Asianet Suvarna News Asianet Suvarna News

Sanjay Dutt Birthday: 308 ಗರ್ಲ್​ಫ್ರೆಂಡ್ಸ್ ಜೊತೆ ಡೇಟಿಂಗ್​; ಲವ್​ಗೆ ಮುನ್ನ ಸ್ಮಶಾನಕ್ಕೆ ಭೇಟಿ?

ಇಂದು ನಟ ಸಂಜಯ್​ ದತ್​ ಅವರ ಹುಟ್ಟುಹಬ್ಬ. ಈ ಸಮಯದಲ್ಲಿ ಇವರ ಗರ್ಲ್​ಫ್ರೆಂಡ್ಸ್​ ಕುರಿತು ಕುತೂಹಲದ ಮಾಹಿತಿ ಸಿಕ್ಕಿದೆ. ಏನದು?
 

Sanju director reveals Sanjay Dutts secret of dating with 308 women suc
Author
First Published Jul 29, 2023, 4:31 PM IST

ಇಂದು ಬಾಲಿವುಡ್‌ನ ಮುನ್ನಾಭಾಯಿ ಅಂದರೆ ಸಂಜಯ್ ದತ್ (Sanjay Dutt) ಹುಟ್ಟುಹಬ್ಬ. 64 ವಸಂತಗಳನ್ನು ಪೂರೈಸಿ 65ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ ಈ ನಟ. ಇದಾಗಲೇ ಜೈಲುವಾಸ ಸೇರಿದಂತೆ ಹಲವು  ವಿವಾದಗಳ ಸುಳಿಗೆ ಸಿಲುಕಿದ್ದರೂ ಪ್ರೇಕ್ಷಕರ ಪಾಲಿಗೆ ಮಾತ್ರ ಇವರು ಸೂಪರ್ ಸ್ಟಾರೇ. ನಟನೆಯ ಜೊತೆಗೆ ತಮ್ಮ ವೈಯಕ್ತಿಕ ಜೀವನದಿಂದಾಗಿ ಅವರು ಆಗಾಗ ಜನಮನದಲ್ಲಿದ್ದಾರೆ. ಬಾಲಿವುಡ್‌ನ 'ಸಂಜು ಬಾಬಾ' ವೈಯಕ್ತಿಕ ಜೀವನವು ಹಲವಾರು ಏರಿಳಿತದಿಂದ ಕೂಡಿದ್ದು, ಚಲನಚಿತ್ರ ಸ್ಟೋರಿಗಿಂತ  ಕಡಿಮೆಯೇನಿಲ್ಲ.   ಬಾಲನಟನಾಗಿ  ಚಲನಚಿತ್ರ ವೃತ್ತಿಜೀವನ ಪ್ರಾರಂಭಿಸಿದ್ದ ನಟ  ‘ರೇಷ್ಮಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಈ ಚಲನಚಿತ್ರವು 1972 ರಲ್ಲಿ ಬಿಡುಗಡೆಯಾಗಿತ್ತು.  1981ರಲ್ಲಿ ‘ರಾಕಿ’ ಚಿತ್ರದ ಮೂಲಕ ಸಂಜಯ್ ನಿಜವಾದ ಅರ್ಥದಲ್ಲಿ ಕೆಲಸ ಮಾಡಲು ಆರಂಭಿಸಿದರು. ಅವರ ಸಿನಿಮಾ ಸೂಪರ್ ಹಿಟ್ ಆಯಿತು.

ತಾಯಿಯ ಹಠಾತ್ ಸಾವಿನ ನಂತರ ಸಂಜಯ್ ತುಂಬಾ ಒಂಟಿಯಾಗಿದ್ದರು.  ಡ್ರಗ್ಸ್ ಚಟಕ್ಕೆ ದಾಸರಾದರು. ಹಾಗಾಗಿ ಹಲವು ಕಷ್ಟಗಳನ್ನು ಎದುರಿಸಬೇಕಾಯಿತು.  1987 ರಲ್ಲಿ ರಿಚಾ ಶರ್ಮಾ ಅವರನ್ನು ವಿವಾಹವಾದರು. ಆದರೆ ಮದುವೆಯಾದ ಒಂಬತ್ತು ವರ್ಷಗಳ ನಂತರ ರಿಚಾ ಬ್ರೈನ್ ಟ್ಯೂಮರ್‌ನಿಂದ ಸಾವನ್ನಪ್ಪಿದರು. ಆ ನಂತರ ಸಂಜಯ್ ಮತ್ತೆ ಒಂಟಿಯಾದರು. ಅದರ ನಂತರ ಅವರು  ಮತ್ತೆ ಮದುವೆಯಾದರು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಅವರು ವಿಚ್ಛೇದನ ಪಡೆದರು. 'ಮುನ್ನಾಭಾಯಿ ಎಂಬಿಬಿಎಸ್' (Munnabai MBBS) ಚಿತ್ರದ ಮೂಲಕ ಸಂಜಯ್ ಮತ್ತೊಮ್ಮೆ ಬಾಲಿವುಡ್‌ಗೆ ಕಮ್ ಬ್ಯಾಕ್ ಮಾಡಿದರು. ಇದು ಸೂಪರ್​ ಹಿಟ್​ ಆಗುತ್ತಲೆ,  2008 ರಲ್ಲಿ, ಸಂಜು ಮಾನ್ಯತಾ ಅವರನ್ನು ವಿವಾಹವಾದರು. ನಂತರ ಬಾಲಿವುಡ್​ನಲ್ಲಿ  ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಸಂಜಯ್ ಜೀವನಾಧಾರಿತ ‘ಸಂಜು’ ಸಿನಿಮಾ ಕೂಡ ಕೆಲ ದಿನಗಳ ಹಿಂದೆ ಪ್ರೇಕ್ಷಕರ ಮುಂದೆ ಬಂತು.  

ಕೇವಲ 1,550 ರೂ. ವಿಸ್ಕಿ ಮಾರಾಟ ಶುರು ಮಾಡಿದ ಸಂಜಯ್ ದತ್; ಖುಷಿಯಲ್ಲಿ ಕುಣಿದ ಕುಡುಕರು!

ಇಂತಿಪ್ಪ ಸಂಜು ಭಾಯಿಯವರ ಗರ್ಲ್​ಫ್ರೆಂಡ್​ ಕುರಿತು ವಿಷಯ ಅವರ ಈ ಹುಟ್ಟುಹಬ್ಬದ ಸಮಯದಲ್ಲಿ ಸಕತ್​ ವೈರಲ್​ ಆಗಿದೆ. ಅದೇನೆಂದರೆ,  ಸಂಜಯ್ ದತ್​ಗೆ  308 ಗರ್ಲ್​ಫ್ರೆಂಡ್ಸ್ ಇದ್ದರು ಎನ್ನುವ ಸುದ್ದಿ ಇದು. ಹೌದು. ಸಂಜಯ್​ ದತ್​ ಅವರು ಬಯೋಪಿಕ್​ ಸಂಜು ಬಂದರೂ ಅದರಲ್ಲಿ ಅವರ ಸ್ನೇಹಿತೆಯರ ಕುರಿತು ಹೆಚ್ಚು ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಬರೋಬ್ಬರಿ 308 ಗರ್ಲ್​ಫ್ರೆಂಡ್ಸ್​ ಹೊಂದಿದ್ದರಂತೆ ಮುನ್ನಾಭಾಯ್​. ಅದರಲ್ಲಿ ಮೊದಲಿನ ಹೆಸರು ಮಾಧುರಿ ದೀಕ್ಷಿತ್ ಅವರದ್ದು. 1991ರಲ್ಲಿ ‘ಸಾಜನ್’ ಸಿನಿಮಾ ಶೂಟಿಂಗ್ ವೇಳೆ ಇವರಿಬ್ಬರೂ ಡೇಟಿಂಗ್​ (Dating) ಆರಂಭಿಸಿದ್ದರು ಎನ್ನಲಾಗಿದೆ.  1993ರ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಇವರ ಹೆಸರು ಕೇಳಿ ಬಂದಿದ್ದರಿಂದ ಇವರ ಸಂಬಂಧ ಕೊನೆ ಆಯಿತು. ನಂತರ ಕೇಳಿಬಂದ ಹೆಸರು ನಟಿ ರಿಯಾನಾ ಪಿಳ್ಳೈ. ಮಾಡೆಲ್ ಆಗಿದ್ದ ರಿಯಾನ 1998ರಲ್ಲಿ ಸಂಜಯ್ ದತ್ ಮದುವೆ ಆದರು. 2005ರಲ್ಲಿ ಇವರು ವಿಚ್ಛೇದನ ಪಡೆದರು. ನಂತರ ಇವರ ಹೆಸರು ಕೇಳಿಬಂದಿದ್ದು ಬಾಲ್ಯದ ಸ್ನೇಹಿತೆ, ನಟಿ ಟೀನಾ ಮುನಿಮ್ ಜೊತೆ ಡೇಟಿಂಗ್​ ಶುರುವಾಗಿತ್ತು.  ‘ರಾಕಿ’ ಸಿನಿಮಾ ಸೆಟ್​ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತ್ತು ಎನ್ನಲಾಗಿದೆ. ಸಂಜಯ್ ದತ್ ಅವರ ಕೆಟ್ಟ ಹವ್ಯಾಸದಿಂದ ಸಂಬಂಧ ಕೊನೆ ಆಯಿತು. ಇದಾದ ಬಳಿಕ ರಿಚಾ ಶರ್ಮಾ ಜೊತೆ ಸಂಬಂಧ ಹೊಂದಿದ್ದರು. ಕೆಲ ಕಾಲ ಇವರ ಡೇಟಿಂಗ್​ ಕೂಡ ನಡೆದಿತ್ತು. 

ಇಷ್ಟೇ ಅಲ್ಲದೆ, ಸಂಜಯ್​ ದತ್​ ಅವರ ಹೆಸರು ನಾದಿಯಾ ದುರ್ರಾನಿ,  ಲಿಸಾ ರೇ (Lisa Ray) ಸೇರಿದಂತೆ ರೇಖಾ ಜೊತೆಗೂ ಥಳಕು ಹಾಕಿಕೊಂಡಿತ್ತು. ಹೀಗೆ 308 ಮಂದಿಯ ಪಟ್ಟಿ ಮಾಡಲಾಗಿದೆ. ಇವುಗಳ ಪೈಕಿ ಕೆಲವು ನಿಜ ಎಂದು ಸಾಬೀತಾಗಿದ್ದರೂ ಕೆಲವು ಗಾಳಿಸುದ್ದಿಯಲ್ಲಿಯೇ ಮುಚ್ಚಿಹೋಗಿದೆ. ಈ ಕುರಿತು ಹಿಂದೊಮ್ಮೆ ನಿರ್ಮಾಪಕ ರಾಜ್‌ಕುಮಾರ್ ಹಿರಾನಿ ಕೂಡ ಹೇಳಿದ್ದರು. 'ಸಂಜಯ್​ ದತ್ತ ಡೇಟಿಂಗ್​ ಮಾಡುವ ಮುನ್ನ ಹುಡುಗಿಯರನ್ನು ಸ್ಮಶಾನಕ್ಕೆ ಕರೆದೊಯ್ಯುತ್ತಾನೆ. ಇಲ್ಲಿರುವುದು  ನನ್ನ ತಾಯಿ ಎನ್ನುತ್ತಾನೆ. ಆಕೆಯನ್ನು  ಭೇಟಿಯಾಗಲು  ನಿನ್ನನ್ನು ಇಲ್ಲಿಗೆ ಕರೆತಂದಿದ್ದೇನೆ ಎಂದು ಹೇಳುವ ಮೂಲಕ ಎಮೋಷನಲ್​ ಬ್ಲ್ಯಾಕ್​ಮೇಲ್​ ಮಾಡುತ್ತಾನೆ. ಅಸಲಿಗೆ ಅಲ್ಲಿ ಆತನ ತಾಯಿಯ ಸಮಾಧಿ ಇರುವುದಿಲ್ಲ. ಹೀಗೆ  ಭಾವನಾತ್ಮಕವಾಗಿ ಬ್ಲ್ಯಾಕ್​ಮೇಲ್​ ಮಾಡಿ ಹುಡುಗಿಯರನ್ನು ಒಲಿಸಿಕೊಳ್ಳುತ್ತಾನೆ ಎಂದಿದ್ದರು. 

'ಆದಿಪುರುಷ್' ರಿಲೀಸ್ ಬೆನ್ನಲ್ಲೇ ಪ್ರಭಾಸ್ ಬಗ್ಗೆ ಮತ್ತೊಂದು ಸುದ್ದಿ ವೈರಲ್: 'ರಾಯಲ್' ಆಗಿ ಬರ್ತಾರಾ ಸ್ಟಾರ್

Follow Us:
Download App:
  • android
  • ios