Asianet Suvarna News Asianet Suvarna News

'ಪಠಾಣ್' ಭಾರತದಲ್ಲಿ ಕ್ರಾಂತಿ ಆರಂಭಿಸಿದೆ; ನಿರ್ದೇಶಕ ಅನುರಾಗ್ ಕಶ್ಯಪ್

ಪಠಾಣ್ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಕ್ರಾಂತಿ ಮೂಡಿಸಿದೆ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ.

Shah Rukh Khan starrer Pathaan started a revolution in India says Anurag Kashyap sgk
Author
First Published Feb 1, 2023, 4:08 PM IST


ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿತಿಗಷ್ಟೆ ಸುಶಾಂತ್ ಸಿಂಗ್ ಸಾಯುವ ಕೆಲವೇ ದಿನಗಳ ಮೊದಲು ಕರೆ ಮಾಡಿದ್ದರು ಆದರೆ ಮಾತನಾಡಲು ನಿರಾಕರಿಸಿದ್ದೆ ಎಂದು ಬಹಿರಂಗ ಪಡಿಸಿದ್ದ ಅನುರಾಗ್ ಕಶ್ಯಪ್ ಇದೀಗ ಪಠಾಣ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಪಠಾಣ್ ಸಿನಿಮಾ ಕ್ರಾಂತಿ ಮಾಡಿದೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ. ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ. ಕೋಟಿ ಕೋಟಿ ಕಮಾಯಿ ಮಾಡಿದೆ. ಶಾರುಖ್ ಅನೇಕ ವರ್ಷಗಳ ಬಳಿಕ ತೆರೆಮೇಲೆ ಬಂದಿದ್ದು ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಅತ್ಯಂತ ವೇಗದಲ್ಲಿ 300 ಕೋಟಿ ಕ್ಲಬ್ ಸೇರಿದ ಹಿಂದಿ ಸಿನಿಮಾ ಎಂಬ ಖ್ಯಾತಿ ಕೂಡ ಪಠಾಣ್ ಗಳಿಸಿದೆ. 

ಪಠಾಣ್ ಸಿನಿಮಾವನ್ನು ಅನೇಕರು ಹಾಡಿಹೊಗಳುತ್ತಿದ್ದಾರೆ. ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ಸಿನಿಮಾವನ್ನು ಹೊಗಳಿದ್ದಾರೆ. ಬೈಕಾಟ್, ವಿವಾದಗಳ ನಡುವೆಯೂ ಪಠಾಣ್ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಕ್ರಾಂತಿ ಮೂಡಿಸಿದೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಅನುರಾಗ್ ಕಶ್ಯಪ್,  'ಸಿನಿಮಾಗಳು ಕ್ರಾಂತಿಯನ್ನು ಹುಟ್ಟುಹಾಕಿವೆ. ಶಾರುಖ್ ಖಾನ್ ಪಠಾಣ್‌ನಿಂದಾಗಿ ಭಾರತೀಯ ಚಿತ್ರಮಂದಿರಗಲ್ಲಿ ಕ್ರಾಂತಿಯಾಗಿದೆ' ಎಂದು ಹೇಳಿದ್ದಾರೆ. 

RRR ನಿರ್ದೇಶಕ ರಾಜಮೌಳಿಯನ್ನು ಕದಿಯಬಹುದು; ಕಳವಳ ವ್ಯಕ್ತಪಡಿಸಿದ ಅನುರಾಗ್ ಕಶ್ಯಪ್

ಸಿನಿಮಾ ಬಿಡುಗೆಯಾದ ಮೊದಲ ದಿನವೇ ಅನುರಾಗ್ ಕಶ್ಯಪ್ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದರು. ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದರು. ಶಾರುಖ್ ಖಾನ್ ಅವರನ್ನು ನಾನು ಇಷ್ಟು ಸುಂದರವಾಗಿ ಎಂದೂ ನೋಡಿಲ್ಲ. ಹಾಗಾಗಿ ಅವರನ್ನು ನೋಡಲು ಬಂದೆ ಮತ್ತು ನನಗೆ ತುಂಬಾ ಸಂತೋಷವಾಗಿದೆ. ಆಕ್ಷನ್ ಸೀಕ್ವೆನ್ಸ್ ತುಂಬಾ  ಡೇಂಜರಸ್ ಆಗಿದೆ. ಶಾರುಖ್ ಮೊದಲ ಬಾರಿಗೆ ಇಂಥ ಪಾತ್ರ ಮಾಡಿದ್ದಾರೆ' ಎಂದು ಹೇಳಿದ್ದರು. ಇದೀಗ ಮತ್ತೆ ಮಾತನಾಡಿ ಪಠಾಣ್ ಭಾರತೀಯ ಸಿನಿಮಾರಂಗದಲ್ಲಿ ಕ್ರಾಂತಿ ಮೂಡಿಸಿದೆ ಎಂದು ಹೇಳಿದ್ದಾರೆ. 

ಸುಶಾಂತ್ ಸಿಂಗ್ ಜೊತೆ ಮಾತನಾಡಲು ನಾನು ನಿರಾಕರಿಸಿದ್ದೆ; ನಿರ್ದೇಶಕ ಅನುರಾಗ್ ಕಶ್ಯಪ್ ಶಾಕಿಂಗ್ ಹೇಳಿಕೆ

ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಬಂದ ಪಠಾಣ್ ಸಿನಿಮಾದಲ್ಲಿ ಶಾರುಖ್ ಮತ್ತು ದೀಪಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ವಿಲನ್ ಆಗಿ ಜಾನ್ ಅಬ್ರಹಾಂ ಮಿಂಚಿದ್ದಾರೆ. ಚಿತ್ರದಲ್ಲಿ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಿದ್ದು ಅಭಿಮಾನಿಗಳು ಕಣ್ಣಿಗೆ ದೊಡ್ಡ ಹಬ್ಬವಾಗಿದೆ. 

Follow Us:
Download App:
  • android
  • ios