Asianet Suvarna News Asianet Suvarna News

'ನನ್ನ ಗೆಳೆಯನಿಗೆ ನಿಮ್ಮ ಮೇಲೆ ಫುಲ್ ಕ್ರೇಶ್' ಎಂದ ಅಭಿಮಾನಿಗೆ ಶಾರುಖ್ ಕೊಟ್ಟ ರಿಪ್ಲೈ ಸಖತ್ ವೈರಲ್

'ನನ್ನ ಫ್ರೆಂಡ್‌ಗೆ ನಿಮ್ಮ ಮೇಲೆ ಫುಲ್ ಕ್ರೇಶ್' ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಬಾಲಿವುಡ್ ಕಿಂಗ್ ಶಾರುಖ್ ಖಾನ್‌ ಕೊಟ್ಟ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

shah rukh khan Gives Witty Reply To Fan Who Said My Male Friend Has A Crush On You sgk
Author
First Published Jun 16, 2023, 6:43 PM IST | Last Updated Jun 16, 2023, 6:43 PM IST

ಬಾಲಿವುಡ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್ ಪಠಾಣ್ ಸಕ್ಸಸ್ ಬಳಿಕ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಅಷ್ಟೆಯಲ್ಲದೇ ಅಭಿಮಾನಿಗಳ ಜೊತೆಯೂ ಆಗಾಗ ಮಾತುಕತೆ ನಡೆಸುತ್ತಿರುತ್ತಾರೆ. ಇತ್ತೀಚೆಗಷ್ಟೆ ಶಾರುಖ್ ಟ್ವಿಟ್ಟರ್‌ನಲ್ಲಿ ಅಸ್ಕ್ ಎಸ್ಆರ್‌ಕೆ ಸೆಷನ್ ನಡೆಸಿದ್ದರು. ಈ ವೇಳೆ ಅನೇಕ ಅಭಿಮಾನಿಗಳು ತರಹೇವಾರಿ ಪ್ರಶ್ನೆ ಮಾಡಿದ್ದಾರೆ. ಶಾರುಖ್ ಜೊತೆ ಮಾತನಾಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಹಾಗಿರುವಾಗ ತಾವೆ ಪ್ರಶ್ನೆಗಳನ್ನು ಕೇಳಿ ಎಂದು ಹೇಳಿದಾಗ ಅಭಿಮಾನಿಗಳು ಸುಮ್ಮನಿರುತ್ತಾರಾ? ಸಾಕಷ್ಟು ಪ್ರಶ್ನೆಗಳನ್ನು ಶಾರುಖ್ ಮುಂದಿಟ್ಟಿದ್ದಾರೆ. 

ಒಂದಿಷ್ಟು ಫನ್ನಿ ಪ್ರಶ್ನೆಗಳು ಎದುರಾಗಿವೆ. ಶಾರುಖ್ ಕೂಡ ಸರಿಯಾಗೆ ಉತ್ತರ ನೀಡಿದ್ದಾರೆ. ಅಭಿಮಾನಿಯೊಬ್ಬ, ತನ್ನ ಗೆಳೆಯನಿಗೆ ನಿಮ್ಮ ಮೇಲೆ ವಿಪರೀತ ಕ್ರಶ್ ಆಗಿದೆ. ಏನ್ ಮಾಡೋದು? ಎಂದು ಪ್ರಶ್ನೆ ಮಾಡಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಖಾರುಖ್ ಕೂಡ ಅಷ್ಟೆ ಕೂಲಾಗಿ ಸರಿಯಾದ ರಿಪ್ಲೈ ಕೊಟ್ಟಿದ್ದಾರೆ. ಅಭಿಮಾನಿ ಕೇಳಿದ ಪ್ರಶ್ನೆಗೆ ಶಾರುಖ್, 'ನಿಂಗೆ ಏನು ಮಾಡಬೇಕಿದೆ? ನನಗೆ ಹೇಳು.. ನಾನು ಏನು ಮಾಡಲಿ ಈಗ?' ಎಂದು ಹೇಳಿದ್ದಾರೆ. ಅನೇಕರು ತರಹೇವಾರಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಶಾರುಖ್ ಖಾನ್ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಆಟ್ಲೀ ಕುಮಾರ್ ಸಾರಥ್ಯದಲ್ಲಿ ಮೂಡಿ ಬಂದಿರುವ ಜವಾನ್ ಸಿನಿಮಾದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಜವಾನ್ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಶಾರುಖ್ ಜೊತೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಶಾರುಖ್ ಮತ್ತು ನಯನತಾರಾ ಒಟ್ಟಿಗೆ ನಟಿಸುತ್ತಿದ್ದಾರೆ. ಇದು ನಯನತಾರಾ ಅವರ ಮೊದಲ ಹಿಂದಿ ಸಿನಿಮಾವಾಗಿದೆ.

 ದಿನಕ್ಕೆ 100 ಸಿಗರೇಟ್​- ಕ್ಯಾನ್ಸರ್​ ಹೊಗೆಯಿಂದ ಸುತ್ತುವರಿದಿದ್ದೇನೆ: ಶಾರುಖ್​ ಖಾನ್​!

ಈ ಸಿನಿಮಾ ಜೊತೆಗೆ ಶಾರುಖ್ ರಾಜ್ ಕುಮಾರ್ ಹಿರಾನಿ ಜೊತೆ ಡಂಕಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಜೊತೆ ನಾಯಕಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ತಾಪ್ಸ್ ಮತ್ತು ಶಾರುಖ್ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಎರಡು ಸಿನಿಮಾಗಳು ಭಾರಿ ನಿರೀಕ್ಷೆ ಮೂಡಿಸಿವೆ. ಪಠಾಣ್ ಸಕ್ಸಸ್‌ನಲ್ಲಿರುವ ಶಾರುಖ್ ಮುಂದಿನ ಸಿನಿಮಾಗಳು ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  

ಶಾರುಖ್ ಖಾನ್- ಪ್ರಭುದೇವ: 40 ವರ್ಷದ ನಂತರ ತಂದೆಯಾದ ನಟರು!

ಶಾರುಖ್ ಖಾನ್‌ಗೆ ಮುತ್ತಿಟ್ಟ ಮಹಿಳೆ

ಇತ್ತೀಚೆಗೆ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ತಮ್ಮ ಬಾಡಿಗಾರ್ಡ್‌ಗಳ ಜೊತೆ ಸ್ಟೇಜ್‌ಗೆ ಬರುತ್ತಿದ್ದಂತೆ ವ್ಯಕ್ತಿಯೊಬ್ಬರು ಅವರಿಗೆ ಕೈ ಕುಲುಕುತ್ತಾರೆ. ಇದಾದ ಕ್ಷಣದಲ್ಲೇ ಅಲ್ಲೇ ಇದ್ದ ಮಹಿಳೆಯೊಬ್ಬರು ಶಾರುಖ್ ಇದ್ದ ಸ್ಟೇಜ್‌ಗೆ ಏರಿ ಅವರನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತಿಕ್ಕುತ್ತಾರೆ. ನಂತರ ಆಕೆ ನಗುತ್ತಾ ಖುಷಿಯಿಂದ ಮುಂದೆ ಹೋಗುತ್ತಾರೆ. ಈ ವೇಳೆ ಶಾರುಖ್‌ ಖಾನ್ ಸುಮ್ಮನಾಗಿದ್ದರೂ ಅವರ ಅಭಿಮಾನಿಗಳು ಮಾತ್ರ ಮಹಿಳೆಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ ಅಭಿಮಾನಿಗಳು ಗರಂ ಆಗಿದ್ದರು. ಒಪ್ಪಿಗೆ ಇಲ್ಲದೆ ಹೀಗೆ ವೈಯಕ್ತಿಕ ಸ್ವಾತಂತ್ರ್ಯಾ ಹಾಳು ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದರು. ಆದರೆ ಶಾರುಖ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. 

 

Latest Videos
Follow Us:
Download App:
  • android
  • ios