ಮದುವೆ ವಾರ್ಷಿಕೋತ್ಸವದ ಪಾರ್ಟಿಯಲ್ಲಿ ಕುಡಿದು ಡಾನ್ಸ್ ಮಾಡಿದ ಸಂಜಯ್ ದತ್ ಸಖತ್ ಟ್ರೋಲ್ ಆಗಿದ್ದಾರೆ. ವಿಡಿಯೋ ವೈರಲ್ ಆಗಿದೆ.
ಬಾಲಿವುಡ್ ಸ್ಟಾರ್ ಸಂಜಯ್ ದತ್ ಸಿನಿಮಾ ಜೊತೆಗೆ ವೈಯಕ್ತಿಕ ವಿಚಾರವಾಗಿಯೂ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಂಜಯ್ ದತ್ ಸದ್ಯ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಸಂಜಯ್ ದತ್ ಮತ್ತು ಪತ್ನಿ ಮಾನಯತಾ ದತ್ ದಂಪತಿ 15ನೇ ವರ್ಷಿಕೋತ್ಸವ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಈ ಖುಷಿಯಲ್ಲಿ ದತ್ ದಂಪತಿ ಪಾರ್ಟಿ ಮಾಡಿ ಸಂಭ್ರಮಸಿದ್ದಾರೆ. ಸಂಜಯ್ ದತ್ ತಮ್ಮ ಖಾಸಗಿ ಜೀವನವನ್ನು ಮಾಧ್ಯಮ ಮತ್ತು ಸಾರ್ವಜನಿಕರಿಂದ ದೂರ ಇಡಲು ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಪಾರ್ಟಿ, ಮೋಜು, ಮಸ್ತಿಯ ವಿಡಿಯೋಗಳು ವೈರಲ್ ಆಗುತ್ತವೆ. ಕೆಲವೊಮ್ಮೆ ಅವರೇ ಶೇರ್ ಮಾಡಿ ಸಂತಸ ಹಂಚಿಕೊಳ್ಳುತ್ತಾರೆ.
ಸದ್ಯ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಸಂಜಯ್ ದತ್ ಜೋಡಿ ಮಸ್ತ್ ಮಜಾ ಮಾಡಿದ್ದಾರೆ. ಪಾರ್ಟಿ ಮಾಡಿ ಇಬ್ಬರೂ ಡಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋವನ್ನು ಸಂಜಯ್ ದತ್ ಪತ್ನಿ ಮಾನಯತಾ ದತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಆಪ್ತರು ಮತ್ತು ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿರುವುದು ವಿಡಿಯೋದಲ್ಲಿ ಗೊತ್ತಾಗುತ್ತಿದೆ. ಈ ಬಗ್ಗೆ ಮಾನಯತಾ ದತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪತಿ ಸಂಜಯ್ ದತ್ ಅವರಿಗೆ ಹೃತ್ಪೂರ್ವಕ ಹಾರೈಕೆಯನ್ನು ಬರೆದಿದ್ದಾರೆ. 21 ವರ್ಷಗಳು. ನಾವು ರಿಯಲ್ ಆಗಿದ್ದೇವೆ. ನಾವು ತಪ್ಪುಗಳನ್ನು ಮಾಡುತ್ತೇವೆ ಕ್ಷಮೆ ಕೇಳುತ್ತೇವೆ'. ಎಂದು ಬರೆದುಕೊಂಡಿದ್ದಾರೆ. ಇನ್ನೂ ಸಂಜಯ್ ದತ್ ಕೂಡ ವಿಶೇಷ ವಿಡಿಯೋ ಶೇರ್ ಮಾಡಿ ಪತ್ನಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. 'ಈ ವಿಶೇಷ ದಿನದಂದು, ನೀನು ಪ್ರತಿದಿನ ನನ್ನ ಜೀವನದಲ್ಲಿ ತರುವ ಪ್ರೀತಿ, ಸಂತೋಷವನ್ನು ಆಚರಿಸುವ ಸಮಯ. ನನ್ನ ಅದ್ಭುತ ಪತ್ನಿ, ನನ್ನ ಉತ್ತಮ ಸ್ನೇಹಿತೆಗೆ 15ನೇ ವಾರ್ಷಿಕೋತ್ಸಾವದ ಶುಭಾಶಯಗಳು. ನಾನು ಈಗ, ಯಾವಾಗಲೂ ನಿನ್ನನ್ನ ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಕೆಜಿಎಫ್ 2 ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಸೌತ್ ಚಿತ್ರಕ್ಕೆ ಸಂಜಯ್ ದತ್ ರೆಡಿ!
ಸಂಜಯ್ ದತ್ ಮತ್ತು ಮಾನಯತಾ ಇಬ್ಬರೂ ಡಾನ್ಸ್ ಮಾಡಿರುವ ವಿಡಿಯೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಶುಭಾಶಯ ತಿಳಿಸುವ ಜೊತೆಗೆ ಸಖತ್ ಟ್ರೋಲ್ ಮಾಡಿದ್ದಾರೆ. ಸಂಜಯ್ ದತ್ ಕುಡಿದಿದ್ದಾರೆ, ಅವರಿಗೆ ಡಾನ್ಸ್ ಮಾಡಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಕುಡಿದು ಕುಣಿಯಬೇಕಿತ್ತಾ ಎಂದು ಕೇಳಿದ್ದಾರೆ. ಇನ್ನು ಕೆಲವರು ನಾಚಕಿ ಆಗಬೇಕು ನಟನಿಗೆ ಎಂದು ಹೇಳಿದ್ದಾರೆ.
ಸಂಜಯ್ ದತ್ ಮತ್ತು ಮಾನಯತಾ ಇಬ್ಬರೂ ಅನೇಕ ವರ್ಷಗಳ ಕಾಲ ಡೇಟಿಂಗ್ ಮಾಡಿ ನಂತರ 2008ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಅವಳಿ ಮಕ್ಕಳಿದ್ದಾರೆ. ಶಹರಾನ್ ಮತ್ತು ಇಕ್ರಾ. ಈ ಮೊದಲು ಸಂಜಯ್ ದತ್ ರಿಚಾ ಶರ್ಮಾ ಅವರನ್ನು ಮದುವೆಯಾಗಿದ್ದರು. ರಿಚಾ 1996ರಲ್ಲಿ ಬ್ರೈನ್ ಟ್ಯೂಮರ್ ನಿಂದ ನಿಧನರಾದರು. ಮೊದಲ ಪತ್ನಿಗೆ ತ್ರಿಶಾಲಾ ದತ್ ಎನ್ನುವ ಮಗಳಿದ್ದಾಳೆ.
ಚಿಕಿತ್ಸೆಗಿಂತ ಸಾಯೋಕೆ ರೆಡಿ ಆಗಿದ್ದೆ; ಕ್ಯಾನ್ಸರ್ ಎಂದಾಗ ಫಸ್ಟ್ ರಿಯಾಕ್ಷನ್ ಬಗ್ಗೆ ಸಂಜಯ್ ದತ್ ಭಾವುಕ ಮಾತು
ಸಂಜಯ್ ದತ್ ಸದ್ಯ ಅನೇರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವರ್ಜಿನ್ ಟ್ರೀ, ದಳಪತಿ ವಿಜಯ್ ಜೊತೆ ದಳಪತಿ 67 ಸಿನಿಮಾ, ಕನ್ನಡದಲ್ಲಿ ಧ್ರವ ಸರ್ಜಾ ಜೊತೆ ಸಂಜಯ್ ದತ್ ನಟಿಸುತ್ತಿದ್ದಾರೆ. ಕೆಜಿಎಫ್ 2 ಮೂಲಕ ದೊಡ್ಡ ಮಟ್ಟದ ಸಕ್ಸಸ್ ಕಂಡಿರುವ ಸಂಜಯ್ ದತ್ ಬಳಿಕ ಸೌತ್ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಸೌತ್ ನಲ್ಲೂ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.
