ಸೌದಿ ಮಿನಿಸ್ಟರ್ ಜೊತೆ ಬಾಲಿವುಡ್ ಕಲಾವಿದರಾದ ಶಾರುಖ್​ ಖಾನ್​(Shah Rukh Khan), ಸಲ್ಮಾನ್​ ಖಾನ್(Salman Khan)​, ಅಕ್ಷಯ್​ ಕುಮಾರ್​ (Akshay Kumar), ಸೈಫ್​ ಅಲಿ ಖಾನ್ ಕಾಣಿಸಿಕೊಂಡಿರುವ ಫೋಟೋ​ ವೈರಲ್ ಆಗಿದೆ. ಶಾರುಖ್ ಖಾನ್ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಸೌದಿ ಮಿನಿಸ್ಟರ್ ಭಾಗಿಯಾಗಿದ್ದು, ಅನೇಕ ಬಾಲಿವುಡ್ ಸ್ಟಾರ್ಸ್ ಭೇಟಿಯಾಗಿದ್ದಾರೆ. 

ಸೌದಿ ಅರೇಬಿಯಾದ ಜೊತೆ ಬಾಲಿವುಡ್ ಕಲಾವಿದ ಸಂಬಂಧ ಉತ್ತಮವಾಗಿದೆ. ಬಾಲಿವುಡ್ ಅನೇಕ ಕಲಾವಿದರು ಆಗಾಗ ಸೌದಿಗೆ ಭೇಟಿ ನೀಡುತ್ತಿರುತ್ತಾರೆ. ಇದೀಗ ಸೌದಿ ಮಿನಿಸ್ಟರ್ ಜೊತೆ ಬಾಲಿವುಡ್ ಕಲಾವಿದರಾದ ಶಾರುಖ್​ ಖಾನ್​(Shah Rukh Khan), ಸಲ್ಮಾನ್​ ಖಾನ್(Salman Khan)​, ಅಕ್ಷಯ್​ ಕುಮಾರ್​ (Akshay Kumar), ಸೈಫ್​ ಅಲಿ ಖಾನ್ ಕಾಣಿಸಿಕೊಂಡಿರುವ ಫೋಟೋ​ ವೈರಲ್ ಆಗಿದೆ. ಸೌದಿ ಸಚಿವರ ಜೊತೆ ಈ ಸ್ಟಾರ್ಸ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ಹರಿದಾಡುತ್ತಿವೆ. ಅಷ್ಟಕ್ಕೂ ಈ ಎಲ್ಲಾ ಕಲಾವಿದರು ಸೌದಿ ಮಿನಿಸ್ಟರ್ ಭೇಟಿಯಾಗಿದ್ದೇಕೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಬಾಲಿವುಡ್ ನ ಈ ಸ್ಟಾರ್ ಕಲಾವಿದರೆಲ್ಲರೂ ದಿಢೀರ್ ಸೌದಿ ಸಚಿವರ ಜೊತೆ ಕಾಣಿಸಿಕೊಳ್ಳಲು ಕಾರಣ ಶಾರುಖ್ ಮನೆಯ ಪಾರ್ಟಿ.

ಸೌದಿ ಅರೇಬಿಯಾ ರೆಡ್​ ಸೀ ಫಿಲ್ಮ್​ ಫೆಸ್ಟಿವಲ್​ ಅಧ್ಯಕ್ಷ ಮೊಹಮ್ಮದ್​ ಅಲ್​ ಟರ್ಕಿ ಅವರಿಗಾಗಿ ಬಾಲಿವುಡ್ ಕಿಂಗ್ ಖಾನ್ ಶಾರುಖ್​ ಖಾನ್​ ಒಂದು ಔತಣಕೂಟ ಏರ್ಪಡಿಸಿದ್ದರು. ಶಾರುಖ್​ ನಿವಾಸ ಮುಂಬೈನ ಮನ್ನತ್ ​ನಲ್ಲಿ ಈ ಪಾರ್ಟಿ ನಡೆದಿದೆ. ಶಾರುಖ್ ಮನೆಯ ಪಾರ್ಟಿ ಬಗ್ಗೆ ತಮ್ಮ ಸೋಶಿಯಲ್​ ಮೀಡಿಯಾದ ಅಧಿಕೃತ ಖಾತೆಯಲ್ಲಿ ಮೊಹಮ್ಮದ್​ ಅಲ್​ ಟರ್ಕಿ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಭಾರತದಲ್ಲಿರುವ ನನ್ನ ಸಹೋದರ ಶಾರುಖ್​ ಖಾನ್​ ಅವರಿಂದ ರಂಜಾನ್​ ಹಬ್ಬದ ಶುಭಾಶಯಗಳು ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ.

Shah Rukh Khan 'ಪಠಾಣ್' ಚಿತ್ರದ ಗೆಟಪ್ ಲೀಕ್; ಕಿಂಗ್ ಖಾನ್ 8ಪ್ಯಾಕ್ ಫೋಟೋ ವೈರಲ್

ಇನ್ನು ಸೌದಿ ಅರೇಬಿಯಾದ ಸಾಂಸ್ಕೃತಿಕ ಸಚಿವ ಫರ್ಹಾನ್​ ಅಲ್ ​ಸೌದ್​ ಕೂಡ ಶಾರುಖ್ ಮನೆಯ ಪಾರ್ಟಿಗೆ ಹಾಜರಾಗಿದ್ದರು. ಫರ್ಹಾನ್​ ಅಲ್ ​ಸೌದ್ ಕೂಡ ಒಂದಿಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಸಲ್ಮಾನ್​ ಖಾನ್​, ಸೈಫ್​ ಅಲಿ ಖಾನ್​, ಅಕ್ಷಯ್​ ಕುಮಾರ್​ ಮುಂತಾದವರು ಸಹ ಅವರನ್ನು ಭೇಟಿ ಆಗಿದ್ದಾರೆ. ಎಲ್ಲರ ಫೋಟೋಗಳು ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಸೌದಿ ಮಿನಿಸ್ಟರ್ ಜೊತೆ ಬಾಲಿವುಡ್ ಸ್ಟಾರ್ಸ್ ಕೂಡ ಶಾರುಖ್​ ನಿವಾಸ ಮನ್ನತ್ ​ನಲ್ಲಿ ಏರ್ಪಡಿಸಿದ್ದ ಪಾರ್ಟಿಯಲ್ಲಿ ಭಾಗಿ ಆಗಿದ್ದರು ಎನ್ನುವುದಕ್ಕೆ ಈ ಫೋಟೋಗಳೇ ಸಾಕ್ಷಿ.

View post on Instagram


SRK+: ಓಟಿಟಿ ಮಾರುಕಟ್ಟೆಗೆ ಶಾರುಖ್ ಎಂಟ್ರಿ? ಟ್ವೀಟರ್‌ನಲ್ಲಿ ಕಿಂಗ್‌ಖಾನ್‌ ಸುಳಿವು!

ಅಂದಹಾಗೆ ಈ ಎಲ್ಲಾ ಸ್ಟಾರ್ ಕಲಾವಿದರು ಸಹ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಶಾರುಖ್ ಸ್ಪೇನ್ ನಲ್ಲಿ ಪಠಾಣ್ ಸಿನಿಮಾದ ಶೂಟಿಂಗ್ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಶಾರುಖ್ ಅನೇಕ ವರ್ಷಗಳ ಬಳಿಕ ಸಿನಿಮಾ ಮಾಡುತ್ತಿದ್ದು, ಶಾರುಖ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸಲ್ಮಾನ್ ಖಾನ್ ಇತ್ತೀಚಿಗಷ್ಟೆ ತೆಲುಗಿನ ಗಾಡ್ ಫಾದರ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುತ್ತಿದ್ದು, ಅಭಿಮಾನಿಗಳು ಸಲ್ಮಾನ್ ನೋಡಲು ಕಾತರರಾಗಿದ್ದಾರೆ. ಇನ್ನು ಅಕ್ಷಯ್ ಕುಮಾರ್ ಇತ್ತೀಚಿಗಷ್ಟೆ ಬಚ್ಚನ್ ಪಾಂಡೆ ಸಿನಿಮಾ ಮೂಲಕ ಅಭಇಮಾನಿಗಳ ಮುಂದೆ ಬಂದಿದ್ದರು. ಜೊತೆಗೆ ಸಾಲು ಸಾಲು ಸಿನಿಮಾಗಳಲ್ಲಿ ಅಕ್ಷಯ್ ಬ್ಯುಸಿಯಾಗಿದ್ದಾರೆ.