ಶಾರುಖ್​ ಖಾನ್​ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಸಂಬಂಧ ಬಿ-ಟೌನ್​ನಲ್ಲಿ ಗುಟ್ಟಾಗೇನೂ ಉಳಿದಿಲ್ಲ. ಆದ್ರೆ ಮದುವೆಯಾದ ಮೇಲೂ ತಮ್ಮ ಸಂಬಂಧವನ್ನು ಹೀಗೆ ರಟ್ಟು ಮಾಡೋದಾ ಬಾಲಿವುಡ್​ ತಾರೆಯರು?  

 ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಒಂದು ಕಾಲದ ಸಂಬಂಧ ಬಾಲಿವುಡ್​ನಲ್ಲಿ ಬಹು ಚರ್ಚಿತವಾದದ್ದು. ಪ್ರಿಯಾಂಕಾ ಚೋಪ್ರಾ ಯಾವಾಗಲೂ ಶಾರುಖ್ ಬಗ್ಗೆ ನಿಕಟತೆ ಇಟ್ಟುಕೊಂಡಿದ್ದರು. ಶಾರುಖ್ ಯಾವಾಗಲೂ ಪ್ರಿಯಾಂಕರನ್ನು ತನ್ನ ಹೃದಯಕ್ಕೆ ಹತ್ತಿರವಾಗಿ ಎಂದೇ ಪರಿಗಣಿಸುವುದು ಇದೆ. 2011ರ ಸುಮಾರಿಗೆ ಇವರಿಬ್ಬರ ಸಂಬಂಧದ ಬಗ್ಗೆ ಪತ್ರಿಕೆಗಳಲ್ಲಿಯೂ ಸಾಕಷ್ಟು ಸುದ್ದಿಯಾಯ್ತು. ಅಷ್ಟಕ್ಕೂ ಡಾನ್ ಸರಣಿಯ ಶೂಟಿಂಗ್ ಸಮಯದಲ್ಲಿ ಶಾರುಖ್ ಮತ್ತು ಪ್ರಿಯಾಂಕಾ ಬಹಳ ಆತ್ಮೀಯರಾದರು. ನೈಟ್‌ಕ್ಲಬ್‌ಗಳು, ಪಾರ್ಟಿಗಳು ಮತ್ತು ಈವೆಂಟ್‌ಗಳಲ್ಲಿ ಹ್ಯಾಂಗ್‌ಔಟ್ ಮಾಡುತ್ತಿದ್ದರು. ಇಬ್ಬರೂ ಡೇಟಿಂಗ್​ನಲ್ಲಿ ಇದ್ದರು. ಇವರಿಬ್ಬರೂ ಉತ್ತಮ ಸ್ನೇಹಿತರೆಂದು ಸುತ್ತುತ್ತಿದ್ದಾಗ ಶಾರುಖ್‌ ಮತ್ತು ಪತ್ನಿ ಗೌರಿ ಖಾನ್ ಗೆ ವಿಚಾರ ಗೊತ್ತಾಯ್ತು. 2013 ರಲ್ಲಿ ಪ್ರಿಯಾಂಕ ಮತ್ತು ಶಾರುಖ್ ಸೀಕ್ರೆಟ್‌ ಆಗಿ ಮದುವೆಯಾಗಿದ್ದಾರೆಂದೇ ಸುದ್ದಿಯಾಯ್ತು. ಹೀಗಾಗಿ ಶಾರುಖ್ ಖಾನ್‌ ಗೆ ಪತ್ನಿ ಗೌರಿ ವಾರ್ನ್ ಮಾಡಿ ಇನ್ನೆಂದೂ ಆಕೆಯೊಂದಿಗೆ ನಟಿಸಬಾರದು ಎಂದು ಷರತ್ತು ವಿಧಿಸಿದರು. ಇದಾದ ನಂತರ ಪ್ರಿಯಾಂಕ ಮತ್ತು ಶಾರುಖ್ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಮತ್ತೆಂದೂ ಜೊತೆಯಾಗಿ ನಟಿಸಿಲ್ಲ.

ಇದೀಗ ಇವರಿಬ್ಬರ ಸಂಬಂಧದ ಕುರಿತು ಹಳೆಯ ವಿಡಿಯೋಗಳೆಲ್ಲಾ ವೈರಲ್​ ಆಗುತ್ತಿವೆ. ಇದರಲ್ಲಿ ಚಾಟ್​ ಷೋ ಒಂದರಲ್ಲಿ ಪ್ರಿಯಾಂಕಾ ಚೋಪ್ರಾ ಅವರು, ಒಂದು ಜಾಕೆಟ್​ ಅನ್ನು ತೋರಿಸಿದ್ದಾರೆ. ಅದು ತನ್ನ ಬಾಯ್​ಫ್ರೆಂಡ್​ ಕೊಟ್ಟಿರುವುದು ಎಂದು ಅವರು ಒಪ್ಪಿಕೊಂಡಿದ್ದಾರೆ. ಅಸಲಿಗೆ ಈ ಜಾಕೆಟ್​ ಶಾರುಖ್​ ಖಾನ್​ ಅವರದ್ದು. ಪ್ರಿಯಾಂಕಾ ತಮ್ಮ ಬಾಯ್​ಫ್ರೆಂಡ್​ ಎಂದು ಹೇಳುತ್ತಿದ್ದಂತೆಯೇ ನೆಟ್ಟಿಗರು ಈ ಜಾಕೆಟ್​ನ ಮೂಲವನ್ನು ಹುಡುಕಿ ತೆಗೆದಿದ್ದಾರೆ. ಶಾರುಖ್​ ಖಾನ್​ ಅವರು ಇದೇ ಜಾಕೆಟ್​ ಹಾಕಿರುವುದು ತಿಳಿದುಬಂದಿದೆ. ತನ್ನ ಪ್ರೀತಿಯ ಈ ಜಾಕೆಟ್​ ಅನ್ನು ಪ್ರಿಯಾಂಕಾ ಅವರಿಗೆ ಶಾರುಖ್​ ತೆಗೆದು ಕೊಟ್ಟಿದ್ದಾರೆ! ಇದರಿಂದ ಇವರಿಬ್ಬರ ಸಂಬಂಧ ಖುಲ್ಲಂಖುಲ್ಲಾ ಬಹಿರಂಗವಾಗಿದೆ.

View post on Instagram

ಇದೂ ಸಾಲದು ಎನ್ನುವಂತೆ, ಅವಾರ್ಡ್​ ಷೋ ಒಂದರಲ್ಲಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದರು. ಅದರಲ್ಲಿ ಶಾರುಖ್​ ಖಾನ್​ ಕೂಡ ಭಾಗಿಯಾಗಿದ್ದರು. ಮುಂದಿನ ಅವಾರ್ಡ್​ ಯಾರಿಗೆ ಸಿಗುತ್ತದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆಯೇ ದೀಪಿಕಾ ಅವರು, ಯಾರ ಹೆಸರು ಇದೆ ಎಂಬ ಕವರ್​ ಬಿಚ್ಚುವಂತೆ ಹೇಳಿದರು. ಆದರೆ ಇದೇ ವೇಳೆ ಶಾರುಖ್​ ಮಧ್ಯೆ ಬಾಯಿ ಹಾಕಿ, ಪ್ರಿಯಾಂಕಾ ಬಿಚ್ಚು ಎಂದರು. ಅವರಿಬ್ಬರ ಸಂಬಂಧದ ಅರಿವು ಇದ್ದ ಪ್ರೇಕ್ಷಕರು ಶಾರುಖ್​ ಹೀಗೆ ಹೇಳುತ್ತಿದ್ದಂತೆಯೇ ಜೋರಾಗಿ ನಕ್ಕರು. ಪ್ರಿಯಾಂಕಾ ಮತ್ತು ದೀಪಿಕಾ ಕೂಡ ಜೋರಾಗಿ ನಕ್ಕರು. ಆಗ ಶಾರುಖ್​, ದೀಪಿಕಾ ಓಪನ್​ ಮಾಡು ಎಂದರೆ ಯಾರೂ ನಗಲಿಲ್ಲ, ನಾನು ಹೇಳಿದ್ರೆ ತಪ್ಪಾ ಎಂದು ಪ್ರಶ್ನಿಸಿದರು. ಈ ಮೂಲಕ ತಮ್ಮಿಬ್ಬರ ಸಂಬಂಧವನ್ನು ಓಪನ್​ ಆಗಿಯೇ ಹೇಳಿಕೊಂಡಿದ್ದಾರೆ. 

ಇತ್ತೀಚಿಗೆ ಇವರಿಬ್ಬರ ಸಂಬಂಧದ ಕುರಿತು ವಿಡಿಯೋ ಒಂದು ವೈರಲ್​ ಆಗಿತ್ತು. ಅದರಲ್ಲಿ ಶಾರುಖ್​ ಮಾಡಿದ್ದೇನೆಂದರೆ, ವೇದಿಕೆಯ ಮೇಲೆ ಡಾನ್ಸ್​ ಹೆಸರಿನಲ್ಲಿ ನಟಿ ಪ್ರಿಯಾಂಕಾ ಚೋಪ್ರಾರ ಮೇಲಿನ ಕೋಟ್​ ಬಿಚ್ಚಿ ತುಟಿಗೆ ಕಿಸ್​ ಕೊಟ್ಟಿದ್ದಾರೆ. ಹೀಗೆ ಮಾಡುತ್ತಿದ್ದಂತೆಯೇ, ಗೌರಿ ಖಾನ್​ ಅವರತ್ತ ಕ್ಯಾಮೆರಾ ಕಣ್ಣು ಹೋಗಿದೆ. ಚಿತ್ರಗಳಲ್ಲಿ ರೊಮಾನ್ಸ್​ ಸೀನ್​ ಬಂದಾಗ ಶಾರುಖ್​ ಖಾನ್​ ಒಂದು ಹಂತ ಮುಂದಕ್ಕೆ ಹೋಗುವುದು ಗೊತ್ತೇ ಇದೆ. ಆದರೆ ಇವೆಲ್ಲವನ್ನೂ ನೋಡಿದ್ದರೂ, ಗೌರಿ ಖಾನ್​ ಅವರಿಗೆ ಪತಿಯ ಈ ವರ್ತನೆ ತುಂಬಾ ಮುಜುಗರ ತಂದ ಹಾಗೆ ಕಾಣಿಸುತ್ತಿರುವುದು ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಟ್ಟಿನಲ್ಲಿ ಬಾಲಿವುಡ್​ ಜಂಟಲ್​ಮೆನ್​ ಈ ರೀತಿ ಮಾಡಿರುವುದು ಸರಿಯಲ್ಲ ಎಂದು ಹಲವರ ಕೆಂಗಣ್ಣಿಗೂ ಒಳಗಾಗುತ್ತಿದೆ. 

ಗೌರಿ ವಾರ್ನ್​ ಮಾಡಿದ್ರೂ ಎಲ್ಲರೆದುರು ಪ್ರಿಯಾಂಕಾಳ ಬಟ್ಟೆ ಬಿಚ್ಚಿ ಕಿಸ್​ ಕೊಟ್ಟ ಶಾರುಖ್! ವಿಡಿಯೋ ವೈರಲ್​