ಇಂಗ್ಲಿಷ್ ಮಾತಾಡಲೇಬೇಕು, ಧೂಮಪಾನ ಮಾಡಬಾರದು; ಬೌನ್ಸರ್ ಗಳಿಗೆ ರಣಬೀರ್-ಅಲಿಯಾ ಶರತ್ತು
ಬಾಲಿವುಡ್ ನಲ್ಲಿ ನಟ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮದುವೆ ಸಂಭ್ರಮ ಜೋರಾಗಿದೆ. ಏಪ್ರಿಲ್ 13 ರಿಂದ 17ರ ವರೆಗೂ ನಡೆಯುವ ಮದುವೆ ಸಂಭ್ರಮದಲ್ಲಿ ಅಲಿಯಾ ಮತ್ತು ರಣಬೀರ್ ಜೋಡಿ ಪತಿ-ಪತ್ನಿಯಾರುತ್ತಿದ್ದಾರೆ. ಮದುವೆಗೆ 200 ಮಂದಿ ಬೌನ್ಸರ್ ಗಳನ್ನು ಆಯೋಜಿಸಲಾಗಿದ್ದು ಅವರಿಗೆ ಕಠಿಣ ಶರತ್ತು ಹಾಕಿದ್ದಾರಂತೆ.
ಬಾಲಿವುಡ್ ನಲ್ಲಿ ನಟ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್(Ranbir Kapoor and Alia Bhatt) ಮದುವೆ ಸಂಭ್ರಮ ಜೋರಾಗಿದೆ. ಇಬ್ಬರ ಮದುವೆ ವಿಚಾರ ಕಳೆದ ಕೆಲವು ತಿಂಗಳಿಂದ ಸದ್ದು ಮಾಡುತ್ತಿದೆ. ಆದರೆ ಬಗ್ಗೆ ಅಲಿಯಾ ಅಥವಾ ರಣಬೀರ್ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ ಇವರ ಮದುವೆ ಏನು ಗುಟ್ಟಾಗಿ ಉಳಿದಿಲ್ಲ. ಏಪ್ರಿಲ್ 13 ರಿಂದ 17ರ ವರೆಗೂ ನಡೆಯುವ ಮದುವೆ ಸಂಭ್ರಮದಲ್ಲಿ ಅಲಿಯಾ ಮತ್ತು ರಣಬೀರ್ ಜೋಡಿ ಪತಿ-ಪತ್ನಿಯಾರುತ್ತಿದ್ದಾರೆ. ಇಬ್ಬರ ಮದುವೆ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ. ಈ ತಾರಾ ಜೋಡಿ ಪೂರ್ವಜರ ಮನೆಯಲ್ಲಿ ಹಸೆಮಣೆ ಏರುತ್ತಿದೆ. ರಣಬೀರ್ ಕಪೂರ್ ಅವರ ಹಳೆಯ ಮನೆಯಲ್ಲಿ ಮದುವೆಯಾಗುತ್ತಿದ್ದಾರೆ. ಈಗಾಗಲೇ ಆರ್ ಕೆ ಸ್ಟುಡಿಯೋ ಮತ್ತು ಆರ್ ಕೆ ಕಟ್ಟಡಕ್ಕೆ ಅಲಂಕಾರ ಮಾಡಲಾಗಿದೆ. ದೀಪಗಳಿಂದ ಆರ್ ಕೆ ಕಟ್ಟಡ ಕಂಗೊಳಿಸುತ್ತಿದೆ.
ಇದೀಗ ಅಲಿಯಾ-ರಣಬೀರ್ ಮದುವೆ ಭದ್ರತೆ ಬಗ್ಗೆ ಬಹಿರಂಗವಾಗಿದೆ. ಇಬ್ಬರ ಮದುವೆಗೆ ಕೇವಲ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗುತ್ತಿದ್ದಾರೆ. ಮದುವೆ ಬಳಿಕ ತಾಜ್ ಮಹಲ್ ಅರಮನೆಯಲ್ಲಿ ಅದ್ದೂರಿ ಆರತಕ್ಷತೆ ಕೂಡ ಆಯೋಜನೆ ಮಾಡಲಾಗಿದೆ ಎನ್ನಲಾಗಿದೆ. ಗ್ರ್ಯಾಂಡ್ ಮದುವೆಗೆ ಬಾಲಿವುಡ್ ನ ಅನೇಕ ಗಣ್ಯರು ಹಾಜರಾಗಲಿದ್ದಾರೆ. ಸ್ಟಾರ್ ಜೋಡಿಯ ಅದ್ದೂರಿ ಮದುವೆ ಅಂದ್ಮೇಲೆ ಭದ್ರತೆ ಬಗ್ಗೆ ತಿಳಿದುಕೊಳ್ಳಲೇ ಬೇಕು. ಅಲಿಯಾ ಮದುವೆಯ ಸಂಪೂರ್ಣ ಭದ್ರತೆಯ ಜವಾಬ್ದಾರಿಯನ್ನು ಅಲಿಯಾ ಸಹೋದರ ರಾಹುಲ್ ಭಟ್ ನೋಡಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಭಟ್ ಮುಂಬೈನ ಅತ್ಯುತ್ತಮ ಸೆಕ್ಯೂರಿಟಿ ಫೋರ್ಸ್ ಹೊಂದಿರುವ ಏಜೆನ್ಸಿ ಯೂಸುಫ್ ಅವರನ್ನು ನೇಮಿಸಲಾಗಿದೆ ಎಂದಿದ್ದಾರೆ. ಸುಮಾರು 200 ಮಂದಿ ಬೌನ್ಸರ್ ಗಳನ್ನು ಆಯೋಜಿಸಲಾಗಿದೆ. ಜೊತೆಗೆ ತನಗೆ ಸಂಪರ್ಕವಿರುವ ಕೆಲವು ಬೌನ್ಸರ್ ಗಳನ್ನು ಕರೆಸುತ್ತಿರುವುದಾಗಿ ಹೇಳಿದ್ದಾರೆ. ಆರ್ ಕೆ ಸ್ಟೂಡಿಯೋ ಮತ್ತು ವಾಸ್ತು ಕಟ್ಟಡ ಎರಡರಲ್ಲೂ ಬೌನ್ಸರ್ ಗಳು ಇರುತ್ತಾರೆ. ಡ್ರೋನ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ರೋವಿಂಗ್ ಪೆಟ್ರೋಲ್ ಅಧಿಕಾರಿಗಳು ಸಹ ಇರಲಿದ್ದಾರೆ. ಮದುವೆ ಬರುವ ಪ್ರತಿ ಅತಿಥಿಗೆಳಿಗೆ ವಿಶೇಷವಾಗಿ ಬೌನ್ಸರ್ ಗಳನ್ನು ನೇಮಿಸಿದ್ದೇವೆ. ಭದ್ರತೆಯನ್ನು ನೋಡಿಕೊಳ್ಳುತ್ತಿದ್ದೇನೆ ಮತ್ತು ಸಹೋದರನ ಕರ್ತವ್ಯವನ್ನು ಪೂರೈಸುತ್ತಿದ್ದೀನಿ ಎಂದು ರಾಹುಲ್ ಭಟ್ ಹೇಳಿದ್ದಾರೆ.
Alia Bhatt Ranbir Kapoor Wedding - ನಟಿಯ ಬೆಸ್ಟ್ ಫ್ರೆಂಡ್‌ನಿಂದ ಬ್ಯಾಚುಲರ್ ಪಾರ್ಟಿ
ಇನ್ನು ವಿಶೇಷವಾಗಿ ಅಲಿಯಾ ಮತ್ತು ರಣಬೀರ್ ಇಬ್ಬರೂ ಬೌನ್ಸರ್ ಗಳಿಗೆ ಶರತ್ತುಗಳನ್ನು ವಿಧಿಸಿದ್ದಾರೆ. ಬೌನ್ಸರ್ ಗಳ ವ್ಯಕ್ತಿತ್ವ ಉತ್ತಮವಾಗಿರಬೇಕು. ಎಲ್ಲರೂ ಇಂಪ್ರೆಸಿವ್ ಆಗಿ ಕಾಣಿಸಿಕೊಳ್ಳಬೇಕು. ಆಕ್ಟೀವ್ ಆಗಿರಬೇಕು. ಇಂಗ್ಲಿಷ್ ಮಾತನಾಡಲು ಬರಬೇಕು ಮತ್ತು ಧೂಮಪಾನ ಮಾಡಬಾರದು ಎಂದು ಕಂಡೀಶನ್ ಹಾಕಿರುವ ಬಗ್ಗೆಯೂ ರಾಹುಲ್ ಬಹಿರಂಗಪಡಿಲಿದ್ದಾರೆ.
ಆಲಿಯಾ ಭಟ್- ರಣಬೀರ್ ಕಪೂರ್ ವೈವಾಹಿಕ ಜೀವನ ಹೇಗಿರಲಿದೆ? ಜ್ಯೋತಿಷ್ಯ ಏನನ್ನುತ್ತದೆ?
ಈಗಾಗಲೇ ಮದುವೆಗೆ ಎಲ್ಲಾ ಸಿದ್ಧತೆ ನಡೆದಿದೆ. ಏಪ್ರಿಲ್ 13ರಿಂದ ಮದುವೆ ಶಾಸ್ತ್ರಗಳು ಪ್ರಾರಂಭವಾಗಲಿದೆ. ಮೆಹಂದಿ, ಹಳದಿ ಶಾಸ್ತ್ರಗಳು ಸಹ ಅದ್ದೂರಿಯಾಗಿ ನಡೆಯಲಿದೆ. ಇನ್ನು ಅಲಿಯಾ ಭಟ್ ಮದುವೆ ಡ್ರೆಸ್ ಅನ್ನು ಮನೀಶ್ ಮಲ್ಹೋತ್ರಾ ಮತ್ತು ಸಬ್ಯಸಾಚಿ(Alia will wear Manish Malhotra and Sabyasachi outfits) ಅವರ ಬಳಿ ಡಿಸೈನ್ ಮಾಡಿಸಿದ್ದಾರೆ. ಬಾಲಿವುಡ್ ನ ಅನೇಕ ಸ್ಟಾರ್ ಮದುವೆಗಳಿಗೆ ಮನೀಶ್ ಮಲ್ಹೋತ್ರಾ ಡ್ರೆಸ್ ಡಿಸೈನ್ ಮಾಡಿದ್ದಾರೆ. ಇದೀಗ ಅಲಿಯಾ ಮದುವೆ ಡ್ರೆಸ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.