Asianet Suvarna News Asianet Suvarna News

ಕೆಜಿಎಫ್​ 2 ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಸೌತ್​ ಚಿತ್ರಕ್ಕೆ ಸಂಜಯ್​ ದತ್​ ರೆಡಿ!

ಬಾಲಿವುಡ್​ನಲ್ಲಿ ಒಂದರ ಮೇಲೊಂದು ಫ್ಲಾಪ್​ ಚಿತ್ರ ಕೊಟ್ಟ ನಟ ಸಂಜಯ್​ ದತ್​ ಅವರಿಗೆ ಭಾರಿ ಯಶಸ್ಸು ತಂದುಕೊಟ್ಟದ್ದು ಕೆಜಿಎಫ್​-2. ಇದರ ಬೆನ್ನಲ್ಲೇ ಮತ್ತೊಂದು ಸೌತ್​ ಚಿತ್ರಕ್ಕೆ ನಟ ಸಹಿ ಹಾಕಿದ್ದಾರೆ. ಯಾವ ಚಿತ್ರವದು?
 

Sanjay Dutt debuting in Tamil cinema with Thalapathy 67
Author
First Published Feb 1, 2023, 6:02 PM IST

‘ಕೆಜಿಎಫ್ ಚಾಪ್ಟರ್ 2’ (KGF Chapter 2) ಭರ್ಜರಿ ಯಶಸ್ಸು ಕಂಡಿರುವುದು ಎಲ್ಲರಿಗೂ ತಿಳಿದೇ ಇರುವ ವಿಷಯ.  ವಿಶ್ವಾದ್ಯಂತ ಇದು ಅಪಾರ ಮೆಚ್ಚುಗೆ ಗಳಿಸಿರುವುದು ಮಾತ್ರವಲ್ಲದೇ,  ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರ ಭರ್ಜರಿ ಗೆಲುವಿಗೂ ಕಾರಣವಾಗಿದೆ. ಹಲವು ವರ್ಷಗಳಿಂದ ಯಶಸ್ಸನ್ನು ಕಾಣದಿದ್ದ ಸಂಜಯ್​ ದತ್​ ಅವರಿಗೆ ಈ ಚಿತ್ರದಲ್ಲಿನ ಅಧೀರ ಪಾತ್ರ ಬಹಳ ಪ್ರಸಿದ್ಧಿ ತಂದುಕೊಟ್ಟಿತ್ತು. ಇದರಿಂದ ಖುದ್ದು ಸಂಜಯ್​ ದತ್​ ಅವರು ಫುಲ್​ ಖುಷ್​ ಆಗಿದ್ದಾರೆ. ‘ಈ ಚಿತ್ರ ನನ್ನ ಸಾಮರ್ಥವನ್ನು ನನಗೆ ಮತ್ತೆ ನೆನಪಿಸಿದೆ. ವೃತ್ತಿಜೀವನದಲ್ಲಿ ಕೆಲವೊಂದು ಚಿತ್ರಗಳು ಬೇರೆಲ್ಲಾ ಚಿತ್ರಗಳಿಗಿಂತ ವಿಶೇಷವಾಗಿರುತ್ತವೆ. ಪ್ರತಿ ಬಾರಿ ನನ್ನನ್ನು ನಾನು ಕಂಫರ್ಟ್ ಜೋನ್​ನಿಂದ ಹೊರತರುವ ಚಿತ್ರಗಳನ್ನು ಹುಡುಕುತ್ತಿರುತ್ತೇನೆ. ಕೆಜಿಎಫ್ 2  ಅಂತಹ ಚಿತ್ರವಾಗಿತ್ತು’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ‘ಜೀವನದಲ್ಲಿ ಉತ್ತಮವಾಗಿದ್ದು ಮಾಡಲು ಇನ್ನೂ ಇದೆ ಎನ್ನುವುದನ್ನು ಚಲನಚಿತ್ರವು ನನಗೆ ನೆನಪಿಸುತ್ತದೆ’ ಎಂದು ಬರೆದುಕೊಂಡಿದ್ದರು. 

2022 ರಲ್ಲಿ ನಾಲ್ಕು ಚಿತ್ರಗಳನ್ನು ಸಂಜಯ್​ ದತ್​ ಮಾಡಿದ್ದರು.  ಅವುಗಳಲ್ಲಿ ಮೂರು ಬಾಲಿವುಡ್​ ಚಿತ್ರಗಳು. ಅವುಗಳೆಂದರೆ 'ತುಳಸಿದಾಸ್ ಜೂನಿಯರ್', 'ಸಾಮ್ರಾಟ್ ಪೃಥ್ವಿರಾಜ್' (Samrat Prathwiraj) ಮತ್ತು 'ಶಂಶೇರಾ' ಬಾಲಿವುಡ್ (bollywood) ಚಲನಚಿತ್ರಗಳು ಮತ್ತು ಎಲ್ಲಾ ಮೂರು ಚಿತ್ರಗಳು ಫ್ಲಾಪ್ ಎಂದು ಸಾಬೀತಾಯಿತು. ಆದರೆ ಕನ್ನಡ ಚಿತ್ರ 'ಕೆಜಿಎಫ್ ಚಾಪ್ಟರ್ 2' ಬ್ಲಾಕ್ಬಸ್ಟರ್ ಆಗಿತ್ತು, ಸುಮಾರು 1255 ಕೋಟಿ ರೂ ಸಂಗ್ರಹಿಸಿತ್ತು.  ಕನ್ನಡದಲ್ಲಿ  ಭರ್ಜರಿ ಯಶಸ್ಸು ಕಾಣುತ್ತಲೇ ಸೌತ್​ ಇಂಡಸ್ಟ್ರಿಯಲ್ಲಿಯೇ ನಟ ನೆಲೆಯೂರಲು ಯೋಚಿಸುವಂತೆ ಕಾಣುತ್ತಿದೆ.  ಅಧೀರನಾಗಿ ದಕ್ಷಿಣ ಸಿನಿ ಕ್ಷೇತ್ರಕ್ಕೆ ಕಾಲಿಟ್ಟಿರೋ ಸಂಜಯ್​ ದತ್​ ಅವರು ಇದೀಗ ಮತ್ತೊಂದು ಸೌತ್​ ಫಿಲ್ಮ್​ (south film) ಒಪ್ಪಿಕೊಂಡಿದ್ದಾರೆ! ತಮಿಳು ಚಿತ್ರಗಳಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.  ಕೆಜಿಎಫ್ 2 ರಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರಿಂದ  ತಮಿಳು ಚಿತ್ರದಲ್ಲೂ ವಿಲನ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಇಷ್ಟೇ ಅಲ್ಲ, ಈ ಪಾತ್ರಕ್ಕಾಗಿ ನಟ ಭರ್ಜರಿ ಸಂಭಾವನೆಯನ್ನೂ ಪಡೆಯಲಿದ್ದಾರಂತೆ. ಹಾಗಂತ ಗುಸುಗುಸು ಸುದ್ದಿ ಹರಿದಾಡುತ್ತಿದೆ.

ಕಾಸ್ಟ್​ ಕೌಚಿಂಗ್ ಭಯಾನಕ ಅನುಭವ ಬಿಚ್ಚಿಟ್ಟ ನಟ Ankit Gupta!

ಅಂದಹಾಗೆ ನಟ ಸಂಜಯ್​ ದತ್​ ಅವರು ಮುಂದೆ ಎಂಟ್ರಿ ಕೊಡಲಿರುವ ಚಿತ್ರ  ದಳಪತಿ ವಿಜಯ್ (Dalapathy Vijay) ಅಭಿನಯದ  'ತಲಪತಿ 67'. ಈ ಚಿತ್ರದ ಸಂಜಯ್ ದತ್ ಪಾತ್ರವನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ. ಆದರೆ ಅವರ ಪವರ್ ಫುಲ್ ಲುಕ್ ಮುಂಚೂಣಿಗೆ ಬಂದಿದೆ. 'ತಲಪತಿ 67' ರ ನಿರ್ಮಾಣ ಸಂಸ್ಥೆಯಾದ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಚಿತ್ರದ ಪೋಸ್ಟರ್  ಹಂಚಿಕೊಂಡಿದೆ. ಈ ಮೂಲಕ ಸಂಜಯ್​ ದತ್​ ಅವರನ್ನು  ಟಾಲಿವುಡ್​ಗೆ  ಸ್ವಾಗತಿಸಿದೆ. 'ಸಂಜಯ್ ದತ್ ಸರ್ ಅವರನ್ನು ತಮಿಳು ಚಿತ್ರರಂಗಕ್ಕೆ ಸ್ವಾಗತಿಸಲು ನಮಗೆ ಗೌರವವಿದೆ ಮತ್ತು ಅವರು ದಳಪತಿ 67 ರ ಭಾಗವಾಗಿದ್ದಾರೆ ಎಂದು ಘೋಷಿಸಲು ಸಂತೋಷಪಡುತ್ತೇವೆ' ಎಂದು ಸೆವೆನ್ ಸ್ಕ್ರೀನ್ (seven screen) ಸ್ಟುಡಿಯೋ ಹೇಳಿದೆ. ಈ ಪೋಸ್ಟರ್​ ಜೊತೆಗೆ ಸಂಜಯ್ ದತ್ ಹೇಳಿಕೆಯನ್ನೂ ಶೇರ್​ ಮಾಡಿಕೊಳ್ಳಲಾಗಿದೆ.  'ತಲಪತಿ 67' ಚಿತ್ರದ ಒನ್ ಲೈನರ್ ಕೇಳಿದಾಗ ನಾನು ಈ ಚಿತ್ರದ ಭಾಗವಾಗಲು ನಿರ್ಧರಿಸಿದೆ, ಈ ಪ್ರಯಾಣದ ಆರಂಭದ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಸಂಜಯ್ ದತ್ ಹೇಳಿದ್ದಾರೆ.

ಹಾಗೆಯೇ, ಯಾವುದೇ ಚಿತ್ರ ಒಪ್ಪಿಕೊಂಡ ತಕ್ಷಣ, ಚಿತ್ರನಟರು ಪಡೆಯುವ ಸಂಭಾವನೆಯೂ (remmuneration) ಮುನ್ನಲೆಗೆ ಬರುತ್ತದೆ ಅಲ್ಲವೆ? ಅದೇ ರೀತಿ ಸಂಜಯ್ ದತ್ ಚಿತ್ರದ ಶುಲ್ಕದ ಬಗ್ಗೆಯೂ ಈಗ ಸುದ್ದಿಯಾಗಿದೆ.  ವರದಿಗಳನ್ನು ನಂಬುವುದಾದರೆ, ಸಂಜಯ್​ ದತ್​ ಅವರು  ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಲಿದ್ದು, ಅದಕ್ಕೆ  ಸುಮಾರು 10 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರಂತೆ. ಅಂದಹಾಗೆ, 'ತಲಪತಿ 67' ಗ್ಯಾಂಗ್‌ಸ್ಟರ್ ಡ್ರಾಮಾ ಚಿತ್ರವಾಗಿದ್ದು, ಇದನ್ನು ಲೋಕೇಶ್ ಕನಕರಾಜ್ (Lokesh Kanakaraj) ನಿರ್ದೇಶಿಸುತ್ತಿದ್ದಾರೆ. ವರದಿಗಳನ್ನು ನಂಬುವುದಾದರೆ, ಈ ಚಿತ್ರದಲ್ಲಿ ವಿಜಯ್ ಕ್ರಿಮಿನಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ನಾಯಕಿ ತ್ರಿಷಾ ಕೃಷ್ಣನ್.

ಶಾರುಖ್​ ಖಾನ್​ ಇಲ್ಲವೇ ಸೆಕ್ಸ್​ ಬೇಕು: ನಟಿ ನೇಹಾ ಧೂಪಿಯಾ ಹೇಳಿದ್ದೇನು?

Follow Us:
Download App:
  • android
  • ios