ವಿಶ್ವದ 100 ಶ್ರೇಷ್ಠ ಸಿನಿಮಾ ತಾರೆಯರ ಪಟ್ಟಿಯಲ್ಲಿ ಭಾರತದ ಏಕೈಕ ನಟ ಸ್ಥಾನ ಪಡೆದಿದ್ದಾರೆ. ಅಮೆರಿಕದ ವೆರೈಟಿ ನಿಯತಕಾಲಿಕೆ ಬಿಡುಗಡೆ ಮಾಡಿದ ಈ ಪಟ್ಟಿಯಲ್ಲಿ 92ನೇ ಸ್ಥಾನ ಪಡೆದಿರುವ ಅವರು, ಸ್ಥಾನ ಗಿಟ್ಟಿಸಿದ ಏಕೈಕ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಆ ನಟ ಯಾರು ಗೊತ್ತಾ?
ಭಾರತದ ಕೀರ್ತಿ ಹೆಚ್ಚಿಸಿದ ಕಿಂಗ್ ಖಾನ್
ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ವಿಶ್ವದಾದ್ಯಂತ ಭಾರತದ ಹೆಸರನ್ನು ಬೆಳಗಿಸಿದ್ದಾರೆ. 'ಕಿಂಗ್ ಖಾನ್' ತಮ್ಮ ಅದ್ಭುತ ನಟನೆಯ ಮೂಲಕ ದೇಶದ ಜನರಷ್ಟೇ ಅಲ್ಲದೆ ವಿದೇಶಿಗರನ್ನೂ ಅಭಿಮಾನಿಗಳನ್ನಾಗಿ ಮಾಡಿಕೊಂಡಿದ್ದಾರೆ. ವಿಶ್ವದಾದ್ಯಂತ ನಟನಿಗೆ ಅಪಾರ ಅಭಿಮಾನಿ ಬಳಗವಿದೆ. ಇದೀಗ ಈ ಸಂಗತಿ ಮತ್ತೊಮ್ಮೆ ಸಾಬೀತಾಗಿದೆ. ಏಕೆಂದರೆ ಶಾರುಖ್ ಖಾನ್ ಅವರ ಹೆಸರು 'ಟಾಪ್ 100 ಗ್ರೇಟೆಸ್ಟ್ ಮೂವಿ ಸ್ಟಾರ್ಸ್' ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಶಾರುಖ್ ಖಾನ್. ಅವರ ಈ ಸಾಧನೆಯು ವಿಶ್ವದಾದ್ಯಂತ ಅವರಿಗಿರುವ ಜನಪ್ರಿಯತೆಯನ್ನು ತೋರಿಸುತ್ತದೆ. ಈ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಳ್ಳುವ ಮೂಲಕ ನಟ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಹೆಮ್ಮೆ ತಂದಿದ್ದಾರೆ.
ದೇಶದ ಕೀರ್ತಿ ಹೆಚ್ಚಿಸಿದ ಶಾರುಖ್ ಖಾನ್
ಅಮೆರಿಕದ ಮನರಂಜನಾ ನಿಯತಕಾಲಿಕೆ 'ವೆರೈಟಿ' (Variety) '100 ಗ್ರೇಟೆಸ್ಟ್ ಮೂವಿ ಸ್ಟಾರ್ಸ್ ಆಫ್ ಆಲ್ ಟೈಮ್' ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಶಾರುಖ್ ಖಾನ್. ಬಾಲಿವುಡ್ನ 'ಬಾದ್ಶಾ' ಈ ಟಾಪ್ 100 ನಟರ ಪಟ್ಟಿಯಲ್ಲಿ 92ನೇ ಸ್ಥಾನ ಗಳಿಸಿದ್ದಾರೆ. ಇವರನ್ನು ಹೊರತುಪಡಿಸಿ ಬೇರೆ ಯಾವುದೇ ಭಾರತೀಯ ನಟನ ಹೆಸರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
ಈ ಸಿನಿಮಾಗಾಗಿ ಪಟ್ಟಿಯಲ್ಲಿ ಸ್ಥಾನ ಪಡೆದ ಕಿಂಗ್ ಖಾನ್
'ಕಿಂಗ್ ಖಾನ್' ಅವರನ್ನು ವೆರೈಟಿ ನಿಯತಕಾಲಿಕೆಯು ಅವರ ವೃತ್ತಿಜೀವನದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ 'ದೇವದಾಸ್' ಸಿನಿಮಾಗಾಗಿ ಈ ಪಟ್ಟಿಗೆ ಆಯ್ಕೆ ಮಾಡಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್ ಅವರ ಪಾತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ತಾವೇನು ಎಂಬುದನ್ನು ನಟ ಸಾಬೀತುಪಡಿಸಿದ್ದರು. ಚಿತ್ರದಲ್ಲಿ ಶಾರುಖ್ ಖಾನ್ಗೆ ನಾಯಕಿಯಾಗಿ ಐಶ್ವರ್ಯಾ ರೈ ಬಚ್ಚನ್ ಕಾಣಿಸಿಕೊಂಡಿದ್ದರು. 1992ರಲ್ಲಿ ಬಿಡುಗಡೆಯಾದ ಈ ಚಿತ್ರ ಆ ವರ್ಷದಲ್ಲಿ ಅತಿದೊಡ್ಡ ಹಿಟ್ಗಳಲ್ಲಿ ಒಂದಾಗಿತ್ತು.
ವಿಶ್ವದ ಟಾಪ್ 10 ತಾರೆಯರು
ಇನ್ನು ವಿಶ್ವದ ಟಾಪ್ 10 ನಟ-ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಹಾಲಿವುಡ್ನ ಖ್ಯಾತ ನಟಿ ಮರ್ಲಿನ್ ಮನ್ರೋ ಪಡೆದುಕೊಂಡಿದ್ದಾರೆ. 'ಜೆಂಟಲ್ಮೆನ್ ಪ್ರಿಫರ್ ಬ್ಲಾಂಡ್ಸ್' ಚಿತ್ರದಲ್ಲಿನ ಅಭಿನಯಕ್ಕಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಹಂಫ್ರಿ ಬೊಗಾರ್ಟ್, ಮೂರನೇ ಸ್ಥಾನದಲ್ಲಿ ಚಾರ್ಲಿ ಚಾಪ್ಲಿನ್, ನಾಲ್ಕನೇ ಸ್ಥಾನದಲ್ಲಿ ಜಾಕ್ ನಿಕೋಲ್ಸನ್, ಐದನೇ ಸ್ಥಾನದಲ್ಲಿ ಕ್ಯಾಥರಿನ್ ಹೆಪ್ಬರ್ನ್, ಆರನೇ ಸ್ಥಾನದಲ್ಲಿ ಸಿಡ್ನಿ ಪೊಯ್ಟಿಯರ್, ಏಳನೇ ಸ್ಥಾನದಲ್ಲಿ ಮಾರ್ಲನ್ ಬ್ರಾಂಡೊ, ಎಂಟನೇ ಸ್ಥಾನದಲ್ಲಿ ಟಾಮ್ ಕ್ರೂಸ್, ಒಂಬತ್ತನೇ ಸ್ಥಾನದಲ್ಲಿ ತೋಷಿರೊ ಮಿಫುನೆ ಹಾಗೂ ಹತ್ತನೇ ಸ್ಥಾನದಲ್ಲಿ ಬಾರ್ಬರಾ ಸ್ಟ್ರೈಸೆಂಡ್ ಇದ್ದಾರೆ.














