ರಜೆ ಹಾಕಿ ಜನ್ಮದಿನ ಆನಂದಿಸಿ; ಪ್ರಧಾನಿ ಮೋದಿಗೆ ಶಾರುಖ್ ಖಾನ್ ಸಲಹೆ
ಬಾಲಿವುಡ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್ ಪ್ರಧಾನಿ ಮೋದಿಗೆ ವಿಶ್ ಮಾಡಿ ಒಂದು ದಿನ ರಜೆ ಹಾಕಿ ಹುಟ್ಟುಹಬ್ಬ ಆನಂದಿಸಿ ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ಮೋದಿಗೆ ಅನೇಕ ಗಣ್ಯರು ವಿಶ್ ಮಾಡುತ್ತಿದ್ದಾರೆ. ದೇಶ ವಿದೇಶಗಳಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ರಾಜಕೀಯ, ಸಿನಿಮಾರಂಗ, ಕ್ರೇಡೆ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಈ ಪೈಕಿ ಬಾಲಿವುಡ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್ ಪ್ರಧಾನಿ ಮೋದಿಗೆ ವಿಶ್ ಮಾಡಿ ಒಂದು ದಿನ ರಜೆ ಹಾಕಿ ಹುಟ್ಟುಹಬ್ಬ ಆನಂದಿಸಿ ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಶಾರುಖ್ ವಿಶ್ ಮಾಡಿದ್ದಾರೆ. ಶಾರುಖ್ ಖಾನ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ 'ನಮ್ಮ ದೇಶದ ಕಲ್ಯಾಣಕ್ಕಾಗಿ ನಿಮ್ಮ ಬದ್ಧತೆಗೆ ಇಡೀ ದೇಶದ ಜನತೆ ನಿಮ್ಮನ್ನು ಪ್ರಶಂಸಿಸುತ್ತಿದೆ. ನಿಮ್ಮ ಎಲ್ಲಾ ಗುರಿಗಳನ್ನು ಸಾಧಿಸಲು ಹೆಚ್ಚು ಶಕ್ತಿ ಮತ್ತು ಆರೋಗ್ಯ ಸಿಗಲಿ. ಇವತ್ತು ಒಂದು ದಿನ ರಜೆ ಹಾಕಿ ಜನ್ಮದಿನವನ್ನು ಆನಂದಿಸಿ. ಹುಟ್ಟುಹಬ್ಬದ ಶುಭಾಶಯಗಳು ಪ್ರಧಾನಿ ನರೇಂದ್ರ ಮೋದಿ' ಎಂದು ಹೇಳಿದ್ದಾರೆ.
ಆ ಶರ್ಟ್ ನನ್ನದು; ಆರ್ಯನ್ ಖಾನ್ ಸ್ಟೈಲಿಶ್ ಪೋಸ್ಟ್‌ಗೆ ಕಾಲೆಳೆದ ಶಾರುಖ್ ಖಾನ್, ಮಗನ ರಿಯಾಕ್ಷನ್ ಹೀಗಿತ್ತು
ಶಾರುಖ್ ಖಾನ್ ಟ್ವೀಟ್‌ಗೆ ಅಭಿಮಾನಿಗಳು ನಾನಾರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಟ್ರೋಲ್ ಮಾಡುತ್ತಿದ್ದರೆ ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಶಾರುಖ್ ಖಾನ್ ಸಿನಿಮಾ ವಿಚಾರಕ್ಕೆ ಬರುವುದಾದರೆ ವರ್ಷಗಳ ಬಳಿಕ ಮತ್ತೆ ಬ್ಯುಸಿಯಾಗಿದ್ದಾರೆ. ಈಗಾಗಲೇ ಪಠಾಣ್ ಸಿನಿಮಾದ ಚಿತ್ರೀೂಕರಣ ಮುಗಿಸಿದ್ದಾರೆ. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಸದ್ಯ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ತಮಿಳು ನಿರ್ದೇಶಕ ಆಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸೌತ್ ಸ್ಟಾರ್ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಅಮ್ಮ ಕೊನೆಯುಸಿರೆಳೆವಾಗ ತುಂಬಾ ಹರ್ಟ್ ಮಾಡಿದ್ದೆ: ತಾಯಿಯ ಕೊನೆ ಕ್ಷಣದ ಬಗ್ಗೆ ಶಾರುಖ್ ಭಾವುಕ ಮಾತು
ಇನ್ನು ಮತ್ತೊಂದು ನಿರೀಕ್ಷೆಯ ಸಿನಿಮಾ ಶಾರುಖ್ ಕೈಯಲ್ಲಿದೆ. ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಜೊತೆ ಶಾರುಖ್ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಸಿನಿಮಾಗೆ ದುಂಕಿ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾಗೆ ನಾಯಕಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ತಾಪ್ಸಿ, ಶಾರುಖ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.