ಶಾರುಖ್​ ಖಾನ್​ ಪತ್ನಿ ಗೌರಿ ಅವರು ಹಿಂದೂವಾಗಿರುವ ಕಾರಣ ಮನೆಯಲ್ಲಿ ಯಾವ ಆಚರಣೆ ನಡೆಯುತ್ತದೆ ಎಂದು ಪದೇ ಪದೇ ಕೇಳುವ ಪ್ರಶ್ನೆಗೆ ನಟ ಉತ್ತರಿಸಿದ್ದೇನು?  

ಬಾಲಿವುಡ್ ನಟ ಶಾರುಖ್ ಖಾನ್ ಹಿಂದೂ ಯುವತಿ ಗೌರಿಯನ್ನು ಮದುವೆಯಾಗಿ ಆಮೇಲೆ ಗೌರಿ, ಗೌರಿ ಖಾನ್​ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಪತ್ನಿ ಹಿಂದೂ ಆಗಿರುವ ಕಾರಣದಿಂದಲೇ ಶಾರುಖ್​ ಮನೆಯಲ್ಲಿ ಮುಸ್ಲಿಂ ಮತ್ತು ಹಿಂದೂ ಆಚರಣೆಗಳು, ಹಬ್ಬ-ಹರಿದಿನಗಳ ನಡೆಯುತ್ತವೆ. ಆದರೆ ಅವರಿಗೆ ಎಲ್ಲಿಯೇ ಹೋದರೂ ಈ ಮೊದಲು ಎದುರಾಗುತ್ತಿದ್ದ ಪ್ರಶ್ನೆ ಒಂದೇ. ಅವರ ಪತ್ನಿ ಹಿಂದೂ ಆಗಿರುವುದರಿಂದ ಶಾರುಖ್ ಮನೆಯಲ್ಲಿ ಯಾವ ಧರ್ಮವನ್ನು ಅನುಸರಿಸುತ್ತಾರೆ ಎನ್ನುವುದು. ಇದಕ್ಕೆ ಮೊದಲಿನಿಂದಲೂ ಶಾರುಖ್​ ಸಮಾಧಾನದಿಂದಲೇ ಉತ್ತರ ಕೊಡುತ್ತಲೇ ಬಂದಿದ್ದಾರೆ. ತಮ್ಮ ಮನೆಯಲ್ಲಿ ಎಲ್ಲಾ ಧರ್ಮದ ಆಚರಣೆಗಳನ್ನು ಮಾಡುತ್ತಿರುವುದಾಗಿ ಹೇಳುತ್ತಲೇ ಬಂದಿದ್ದಾರೆ. 

ಇದೀಗ ಅವರ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ಶಾರುಖ್​ ಮನೆಯ ಹಬ್ಬದ ಕುರಿತು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅವರು, ತಮ್ಮ ಮನ್ನತ್ ಬಂಗಲೆಯಲ್ಲಿ ಈದ್ ಅನ್ನು ಎಷ್ಟು ಸಂಭ್ರಮದಿಂದ ಆಚರಿಸಲಾಗುತ್ತದೆಯೋ ಅದೇ ಸಂಭ್ರಮದಿಂದ ಗಣೇಶೋತ್ಸವವನ್ನೂ ಆಚರಿಸಲಾಗುತ್ತದೆ ಎಂದಿದ್ದಾರೆ. "ನಾನು ಮುಸ್ಲಿಂ, ನನ್ನ ಹೆಂಡತಿ ಹಿಂದೂ ಮತ್ತು ನಮ್ಮ ಮಕ್ಕಳು ಎಲ್ಲಾಧರ್ಮವನ್ನೂ ಆಚರಿಸುತ್ತಾರೆ. ಎಲ್ಲರೂ ಎಲ್ಲವನ್ನೂ ಯಾವುದೇ ಅಳುಕಿಲ್ಲದೇ ಆಚರಿಸುತ್ತೇವೆ ಎಂದಿದ್ದಾರೆ. 

ಗೌರಿ ವಾರ್ನ್​ ಮಾಡಿದ್ರೂ ಎಲ್ಲರೆದುರು ಪ್ರಿಯಾಂಕಾಳ ಬಟ್ಟೆ ಬಿಚ್ಚಿ ಕಿಸ್​ ಕೊಟ್ಟ ಶಾರುಖ್! ವಿಡಿಯೋ ವೈರಲ್​

ನನ್ನ ಮಕ್ಕಳು ಗಾಯತ್ರಿ ಮಂತ್ರ ಹೇಳುತ್ತಾರೆ, ನಾನು ಬಿಸ್ಮಿಲ್ಲಾ ಹೇಳುತ್ತೇನೆ. ಇದೆಲ್ಲವೂ ಓಕೆ. ನನ್ನ ಹಲವಾರು ಮುಸ್ಲಿಂ ಸ್ನೇಹಿತರು ಮನೆಗೆ ಬರುತ್ತಾರೆ. ಅವರೂ ಗಾಯತ್ರಿ ಮಂತ್ರ ಕೇಳುತ್ತಾರೆ. ನಾವು ನಮಾಜ್​ ಮಾಡುವುದನ್ನು ನೋಡುತ್ತಾರೆ. ಕೆಲವೊಮ್ಮೆ ಅದನ್ನು ನಾವು ಸರಿಯಾಗಿ ಮಾಡುವುದೇ ಇಲ್ಲ. ಆ ಸಮಯದಲ್ಲಿ ನನ್ನ ಸ್ನೇಹಿತರು ಸರಿಯಾಗಿ ಹೇಗೆ ಮಾಡುವುದು ಎನ್ನುವುದನ್ನು ಕಲಿಸುತ್ತಾರೆ. ನನ್ನ ಯಾವುದೇ ಸ್ನೇಹಿತರಿಗೂ ನನ್ನ ಬಗ್ಗೆ ಅಸಮಾಧಾನ ಇಲ್ಲ. ನಾನು ಖುರಾನ್​ ಓದುತ್ತೇನೆ. ಅಷ್ಟಕ್ಕೂ ಬೈಬಲ್​, ಗೀತಾ, ಖುರಾನ್​ ಎಲ್ಲವೂ ಒಂದೇ. ಇದಕ್ಕಾಗಿ ಎಲ್ಲರೂ ಬಡಿದಾಡುವುದನ್ನು ನೋಡಿದರೆ ಆಶ್ಚರ್ಯ ಆಗುತ್ತದೆ. ಎಲ್ಲದರ ಸಾರವೂ ಒಂದೇ. ನಾವ್ಯಾಕೆ ಕಿತ್ತಾಡಬೇಕು ಎಂದು ಕೇಳಿದ್ದಾರೆ ಶಾರುಖ್​. 

ಈ ಹಿಂದೆ ವೈರಲ್​ ಆಗಿದ್ದ ವಿಡಿಯೋದಲ್ಲಿ ಕೂಡ, ಶಾರುಖ್​ ಅವರು, ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡುವುದನ್ನು ನೋಡಬಹುದು. ನನ್ನ ಮನೆಯ ದೇವಸ್ಥಾನದಲ್ಲಿ ಕುರಾನ್ ಇದೆ ಎಂದೂ ಅವರು ಈ ಹಿಂದೆ ಹೇಳಿದ್ದರು. ಅಷ್ಟಕ್ಕೂ ಈ ಮೊದಲೇ ಶಾರುಖ್​ ಸ್ಪಷ್ಟವಾಗಿ ಹೇಳಿದ್ದು. ಗೌರಿಯನ್ನು ಯಾವುದೇ ಕಾರಣಕ್ಕೂ ಮತಾಂತರ ಮಾಡುವುದಿಲ್ಲ. ಅವಳು ಯಾವ ಧರ್ಮವನ್ನು ಆಚರಿಸಬೇಕು ಎಂದು ಅವಳಿಗೆ ಒತ್ತಡ ಹಾಕುವುದಿಲ್ಲ ಎಂದಿದ್ದರು. ಅದನ್ನೇ ಪಾಲನೆ ಮಾಡಿಕೊಂಡು ಬಂದಿದ್ದಾರೆ ನಟ. 

ಪ್ರಿಯಾಂಕಾಳನ್ನು ನೋಡಿ ಶಾರುಖ್​ ಡಬಲ್​ ಮೀನಿಂಗ್​ ಡೈಲಾಗ್​: ಸಂಬಂಧವನ್ನು ಓಪನ್ನಾಗೇ ಒಪ್ಪಿಕೊಂಡ ನಟಿ!

View post on Instagram