Asianet Suvarna News Asianet Suvarna News

ಶಾರುಖ್​ ಹಾಗೂ ಭೂಗತ ಲೋಕದ ಲಿಂಕ್​: ಇಂಟರೆಸ್ಟಿಂಗ್​ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ ಗುಪ್ತಾ

ಬಾಲಿವುಡ್​ಗೆ ಭೂಗತ ಲೋಕದ ನಂಟು ಇರುವ ಸಂದರ್ಭದಲ್ಲಿ ಶಾರುಖ್​ ಖಾನ್​ ನಡೆದುಕೊಂಡ ರೀತಿಯ ಬಗ್ಗೆ  ಇಂಟರೆಸ್ಟಿಂಗ್​ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ ನಿರ್ದೇಶಕ ಸಂಜಯ್​ ಗುಪ್ತಾ
 

Sanjay Gupta recalls how SRK refused to bow down to underworld bullying suc
Author
First Published Sep 10, 2023, 3:48 PM IST

ಬಾಲಿವುಡ್​ ಸಂಪೂರ್ಣ ಭೂಗತಲೋಕದ (under world) ಕೈಯಲ್ಲಿದೆ ಎನ್ನುವ ವಿಷಯವೇನೂ ಹೊಸತಲ್ಲ. 90ರ ದಶಕಕ್ಕೂ ಮುಂಚೆ ಬಾಲಿವುಡ್ ಸಂಪೂರ್ಣವಾಗಿ ಭೂಗತ ಲೋಕದ ಕಪಿಮುಷ್ಠಿಯಲ್ಲಿತ್ತು. ಸಿನಿಮಾ ಪಾರ್ಟಿಗಳಲ್ಲಿ ಭೂಗತ ಪಾತಕಿಗಳು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದರು. ಸಿನಿಮಾ ನಾಯಕಿಯರೊಟ್ಟಿಗೆ ಈ ಪಾತಕಿಗಳು ಆತ್ಮೀಯ ಬಂಧ ಹೊಂದಿದ್ದರು. ತಮ್ಮ ಮೆಚ್ಚಿನ ನಟಿಯರಿಗೆ ಹೆಚ್ಚು ಸಿನಿಮಾಗಳು ಸಿಗುವಂತೆ ಮಾಡುತ್ತಿದ್ದರು. ಸಿನಿಮಾ ನಿರ್ಮಾಪಕರಿಗೆ ಬೆದರಿಕೆ ಹಾಕಿ ಸಿನಿಮಾ ಲಾಭದಲ್ಲಿ ಪಾಲು ಪಡೆಯುತ್ತಿದ್ದರು. ಆದರೆ 90ರ ದಶಕದ ಬಳಿಕ ಬಾಲಿವುಡ್​ ಮೇಲೆ ಮಾಫಿಯಾದ ಹಿಡಿತ ಕೈತಪ್ಪಿತು ಎಂದೇ ಹೇಳಲಾಗುತ್ತಿದ್ದರೂ, ಇದು ಸಂಪೂರ್ಣ ಸತ್ಯವಲ್ಲ ಎನ್ನುವ ಮಾತೂ ಇದೆ. ಈಗಲೂ ಬಾಲಿವುಡ್​ ಅವರದ್ದೇ ಕೈಯಲ್ಲಿದೆ ಎನ್ನುವುದಕ್ಕೆ ಆಗಾಗ್ಗೆ ಹಲವಾರು ಸಾಕ್ಷ್ಯಾಧಾರಗಳೂ ಸಿಗುತ್ತಿವೆ ಎಂಬ ಮಾತಿದೆ. 

ನಟ-ನಟಿಯರ ದಿನನಿತ್ಯದ ಆಗುಹೋಗು ಮಾತ್ರವಲ್ಲದೇ, ನಟ-ನಟಿಯರ ಮದುವೆಯ ವಿಷಯದಲ್ಲಿಯೂ ಇವರು ಭೂಗತ ಜಗತ್ತಿನವರನ್ನೇ ಅನುಸರಿಸಬೇಕು ಎಂಬ ಮಾತೂ ಇದೆ. ಇದೇ ಕಾರಣಕ್ಕೆ, ಬಾಲಿವುಡ್​ನಲ್ಲಿ ನಡೆಯುವ ಕೆಲವು ವಿಚಿತ್ರ ಮದುವೆಗಳೂ ಸಾಕ್ಷಿಯಾಗಿವೆ. ಚಿತ್ರರಂಗದಲ್ಲಿ ನೆಲೆಯೂರಬೇಕು ಎಂದರೆ ಇದು ಮಾಮೂಲು ಎನ್ನುತ್ತಾರೆ.  ಇದೇ ವಿಷಯವನ್ನು ಈಗ ಖ್ಯಾತ ನಿರ್ದೇಶಕ ಸಂಜಯ್ ಗುಪ್ತಾ ವಿವರಿಸಿದ್ದಾರೆ.

ಶಾರುಖ್​ಗೆ ಚಾಟಿ ಬೀಸಿದ್ದ ಎನ್​ಸಿಬಿ ಅಧಿಕಾರಿ ವಾಂಖೆಡೆಗೆ ಜಯ! ಜವಾನ್​ ರಿಲೀಸ್​ ಬೆನ್ನಲ್ಲೇ ಕ್ಲೀನ್​ ಚಿಟ್​

 ಶಾರುಖ್​ ಖಾನ್​ (Shahrukh Khan) ಅವರ  'ಜವಾನ್' ಬಿಡುಗಡೆಯಾದ ಮೂರು ದಿನಗಳಲ್ಲಿ 350 ಕೋಟಿ ರೂ.ಗಳ ಗಡಿ ದಾಟಿದ್ದು, ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ  ಸಂಜಯ್ ಗುಪ್ತಾ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 90ರ  ದಶಕದಲ್ಲಿ ಬಾಲಿವುಡ್​, ಭೂಗತ ಲೋಕದ ಕಪಿಮುಷ್ಠಿಗೆ ಸಹ ಸಿಲುಕಿಕೊಂಡಿತ್ತು. ಅಬು ಸಲೇಂ, ದಾವೂದ್ ಇಬ್ರಾಹಿಂ, ಚೋಟಾ ಶಕೀಲ್ ಸೇರಿದಂತೆ ಹಲವು ಭೂಗತ ಲೋಕದ ಪಾತಕಿಗಳು ಬಾಲಿವುಡ್​ ಆಳುತ್ತಿದ್ದರು.  ಸಲ್ಮಾನ್ ಖಾನ್, ಸಂಜಯ್ ದತ್, ಅನಿಲ್ ಕಪೂರ್, ರಾಮ್ ಗೋಪಾಲ್ ವರ್ಮಾ ಇನ್ನೂ ಹಲವಾರು ಮಂದಿ ಸ್ಟಾರ್ ನಟ, ನಿರ್ದೇಶಕರು ಇವರಿಗೆ ಒಳಪಟ್ಟಿದ್ದರು.  ಬಾಲಿವುಡ್ ಸಿನಿಮಾಗಳಿಗೆ  ಕಪ್ಪು ಹಣ ತೊಡಗಿಸಿದ್ದರು.  ಅವರು ಹೇಳಿದಂತೆಯೇ ಹೀರೋ, ಹೀರೋಯಿನ್​ಗಳನ್ನು ಹಾಕಿ ಸಿನಿಮಾ ಮಾಡಬೇಕಿತ್ತು. ತಮ್ಮ ಮಾತು ಕೇಳದ ನಿರ್ಮಾಪಕರನ್ನು ಸಾಯಿಸಿದ ಉದಾಹರಣಗಳೂ ಇವೆ ಎಂದು ಅವರು ವಿವರಿಸಿದ್ದಾರೆ.
 
ಆದರೆ ಇದೇ ವೇಳೆ ಶಾರುಖ್​ ಖಾನ್​ ಅವರನ್ನು ಹೊಗಳಿರುವ ಸಂಜಯ್ ಗುಪ್ತಾ ಅವರು,  90 ರ ದಶಕದಲ್ಲಿ ಚಲನಚಿತ್ರ ತಾರೆಯರ ಭೂಗತ ದಬ್ಬಾಳಿಕೆಯು ಉತ್ತುಂಗದಲ್ಲಿದ್ದಾಗ, ಶಾರುಖ್ ಖಾನ್ ಎಂದಿಗೂ ಬಿಟ್ಟುಕೊಡದ ಏಕೈಕ ಸ್ಟಾರ್ ಎಂದು ಹೊಗಳಿದ್ದಾರೆ. ಈ ಕುರಿತು ತಮ್ಮ ಟ್ವಿಟರ್​ ಖಾತೆಯಲ್ಲಿ ಈ ಮಾಹಿತಿಯನ್ನು ತಿಳಿಸಿದ್ದಾರೆ.  ಭೂಗತ ಜಗತ್ತಿನ ಬೆದರಿಕೆಗಳ ವಿರುದ್ಧ ಖಾನ್ ಧೈರ್ಯವಾಗಿ ನಿಂತು ಶಾರುಖ್​ ಹೋರಾಡಿದ್ದಾರೆ.  ನೀವು ಬಯಸಿದರೆ ನನ್ನನ್ನು ಶೂಟ್ ಮಾಡಿ, ಆದರೆ ನಾನು ನಿಮಗಾಗಿ ಕೆಲಸ ಮಾಡುವುದಿಲ್ಲ, ನಾನು ಪಠಾಣ್ ಎಂದು ಪಠಾಣ್​ನಲ್ಲಿ ಹೇಳಿರುವ ಮಾತನ್ನೇ ಅವರು ಭೂಗತ ಪಾತಕಿಗಳಿಗೂ ಹೇಳಿದ್ದಾರೆ ಎಂದು ಸಂಜಯ್​ ಗುಪ್ತಾ ಹೊಗಳಿದಿದ್ದಾರೆ.
 
ಅಷ್ಟಕ್ಕೂ ಅವರು ಜವಾನ್​ ಚಿತ್ರ ನೋಡಿದ ಬಳಿಕ ಈ ಮಾತನ್ನು ಹೇಳಿದ್ದಾರೆ. ಈ ಚಿತ್ರ ನೋಡಿದ ಮೇಲೆ  ಈ ಒಂದು ವಿಷಯವನ್ನು ಹಂಚಿಕೊಳ್ಳಬೇಕು ಎನಿಸಿತು ಎಂದು ಹೇಳಿರುವ ಅವರು, 90ರ ದಶಕದಲ್ಲಿ ಭೂಗತ ಲೋಕದ ಪಾತಕಿಗಳು ಬಾಲಿವುಡ್ ಸ್ಟಾರ್ ನಟರನ್ನು ತಮ್ಮಿಷ್ಟದಂತೆ ಕುಣಿಸುತ್ತಿರುವಾಗ ಶಾರುಖ್ ಖಾನ್ ಮಾತ್ರ ಅವರ ಮುಂದೆ ಮಂಡಿ ಊರಲಿಲ್ಲ. ನೀವು ಹೇಳಿದಂತೆ ಮಾಡಲು ಆಗುವುದಿಲ್ಲ ಎಂದು ಅಬ್ಬರಿಸಿದ್ದರು ಎಂದಿದ್ದಾರೆ. ಆದರೆ ಅವರ ಈ ಹೇಳಿಕೆಗೆ ಪರ-ವಿರೋಧ ನಿಲುವು ವ್ಯಕ್ತವಾಗುತ್ತಿದೆ. ಹಾಗೊಂದು ವೇಳೆ ಹೇಳಿದ್ದೇ ಹೌದಾಗಿದ್ದರೆ ಈ ವೇಳೆಗೆ ಶಾರುಖ್​ ಜೀವಂತವಾಗಿ ಇರುತ್ತಿರಲಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಖಾ ಸುಮ್ಮನೆ ಇವರನ್ನು ಹೊಗಳುವುದನ್ನು ನಿಲ್ಲಿಸಿ ಎಂದು ಇನ್ನು ಕೆಲವರು ಹೇಳುತ್ತಿದ್ದರೆ, ಶಾರುಖ್​ ಅವರ ಧೈರ್ಯವನ್ನು ಇನ್ನಷ್ಟು ಮಂದಿ ಕೊಂಡಾಡುತ್ತಿದ್ದಾರೆ. 

ಬಿಡುಗಡೆ ದಿನವೇ ಆನ್​ಲೈನ್​ನಲ್ಲಿ ಜವಾನ್​ ಚಿತ್ರ ಸೋರಿಕೆ: ಡೌನ್​ಲೋಡ್​ ಮಾಹಿತಿಯೂ ವೈರಲ್​!
 

Follow Us:
Download App:
  • android
  • ios