ಕಾಲು ಮುಟ್ಟಿದ್ದ, ಬೆನ್ನು ಉಜ್ಜಲು ಕರೆದಿದ್ದ ಎಂದು ಆರೋಪಿಸಿರುವ ರಾಧಿಕಾ ಆಪ್ಟೆ ಸಿನಿ ಇಂಡಸ್ಟ್ರಿ ಕುರಿತು ಹೇಳಿದ್ದೇನು?
ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ್ದ ಬಹುಭಾಷಾ ನಟಿ ರಾಧಿಕಾ ಆಪ್ಟೆ ಇದೀಗ ಟಾಲಿವುಡ್ ಕುರಿತು ಹೇಳಿದ್ದೇನು?
ಸವಾಲಿನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಬಹುಭಾಷಾ ತಾರೆ ರಾಧಿಕಾ ಆಪ್ಟೆ ಅವರು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ಅನೇಕ ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಸಿನಿಮಾ ಇಂಡಸ್ಟ್ರಿಯು ಪುರುಷ ಪ್ರಧಾನ, ಇಲ್ಲಿಗೆ ನಾಯಕಿಗೆ ಇರುವ ಘನತೆ ಎಳ್ಳಷ್ಟೂ ಇಲ್ಲ ಎಂದು ಇದಾಗಲೇ ಹಲವಾರು ನಟಿಯರು ಆರೋಪಿಸಿದ್ದಾರೆ. ಅದೇ ರೀತಿ ರಾಧಿಕಾ ಆಪ್ಟೆ ಕೂಡ ಕೆಲವೊಂದು ಆಪಾದನೆಗಳನ್ನು ಮಾಡಿದ್ದು, ಅದರ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಅದರಲ್ಲಿಯೂ ಅವರು ತೆಲಗು ಇಂಡಸ್ಟ್ರಿಯಲ್ಲಿನ ಕೆಲವು ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದು ಪಿತೃಪ್ರಭುತ್ವ, ಪುರುಷ ಪ್ರಧಾನ ಮತ್ತು ಕೋಮುವಾದಿ ಎಂದು ನಟಿ ಹೇಳಿದ್ದಾರೆ. ಟಾಲಿವುಡ್‌ನಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುವುದರ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ, ಅವರ ಪಾತ್ರಗಳು ಸಾಮಾನ್ಯವಾಗಿ ಪುರುಷ ನಾಯಕನನ್ನು ವೈಭವೀಕರಿಸುವ ಸುತ್ತ ಸುತ್ತುತ್ತವೆ ಮತ್ತು ಮಹಿಳೆಯರನ್ನು ಸೆಟ್‌ನಲ್ಲಿ ಗೌಣವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ.
ಟಾಲಿವುಡ್ ಸೆಟ್‌ಗಳಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ಅಲ್ಲಿ ನಟಿಯರನ್ನು ಸಂಪರ್ಕಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಅವರ ಅಭಿಪ್ರಾಯಗಳಿಗೆ ಬೆಲೆಯೇ ಇಲ್ಲ. ಇದೇ ಕಾರಣಕ್ಕೆ ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಸೂಪರ್ಸ್ಟಾರ್ ಬಾಲಕೃಷ್ಣ ವಿರುದ್ಧ ನಟಿ ವಿಚಿತ್ರಾ ಬಳಿಕ ರಾಧಿಕಾ ಆಪ್ಟೆ ಲೈಂಗಿಕ ದೌರ್ಜನ್ಯ ಆರೋಪ?
ಈ ಹಿಂದೆ ನಟಿ, ಸಿನಿಮಾ ಇಂಡಸ್ಟ್ರಿಯ ಇನ್ನೊಂದು ಮುಖದ ಬಗ್ಗೆ ಮಾತನಾಡಿದ್ದರು. ಸಿನಿಮಾ ಒಂದರಲ್ಲಿ ಯಾವುದಾದರೂ ಪಾತ್ರ ಹಿಟ್ ಆದರೆ ಸಾಕು ಹೀರೋ ಹೀರೋಯಿನ್‌ಗೆ ಅಂತಹ ಪಾತ್ರಗಳೇ ಹೆಚ್ಚಾಗಿ ಹುಡುಕಿಕೊಂಡು ಬರುತ್ತಿರುತ್ತವೆ ಎಂದಿದ್ದರು. ಇದೇ ವೇಳೆ ಕಾಸ್ಟಿಂಗ್ ಕೌಚ್ ಕುರಿತೂ ಮಾತನಾಡಿದ್ದರು. ಮೊದಲ ದಿನ ನಾನು ಚಿತ್ರೀಕರಣಕ್ಕೆ ಹೋದಾಗ ಟಾಪ್ ಹೀರೋ ನನ್ನನ್ನು ನೋಡಿ ಕಾಲು ತಟ್ಟಿದ್ದರು. ನನಗೆ ಅದನ್ನು ಒಪ್ಪಿಕೊಳ್ಳಲಾಗಲಿಲ್ಲ. ತಕ್ಷಣ ಎದ್ದು ಬಂದು ಸ್ಥಳದಲ್ಲೇ ಗದರಿಸಿದೆ. ಇನ್ನು ಮುಂದೆ ಈ ರೀತಿ ಮಾಡಬಾರದು ಎಂದು ಎಲ್ಲ ಜೂನಿಯರ್ ಆರ್ಟಿಸ್ಟ್‌ಗಳಿಗೆ ಎಚ್ಚರಿಕೆ ನೀಡಿದ್ದೆ ಎಂದಿದ್ದರು. ಒಮ್ಮೆ ಹೀರೋ ಒಬ್ಬರು ನನಗೆ ಕರೆ ಮಾಡಿ ಬೆನ್ನು ಉಜ್ಜಬೇಕಾದರೆ ನಿನ್ನನ್ನು ರೂಮಿಗೆ ಕರೆಯುತ್ತೇನೆ ಎಂದರು. ನನಗೆ ತುಂಬಾ ವಿಚಿತ್ರ ಎನಿಸಿತ್ತು ಎಂದಿದ್ದರು ನಟಿ. ಇದು ನಟ ಬಾಲಕೃಷ್ಣ ಅವರ ಬಗ್ಗೆ ಎಂದು ಕೊನೆಗೆ ರಿವೀಲ್ ಆಗಿತ್ತು. ಇದೇ ಸಂದರ್ಭದಲ್ಲಿ ನಟ ರಜನೀಕಾಂತ್ ಅವರ ವ್ಯಕ್ತಿತ್ವದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ರಜನಿಕಾಂತ್ ಜೊತೆ ನಟಿಸುವಾಗಿ ತುಂಬಾ ಕಂಫರ್ಟ್ ಎನಿಸುತ್ತಿತ್ತು. ಅವರಿಗಿಂತಲೂ ಉತ್ತಮ ವ್ಯಕ್ತಿ ಎಂದಿಗೂ ಇರಲು ಸಾಧ್ಯವೇ ಇಲ್ಲ ಎಂದಿದ್ದರು.
ಅಂದಹಾಗೆ ನಟಿ ರಾಧಿಕಾ ಅಪ್ಟೇ ವೆಲ್ಲೂರು ಜಿಲ್ಲೆಯವರು. ವಾವ್! ಲೈಫ್ ಹೋ ತೋ ಐಸಿ! ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಗೆ ರಾಧಿಕಾ ಪದಾರ್ಪಣೆ ಮಾಡಿದರು. 2012 ರಲ್ಲಿ ಪ್ರಕಾಶ್ ರಾಜ್ ಅಭಿನಯದ ಧೋನಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ 2013ರಲ್ಲಿ ಕಾರ್ತಿ, ಕಾಜಲ್ ಅಗರ್ವಾಲ್, ಸಂತಾನಂ, ಪ್ರಭು ಮತ್ತು ಶರಣ್ಯ ಅಭಿನಯದ ಆಲ್ ಇನ್ ಆಲ್ ಆಖೋ ರಾಜ ಚಿತ್ರದಲ್ಲಿ ನಟಿಸಿದರು. ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 2014 ರಲ್ಲಿ ಬಿಡುಗಡೆಯಾದ ವೆಟ್ರಿ ಸೆಲ್ವನ್ ಅವರ ಕಬಾಲಿಯಲ್ಲಿ ನಟಿಸಿದರು. ಕಬಾಲಿ ಚಿತ್ರದಲ್ಲಿ ರಾಧಿಕಾ ಅವರು ರಜನಿ ಎದುರು ನಟಿಸಿದ್ದರು. ತಮಿಳಿನ ಚಿತ್ರಂ ಪೆಸುತಡಿ 2 ನಲ್ಲಿ ನಟಿಸಿದರು. ಇದಾದ ಬಳಿಕ ತಮಿಳಿನ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ, ಬಾಲಿವುಡ್, ಹಾಲಿವುಡ್ ನಂತಹ ಪರಭಾಷೆಯ ಚಿತ್ರಗಳತ್ತ ರಾಧಿಕಾರ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದಲ್ಲದೆ, ಅವರು ತಮಿಳು ಭಾಷೆಯಲ್ಲಿ ಮಾತ್ರವಲ್ಲದೆ ಹಿಂದಿ, ಬೆಂಗಾಲಿ, ಮರಾಠಿ, ಮಲಯಾಳಂ, ತೆಲುಗು ಮುಂತಾದ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.