ ಬಹುತೇಕ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ತಮಿಳಿನ ವಿಜಯ್ ಸೇತುಪತಿ ಮುಖ್ಯ ವಿಲನ್ ರೀತಿನೇ ಕಾಣಿಸುತ್ತಿದ್ದಾರೆ. ನಟಿ ದೀಪಿಕಾ ಪಡುಕೋಣೆ (Deepika Padukone) ಇಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದಾರೆ. ನಯನತಾರಾ ಇಲ್ಲಿ ಹೊಸ ಖದರ್ ಅಲ್ಲಿಯೇ ಬರ್ತಿದ್ದಾರೆ. ಕನ್ನಡದ ಪ್ರಿಯಾಮಣಿ ಕೂಡ ಅಭಿನಯಿಸಿದ್ದಾರೆ.
ಇದರ ನಡುವೆಯೇ ನಟ ಶಾರುಖ್ ಖಾನ್ (Shah rukh Khan) ಕೆಲ ತಿಂಗಳಿನಿಂದ ಟ್ವಿಟರ್ನಲ್ಲಿ ನಡೆಸುತ್ತಿರುವ #AskSRK ಸೆಷನ್ ಮುಂದುವರೆದಿದ್ದು, ಫ್ಯಾನ್ಸ್ ಥಹರೇವಾರಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಜವಾನ್ ಚಿತ್ರದ ಕುರಿತಾಗಿಯೂ ಇದಾಗಲೇ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ. ಇಂಥ ಬಹುತೇಕ ಪ್ರಶ್ನೆಗಳಿಗೆ ಶಾರುಖ್ ತಮಾಷೆಯ ಉತ್ತರಗಳನ್ನು ನೀಡುವುದುಂಟು. ಕೆಲವು ಅಸಭ್ಯ ಎನಿಸುವ ಪ್ರಶ್ನೆಗಳಿಗೆ ಮಾತ್ರ ಗರಂ ಆಗಿಯೇ ಪ್ರತಿಕ್ರಿಯೆ ನೀಡುತ್ತಾರೆ. ಇದೀಗ ಜವಾನ್ ಚಿತ್ರದ ಕುರಿತು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಅವರು ಕೇಳಿದ್ದೇನೆಂದರೆ, ಚಿತ್ರದಲ್ಲಿ ನಯನತಾರಾ ನಟಿಸಿದ್ದಾರೆ. ಹೀಗೆ ಅವರ ಜೊತೆ ನಟಿಸುವಾಗ ಅವರ ಬಗೆಗಿನ ಅಭಿಪ್ರಾಯವನ್ನು ಕೇಳಿದ್ದಾರೆ.
ನಾನು ಕೆಟ್ಟವನೋ, ಒಳ್ಳೆಯವನೊ? ಉತ್ತರ ಹೇಳಲು 30 ದಿನ ಗಡುವು ನೀಡಿದ ಶಾರುಖ್ ಖಾನ್!
ಅಭಿಮಾನಿ ಕೇಳಿದ್ದೇನೆಂದರೆ, 'ನಯನತಾರಾ ಜೊತೆ ನಟಿಸುವಾಗ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೀರಾ' ಎಂದು. ಅವರು ಹೀಗೆ ಕೇಳಿರುವುದಕ್ಕೆ ಕಾರಣವೂ ಇದೆ. ಅದೇನೆಂದರೆ ಈ ಹಿಂದೆ ಶಾರುಖ್ ಅವರು ನಯನತಾರಾ ಕುರಿತು ಹೇಳಿದ್ದರು. ಜವಾನ್ ಚಿತ್ರದಲ್ಲಿ ನಯನತಾರಾ ನನ್ನ ರೋಮ್ಯಾಂಟಿಕ್ ಪಾಲುದಾರರಾಗಿ ನಟಿಸಿದ್ದಾರೆ ಎಂದಿದ್ದರು. ಈ ಬಗ್ಗೆ ನಯನತಾರಾ ಪತಿ ವಿಘ್ನೇಶ್ ಶಿವನ್ (Vighnesh Shivan) ಕೂಡ ಈ ಬಗ್ಗೆ ತಿಳಿಸಿದ್ದರು. ಶಾರುಖ್ ಅವರನ್ನು ಉದ್ದೇಶಿಸಿ ವಿಘ್ನೇಶ್ ಅವರು, ಚಿತ್ರದಲ್ಲಿ ನಿಮ್ಮಿಬ್ಬರ ನಡುವೆ ಕೆಲವು ಉತ್ತಮ ಪ್ರಣಯವಿದೆ, ನಯನತಾರಾ ಪ್ರಣಯದ ರಾಜನಿಂದ ಕಲಿಯುತ್ತಿದ್ದಾಳೆ ಎಂದಿದ್ದರು. ಇದೇ ಕಾರಣಕ್ಕೆ ಅಭಿಮಾನಿಯೋರ್ವ ಈ ಪ್ರಶ್ನೆಯನ್ನು ಶಾರುಖ್ ಮುಂದಿಟ್ಟಿದ್ದಾರೆ.
ಅಷ್ಟೇ ತಮಾಷೆಯಾಗಿ ಉತ್ತರಿಸಿದ ಶಾರುಖ್, 'ಚುಪ್ ಕರೋ! ದೋ ಬಚ್ಚೋನ್ ಕಿ ಮಾ ಹೈ ವೋ! ಎಂದಿದ್ದಾರೆ. ಅಂದರೆ ಸುಮ್ಮನಿರಿ, ಅವಳೀಗ ಎರಡು ಮಕ್ಕಳ ತಾಯಿ (Children) ಎಂದಿದ್ದಾರೆ. ಇದಕ್ಕೆ ಸಿಕ್ಕಾಪಟ್ಟೆ ಕಮೆಂಟ್ಸ್ಗಳು ಬಂದಿದ್ದು, ಶಾರುಖ್ ಅವರ ಹಾಸ್ಯವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಇದೇ ಸೆಷನ್ನಲ್ಲಿ ಇನ್ನೋರ್ವ ಫ್ಯಾನ್ ಹುಡುಗಿಯರನ್ನು ಪಟಾಯಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಶಾರುಖ್ ಖಾನ್ ಪಟಾಯಿಸುವುದು ಶಬ್ದವನ್ನು ಬಳಸಬೇಡಿ, ಅದು ಸಭ್ಯವಲ್ಲ ಎಂದಿದ್ದಾರೆ. ಅಂದಹಾಗೆ, 2022ರಲ್ಲಿ ಬಾಡಿಗೆ ತಾಯಿ ಮೂಲಕ ನಯನತಾರಾ ಮತ್ತು ವಿಘ್ನೇಶ್ ಶಿವನ್ (Vignesh Shivan) ಅವರು ಅವಳಿ ಗಂಡು ಮಕ್ಕಳನ್ನು ಪಡೆದರು. ಉಯಿರ್ ಮತ್ತು ಉಳಗಂ ಎಂದು ಅವರು ಮಕ್ಕಳಿಗೆ ಹೆಸರು ಇಟ್ಟಿದ್ದಾರೆ.
57ನೇ ವಯಸ್ಸಲ್ಲೂ ಶಾರುಖ್ ಹ್ಯಾಂಡ್ಸಮ್ ಆಗಿರೋದ್ಯಾಕೆ? ಆನಂದ್ ಮಹೀಂದ್ರಾ ಉತ್ತರ ಕೇಳಿ...