ನೆಟ್ಟಿಗನ ಪ್ರಶ್ನೆಗೆ ಕಿಡಿ ಕಾರಿರುವ ನಟ ಶಾರುಖ್​ ಖಾನ್​, ಅವರಿಗೆ ಲೂಸ್​ ಮೋಷನ್​ ಔಷಧ ಕಳಿಸಿಕೊಡ್ತೇನೆ ಎಂದಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 

ಒಂದರ ಮೇಲೊಂದು ಫ್ಲಾಪ್​ ಚಿತ್ರ ಕೊಟ್ಟು ನಾಲ್ಕೈದು ವರ್ಷಗಳ ಬಳಿಕ ಪಠಾಣ್​ ಮೂಲಕ ಕಮ್​ಬ್ಯಾಕ್​ ಆಗಿದ್ದ ನಟ ಶಾರುಖ್​ ಖಾನ್​ ಅವರಿಗೆ ಅಲ್ಲಿಂದಲೇ ಶುಕ್ರದೆಸೆ ಪ್ರಾರಂಭವಾಗಿದೆ. ಪಠಾಣ್​ ಭರ್ಜರಿ ಕಲೆಕ್ಷನ್​ ಬಳಿಕ, ಅವರು ನಟಿಸಿದ್ದ ಜವಾನ್​ ಚಿತ್ರ ಗಲ್ಲಾಪೆಟ್ಟಿಗೆಯ ಚಿಂದಿ ಉಡಾಯಿಸಿತು. ಪಠಾಣ್​, ಜವಾನ್​ ಯಶಸ್ಸಿನ ಬಳಿಕ ಶಾರುಖ್​ ಖಾನ್​ ಅವರ ಮೂರನೆಯ ಚಿತ್ರ ಡಂಕಿಯ ಟ್ರೇಲರ್​ ಮೊನ್ನೆ ರಿಲೀಸ್​ ಆಗಿದ್ದು ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಪಠಾಣ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1,055 ಕೋಟಿ ಗಳಿಸಿದರೆ, ಜವಾನ್ ವಿಶ್ವಾದ್ಯಂತ ಒಟ್ಟು 1,149.85 ಕೋಟಿ ಗಳಿಸಿದೆ. ಬಾಲಿವುಡ್​ನ ವಿವಾದಾತ್ಮಕ ವಿಮರ್ಶಕ ಎಂದು ಕರೆಸಿಕೊಳ್ಳುತ್ತಿರುವ ಕೆಆರ್​ಕೆ ಸೇರಿದಂತೆ ಹಲವರು ಇನ್ನೊಂದು ಸಾವಿರ ಕೋಟಿ ಫಿಕ್ಸ್​ ಎಂದು ಹೇಳುತ್ತಿದ್ದಾರೆ. ಈ ಚಿತ್ರವು ಇದೇ 21ರಂದು ಬಿಡುಗಡೆಯಾಗಲಿದೆ.

ಇದರ ಮಧ್ಯೆಯೇ ನಟ ಶಾರುಖ್​ ವರ್ಷದಿಂದ ಆಸ್ಕ್​ ಎನಿಥಿಂಗ್​ ಎನ್ನುವ ಪ್ರಶ್ನೋತ್ತರ ಕಲಾಪ ಶುರು ಮಾಡಿದ್ದಾರೆ. ಫ್ಯಾನ್ಸ್​ ಅವರಿಗೆ ಎಕ್ಸ್​ ಖಾತೆಯಲ್ಲಿ ಏನಾದರೂ ಪ್ರಶ್ನೆ ಕೇಳಬಹುದು. ಅದರ ಪೈಕಿ ಹಲವು ಪ್ರಶ್ನೆಗಳಿಗೆ ಶಾರುಖ್​ ಉತ್ತರಿಸುತ್ತಿದ್ದಾರೆ. ಹಲವು ಪ್ರಶ್ನೆಗಳಿಗೆ ಫನ್ನಿ ಉತ್ತರ ನೀಡುವ ಶಾರುಖ್​ ಕೆಲವೊಮ್ಮೆ ಗರಂ ಆಗುವುದೂ ಇದೆ. ಅದೇ ರೀತಿ ಟ್ರೋಲಿಗನೊಬ್ಬನ ಪ್ರಶ್ನೆಗೆ ನಟ ಶಾರುಖ್​ ಖಾನ್​ ಕೊಟ್ಟಿರುವ ಉತ್ತರವು ಸಕತ್​ ವೈರಲ್​ ಆಗುತ್ತಿದೆ.

ಡಂಕಿ ಟ್ರೇಲರ್​ ರಿಲೀಸ್​: ಇಂಗ್ಲಿಷ್​ ಬರದವರ ಕಥೆ-ವ್ಯಥೆಯ ಜೊತೆಗೆ ಬಗೆ ಬಗೆ ರೂಪದಲ್ಲಿ ಶಾರುಖ್​!

ಅಷ್ಟಕ್ಕೂ ಆಗಿದ್ದೇನೆಂದರೆ, ಇದರಲ್ಲಿ ಕಮೆಂಟ್​ ಮಾಡಿದ ನೆಟ್ಟಿಗನೊಬ್ಬ ಪಠಾಣ್ ಹಾಗೂ ಜವಾನ್ ಸಿನಿಮಾವನ್ನು ವೇಸ್ಟ್ ಎಂದು ಹೇಳಿದ್ದಾರೆ. ಉತ್ತಿಷ್ಠ ಭಾರತ ಎನ್ನುವ ಎಕ್ಸ್​ ಖಾತೆಯಿಂದ ಈ ಪ್ರಶ್ನೆ ಶೇರ್​ ಮಾಡಲಾಗಿದೆ. ಈ ಎರಡೂ ಚಿತ್ರಗಳನ್ನು ಟಟ್ಟಿ ಅಂದರೆ ಮಲಕ್ಕೆ ಹೋಲಿಕೆ ಮಾಡಲಾಗಿದೆ. ಈ ಎರಡೂ ಚಿತ್ರಗಳಲ್ಲಿ ಸಕ್ಸಸ್​ ಕಿರೀಟವನ್ನು ಪಡೆದುಕೊಳ್ಳುತ್ತಿರುವುದು ಶಾರುಖ್​ ಖಾನ್​, ಆದರೆ ಅಸಲಿಗೆ ಇದರ ಸಂಪೂರ್ಣ ಜಯ ಸಿಗಬೇಕಿರುವುದು ಪರಿಣಿತ ಪಿಆರ್ ಟೀಮ್​ನ ಶ್ರಮದಿಂದ ಎಂದು ಅವರು ಬರೆದಿದ್ದಾರೆ. ಅವರ ಪರಿಶ್ರಮದಿಂದ ಚಿತ್ರ ಗೆದ್ದಿದೆಯೇ ವಿನಾ ಇನ್ನೇನೂ ಇಲ್ಲ ಎಂದಿರುವ ನೆಟ್ಟಿಗ, ಮುಂದುವರೆದು, ನಿಮ್ಮ ಡಂಕಿ ಸಿನಿಮಾವನ್ನು ಕೂಡಾ ಪಿಆರ್ ಟೀಮ್ ಗೆಲ್ಲಿಸಬಹುದೆಂದು ನಿಮಗೆ ನಂಬಿಕೆ ಇದೆಯಾ? ನಿಮ್ಮ ತಂಡವನ್ನು ನೀವು ನಂಬುತ್ತೀರಾ? ಇದೂ ಕೂಡಾ ಬ್ಲಾಕ್​ಬಸ್ಟರ್ ಹಿಟ್ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

ಚಿತ್ರದಲ್ಲಿ ತಮ್ಮ ಪರಿಶ್ರಮ ಇಲ್ಲ ಎನ್ನುವ ಮಾತು ಕೇಳುತ್ತಿದ್ದಂತೆಯೇ ಶಾರುಖ್​ ಅವರಿಗೆ ಉರಿ ಹೊತ್ತಿಕೊಂಡಿದೆ. ಇದಕ್ಕಾಗಿ ಈ ಪ್ರಶ್ನೆಗೆ ಸ್ವಲ್ಪ ಗರಂ ಆಗಿಯೇ ಉತ್ತರಿಸಿರುವ ಅವರು, ಚಿತ್ರಗಳನ್ನು ಮಲಕ್ಕೆ ಹೋಲಿಸಿರುವ ಕಾರಣ, ನಿಮಗೆ ಲೂಸ್​ ಮೋಷನ್​ ಚಿಕಿತ್ಸೆ ಅವಶ್ಯಕತೆ ಇದೆ ಎಂದು ಎನಿಸುತ್ತದೆ. ಅದಲ್ಲೆ ಟ್ರೀಟ್​ಮೆಂಟ್​ ತೆಗೆದುಕೊಳ್ಳಿ. ನಿಮಗೆ ಬೇಕಿದ್ದರೆ ನಮ್ಮ ಪಿಆರ್​ ಟೀಂ ಕಡೆಯಿಂದ ಲೂಸ್​ ಮೋಷನ್ ಔಷಧ ಕಳಿಸಿಕೊಡುತ್ತೇನೆ ಎಂದಿದ್ದಾರೆ. ಈ ಉತ್ತರಕ್ಕೆ ಶಾರುಖ್​ ಫ್ಯಾನ್ಸ್​ ಭೇಷ್​ ಭೇಷ್​ ಎನ್ನುತ್ತಿದ್ದಾರೆ. ಇನ್ನು ಡಂಕಿ ಚಿತ್ರದ ಕುರಿತು ಹೇಳುವುದಾದರೆ, ಈ ಸಿನಿಮಾದಲ್ಲಿ ತಾಪ್ಸಿ ಪನ್ನು, ಬೊಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್ ನಟಿಸಿದ್ದಾರೆ.

ಅಮಿತಾಭ್​ ಮೊಮ್ಮಗನ ಜೊತೆ ಡೇಟಿಂಗ್​ ಮಾಡ್ತಿರೋ ಶಾರುಖ್​ ಪುತ್ರಿ ಕೆಬಿಸಿಯಲ್ಲಿ! ಸುಹಾನಾಗೆ ಬಿಗ್​ಬಿ ಕೇಳಿದ್ದೇನು?

Scroll to load tweet…