ಪಠಾಣ್ ಕೂಡ ದೇಶಭಕ್ತ; 'ಬೇಷರಂ ರಂಗ್' ವಿವಾದದ ನಡುವೆ ಶಾರುಖ್ ಖಾನ್ ಟ್ವೀಟ್ ವೈರಲ್

ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನ ವಿವಾದದ ನಡುವೆ ಶಾರುಖ್ ಖಾನ್ ಪಠಾಣ್ ಕೂಡ ದೇಶಭಕ್ತ ಎಂದು ಟ್ವೀಟ್ ಮಾಡಿದ್ದು ವೈರಲ್ ಆಗಿದೆ.

Shah Rukh Khan says Pathaan is also patriotic amid Besharam Rang controversy sgk

ಬಾಲಿವುಡ್ ಕಿಂಗ್ ಖಾನ್ ಶಾರುಖ್​ ಖಾನ್  ನಟನೆಯ ‘ಪಠಾಣ್’ ಸಿನಿಮಾ ಸದ್ಯ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಶಾರುಖ್ ಅನೇಕ ವರ್ಷಗಳ ಬಳಿಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಶಾರುಖ್ ಕಮ್ ಬ್ಯಾಕ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ ನಡುವೆ ಬಂದ ಪಠಾಣ್ ಸಿನಿಮಾದ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೆ ರಿಲೀಸ್ ಆದ ‘ಬೇಷರಂ​ ರಂಗ್​..’ ಹಾಡು ಕೆಲವರಿಗೆ ಇಷ್ಟವಾದರೇ ಇನ್ನು ಕೆಲವರನ್ನು ಕೆರಳಿಸಿದೆ. ಶಾರುಖ್​ ಖಾನ್ ಮತ್ತು ದೀಪಿಕಾ ಪಡುಕೋಣೆಯ ಕೆಮಿಸ್ಟ್ರಿ ಇಷ್ಟಪಟ್ಟರೆ ಮತ್ತೆ ಕೆಲವರು ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಣ್ಣದ ಬಿಕಿನಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಕೆಲವರು ಅಶ್ಲೀಲವಾಗಿದೆ ಎಂದು ಜರಿಯುತ್ತಿದ್ದಾರೆ. ಪರ-ವಿರೋಧದ ಚರ್ಚೆ ನಡುವೆ ಅನೇಕರು ದೀಪಿಕಾ ಪಡುಕೋಣೆ ಪರ ಬ್ಯಾಟ್ ಬೀಸಿದ್ದಾರೆ. ಸ್ಯಾಂಡಲ್ ವುಡ್ ನಟಿ ರಮ್ಯಾ, ನಟಿ, ಟಿಎಂಸಿ ಸಂಸದೆ ನುಸ್ರುತ್ ಸೇರಿದಂತೆ ಅನೇಕರು ಪಠಾಣ್ ಪರ ಮಾತನಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ನಟ ಶಾರುಖ್​ ಖಾನ್ ಟ್ವೀಟ್​ ಮಾಡಿದ್ದು, ‘ಪಠಾಣ್​ ಕೂಡ ತುಂಬಾ ದೇಶಭಕ್ತ’ ಎಂದು ಹೇಳಿದ್ದಾರೆ. 

ಶಾರುಖ್ ಖಾನ್ ಶನಿವಾರ ಟ್ವಿಟರ್‌ನಲ್ಲಿ ನಡೆದ ‘ಆಸ್ಕ್ ಮಿ ಎನಿಥಿಂಗ್’​ ಸೆಷನ್‌ನಲ್ಲಿ ಶಾರುಖ್ ಖಾನ್‌ಗೆ ಪಠಾಣ್ ಪ್ರಶ್ನೆ ಎದುರಾಗಿತ್ತು. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಶಾರುಖ್ ಉತ್ತರ ನೀಡಿದ್ದಾರೆ.  ಅಭಿಮಾನಿಯೊಬ್ಬರು ಈ ಚಿತ್ರ ದೇಶಭಕ್ತಿ ಸಿನಿಮಾವಾಗಿದೆಯಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ ಶಾರುಖ್, ‘ಪಠಾಣ್ ಕೂಡ ತುಂಬಾ ದೇಶಪ್ರೇಮಿ, ಆದರೆ ಆಕ್ಷನ್ ರೀತಿಯಲ್ಲಿ’ ಎಂದು ಹೇಳಿದರು. 

Pathan Song;'ಬೇಷರಂ ರಂಗ್' ವಿವಾದದ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟ ಶಾರುಖ್ ಖಾನ್

ಅಂದಹಾಗೆ ಶಾರುಖ್ ಖಾನ್ ಇತ್ತೀಚಿಗಷ್ಟೆ ಪಠಾಣ್ ವಿವಾದದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದರು. ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022 ಭಾಗಿಯಾಗಿದ್ದ ಶಾರುಖ್ ಪಠಾಣ್ ವಿವಾದದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದರು. 

'ಜಗತ್ತು ನಾರ್ಮಲ್ ಆಗಿದೆ. ನಾವೆಲ್ಲರೂ ಸಂತೋಷವಾಗಿದ್ದೇವೆ, ನಾನು ಅತ್ಯಂತ ಸಂತೋಷವಾಗಿದ್ದೇನೆ. ಮತ್ತು ನಾನು, ನೀವೆಲ್ಲರೂ ಮತ್ತು ಎಲ್ಲಾ ಸಕಾರಾತ್ಮಕ ಜನರು ಇದ್ದಾರೆ. ಎಂದು ಹೇಳಲು ನನಗೆ ಯಾವುದೇ ಅಭ್ಯಂತರವಿಲ್ಲ' ಎಂದು ಹೇಳಿದರು. 'ವಿವಿಧ ಜಾತಿ, ಬಣ್ಣ, ಧರ್ಮಗಳ ಜನರು ಪರಸ್ಪರ ಅರಿತುಕೊಳ್ಳಲು ಸಿನಿಮಾ ಉತ್ತಮ ವೇದಿಕೆಯಾಗಿದೆ' ಎಂದು ಶಾರುಖ್ ಹೇಳಿದ್ದರು.

'ಬೇಷರಂ ರಂಗ್' ವಿವಾದ; ಕೇಸರಿ ಬಿಕಿನಿ ಧರಿಸಿ 'ನಾಚಿಕೆಯಿಲ್ಲದ ಬಣ್ಣ' ಎಂದ ದೀಪಿಕಾ ವಿರುದ್ಧ ನೆಟ್ಟಿಗರ ಕಿಡಿ

ಅಂದಹಾಗೆ ಪಠಾಣ್ ಹಿಂದಿ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳ ಹೆೇಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೋ ಹಾಗೆ ಶಾರುಖ್ ಕೂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗ್ಯಾಪ್‌ನ ಬಳಿಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಅಲ್ಲದೆ ದೊಡ್ಡ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆ ಶಾರುಖ್​ ಖಾನ್​ ಅವರಿಗಿದೆ. ಈ ಚಿತ್ರಕ್ಕಾಗಿ ಶಾರುಖ್ ತುಂಬಾ ಶ್ರಮಪಟ್ಟಿದ್ದು ದೇಹ ಹುರಿಗೊಳಿಸಿ 6 ಪ್ಯಾಕ್​​ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ಶಾರುಖ್ ಅವರ 6 ಪ್ಯಾಕ್ ದರ್ಶನ ಆಗಿದೆ. ಈ ವಯಸ್ಸಿನಲ್ಲೂ ಶಾರುಖ್ ಫಿಟ್ನೆಸ್ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಸಾಂಗ್ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿರುವ ಪಠಾಣ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Latest Videos
Follow Us:
Download App:
  • android
  • ios