RRR ನಿರ್ದೇಶಕ ರಾಜಮೌಳಿಯನ್ನು ಕದಿಯಬಹುದು; ಕಳವಳ ವ್ಯಕ್ತಪಡಿಸಿದ ಅನುರಾಗ್ ಕಶ್ಯಪ್
ನಿರ್ದೇಶಕ ರಾಜಮೌಳಿ ಭಾರತದಿಂದ ಮಾಯ ಆಗಬಹುದು ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಕಳವಳ ವ್ಯಕ್ತಪಡಿಸಿದ್ದಾರೆ.
ಎಸ್ ಎಸ್ ರಾಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಗೆದ್ದು ಬೀಗುತ್ತಿರುವ ರಾಜಮೌಳಿ ಸದ್ಯ ಆಸ್ಕರ್ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಆಸ್ಕರ್‌ಗೆ ಆರ್ ಆರ್ ಆರ್ ಸಿನಿಮಾದ ನಾಟು..ನಾಟು ಹಾಡು ನಾಮ ನಿರ್ದೇಶನಗೊಂಡಿದೆ. ನಾಟು ನಾಟು...ಆಸ್ಕರ್ ಗೆಲ್ಲುವುದು ಬಹುತೇಕ ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ. ಗೋಲ್ಡನ್ ಗ್ಲೋಬ್ಸ್ ಗೆದ್ದ ಬಳಿಕ ರಾಜಮೌಳಿ ಹಾಲಿವುಡ್‌ನ ಅನೇಕ ಗಣ್ಯರ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಹಾಲಿವುಡ್ ಸಿನಿಮಾ ಮಾಡುವ ಆಸೆಯನ್ನು ಹೊರಹಾಕಿದ್ದರು.
ರಾಜಮೌಳಿ ಅವರ ಹಾಲಿವುಡ್ ಸಿನಿಮಾ ಚರ್ಚೆಯ ನಡುವೆ ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್, ಆರ್ ಆರ್ ಆರ್ ನಿರ್ದೇಶಕ ಭಾರತದಿಂದ ಮಾಯವಾಗುವ ಕಳವಳ ವ್ಯಕ್ತಪಡಿಸಿದ್ದಾರೆ. ರಾಜಮೌಳಿ ಅವರನ್ನು ಪಾಶ್ಚಿಮಾತ್ಯರು ಕದಿಯಬಹುದು ಎಂದು ಹೇಳಿದ್ದಾರೆ. 'ಪಾಶ್ಚಿಮಾತ್ಯರು ಈಗ ರಾಜಮೌಳಿ ಅವರನ್ನು ಸಂಪರ್ಕ ಮಾಡುವ ಪ್ರಯತ್ನದಲ್ಲಿ ಇದ್ದಾರೆ. ಅತೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತ ಸಿನಿಮಾ ಮಾಡುವ ನಿರ್ದೇಶಕರು. ಅವರು ಡಿಸಿ ಮತ್ತು ಮಾರ್ವೆಲ್ ಅಂಥ ನಿರ್ದೇಶಕರಂತೆ. ಭಾರತ ಮತ್ತು ಪಾಶ್ಚಿಮಾತ್ಯರ ನಡುವಿನ ಸಹಯೋಗದ ಕುರಿತು ಸಂಭಾಷಣೆಗಳು ಬಹಳ ಸಮಯದಿಂದ ನಡೆಯುತ್ತಿವೆ. ಆದರೆ ಎಸ್ಎಸ್ ರಾಜಮೌಳಿ ಜೊತೆ ಇದು ಸಹಯೋಗವಾಗುವುದಿಲ್ಲ. ಅವರು ರಾಜಮೌಳಿಯನ್ನು ನಮ್ಮಿಂದ ಕದಿಯುತ್ತಾರೆ' ಎಂದು ಅನುರಾಗ್ ಕಶ್ಯಪ್ ಹೇಳಿದರು.
ಹಾಲಿವುಡ್ ಸಿನಿಮಾ ಮಾಡುವಂತೆ ರಾಜಮೌಳಿಗೆ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಆಹ್ವಾನ
ಹಾಲಿವುಡ್ ಸಿನಿಮಾ ಮಾಡುವಂತೆ ಜೇಮ್ಸ್ ಕ್ಯಾಮರಾನ್ ಆಹ್ವಾನ
ಹಾಲಿವುಡ್ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಅವರನ್ನು ಭೇಟಿಯಾಗಿದ್ದರು. ಭೇಟಿ ವೇಳೆ ಹಾಲಿವುಡ್‌ಗೆ ಆಹ್ವಾನ ಮಾಡಿದ್ದರು ಎಂದು ಬಹಿರಂಗ ಪಡಿಸಿದ್ದರು. 'ನೀವು ಎಂದಾದರೂ ಇಲ್ಲಿ ಸಿನಿಮಾ ಮಾಡಲು ಬಯಸಿದರೆ ಹೇಳಿ ಮಾತಾಡೋಣ' ಎಂದು ಹೇಳಿದರು ಎಂದು ರಾಜಮೌಳಿ ಬಹಿರಂಗ ಪಡಿಸಿದರು. ಇದಕ್ಕಿಂತ ಉತ್ತಮವಾಗಿದ್ದು ಏನಿದೆ ಎಂದು ಹೇಳಿದರು. ಬಳಿಕ ರಾಜಮೌಳಿ ಅವರ ಹಾಲಿವುಡ್ ಸಿನಿಮಾದ ಬಗ್ಗೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ.
ರಿಹಾನ್ನಾ, ಲೇಡಿ ಗಾಗಾ ಸೇರಿ 4 ಹಾಡುಗಳ ಜೊತೆ ನಾಟು..ನಾಟು..ಸ್ಪರ್ಧೆ; ಆಸ್ಕರ್ ರೇಸ್‌ನಲ್ಲಿವೆ 2 ಸಾಕ್ಷ್ಯಚಿತ್ರ
ಆರ್ ಆರ್ ಆರ್ ಸಿನಿಮಾ ಮೂಲಕ ರಾಜಮೌಳಿ ಅಂತಾರಾಷ್ಟ್ರೀಯ ಬ್ರಾಂಡ್ ಆಗಿದ್ದಾರೆ. ರಾಜಮೌಳಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ನಿರೀಕ್ಷೆ ಜಾಸ್ತಿ ಆಗಿದೆ. ಸದ್ಯ ರಾಜಮೌಳಿ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದ ರಾಜಮೌಳಿ ಸದ್ಯದಲ್ಲೇ ಬಹುದೊಡ್ಡ ಅಪ್‌ಡೇಟ್ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಸದ್ಯ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಸಂಭ್ರಮವನ್ನು ಎಂಜಾಯ್ ಮಾಡುತ್ತಿರುವ ರಾಜಮೌಳಿ ಆಸ್ಕರ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.