ರಣಬೀರ್-ಅಲಿಯಾಗೆ ವೈವಾಹಿಕ ಸಲಹೆ ನೀಡಿದ KGF 2 ಅಧೀರ; ಸಂಜಯ್ ದತ್ ಹೇಳಿದ್ದೇನು?
ಬಹುನಿರೀಕ್ಷೆಯ ಕೆಜಿಎಫ್-2 ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಸಂಜಯ್ ದತ್, ನಟ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಒಂದುವೇಳೆ ಅವರು ಮದುವೆ ಆಗುತ್ತಿದ್ದರೆ ನಿಜವಾಗಿಯೂ ನನಗೆ ತುಂಬಾ ಸಂತೋಷವಾಗುತ್ತದೆ' ಎಂದು ಸಂಜಯ್ ದತ್ ಹೇಳಿದರು.
ಬಾಲಿವುಡ್ ನಲ್ಲಿ ನಟ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್(Ranbir Kapoor and Alia Bhatt) ಮದುವೆ ಸಂಭ್ರಮ ಜೋರಾಗಿದೆ. ಇಬ್ಬರ ಮದುವೆ ವಿಚಾರ ಕಳೆದ ಕೆಲವು ತಿಂಗಳಿಂದ ಸದ್ದು ಮಾಡುತ್ತಿದೆ. ಆದರೆ ಬಗ್ಗೆ ಅಲಿಯಾ ಅಥವಾ ರಣಬೀರ್ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ ಇವರ ಮದುವೆ ವಿಚಾರ ಏನು ಗುಟ್ಟಾಗಿ ಉಳಿದಿಲ್ಲ. ಏಪ್ರಿಲ್ 13 ರಿಂದ 17ರ ವರೆಗೂ ನಡೆಯುವ ಮದುವೆ ಸಂಭ್ರಮದಲ್ಲಿ ಅಲಿಯಾ ಮತ್ತು ರಣಬೀರ್ ಜೋಡಿ ಪತಿ-ಪತ್ನಿಯಾರುತ್ತಿದ್ದಾರೆ. ಇಬ್ಬರ ಮದುವೆ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ. ಈ ತಾರಾ ಜೋಡಿ ಪೂರ್ವಜರ ಮನೆಯಲ್ಲಿ ಹಸೆಮಣೆ ಏರುತ್ತಿದೆ. ರಣಬೀರ್ ಕಪೂರ್ ಅವರ ಹಳೆಯ ಮನೆಯಲ್ಲಿ ಮದುವೆಯಾಗುತ್ತಿದ್ದಾರೆ. ಈಗಾಗಲೇ ಆರ್ ಕೆ ಸ್ಟುಡಿಯೋ ಮತ್ತು ಆರ್ ಕೆ ಕಟ್ಟಡಕ್ಕೆ ಅಲಂಕಾರ ಮಾಡಲಾಗಿದೆ. ದೀಪಗಳಿಂದ ಆರ್ ಕೆ ಕಟ್ಟಡ ಕಂಗೊಳಿಸುತ್ತಿದೆ.
ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದರೂ ಅಲಿಯಾ ಅಥವಾ ರಣಬೀರ್ ಕುಟುಂಬದವರು ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸ್ಟಾರ್ ಜೋಡಿಯ ಮದುವೆಗೆ ಕೇವಲ 28 ಜನ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ. ಮತ್ತು ಕುಟುಂಬದವರು ಮುವೆಯಲ್ಲಿ ಹಾಜರಿರಲಿದ್ದಾರೆ. ಇದೀಗ ಇಬ್ಬರ ಮದುವೆ ಬಗ್ಗೆ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಪ್ರತಿಕ್ರಿಯೆ ನೀಡಿದ್ದಾರೆ. ಸಂಜಯ್ ದತ್ ಸದ್ಯ ಕೆಜಿಎಫ್-2 ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಧೀರ ಪಾತ್ರದಲ್ಲಿ ಮಿಂಚಿರುವ ಸಂಜಯ್ ದತ್ ಲುಕ್ ಭಯಹುಟ್ಟಿಸುತ್ತಿದೆ. ದೊಡ್ಡ ಪರದೆಮೇಲೆ ಸಂಜಯ್ ದತ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಸಂಜಯ್ ದತ್, ನಟ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆಲಿಯಾ ರಣ್‌ಬೀರ್ ಮದುವೆಗೆ 28 ಅತಿಥಿಗಳಿಗೆ ಮಾತ್ರ ಆಹ್ವಾನ
ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಜಯ್ ದತ್, 'ಒಂದುವೇಳೆ ಅವರು ಮದುವೆ ಆಗುತ್ತಿದ್ದರೆ ನಿಜವಾಗಿಯೂ ನನಗೆ ತುಂಬಾ ಸಂತೋಷವಾಗುತ್ತದೆ. ಅಲಿಯಾ ನನ್ನ ಮುಂದೆ ಹುಟ್ಟಿ ಬೆಳೆದವಳು. ಮದುವೆ ಎನ್ನುವುದು ಇಬ್ಬರ ಕಮಿಟ್ಮೆಂಟ್. ಅದಕ್ಕೆ ಅಂಟಿಕೊಂಡಿರಬೇಕು. ಇಬ್ಬರು ಕೈ ಹಿಡಿದು ಸಂತೋಷ, ಶಾಂತಿ ಮತ್ತು ವೈಭವದಲ್ಲಿ ಮುನ್ನಡೆಯಬೇಕು. ಬೇಗ ಮಕ್ಕಳನ್ನು ಮಾಡಿಕೊಳ್ಳಿ. ಸಂತೋಷವಾಗಿರಿ' ಎಂದು ಹೇಳಿದ್ದಾರೆ.
ಇಂಗ್ಲಿಷ್ ಮಾತಾಡಲೇಬೇಕು, ಧೂಮಪಾನ ಮಾಡಬಾರದು; ಬೌನ್ಸರ್ ಗಳಿಗೆ ರಣಬೀರ್-ಅಲಿಯಾ ಶರತ್ತು
ರಣಬೀರ್-ಅಲಿಯಾ ದಂಪತಿಗೆ ಸಲಹೆ ನೀಡಲು ಕೇಳಿದಾಗ ಸಂಜಯ್ ದತ್, 'ಇದು ಎರಡು ಕಡೆಯ ರಾಜಿಯ ವಿಷಯವಾಗಿದೆ ಎಂದು ಹೇಳಿದರು. ಪ್ರತಿ ತಿರುವುಗಳಲ್ಲೂ ಪರಸ್ಪರ ಕಮಿಟ್ಮೆಂಟ್ ತುಂಬಾ ಮುಖ್ಯವಾಗುತ್ತದೆ. ಇದು ಇಬ್ಬರೂ ಸಂತೋಷದಿಂದ ಮುಂದೆ ಸಾಗಲು ಪ್ರಮುಖವಾಗಿದೆ ಎಂದು ನೆನಪಿಟ್ಟುಕೊಳ್ಳಬೇಕು' ಎಂದು ಸಂಜಯ್ ದತ್, ರಣಬೀರ್ ಮತ್ತು ಅಲಿಯಾ ಜೋಡಿಗೆ ಸಲಹೆ ನೀಡಿದ್ದಾರೆ. ಸಂಜಯ್ ದತ್ ಸಡಕ್-2 ಚಿತ್ರದಲ್ಲಿ ಅಲಿಯಾ ಜೊತೆ ನಟಿಸಿದ್ದರು. 2020ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಅಲಿಯಾ ಭಟ್ ತಂದೆ ಮಹೇಶ್ ಭಟ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಆದಿತ್ಯ ರಾಯ್ ಕಪೂರ್ ಮತ್ತು ಪೂಜಾ ಭಟ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು.