30 ವರ್ಷದ ಕಿಯಾರಾ ಜೊತೆ ಶಾರುಖ್​ ರೊಮ್ಯಾನ್ಸ್​? ಏನಿದು ಹೊಸ ವಿಷ್ಯ?

ಪಠಾಣ್​ ಯಶಸ್ಸಿನ ಬಳಿಕ ಇದೀಗ ಶಾರುಖ್​ ಖಾನ್​ ಅವರು 30 ವರ್ಷದ ಕಿಯಾರಾ ಅಡ್ವಾಣಿ ಜೊತೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿದೆ. ಏನಿದು ಸುದ್ದಿ? 
 

Shah Rukh Khan and Kiara Advani In Sanjay Leela Bhansalis Next Romatic Film

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan ) ಮತ್ತು ನಟಿ ಕಿಯಾರಾ ಅಡ್ವಾಣಿ ಬಗ್ಗೆ ಆಸಕ್ತಿದಾಯಕ ಮಾಹಿತಿ ಹೊರಬರುತ್ತಿದೆ. ವರದಿಗಳನ್ನು ನಂಬುವುದಾದರೆ, 57 ವರ್ಷದ ಶಾರುಖ್ ಖಾನ್ ಮತ್ತು 30 ವರ್ಷದ ಕಿಯಾರ್ ಅಡ್ವಾಣಿ ಶೀಘ್ರದಲ್ಲೇ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ರೋಮ್ಯಾಂಟಿಕ್ ಡ್ರಾಮಾ ಚಿತ್ರದಲ್ಲಿ ಕಾಣಿಸಿಕೊಳ್ಳಬಹುದು. ಏಕೆಂದರೆ, ಬಾಲಿವುಡ್ ಬಾದ್​ಶಾಹ್​, ಇದೀಗ  ಬ್ಲಾಕ್​ಬಸ್ಟರ್ ಚಿತ್ರ 'ಪಠಾಣ್' ನಂತರ  ಮುಂದಿನ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇದರೊಂದಿಗೆ ಅವರ ಮುಂಬರುವ ಚಿತ್ರಗಳ ಬಗ್ಗೆಯೂ ವಿಶೇಷ ಬಝ್ ಕಂಡು ಬರುತ್ತಿದೆ. ಸದ್ಯ ಸಿಗುತ್ತಿರುವ ವರದಿಗಳನ್ನು ನಂಬುವುದಾದರೆ  ಶಾರುಖ್ ಖಾನ್ ಅವರ  ಮುಂದಿನ ಚಿತ್ರದ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರಕ್ಕೆ  ಶಾರುಖ್  ಶೀಘ್ರದಲ್ಲೇ ಕೈ ಜೋಡಿಸಲಿದ್ದಾರೆ ಎಂದು ವರದಿಯಾಗಿದೆ. 

ಸಂಜಯ್ ಲೀಲಾ ಬನ್ಸಾಲಿ ತಮ್ಮ ರೊಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ಕಿಂಗ್ ಖಾನ್ ಅವರೊಂದಿಗೆ ಮಾಡಲು ಯೋಜಿಸುತ್ತಿದ್ದಾರೆ ಎಂದು ಕೇಳಿಬರುತ್ತಿದೆ. ಇಷ್ಟೇ ಅಲ್ಲ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಟಿ ಕಿಯಾರಾ ಅಡ್ವಾಣಿಯನ್ನು (Kiara Advani) ಆಯ್ಕೆ ಮಾಡಬಹುದು ಎಂದು ವರದಿಯಾಗಿದೆ. ಈಗ ಈ ಸುದ್ದಿ ಮುನ್ನೆಲೆಗೆ ಬಂದಿರುವುದರಿಂದ ಈ ಚಿತ್ರ ಇನ್ಶಾ ಅಲ್ಲಾ ಎಂಬ ಊಹೆ ಶುರುವಾಗಿದೆ.   ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ಇನ್ಶಾಲ್ಲಾ (Inshallah) ಚಿತ್ರವನ್ನು ಯೋಜಿಸಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಇದೊಂದು ರೊಮ್ಯಾಂಟಿಕ್ ಡ್ರಾಮಾ ಚಿತ್ರವೂ ಆಗಿತ್ತು. ಅದರ ಮೆಗಾ ಘೋಷಣೆ ಕೂಡ ಮಾಡಲಾಗಿತ್ತು. ನಂತರ, ಕೆಲವೊಂದು ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳಿಂದಾಗಿ, ಸಲ್ಮಾನ್ ಖಾನ್ ಚಿತ್ರದಿಂದ ಹಿಂದೆ ಸರಿದರು ಎಂದು ವರದಿಯಾಗಿದೆ. ಅಂದಿನಿಂದ ಈ ಚಿತ್ರ ಕೋಲ್ಡ್ ಸ್ಟೋರೇಜ್‌ನಲ್ಲಿದೆ. ಈಗ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಶಾರುಖ್ ಖಾನ್ ಮತ್ತು ಕಿಯಾರಾ ಅಡ್ವಾಣಿ ಅವರ ಚಿತ್ರ ಇದೇ ಇರಬಹುದಾ ಎಂಬ ಊಹೆ ಶುರುವಾಗಿದೆ.

ಆಕೆ I Love You ಎಂದ್ರೆ ಲೈಫ್ ಬರ್ಬಾದ್​​​.... ಸಲ್ಮಾನ್​ ಹೇಳಿಕೆಗೆ ಮಹಿಳೆಯರು ಕಿಡಿಕಿಡಿ
 
ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಚಲನಚಿತ್ರ ವೃತ್ತಿಜೀವನದ ಕುರಿತು ಮಾತನಾಡುವುದಾದರೆ, ಪಠಾಣ್‌ನ ಬಂಪರ್ ಯಶಸ್ಸಿನ ನಂತರ, ಅವರ ಮುಂದಿನ ಚಿತ್ರ ಡಾಂಕಿ ಔರ್ ಜವಾನ್ ಬಗ್ಗೆ ಸಾಕಷ್ಟು ಬಝ್ ಇದೆ. ಇದರ ನಂತರ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಪಠಾಣ್‌ನ ಎರಡನೇ ಭಾಗಕ್ಕಾಗಿ ಸಲ್ಮಾನ್ ಖಾನ್ ಅವರೊಂದಿಗೆ ಕೈಜೋಡಿಸಲು ಸಿದ್ಧರಾಗಿದ್ದಾರೆ. ಅಲ್ಲದೆ, ಈ ವರದಿಗಳು ನಿಜವಾಗಿದ್ದರೆ, ಶಾರುಖ್ ಖಾನ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಇನ್ಶಾಲ್ಲಾ ಚಿತ್ರವನ್ನು ತರಬಹುದು.

ಅಷ್ಟಕ್ಕೂ ಸಲ್ಮಾನ್​ ಖಾನ್​ ಮತ್ತು ಸಂಜಯ್​ ಬನ್ಸಾಲಿ (Sanjay Bansali) ಅವರ ನಡುವಿನ ಹಗೆತನಕ್ಕೆ ಬಹಳ ವರ್ಷಗಳೇ ಆಗಿ ಹೋಗಿವೆ. ಸಂಜಯ್ ಲೀಲಾ ಬನ್ಸಾಲಿ ಅವರು 1999 ರಲ್ಲಿ 'ಹಮ್ ದಿಲ್ ದೇ ಚುಕೇ ಸನಮ್' ಚಿತ್ರವನ್ನು ಮಾಡಿದ್ರು. ಈ ಚಿತ್ರವನ್ನು ಜನ ಈಗಲೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಸಕ್ಸಸ್ ನಟ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು.ಕೇವಲ 16 ಕೋಟಿ ರೂ.ಗಳಲ್ಲಿ ತಯಾರಾದ 'ಹಮ್ ದಿಲ್ ದೇ ಚುಕೇ ಸನಮ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಒಟ್ಟು 51.38 ಕೋಟಿ ಗಳಿಸಿತ್ತು. ಆದರೆ 2002 ರಲ್ಲಿ ಸಂಜಯ್ ಅವರ 'ದೇವದಾಸ್' ಸಿನಿಮಾ ಮಾಡಿದ ವೇಳೆ ಸಲ್ಮಾನ್ ಮತ್ತು ಸಂಜಯ್ ನಡುವೆ ಮನಸ್ತಾಪ ಉಂಟಾಗಿಯಿ ಎನ್ನಲಾಗುತ್ತಿದೆ.

Sherlyn Chopra: ಎದೆ ಮುಟ್ಟಿದ, ಕಂಟ್ರೋಲ್​ ಆಗ್ತಿಲ್ಲ ಎಂದ... ಉದ್ಯಮಿ ವಿರುದ್ಧ ನಟಿ ದೂರು

'ದೇವದಾಸ್' ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಿಟ್ ಆಗಿತ್ತು. ಸಂಜಯ್ ಅವರು ದೇವದಾಸ್ ಸಿನಿಮಾಗೆ ಶಾರುಖ್ ಖಾನ್ ಅವರನ್ನು ಆಯ್ಕೆ ಮಾಡಿಕೊಂಡಿದ್ರು. ಈ ಚಿತ್ರದಲ್ಲಿ ನಟಿಸಿದರು. ಇಲ್ಲಿಂದ ಸಲ್ಮಾನ್ ಮತ್ತು ಸಂಜಯ್ ನಡುವೆ ದ್ವೇಷ ಹುಟ್ಟಿಕೊಂಡಿದೆ. ದೇವದಾಸ್ ಚಿತ್ರಕ್ಕೆ ಸಲ್ಮಾನ್​ಗಿಂತ (Salman Khan) ಶಾರುಖ್ ಉತ್ತಮ ಎಂದು ಸಂಜಯ್ ಭಾವಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇನ್ಶಲ್ಲಾ ಚಿತ್ರವನ್ನು ಸಲ್ಮಾನ್​ ಮೊದಲಿಗೆ ಒಪ್ಪಿ ನಂತರ ತಿರಸ್ಕರಿಸಿದರು ಎನ್ನಲಾಗುತ್ತಿದೆ. 

Latest Videos
Follow Us:
Download App:
  • android
  • ios