Asianet Suvarna News Asianet Suvarna News

ಕೇವಲ 1,550 ರೂ. ವಿಸ್ಕಿ ಮಾರಾಟ ಶುರು ಮಾಡಿದ ಸಂಜಯ್ ದತ್; ಖುಷಿಯಲ್ಲಿ ಕುಣಿದ ಕುಡುಕರು!

ಬಾಲಿವುಡ್ ನಟ ಸಂಜಯ್ ದತ್ ಇತ್ತೀಚೆಗೆ ಮತ್ತೊಂದು ಮದ್ಯ ಬ್ರ್ಯಾಂಡ್ ನಲ್ಲಿ ಹೂಡಿಕೆ ಮಾಡಿದ್ದಾರೆ. 'ದಿ ಗ್ಲೆನ್‌ವಾಕ್' ಹೆಸರಿನ ಸ್ಕಾಚ್ ವಿಸ್ಕಿ ಬ್ರ್ಯಾಂಡ್  ಅನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು  ಹಾಗೂ ಚಿಲ್ಲರೆ ಮಾರಾಟಕ್ಕೆ ಸಂಬಂಧಿಸಿ ಕಾರ್ಟೆಲ್ ಮತ್ತು ಬ್ರದರ್ಸ್‌ನಲ್ಲಿ ದತ್ ಹೂಡಿಕೆ ಮಾಡಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ಡ್ವಾನ್ ಟೌನ್ ಎಂಬ ಸ್ನೀಕರ್ ಬ್ರ್ಯಾಂಡ್ ನಲ್ಲಿ ಅವರು  ಹೂಡಿಕೆ ಮಾಡಿದ್ದರು.

Actor Sanjay Dutt launches new Scotch whisky brand as he expands his business ventures anu
Author
First Published Jun 26, 2023, 3:26 PM IST

ಮುಂಬೈ (ಜೂ.26): ಬಾಲಿವುಡ್ ನಟ ಸಂಜಯ್ ದತ್ ಇತ್ತೀಚೆಗೆ ಗ್ಲೆನ್ ವಾಕ್ ಎಂಬ ಮದ್ಯದ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಅವರು ಆಲ್ಕೋಬೆವ್ ಸ್ಟಾರ್ಟ್ಅಪ್ ಕಾರ್ಟೆಲ್ ಮತ್ತು ಬ್ರದರ್ಸ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಈ ಕಂಪನಿ 'ದಿ ಗ್ಲೆನ್‌ವಾಕ್' ಹೆಸರಿನ ಸ್ಕಾಚ್ ವಿಸ್ಕಿಯನ್ನು ಉತ್ಪಾದಿಸುತ್ತದೆ. ಭಾರತಕ್ಕೆ 'ದಿ ಗ್ಲೆನ್‌ವಾಕ್' ಬ್ರ್ಯಾಂಡ್‌ ಆಮದು ಮಾಡಿಕೊಳ್ಳಲು ಹಾಗೂ ಚಿಲ್ಲರೆ ಮಾರಾಟಕ್ಕೆ ಸಂಬಂಧಿಸಿ ಕಾರ್ಟೆಲ್ ಮತ್ತು ಬ್ರದರ್ಸ್‌ನಲ್ಲಿ ಸಂಜಯ್ ದತ್ ಹೂಡಿಕೆ ಮಾಡಿದ್ದಾರೆ. ಈ ವಿಸ್ಕಿಯನ್ನು ರಷ್ಯಾದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಸಿನಿಮಾದ ಹೊರತಾಗಿ ಉದ್ಯಮವನ್ನು ವಿಸ್ತರಿಸೋದು ಕೂಡ ಮುಖ್ಯ ಎಂದು ಗ್ಲೆನ್ ವಾಕ್ ಬಿಡುಗಡೆ ಸಂರ್ಭದಲ್ಲಿ ಸಂಜಯ್ ದತ್ ತಿಳಿಸಿದ್ದಾರೆ. ಅಂದ ಹಾಗೇ ಸಂಜಯ್ ದತ್ ಮದ್ಯ ಬ್ರ್ಯಾಂಡ್ ನಲ್ಲಿ ಹೂಡಿಕೆ ಮಾಡುತ್ತಿರೋದು ಇದೇ ಮೊದಲೇನಲ್ಲ. ಈ ವರ್ಷದ ಪ್ರಾರಂಭದಲ್ಲಿ ಡ್ವಾನ್ ಟೌನ್ ಎಂಬ ಸ್ನೀಕರ್ ಬ್ರ್ಯಾಂಡ್ ನಲ್ಲಿ ಹೂಡಿಕೆ ಮಾಡಿದ್ದರು. 'ದಿ ಗ್ಲೆನ್‌ವಾಕ್' ಉತ್ಪಾದಿಸುವ ಕಾರ್ಟೆಲ್ ಸಂಸ್ಥೆ ಸ್ಟಾರ್ಟ್ ಅಪ್ ಆಗಿದೆ. ಭಾರತದಲ್ಲಿ ಈ ಸ್ಟಾರ್ಟ್ ಅಪ್ ಸಂಜಯ್ ದತ್ ಅವರೊಂದಿಗೆ ಇನ್ನೂ ನಾಲ್ವರು ಪಾಲುದಾರರನ್ನು ಹೊಂದಿದೆ.

'ಸಿನಿಮಾಗಳ ಆಚೆಗೆ ಉದ್ಯಮವನ್ನು ವಿಸ್ತರಿಸೋದು ಸದಾ ಉತ್ತಮವೇ ಆಗಿದೆ. ಅದರಲ್ಲೂ ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿ ಇನ್ನಷ್ಟು ಬೆಳವಣಿಗೆ ಹೊಂದಲು ಅವುಗಳಿಗೆ ಒಂದು ಅವಕಾಶ ನೀಡುವುದು ಯಾವಾಗಲೂ ಉತ್ತಮ ವಿಚಾರವೇ ಆಗಿದೆ. ಇದು ಅತೀಅಗತ್ಯ ಕೂಡ. ಇದನ್ನೇ ನಾವು ಮಾಡಿರೋದು. ನಾನು ಸ್ನೀಕರ್ ಕಂಪನಿಗೆ ಬೆಂಬಲ ನೀಡಿದ್ದೆ ಹಾಗೂ ಈಗ ಕಾರ್ಟೆಲ್ ಗೆ ನೀಡುತ್ತಿದ್ದೇನೆ. ಹಾಗೆಯೇ ಒಂದು ಬಟ್ಟೆ ಬ್ರ್ಯಾಂಡ್ ಅಥವಾ ಸಾಫ್ಟವೇರ್ ಹಾಗೂ ಶಿಕ್ಷಣ ಸಂಬಂಧಿ ಸಂಸ್ಥೆಗೆ ಬೆಂಬಲ ನೀಡಲು ನೋಡುತ್ತಿದ್ದೇನೆ' ಎಂದು ಸಂಜಯ್ ದತ್ ತಿಳಿಸಿದ್ದಾರೆ.

ಬೆಂಕಿಗೆ ಹಾರಿ ನರ್ಗಿಸ್ ಜೀವ ಉಳಿಸಿದ ಸುನೀಲ್ ದತ್; ಸಂಜಯ್‌ ದತ್‌ ಪೋಷಕರ ಇಂಟರೆಸ್ಟಿಂಗ್‌ ಲವ್‌ಸ್ಟೋರಿ

ಇನ್ನು ನಾನು ಉದ್ಯಮಿಯಲ್ಲ. ನನ್ನ ಪತ್ನಿ ಹಾಗೂ ಪಾಲುದಾರರು ಹಣದ ವಿಚಾರಗಳನ್ನು ನೋಡಿಕೊಳ್ಳುತ್ತಾರೆ. ಆಸಕ್ತಿ ಮೂಡಿದರೆ ಉದ್ಯಮಕ್ಕೆ ಹಿಂತಿರುಗಲು ಸಿದ್ಧನಾಗಿದ್ದೇನೆ ಎಂದು ದತ್ ಸ್ಪಷ್ಟಪಡಿಸಿದ್ದಾರೆ. ಯಾವುದೇ ಕಂಪನಿಯಲ್ಲಿ ಹೂಡಿಕೆ ಮಾಡುವ ಮುನ್ನ ಆ ಸಂಸ್ಥೆ ದೊಡ್ಡ ಮಟ್ಟದ ಗ್ರಾಹಕರನ್ನು ತಲುಪುತ್ತದೆಯೇ ಎಂಬುದನ್ನು ಗಮನಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಗ್ಲೆನ್ ವಾಕ್ ಬ್ರ್ಯಾಂಡ್ ವಿಚಾರದಲ್ಲಿ ಬೆಲೆ ಗಮನ ಸೆಳೆದಿತ್ತು. 1,550ರೂ.ಗೆ ಮಾರುಕಟ್ಟೆಯಲ್ಲಿ ಯಾವುದೇ ಆಮದಾಗಿರುವ ಸ್ಕಾಚ್ ಬ್ರ್ಯಾಂಡ್ ಸಿಗುತ್ತಿಲ್ಲ. ಹೀಗಾಗಿ ಕಾರ್ಟೆಲ್ ಮೂಲಕ ಅವರು ಸ್ಕಾಚ್ ವಿಸ್ಕಿ ಮಿಶ್ರಣವನ್ನು ಯೋಗ್ಯ ದರದಲ್ಲಿ ಮಾರಕಟ್ಟೆಗೆ ಪರಿಚಯಿಸಲು ಪ್ರಯತ್ನಿಸಿರೋದಾಗಿ ದತ್ ತಿಳಿಸಿದ್ದಾರೆ. 

ದತ್ ಜೊತೆಗೆ ಇನ್ನೂ ನಾಲ್ವರು ಕಾರ್ಟೆಲ್ ಹಾಗೂ ಬ್ರದರ್ಸ್ ನಲ್ಲಿ ಸಹಭಾಗಿತ್ವ ಹೊಂದಿದ್ದಾರೆ. ಭಾರತದಲ್ಲಿ ಲಿಕ್ಕರ್ ರಿಟೇಲ್ ಚೈನ್ ಹೊಂದಿರುವ ಲಿವಿಂಗ್ ಲಿಕ್ವಿಡ್ಜ ಸಂಸ್ಥೆಯ ಮಹೇಶ್ ಸನಿ ಹಾಗೂ ಮೋಕ್ಷ್ ಸನಿ, ಡ್ರಿಂಕ್ವ ಬಾರ್ ಅಕಾಡೆಮಿಯ ಜಿತಿನ್ ಮೆರಾನಿ ಹಾಗೂ ಮೊರ್ಗಾನ್ ಬಿವರೇಜಸ್ ಸಂಸ್ಥೆಯ ಮಾಲೀಕ ರೋಹನ್ ನಿಹ್ಲಾನಿ ಕೂಡ ಕಾರ್ಟೆಲ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಮುಂಬೈನಿಂದ ಪ್ರಾರಂಭಗೊಂಡು ಗ್ಲೆನ್ ವಾಕ್ ಬ್ರ್ಯಾಂಡ್ ಅನ್ನು ಪುಣೆ ಹಾಗೂ ಮಹಾರಾಷ್ಟ್ರದ ಇತರ ಭಾಗಗಳಿಗೆ ಪೂರೈಕೆ ಮಾಡಲಾಗುತ್ತದೆ ಎಂದು ರೋಹನ್ ನಿಹ್ಲಾನಿ ತಿಳಿಸಿದ್ದಾರೆ.

'ಆದಿಪುರುಷ್' ರಿಲೀಸ್ ಬೆನ್ನಲ್ಲೇ ಪ್ರಭಾಸ್ ಬಗ್ಗೆ ಮತ್ತೊಂದು ಸುದ್ದಿ ವೈರಲ್: 'ರಾಯಲ್' ಆಗಿ ಬರ್ತಾರಾ ಸ್ಟಾರ್

'ಉತ್ತರದಲ್ಲಿ ಪ್ರಾರಂಭದಲ್ಲಿ ದೆಹಲಿ ಹಾಗೂ ಹರಿಯಾಣದಲ್ಲಿ ಮಾರುಕಟ್ಟೆಗೆ ಗ್ಲೆನ್ ವಾಕ್ ಅನ್ನು ಪರಿಚಯಿಸಲಾಗುವುದು. ಇನ್ನು ದಕ್ಷಿಣದಲ್ಲಿ ಪ್ರಾರಂಭದಲ್ಲಿ ಕರ್ನಾಟಕ ಅಥವಾ ತೆಲಂಗಣದಲ್ಲಿ ಪರಿಚಯಿಸಿ ಆ ಬಳಿಕ ನಿಧಾನವಾಗಿ ಇತರ ಮಾರುಕಟ್ಟೆಗಳಿಗೆ ವಿಸ್ತರಿಸಲಾಗುವುದು. ಮುಂದಿನ ಐದು ತಿಂಗಳಲ್ಲಿ ನಾವು ಎಷ್ಟು ಸಾಧ್ಯವೋ ಅಷ್ಟು ಮಾರುಕಟ್ಟೆಗಳಿಗೆ ಪ್ರವೇಶಿಸಲಿದ್ದೇವೆ. ಕರ್ನಾಟಕ, ಗೋವಾ ಹಾಗೂ ಹೈದರಾಬಾದ್ ನಲ್ಲಿ ನಾವು ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ. ಆದರೆ, ನೋಂದಣಿಗೆ ಸಮಯ ಹಿಡಿಯಲಿದೆ' ಎಂದು ರೋಹನ್ ನಿಹ್ಲಾನಿ ತಿಳಿಸಿದ್ದಾರೆ.

Follow Us:
Download App:
  • android
  • ios