Asianet Suvarna News Asianet Suvarna News

ಮೇಕಪ್​ ಮಾಡಿ ನೋಡಬೇಕು ಒಬ್ಬಳೇ ಬಾ ಅಂತ ಕರೆದ್ರು... ಆಮೇಲೆ... ಕರಾಳ ಘಟನೆ ಬಿಚ್ಚಿಟ್ಟ ನಟಿ ಅಮಾನಿ

ತೆಲಗು ಚಿತ್ರದ ಖ್ಯಾತ ನಟಿ ಅಮಾನಿ ಅವರು ತಮ್ಮ ಮೇಲಾಗಿರುವ ಕಾಸ್ಟಿಂಗ್​ ಕೌಚ್​ ಕುರಿತು ಮಾತನಾಡಿದ್ದಾರೆ. ಮೇಕಪ್​ ಮಾಡಿ ನೋಡಬೇಕು ಒಬ್ಬಳೇ ಬಾ ಎಂದು ಕರೆದಿದ್ದ ಬಗ್ಗೆ ಅವರು ಹೇಳಿದ್ದೇನು? 
 

Senior Telgu actress Amani comments on the casting couch in the cinema industry suc
Author
First Published Mar 12, 2024, 1:13 PM IST

ಆಗಷ್ಟೇ ಇಂಡಸ್ಟ್ರಿಗೆ ಕಾಲಿಟ್ಟಿದ್ದೆ. ಆಡಿಷನ್​ ಕೊಡಲು ಹೋಗಿದ್ದೆ. ಪ್ರತಿಬಾರಿಯೂ ಅಮ್ಮನ ಜೊತೆ ಹೋಗುತ್ತಿದ್ದೆ. ಆ ಸಮಯದಲ್ಲಿ ಅಲ್ಲಿರುವವರು ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ನಾನು ಆಡಿಷನ್​ಗೆ ಹೋದರೆ ವಾಪಸ್​ ಕಳುಹಿಸುತ್ತಿದ್ದರು. ಒಮ್ಮೆ ಅಲ್ಲಿಂದ ನನಗೆ ಕಾಲ್​ ಬಂತು. ನೀನು ನೋಡಲು ಅಷ್ಟೊಂದು ಚೆನ್ನಾಗಿಲ್ಲ. ಆದ್ದರಿಂದ ಮೇಕಪ್​ ಮಾಡಿ ನೋಡಬೇಕು. ಆದ್ದರಿಂದ ಬಾ ಎಂದು ಕರೆದರು. ನಾನು ಒಪ್ಪಿಕೊಂಡು ಅಮ್ಮನ ಜೊತೆ ಬರುತ್ತೇನೆ ಎಂದೆ. ಅದಕ್ಕೆ ಅವರು, ಹಾಗೆಲ್ಲಾ ಯಾರನ್ನೂ ಕರೆತರುವಂತಿಲ್ಲ. ಮೇಕಪ್​ ಮಾಡಿ ನೋಡಬೇಕು, ಆ ನಂತರ ಆಡಿಷನ್​ ಎಲ್ಲಾ ಮಾಡಬೇಕು. ಇದಕ್ಕಾಗಿ ಒಬ್ಬಳೇ ಬರಬೇಕು ಎಂದು ಕರೆದರು. ಒಬ್ಬಳೇ ಯಾಕೆ ಬರಬೇಕು, ನಾನು ಯಾವಾಗಲೂ ಅಮ್ಮನ ಜೊತೆಯೇ ಹೋಗುವುದು ಎಂದೆ. ಅವರು ಯಾಕೆ ಹಾಗೆ ಹೇಳುತ್ತಿದ್ದಾರೆ ಎಂದು ನನಗೆ ಅರ್ಥವೇ ಆಗಲಿಲ್ಲ. ಆದರೆ ಅವಕಾಶ ಬೇಕು ಎಂದರೆ ಒಬ್ಬಳೇ ಬರಬೇಕು ಎಂದರು...

-ಹೀಗೆ ತಮಗೆ ಸಿನಿಮಾದ ಆರಂಭದ ದಿನಗಳಲ್ಲಿ ಆಗಿರುವ ಕಾಸ್ಟಿಂಗ್​ ಕೌಚ್​ ಕುರಿತು ಮಾತನಾಡಿದ್ದಾರೆ ತೆಲಗು ನಟಿ ಅಮಾನಿ. ಕೆಲ ವರ್ಷಗಳ ಹಿಂದೆ ಇವರು ನೀಡಿರುವ ಸಂದರ್ಶನ ಇದೀಗ ಮತ್ತೆ ವೈರಲ್​ ಆಗುತ್ತಿದೆ. ತಮಗೆ ಏನೂ ತಿಳಿಯಲಿಲ್ಲ ಎಂದಿರುವ ನಟಿ ನಂತರ ಕೆಲವರಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ, ಅವರ ಉದ್ದೇಶ ಏನು ಎನ್ನುವುದನ್ನು ಹೇಳಿದರು. ನನಗೆ ಶಾಕ್​ ಆಯಿತು. ಆಗ ನಾನು ಬರುವುದಿದ್ದರೆ ಅಮ್ಮನ ಜೊತೆ ಬರುತ್ತೇನೆ, ಒಬ್ಬಳೇ ಬರುವುದಿಲ್ಲ ಎಂದೆ. ನಂತರ ಆ ಸಿನಿಮಾದಲ್ಲಿ ಅವಕಾಶವನ್ನು ಕಳೆದುಕೊಂಡೆ ಎಂದಿದ್ದಾರೆ. ಈ ಸಿನಿಮಾ ಮಾತ್ರವಲ್ಲದೇ ಹಲವು ಚಿತ್ರಗಳಲ್ಲಿ ಅಡ್ಜೆಸ್ಟ್​ ಮಾಡಿಕೊಳ್ಳುವ ಮನೋಭಾವ ನನ್ನಲ್ಲಿ ಇಲ್ಲದೇ ಇರುವ ಕಾರಣ ಹಲವು ಸಿನಿಮಾಗಳು ಕೈತಪ್ಪಿ ಹೋದವು ಎಂದು ತಿಳಿಸಿದ್ದಾರೆ. 

ಒಳ್ಳೆ ನಟಿ ಆಗ್ಬೇಕು ಎಂದ್ರೆ ಸ್ವಲ್ಪ ಅಡ್ಜಸ್ಟ್‌ ಮಾಡ್ಕೋ ಎಂದ್ರು... ಆದ್ರೆ... ಕಾಸ್ಟಿಂಗ್‌ ಕೌಚ್‌ ಅನುಭವ ಹೇಳಿದ ನಯನತಾರಾ

 ಅಷ್ಟಕ್ಕೂ, ಕಾಸ್ಟಿಂಗ್​ ​ ಕೌಚ್​ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್​ ​ ಕೌಚ್​ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಇದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಹಲವು ನಟಿಯರು ಈ ಬಗ್ಗೆ ಭಯಾನಕ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದು, ತೆಲಗು ಇಂಡಸ್ಟ್ರಿಯ ಕರಾಳ ಮುಖವನ್ನು ಅಮಾನಿ ತೆರೆದಿಟ್ಟಿದ್ದಾರೆ.
 

ಅಂದಹಾಗೆ, ತೆಲುಗು ಚಲನಚಿತ್ರೋದ್ಯಮದಲ್ಲಿ ತಮ್ಮ ಹೆಸರನ್ನು ಸ್ಥಾಪಿಸಿದ ಕೆಲವೇ ಕೆಲವು ನಟಿಯರಲ್ಲಿ  ನಟಿ ಅಮಾನಿ ಕೂಡ ಒಬ್ಬರು.  ನಾನು ಇಂಡಸ್ಟ್ರಿಗೆ ಕಾಲಿಟ್ಟಿದ್ದು ನಟಿಯಾಗಬೇಕೆಂಬ ಹಂಬಲದಿಂದ. ಆದರೆ ಇಂಥ ಯಾವುದೇ ಅಡ್ಜೆಸ್ಟ್​ಮೆಂಟ್​ಗಳಿಗೆ ನಾನು ಒಪ್ಪಿಕೊಳ್ಲಲಿಲ್ಲ. ಆದರೆ ನನ್ನ ಸ್ವಂತ ಪ್ರತಿಭೆಯಿಂದ ಕನಸನ್ನು ನನಸು ಮಾಡಿಕೊಳ್ಳಲು ಬಯಸಿದ್ದೆ.  ನನ್ನ ಕನಸುಗಳನ್ನು ನನಸಾಗಿಸುವ ಪ್ರಯತ್ನವನ್ನು ಬಿಡದೆ ಮುಂದುವರಿಸಿದೆ. ಕಠಿಣ ಪರಿಶ್ರಮದಿಂದ ನಟಿಯಾಗಿ ಅವಕಾಶ ಗಿಟ್ಟಿಸಿಕೊಂಡೆ ಎಂದಿದ್ದಾರೆ. ಇದೇ ಕಾರಣಕ್ಕೆ ಎರಡು ವರ್ಷಗಳವರೆಗೆ ಕಾದು ಆಮೇಲೆ ನಾನು ಸಿನಿಮಾಕ್ಕೆ ಬಂದೆ. ಅಲ್ಲಿಯವರೆಗೂ ನನಗೆ ಇಂಥ ಕಹಿ ಅನುಭವಗಳೇ ಆಗಿದ್ದವು ಎಂದಿದ್ದಾರೆ ನಟಿ. 

ಕಾಲು ಮುಟ್ಟಿದ್ದ, ಬೆನ್ನು ಉಜ್ಜಲು ಕರೆದಿದ್ದ ಎಂದು ಆರೋಪಿಸಿರುವ ರಾಧಿಕಾ ಆಪ್ಟೆ ಸಿನಿ ಇಂಡಸ್ಟ್ರಿ ಕುರಿತು ಹೇಳಿದ್ದೇನು?
 
ಈ ಹಿಂದೆ ಹಲವು ಚಿತ್ರಗಳಲ್ಲಿ  ನಾಯಕಿಯಾಗಿ ನಟಿಸಿದ್ದ ಅಮಾನಿ ಪ್ರಸ್ತುತ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದಾರೆ.  ಎರಡು ದಶಕಗಳ ಹಿಂದೆ ಟಾಪ್ ಲೀಗ್ ನಾಯಕಿಯಾಗಿದ್ದರು. ಅವರು 'ಮಿಸ್ಟರ್' ನಂತಹ ಕ್ಲಾಸಿಕ್ ಗಳಲ್ಲಿ ನಟಿಸಿದ್ದಾರೆ.  ನಾಗಾರ್ಜುನ, ಬಾಲಕೃಷ್ಣ ಅವರಂತಹ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದಾರೆ.  ಬಳಿಕ, ಮದುವೆಯ ನಂತರ ಸಾಕಷ್ಟು ಗ್ಯಾಪ್ ತೆಗೆದುಕೊಂಡ ಅವರು ಇತ್ತೀಚೆಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಸಮಯದಲ್ಲಿ ಆರಂಭದ ದಿನಗಳ ಬಗ್ಗೆ ಅವರು ಮಾತನಾಡಿದ್ದಾರೆ. ಹಲವು ನಟಿಯರು ಸಿನಿಮಾದಲ್ಲಿ ಫೇಮಸ್​ ಆಗಲು, ಚಾನ್ಸ್​ ಗಿಟ್ಟಿಸಿಕೊಳ್ಳಲು ಎಲ್ಲದಕ್ಕೂ ಅಡ್ಜಸ್ಟ್​ ಆಗುತ್ತಾರೆ. ಅದು ಅವರವರಿಗೆ ಬಿಟ್ಟ ವಿಷಯ ಎಂದಿರುವ ನಟಿ, ತಾವು ಮಾತ್ರ ಎಂದಿಗೂ ಈ ಮಟ್ಟಕ್ಕೆ ಇಳಿಯಲಿಲ್ಲ ಎಂದಿದ್ದಾರೆ. 
 

Follow Us:
Download App:
  • android
  • ios