ಚಿಕಿತ್ಸೆಗಿಂತ ಸಾಯೋಕೆ ರೆಡಿ ಆಗಿದ್ದೆ; ಕ್ಯಾನ್ಸರ್ ಎಂದಾಗ ಫಸ್ಟ್ ರಿಯಾಕ್ಷನ್ ಬಗ್ಗೆ ಸಂಜಯ್ ದತ್ ಭಾವುಕ ಮಾತು
ಕ್ಯಾನ್ಸರ್ ಚಿಕಿತ್ಸೆ ಪಡೆಯುವುದಕ್ಕಿಂತ ಸಾಯಲು ರೆಡಿಯಾಗಿದ್ದೆ ಎಂದು ಸಂಜಯ್ ದತ್ ಬಹಿರಂಗ ಪಡಿಸಿದ್ದಾರೆ.
ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಕ್ಯಾನ್ಸರ್‌ನಿಂದ ಮುಕ್ತರಾಗಿದ್ದಾರೆ. 2020ರಲ್ಲಿ ಸಂಜಯ್ ದತ್‌ಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಬಳಿಕ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣ ಗುಣಮುಖರಾಗಿ ಹೊರಬಂದರು. ಇದೀಗ ಸಿನಿಮಾಗಳಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ, ವರ್ಕೌಟ್ ಮಾಡುತ್ತಿದ್ದಾರೆ. ಕ್ಯಾನ್ಸರ್ ಎಂದು ಗೊತ್ತಾದ ತಕ್ಷಣ ಸಂಜಯ್ ದತ್ ಅವರ ಪ್ರತಿಕ್ರಿಯೆ ಹೇಗಿತ್ತು, ಏನೆಲ್ಲ ಕಷ್ಟಗಳನ್ನು ಎದುರಿಸಿದರು ಎನ್ನುವ ಬಗ್ಗೆ ಸಂಜಯ್ ದತ್ ಬಹಿರಂಗ್ಪಡಿಸಿದ್ದಾರೆ. ಕೊರೊನಾ ಬೀಕರ ಲಾಕ್‌ಡೌನ್ ಸಮಯ ಆದಾಗಿತ್ತು. ಆ ಸಮಯದಲ್ಲಿ ಕುಟುಂಬ ಕೂಡ ತನ್ನ ಜೊತೆಯಲ್ಲಿ ಇರಲಿಲ್ಲ ಎಂದು ಸಂಜಯ್ ದತ್ ಹೇಳಿದ್ದಾರೆ.
ಸಂಜಯ್ ದತ್ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಲೆ ಕೆಜಿಎಫ್ 2 ಚಿತ್ರೀಕರಣ ಮಾಡಿದ್ದರು. ಹೈ ವೋಲ್ಟೇಜ್ ಸಾಹಸ ದೃಶ್ಯಗಳನ್ನು ಸಹ ಚಿತ್ರೀಕರಿಸಿದ್ದರು. ಆ ಸಮಯದಲ್ಲಿ ವರ್ಕ್ ಔಟ್ ಮಾಡುವುದನ್ನು ಕೂಡ ನಿಲ್ಲಿಸಿರಲಿಲ್ಲ. ಈ ಬಗ್ಗೆ ಸಂಜಯ್ ದತ್ ಇ ಟೈಮ್ಸ್ ಜೊತೆ ಮಾತನಾಡಿದ್ದಾರೆ. 'ನನಗೆ ಬೆನ್ನು ನೋವು ಇತ್ತು. ಉಸಿರಾಡಲು ಸಾಧ್ಯವಾಗದ ಕಾರಣ ಬಿಸಿನೀರಿನ ಬಾಟಲ್ ಮತ್ತು ನೋವು ನಿವಾರಕ ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಕ್ಯಾನ್ಸರ್ ಇರುವುದು ಗೊತ್ತಾಯಿತು. ಆ ಸಮಯದಲ್ಲಿ ನನ್ನ ಹೆಂಡತಿ, ನನ್ನ ಕುಟುಂಬ ಅಥವಾ ನನ್ನ ಸಹೋದರಿ ಕೂಡ ಯಾರು ಜೊತೆಯಲ್ಲಿ ಇರಲಿಲ್ಲ. ನಾನು ಒಬ್ಬಂಟಿಯಾಗಿದ್ದೆ. ಆಗ ವ್ಯಕ್ತಿ ಬಂದು ಇದ್ದಕ್ಕದ್ದಂತೆ ನಿಮಗೆ ಕ್ಯಾನ್ಸರ್ ಇದೆ ಎಂದು ಹೇಳಿದರು' ಎಂದು ಸಂಜಯ್ ದತ್ ವಿವರಿಸಿದ್ದಾರೆ.
ಡ್ರಗ್ಸ್ ಹೆಚ್ಚಾಗಿ ಎರಡು ದಿನಗಳ ನಂತರ ಎಚ್ಚರವಾದಾಗ ಶಾಕ್ ಆದ ಸಂಜಯ್ ದತ್
ಕಿಮೋಥೆರಪಿ ತೆಗೆದುಕೊಳ್ಳುವುದಕ್ಕಿಂತ ಸಾಯುವುದು ಒಳ್ಳೆದೆಂದು ನಿರ್ಧರಿಸಿದ್ದೆ ಎಂದು ಸಂಜಯ್ ದತ್ ಹೇಳಿದ್ದಾರೆ. 'ನನ್ನ ಹೆಂಡತಿ ದುಬೈನಲ್ಲಿ ಇದ್ದಳು ಹಾಗಾಗಿ ನನ್ನ ಸಹೋದರಿ ಪ್ರಿಯಾ ನನ್ನ ಬಳಿ ಬಂದಳು. ಆಗ ನನ್ನ ಮೊದಲ ಪ್ರತಿಕ್ರಿಯೆ ಏನೆಂದರೆ ನನ್ನ ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸವಿದೆ. ತನ್ನ ತಾಯಿ, ನನ್ನ ಪತ್ನಿ ರಿಚಾ ಶರ್ಮಾ ಕ್ಯಾನ್ಸರ್ ನಿಂದ ನಿಧನರಾಗಿದರು. ಹಾಗಾಗಿ ನಾನು ಮೊದಲು ಹೇಳಿದ್ದು ನಾನು ಕೀಮೋಥರಪಿ ತೆಗೆದುಕೊಳ್ಳಲು ಬಯಸಿಲ್ಲ. ಅದಕ್ಕಿಂತ ನಾನು ಸಾಯುತ್ತೇನೆ, ನನಗೆ ಯಾವುದೆ ಚಿಕಿತ್ಸೆ ಬೇಡ' ಎಂದು ಹೇಳಿದ್ದೆ ಅಂತ ಸಂಜಯ್ ದತ್ ಬಹಿರಂಗ ಪಡಿಸಿದ್ದಾರೆ.
KGF ಬಳಿಕ ಮತ್ತೆ ಕನ್ನಡಕ್ಕೆ ಬಂದ ಸಂಜಯ್ ದತ್; ಪ್ರೇಮ್ ಸಿನಿಮಾದಲ್ಲಿ 'ಅಧೀರ'
ಚಿಕಿತ್ಸೆ ಸಮಯದಲ್ಲೇ ಸಂಜಯ್ ದತ್ ಕೆಜಿಎಫ್ 2 ಚಿತ್ರೀಕರಣ ಮುಗಿಸಿದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕೂಡ ಆಯಿತು. ಅಧೀರನಾಗಿ ಸಂಜಯ್ ದತ್ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದರು. ಕೆಜಿಎಫ್ ಸಿನಿಮಾ ಸಂಜಯ್ ದತ್ ಅವರಿಗೆ ಅತೀ ದೊಡ್ಡ ಕಮ್ ಬ್ಯಾಕ್ ಆಗಿದೆ. ಈ ಸಿನಿಮಾ ಕೋಟಿ ಕೋಟಿ ಬಾಚಿಕೊಳ್ಳುವ ಮೂಲಕ ಅನೇಕ ದಾಖಲೆಗಳನ್ನು ಬರೆಯಿತು. ಈಗ ಎಲ್ಲವೂ ಇತಿಹಾಸ. ಸದ್ಯ ದತ್ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್2 ಸಕ್ಸಸ್ ಬಳಿಕ ದತ್ ಇದೀಗ ದಕ್ಷಿಣ ಭಾರತೀಯ ಸಿನಿಮಾಗಳ ಕಡೆಯು ಗಮನ ಹರಿಸಿದ್ದಾರೆ. ಈ ಸಿನಿಮಾ ಬಳಿಕ ಮತ್ತೊಂದು ಕನ್ನಡ ಸಿನಿನಮಾದಲ್ಲಿ ನಟಿಸುತ್ತಿದ್ದಾರೆ. ಹಾಗೂ ತಮಿಳಿನ ದಳಪತಿ ವಿಜಯ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.