Asianet Suvarna News Asianet Suvarna News

ಕುದುರೆ ಓಡಿಸುವಾಗ ತಲೆ ಸುತ್ತಿ ಬಿದ್ದ ನಟ ರಣದೀಪ್ ಹೂಡಾಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

ಕುದುರೆ ಓಡಿಸುವಾಗ ತಲೆ ಸುತ್ತಿ ಬಿದ್ದ ನಟ ರಣದೀಪ್‌ಗೆ ಗಂಭೀರ ಗಾಯ. ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ...

Savarkar actor Randeep hooda hospitalised after fainting while riding horse vcs
Author
First Published Jan 14, 2023, 1:18 PM IST

2001ರಲ್ಲಿ ಮಾನ್ಸೂನ್ ವೆಡ್ಡಿಂಗ್ ಸಿನಿಮಾ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 32 ಸಿನಿಮಾಗಳಲ್ಲಿ ಅಭಿನಯಿಸಿರುವ ರಣದೀಪ್ ಕೆಲವು ದಿನಗಳ ಹಿಂದೆ 22 ಕೆಜಿ ತೂಕ ಇಳಿಸಿಕೊಂಡಿದ್ದರು. ಮೊದಲೇ ಸಣ್ಣ ಕಾಣುತ್ತಿದ್ದ ನಟನಿಗೆ ಆರೋಗ್ಯ ಸಮಸ್ಯೆಗಳಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು ಈಗ ತಲೆ ಸುತ್ತಿ ಬಿದ್ದಿರುವುದಕ್ಕೆ ಗಾಬರಿ ಆಗಿದ್ದಾರೆ. 

ಹೌದು! ರಣದೀಪ್ ಹೂಡಾ ಕುದುರೆ ಓಡಿಸುವಾಗ ತಲೆ ಸುತ್ತಿ ಬಿದ್ದು ಗಂಭೀರವಾಗಿ ಗಾಯವಾದ ಕಾರಣ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಕೆಲವು ವಾರಗಳ ಕಾಲ ಬೆಸ್ಟ್‌ ರೆಸ್ಟ್‌ ತೆಗೆದುಕೊಳ್ಳಬೇಕಂತೆ. ರಣದೀಪ್ ಫೋಟೋ ಅಥವಾ ವಿಡಿಯೋ ಎಲ್ಲಿಯೂ ರಿವೀಲ್ ಅಗಿಲ್ಲ.

ಕಳೆದ ವರ್ಷ ಸಲ್ಮಾನ್ ಖಾನ್ ರಾಧೆ ಸಿನಿಮಾ ಚಿತ್ರೀಕರಣ ಸಮಯದಲ್ಲಿ ರಣದೀಪ್ ಬಿದ್ದು ಮಂಡಿಗೆ ಪೆಟ್ಟು ಮಾಡಿಕೊಂಡಿದ್ದರು. ದೊಡ್ಡ ಆಪರೇಷನ್‌ ನಂತರ ಚಿತ್ರೀಕರಣಕ್ಕೆ ಮರುಳಿದ್ದರು. ಆಗ ಕಾಲಿನ ಫೋಟೋ ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಅಪ್ಡೇಟ್ ಮಾಡಿದ್ದರು. 

Savarkar actor Randeep hooda hospitalised after fainting while riding horse vcs

ಸದ್ಯ ಸಾವರ್ಕರ್‌ ಚಿತ್ರಕ್ಕೆ ಸಹಿ ಮಾಡಿರುವ ರಣದೀಪ್‌ 21 ಕೆಜಿ ತೂಕ ಇಳಿಸಿಕೊಂಡಿದ್ದರು. ಚಿತ್ರದ ಟ್ರೈಲರ್ ಹಾಗೂ ಟೀಸರ್ ಸಿನಿ ರಸಿಕರ ಗಮನ ಸೆಳೆದಿದೆ. ಮೇ 26, 2023ರಲ್ಲಿ ಸಿನಿಮಾ ರಿಲೀಸ್ ಅಗುತ್ತಿದೆ.

ಸುಶ್ಮಿತಾ ಸೇನ್‌ ಜೊತೆ Randeep Hooda ಬ್ರೇಕಪ್; 3 ವರ್ಷದ ಹಿಂಸೆಗಿಂತ ಬಿಟ್ಟು ಹೋಗುವುದೇ ಬೆಸ್ಟ್‌

ಕಾಂಟ್ರವರ್ಸಿಯಲ್ಲಿ ರಣದೀಪ್:

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ರಣದೀಪ್‌ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿತ್ತು.  ರಣದೀಪ್ ಹೂಡಾ ವಿರುದ್ಧ ಸೂರತ್‌ನ ಲೇಖಕಿ, , ಗೀತರಚನೆಕಾರ್ತಿ ಪ್ರಿಯಾಂಕಾ ಶರ್ಮಾ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಿಸಿ, ದೂರು ದಾಖಲಿಸಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಪ್ರಿಯಾಂಕಾ ಮತ್ತು ರಣದೀಪ್ ಪರಿಚಯವಾಗಿತ್ತು. ಪ್ರಿಯಾಂಕಾ ಮೂಲಕ ಅನೇಕ ಸಿನಿಮಾ ಕಥೆಗಳು ಹಾಗೂ ಹಾಡುಗಳನ್ನು ರಣದೀಪ್ ಪಡೆದುಕೊಂಡಿದ್ದಾರೆ. ಆದರೆ ಯಾವುದನ್ನೂ ಬಳಸಿಕೊಂಡಿಲ್ಲ ಬೇರೆಯವರಿಗೆ ನೀಡಬೇಕೆಂದರೂ ಅವರು ನೀಡುತ್ತಿಲ್ಲ. ಬದಲಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸುತ್ತಿದ್ದಾರೆ. 10 ವರ್ಷಗಳಿಂದಲೂ ಇದೇ ರೀತಿ ಸತಾಯಿಸುತ್ತಿದ್ದಾರೆ, ಎಂದು  10 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಇ-ಮೇಲ್ ಮೂಲಕ ದೂರಿನ ಬಗ್ಗೆ ಹೂಡಾ ಅವರನ್ನು ಸಂಪರ್ಕಿಸಿದ್ದಾರೆನ್ನಲಾಗಿದೆ. 

'ರಣದೀಪ್ ಹೂಡಾ ನನ್ನನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದರು. ತಾನು ಬರೆದಿದ್ದ ಬಹಳ ಕಥೆಗಳನ್ನು ಕಳುಹಿಸಿದ್ದೆ. ಶೀಘ್ರದಲ್ಲಿಯೇ ಕೆಲಸ ಪ್ರಾರಂಭಿಸೋಣ ಎಂದಿದ್ದರು. ಒಟ್ಟು 1200 ಹಾಡುಗಳು ಮತ್ತು 40 ಕತೆಗಳನ್ನು ರಣದೀಪ್ ಹೂಡಾ, ಆಶಾ ಹೂಡಾ, ಮಂದೀಪ್ ಹೂಡಾ, ಅಜ್ಲಿ ಹೂಡಾ, ಮನೀಶ್, ರಣದೀಪ್ ಮ್ಯಾನೇಜರ್ ಪಾಂಚಾಲಿ ಔಧರಿ, ಮೇಕಪ್ ಆರ್ಟಿಸ್ಟ್ ರೇಣುಕಾ ಪಿಳೈ ಅವರಿಗೆ ವಾಟ್ಸಾಪ್ ಮತ್ತು ಮೇಲ್ ಮೂಲಕ ಕಳುಹಿಸಿದ್ದೇನೆ. ಈ ಘಟನೆ ನಡೆದು ವರ್ಷಗಳು ಕಳೆದಿವೆ. ಇನ್ನೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಲ್ಲ. ತಮ್ಮ ಕಥೆ ಮತ್ತು ಹಾಡುಗಳನ್ನು ವಾಪಸ್ ಕಳುಹಿಸಿ, ಎಂದು ಅವರ ತಂಡವನ್ನು ಸಂಪರ್ಕಿಸಿದರೆ, ಜೀವ ಬೆದರಿಕೆ ಹಾಕ್ತಿದ್ದಾರೆ,' ಎಂದು ಪ್ರಿಯಾಂಕಾ ದೂರು ನೀಡಿದ್ದರು.

Follow Us:
Download App:
  • android
  • ios