ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಸುಶಾಂತ್ ತಂದೆ ರಿಯಾಳನ್ನು ಕೊಲೆಗಾತಿ ಎಂದು ಕರೆದಿದ್ದಾರೆ.

ಮಗನನ್ನು ಕೊಲ್ಲಲು ಉದ್ದೇಶಿಸಿ ರಿಯಾ ಸುಶಾಂತ್‌ಗೆ ವಿಷ ಕೊಟ್ಟಿದ್ದಾಳೆ ಎಂದು ಕೆಕೆ ಸಿಂಗ್ ಆರೋಪಿಸಿದ್ದಾರೆ. ಮಾಧ್ಯಮಗಳಿಗೆ ನೀಡಿದ ವಿಡಿಯೋದಲ್ಲಿ ರಿಯಾ ನನ್ನ ಮಗನನ್ನು ಕೊಂದ ಕೊಲೆಗಾತಿ ಎಂದು ಅವರು ಆರೋಪಿಸಿದ್ದಾರೆ.

ಡ್ರಗ್ಸ್ ಡೀಲಿಂಗ್: ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ವಿರುದ್ಧ ಕೇಸ್

ರಿಯಾ ಬಹಳ ಹಿಂದಿನಿಂದಲೇ ನನ್ನ ಮಗನಿಗೆ ವಿಷ ನೀಡುತ್ತಿದ್ದಳು. ಅವಳೊಬ್ಬ ಕೊಲೆಗಾತಿ. ತನಿಖಾ ತಂಡ ಆಕೆಯನ್ನು ಮತ್ತು ಆಕೆಯ ಸಹಚರರನ್ನು ಬಂಧಿಸಬೇಕು ಎಂದು 14 ಸೆಕುಂಡುಗಳ ವಿಡಿಯೋ ಕ್ಲಿಪ್ ಮೂಲಕ ಕೇಳಿಕೊಂಡಿದ್ದಾರೆ.

ಕೆಕೆ ಸಿಂಗ್ ಸುಶಾಂತ್ ಸಾವಿಗೆ ಸಂಬಂಧಿಸಿ ಬಿಹಾರದ ಪಾಟ್ನಾ ನಗರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದರಲ್ಲಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬಸ್ಥರ ಬಗ್ಗೆ ಆರೋಪ ಮಾಡಲಾಗಿದೆ.

ಸುಶಾಂತ್ ಮನೆ ಬಿಡುವ ಮುನ್ನ 8 ಹಾರ್ಡ್‌ ಡ್ರೈವ್ ನಾಶ ಮಾಡಿದ್ದ ರಿಯಾ

ಸದ್ಯ ಸಿಬಿಐ ಕೇಸ್ ತನಿಖೆ ಮಾಡುತ್ತಿದ್ದು, ಜಾರಿ ನಿರ್ದೇಶನಾಲಯ ಮತ್ತು ಮಾದಕ ವಸ್ತು ನಿಯಣತ್ರಣ ದಳವೂ ಪ್ರಕರಣದ ತನಿಖೆ ನಡೆಸುತ್ತಿದೆ. ಎನ್‌ಸಿಬಿ ಈಗಾಗಲೇ ನಟಿ ರಿಯಾ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದೆ. ಡ್ರಗ್ಸ್ ಡೀಲಿಂಗ್ ಮತ್ತು ಉಪಯೋಗದ ಹಿನ್ನಲೆ ತಂದ ಕೇಸು ದಾಖಲಿಸಿದೆ.