5 ವರ್ಷಗಳಿಂದ ಬಿಡುಗಡೆಗೆ ಕಾಯ್ತಿದೆ ಶಾರುಖ್-ಐಶ್ಚರ್ಯ ಅಭಿನಯದ 'ದೇವದಾಸ್'!
ಹಲವಾರು ಹಿಟ್ ಚಿತ್ರಗಳನ್ನು ನೀಡಿರುವ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರವೊಂದು ಸಿದ್ಧಗೊಂಡು ಐದು ವರ್ಷಗಳಾದರೂ ಇದುವರೆಗೆ ಬಿಡುಗಡೆಯಾಗಿಲ್ಲ. ಯಾವ ಚಿತ್ರವದು?
ಸಂಜಯ್ ಲೀಲಾ ಬನ್ಸಾಲಿ (Sanjay Lella Bansali) ಅವರ ಚಿತ್ರಗಳು ಎಷ್ಟು ಗ್ರ್ಯಾಂಡ್ ಆಗಿರುತ್ತವೆ ಎಂದರೆ ಜನರು ಅದನ್ನು ನೋಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ ಎನ್ನುವುದು ಗೊತ್ತಿರುವ ವಿಷಯವೇ. ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇಂದು ಅನೇಕ ತಾರೆಯರನ್ನು ಸಿನಿರಂಗಕ್ಕೆ ನೀಡಿದ್ದಾರೆ. ಅದ್ಧೂರಿತನ, ಕಥೆ ಮತ್ತು ನಟರ ಅಭಿನಯ ಎಲ್ಲವುಗಳಲ್ಲಿಯೂ ಬನ್ಸಾಲಿ ಹಿಂದೆ ಬಿದ್ದಿಲ್ಲ. ಈಗ ಅವರ ಚಿತ್ರವೊಂದು ಬಹಳ ಚರ್ಚೆಯಲ್ಲಿದೆ. ಐದು ವರ್ಷಗಳ ನಂತರವೂ ಆ ಚಿತ್ರ ಇದುವರೆಗೆ ಥಿಯೇಟರ್ನಲ್ಲಿ ಬಿಡುಗಡೆಯಾಗಿಲ್ಲ ಎನ್ನುವುದು ನಿಮಗೆ ಗೊತ್ತೆ? ಹೌದು ಅದೊಂದು 3ಡಿ ಆವೃತ್ತಿಯ ಚಿತ್ರ. ಆದರೆ ಕುತೂಹಲ ಹಾಗೂ ವಿಚಿತ್ರದ ಸಂಗತಿ ಏನೆಂದರೆ, ಅವರ ಒಂದು ಚಿತ್ರವು 3D ಯಲ್ಲಿ ಐದು ವರ್ಷಗಳಿಗಿಂತ ಹೆಚ್ಚು ಹಿಂದೆಯೇ ಸಿದ್ಧವಾಗಿದ್ದರೂ ಇದುವರೆಗೆ ಥಿಯೇಟರ್ಗೆ ಬರಲಿಲ್ಲ.
ನಿರ್ದೇಶಕ ಅನಿಲ್ ಶರ್ಮಾ ಅವರ ಗದರ್ ಏಕ್ ಪ್ರೇಮ್ ಕಥಾ 22 ವರ್ಷಗಳ ನಂತರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದ ವಿಷಯ ಹಲವರಿಗೆ ತಿಳಿದಿರಲಿಕ್ಕಿಲ್ಲ. ಆದರೆ ಇದೀಗ ನಿರ್ಮಾಪಕ -ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕೂಡ ಇದೇ ರೀತಿ ಗಮನ ಸೆಳೆದಿದ್ದಾರೆ. ಬನ್ಸಾಲಿಯವರ ಚಿತ್ರಗಳಿಗಾಗಿ ಪ್ರೇಕ್ಷಕರು ಕಾಯುತ್ತಿರುವ ಸಂದರ್ಭದಲ್ಲಿ ಅವರ ಒಂದು ಚಿತ್ರವು 3D ಯಲ್ಲಿ ಐದು ವರ್ಷಗಳಿಗಿಂದ ಬಿಡುಗಡೆಯೇ ಆಗಲಿಲ್ಲ. ಅದು ಇಲ್ಲಿಯವರೆಗೆ ಥಿಯೇಟರ್‌ಗಳಲ್ಲಿ ಬರಲು ಸಾಧ್ಯವಾಗಲಿಲ್ಲ. ಅಂದಹಾಗೆ ಬನ್ಸಾಲಿ ಅವರು ತಮ್ಮ ಹೋಮ್ ಪ್ರೊಡಕ್ಷನ್ (Home Production) ಚಿತ್ರ ಶಿರೀನ್ ಫರ್ಹಾದ್ ಕಿ ತೋ ನಿಕಾಲ್ ಪಾಡಿ ಬಿಡುಗಡೆಯ ಸಂದರ್ಭದಲ್ಲಿ ಅವರ 3D ಚಿತ್ರದ ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿದ್ದರು. ಆದರೆ ಇದುವರೆಗೂ ಅದು ಬಿಡುಗಡೆಯಾಗಲಿಲ್ಲ.
ಈ ವಾರ ನಾಲ್ಕು ಜಬರ್ದಸ್ತ್ ಸೂಪರ್‌ಹಿಟ್ ಚಿತ್ರಗಳು ಓಟಿಟಿಯಲ್ಲಿ
ಅಂದಹಾಗೆ ಇನ್ನೂ ಹೆಚ್ಚಿನ ಕುತೂಹಲದ ಸಂಗತಿ ಏನೆಂದರೆ ಬಿಡುಗಡೆಗಾಗಿ ಐದು ವರ್ಷಗಳಿಂದ ಕಾದು ಕುಳಿತಿರುವ ಚಿತ್ರವೆಂದರೆ 2002ರಲ್ಲಿ ಬಿಡುಗಡೆಯಾಗಿದ್ದ ದೇವದಾಸ್ ಚಿತ್ರದ 3D ಆವೃತ್ತಿ. ಈ ಸೂಪರ್‌ಹಿಟ್ ಚಿತ್ರದಲ್ಲಿ ಶಾರುಖ್ ಖಾನ್ ದೇವದಾಸ್ ಪಾತ್ರದಲ್ಲಿ, ಐಶ್ವರ್ಯಾ ರೈ ಬಚ್ಚನ್ ಚಂದ್ರಮುಖಿ ಮತ್ತು ಮಾಧುರಿ ದೀಕ್ಷಿತ್ ಪಾರೋ ಪಾತ್ರದಲ್ಲಿ ನಟಿಸಿದ್ದಾರೆ. ಇದು ಬನ್ಸಾಲಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಆದರೆ ದೇವದಾಸ್ ಚಿತ್ರವನ್ನು ದೊಡ್ಡ ಪರದೆಯ ಮೇಲೆ 3ಡಿಯಲ್ಲಿ ನೋಡುವುದು ಅವರ ಮಹತ್ವಾಕಾಂಕ್ಷೆಯಾಗಿತ್ತು. 2015ರಲ್ಲಿ ಬನ್ಸಾಲಿ ದೇವದಾಸ್ ಚಿತ್ರವನ್ನು 3ಡಿಯಲ್ಲಿ ಸಿದ್ಧಪಡಿಸಿ ಬಿಡುಗಡೆ ಮಾಡಲಿದ್ದಾರೆ ಎಂಬ ಸುದ್ದಿ ಬರಲಾರಂಭಿಸಿತ್ತು. ಈ ಚಿತ್ರವು 3ಡಿಯಲ್ಲಿ ಬರಲು ಅರ್ಹವಾಗಿದೆ ಮತ್ತು ಈ ಸ್ವರೂಪದಲ್ಲಿ ಅದು ಎಷ್ಟು ಅದ್ಭುತವಾಗಿ ಕಾಣುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಬನ್ಸಾಲಿ ಅವರೇ ಈ ನಂತರ ಹೇಳಿದ್ದರು.
2017ರಲ್ಲಿ ದೇವದಾಸ್‌ನ (Devdas) 15 ವರ್ಷಗಳು ಪೂರ್ಣಗೊಂಡ ನಂತರ ಅದನ್ನು 3ಡಿಯಲ್ಲಿ ತರುವುದು ಬನ್ಸಾಲಿ ಅವರ ಯೋಜನೆಯಾಗಿತ್ತು ಮತ್ತು ಅದರ ಕೆಲಸವೂ ನಡೆಯಿತು. ಚಿತ್ರವನ್ನು ಸಂಪೂರ್ಣವಾಗಿ 3ಡಿಯಲ್ಲಿ ಫಾರ್ಮ್ಯಾಟ್ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಚಿತ್ರದ ಮಾರ್ಕೆಟಿಂಗ್ ಕೆಲಸವೂ ನಡೆದಿದೆ. 3D ಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಮಾತುಕತೆ ನಡೆಸಲಾಗಿದೆ. ಚಿತ್ರವನ್ನು ಇಂಗ್ಲಿಷ್‌ಗೆ ಡಬ್ ಮಾಡುವ ಮೂಲಕ ಈ ಮಾರುಕಟ್ಟೆಯನ್ನು ಆವರಿಸಲು ತಯಾರಕರು ಯೋಜಿಸಿದ್ದರು. ಬಾಹುಬಲಿ ಮಾಡಲಾಗದ್ದನ್ನು ಮಾಡುವುದಾಗಿ ನಿರ್ಮಾಪಕರು ಹೇಳಿದ್ದರು. ಬಾಹುಬಲಿ 3ಡಿಯಲ್ಲಿ ಬಿಡುಗಡೆಯಾಗಿಲ್ಲ ಎಂಬುದು ಗಮನಾರ್ಹ.
SSMB 29: ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ್ದ ಆಮೀರ್ ಖಾನ್ ಟಾಲಿವುಡ್ಗೆ ಹಾರಿದ್ರಾ?
ಇದಾದ ನಂತರ 2017ರಲ್ಲಿ ಜುಲೈ 12ರಂದು ದೇವದಾಸ್ 3ಡಿ ಬಿಡುಗಡೆಯ ದಿನಾಂಕವೂ ಬಂದಿತ್ತು. ದೇವದಾಸ್‌ನ ಆದರ್ಶ 3D ಆವೃತ್ತಿಯನ್ನು ಮಾಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ ಮತ್ತು ಅದನ್ನು ಅದ್ಧೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಬನ್ಸಾಲಿ ಸಂದರ್ಶನವೊಂದರಲ್ಲಿ (Interview) ಹೇಳಿದರು. ಆದರೆ ಇದು ಆಗಲಿಲ್ಲ. ಚಿತ್ರದ ಚರ್ಚೆಗಳು ಕ್ರಮೇಣ ತಣ್ಣಗಾಯಿತು ಮತ್ತು ಬನ್ಸಾಲಿಯವರ ದೇವದಾಸ್ 3D ಯಲ್ಲಿ ತಯಾರಾದ ನಂತರ ಬಿಡುಗಡೆಯಾಗದೆ ಉಳಿದುಕೊಂಡ ನಂತರ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ಬನ್ಸಾಲಿ ಮತ್ತು ಚಿತ್ರದ ನಿರ್ಮಾಪಕ ಇರೋಸ್ ನಡುವೆ ಕೆಲವು ಒಪ್ಪಂದದ ಕೊರತೆಯಿಂದಾಗಿ ಚಿತ್ರವು ಇಲ್ಲಿಯವರೆಗೆ ಬಿಡುಗಡೆಯಾಗಲಿಲ್ಲ ಎಂದು ಹೇಳಲಾಗಿದೆ. ಆದರೆ ಚಿತ್ರ ಸಿದ್ಧವಾಗಿ ಐದು ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ.