Pathaan Trailer; ದುಬೈನಲ್ಲಿ ಶಾರುಖ್ ಸಿನಿಮಾ ಪ್ರಚಾರ; ಬುರ್ಜ್ ಖಲೀಫ ಮೇಲೆ ರಾರಾಜಿಸಿದ ಪಠಾಣ್ ಟ್ರೈಲರ್

ಶಾರುಖ್ ಖಾನ್ ಸದ್ಯ ದುಬೈನಲ್ಲಿದ್ದು ಪಠಾಣ್ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಬುರ್ಜ್ ಖಲೀಫಾ ಮೇಲೆ ಪಠಾಣ್ ಸಿನಿಮಾದ ಟ್ರೈಲರ್ ಪ್ಲೇ  ಮಾಡಲಾಗಿದೆ.

Shah Rukh Khan Watches As Pathaan Trailer on Burj Khalifa in Dubai sgk

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮುಂದಿನ ಪಠಾಣ್ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬೈಕಾಟ್ ಟ್ರೆಂಡ್, ಭಾರಿ ವಿರೋಧಗಳ ನಡುವೆಯೂ ಶಾರುಖ್ ಖಾನ್ ಪಠಾಣ್ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಾರುಖ್ ದುಬೈನಲ್ಲಿದ್ದು ಅಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಶಾರುಖ್ ಅನೇಕ ವರ್ಷಗಳ ಬಳಿಕ ತೆರೆಮೇಲೆ ಬರುತ್ತಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಪಠಾಣ್ ಇದೇ ತಿಂಗಳು ಜನವರಿ 25ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. 

ಭಾರದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಶಾರುಖ್ ಪಠಾಣ್ ಸಿನಿಮಾ ನಿರೀಕ್ಷೆ ಮೂಡಿಸಿದೆ. ಶಾರುಖ್ ಸದ್ಯ ದುಬೈನಲ್ಲಿದ್ದಾರೆ. ಪಠಾಣ್ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ದುಬೈನ ವಿಶ್ವಪ್ರಸಿದ್ಧ ಬುರ್ಜಿ ಖಲೀಫಾ ಮೇಲೆ ಪಠಾಣ್ ಸಿನಿಮಾದ ಟ್ರೈಲರ್ ಪ್ಲೇ ಮಾಡಲಾಗಿದ್ದು ಶಾರುಖ್ ಖಾನ್ ಕುತೂಹಲದಿಂದ ವೀಕ್ಷಿಸಿದ್ದಾರೆ. ಶಾರುಖ್ ಖಾನ್ ಬುರ್ಜ್ ಖಲೀಫಾ ಮೇಲೆ ಟ್ರೈಲರ್ ಪ್ಲೇ ಆಗಿದ್ದನ್ನು ನೋಡಿ ಫುಲ್ ಖುಷ್ ಆಗಿದ್ದಾರೆ. ಬಳಿಕ ಅಭಿಮಾನಿಗಳತ್ತ ಕೈ ಬೀಸಿ ಪ್ರೀತಿ ವ್ಯಕ್ತಪಡಿಸಿದರು. 

ಪಠಾಣ್ ಡಿಸಾಸ್ಟರ್ ಆಗಿದೆ, ನಿವೃತ್ತಿ ತಗೊಳ್ಳಿ; ನೆಟ್ಟಿಗನ ಮಾತಿಗೆ ಶಾರುಖ್ ಕೊಟ್ಟ ಉತ್ತರಕ್ಕೆ ಫ್ಯಾನ್ಸ್ ಫಿದಾ

ಬುರ್ಜ್ ಖಲೀಫ ಮೇಲೆ ರಾರಾಜಿಸಿದ ಪಠಾಣ್ ಟ್ರೈಲರ್ ನೋಡಿ ಅಭಿಮಾನಿಗಳು ಸಹ ಫುಲ್ ಖುಷ್ ಆಗಿದ್ದಾರೆ. ವಿಡಿಯೋ ಶೇರ್ ಮಾಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಪಠಾಣ್ ಸಿನಿಮಾದಲ್ಲಿ ಶಾರುಖ್ ಜೊತೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಮತ್ತು ಶಾರುಖ್ ನಟನೆಯಯ ನಾಲ್ಕನೇ ಸಿನಿಮಾ ಇದಾಗಿದೆ. ಇಬ್ಬರನ್ನು ತೆರೆಮೇಲೆ ನೋಡಲು ಕಾತರರಾಗಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಬಂದಿರುವ ಈ ಸಿನಿಮಾದ ಟ್ರೇಲರ್ ಸದ್ಯ ರಿಲೀಸ್ ಆಗಿದ್ದು ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಿ ಶಾರುಖ್ ಕಾಣಿಸಿಕೊಂಡಿದ್ದಾರೆ.   

ಆರ್ಯನ್ ಖಾನ್ ರಾತ್ರಿ ಮಲಗುವುದಿಲ್ಲ; ಯಾರಿಗೂ ತಿಳಿಯದ ಸತ್ಯ ಬಿಚ್ಚಿಟ್ಟ ಶಾರುಖ್ ಖಾನ್

ಪಠಾಣ್ ಸಿನಿಮಾದ ಹಾಡು ರಿಲೀಸ್ ಆಗುತ್ತಿದ್ದಂತೆ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಸಾಕಷ್ಟು ವಿವಾದಗಳನ್ನು ಎದುರಿಸುತ್ತಿದೆ. ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಚಿತ್ರೀಕರಿಸಿದ್ದ ಬೇಷರಂ ರಂಗ್ ಹಾಡನ್ನು ಬ್ಯಾನ್ ಮಾಡಬೇಕು, ಅಶ್ಲೀಲತೆ ಪ್ರಚಾರ ಮಾಡಲಾಗುತ್ತಿದೆ, ಕೇಸರಿ ಬಣ್ಣದ ಬಿಕಿನಿ ಧರಿಸಿ ನಾಚಿಕೆ ಇಲ್ಲದ ಬಣ್ಣ  ಎಂದಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಪಠಾಣ್ ಬೈಕಾಟ್ ಟ್ರೆಂಡ್ ಆಗುತ್ತಿದೆ. ಆದರೆ ಶಾರುಖ್ ಮತ್ತು ತಂಡ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಜನವರಿ 25ರಂದು ಸಿನಿಮಾ ನೋಡಿ ಎಂದು ಅಭಿಮಾನಿಗಳಿಗೆ ಹೇಳುತ್ತಿದ್ದಾರೆ. 

Latest Videos
Follow Us:
Download App:
  • android
  • ios