ಕೆಜಿಎಫ್ ಅಧೀರನ ಫ್ಯಾಮಿಲಿ ಫೋಟೊ…. ತನಗಿಂತ 19 ವರ್ಷ ಕಿರಿಯಳನ್ನು ಮದುವೆಯಾಗಿದ್ದೇಕೆ ಸಂಜಯ್ ದತ್
ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್ ಖ್ಯಾತಿಯ ಅಧೀರ, ಬಾಲಿವುಡ್ ನಟ ಸಂಜಯ್ ದತ್ ಅವರ ಫ್ಯಾಮಿಲಿ ಫೋಟೊ ವೈರಲ್ ಆಗ್ತಿದೆ. ಹೇಗಿದ್ದಾರೆ ನೋಡಿ ಸಂಜು ಬಾಬ ಹೆಂಡ್ತಿ ಮಕ್ಕಳು.
ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ (Sanjay Dutt), ಸಿನಿ ಪ್ರಿಯರ ಸಂಜು ಬಾಬಾ ಅಂತಾನೇ ಫೇಮಸ್. ಬಾಲಿವುಡ್ ನಲ್ಲಿ 80ರ ದಶಕದಲ್ಲೇ ಮೋಡಿ ಮಾಡಿದ ಈ ಸ್ಟಾರ್, ಇಂದಿಗೂ ತಮ್ಮ ನಟನೆ, ಸ್ಟೈಲ್ ನಿಂದ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಇವರ ರಿಯಲ್ ಲೈಫ್ ಕೂಡ ಸಿನಿಮಾ ಜೀವನಕ್ಕಿಂತ ಕಡಿಮೆ ಏನಲ್ಲ.
ಸಂಜಯ್ ದತ್ ಜೀವನದಲ್ಲಿ ಪ್ರೀತಿ, ಮದುವೆ ಎಲ್ಲಾ ಒಂದು ಸಲ ಆಗಿರಲಿಲ್ಲ. ಮೂರು ಮೂರು ಸಲ ಪ್ರೀತಿಯಾಗಿ ಮದುವೆಯಾದವರು ಸಂಜಯ್ ದತ್. ಇವರು ಮೊದಲು ಮದುವೆಯಾಗಿದ್ದು, ರಿಚಾ ಶರ್ಮಾ (Richa Sharma), ಇವರು ಮದುವೆಯಾಗಿ 9 ವರ್ಷದ ನಂತರ ಬ್ರೈನ್ ಟ್ಯೂಮರ್ ಗೆ ಬಲಿಯಾಗಿದ್ದರು. ನಂತರ ಮದುವೆಯಾಗಿದ್ದು ರಿಹಾ ಪಿಲ್ಲೈ ಅವರ ಜೊತೆಗಿನ 10 ವರ್ಷದ ದಾಂಪತ್ಯದ ನಂತರ ಡಿವೋರ್ಸ್ ಪಡೆದಿದ್ದರು.
ಅದಾದ ಮೇಲೆ ಸಂಜಯ್ ದತ್ ಜೀವನಕ್ಕೆ ಎಂಟ್ರಿ ಕೊಟ್ಟವರು ಮಾನ್ಯತಾ (Maanyata Dutt). ಸಂಜಯ್ ಅವರ ಪತ್ನಿಯಾಗುವ ಮೊದಲು ಮಾನ್ಯತಾ ಬಿ ಗ್ರೇಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರು.ನಟನನ್ನು ಮದುವೆಯಾದ ನಂತರ, ಅವರು ನಟನೆಗೆ ವಿದಾಯ ಹೇಳಿ, ಸದ್ಯ ಕುಟುಂಬದ ಜೊತೆ ಹಾಯಾಗಿದ್ದಾರೆ.
ಸಂಜಯ್ ದತ್ ಮತ್ತು ಮಾನ್ಯತಾ ದತ್ 2008 ರಲ್ಲಿ ಗೋವಾದಲ್ಲಿ ರಹಸ್ಯವಾಗಿ ಮದುವೆಯಾಗಿದ್ದರು. ಮದುವೆಯ ನಂತರ, ದಂಪತಿಗಳು ಅವಳಿ ಮಕ್ಕಳಾದ ಇಕ್ರಾ ದತ್ ಮತ್ತು ಶಹ್ರಾನ್ ದತ್ ಎನ್ನುವ ಮುದ್ದಾದ ಮಕ್ಕಳಿಗೆ ಪೋಷಕರಾದರು. ಮಾನ್ಯತಾ ಸಂಜಯ್ ದತ್ ಅವರ ಪ್ರೊಡಕ್ಷನ್ ಹೌಸ್ ನ ಸಿಇಒ (CEO of Sunjay Dutt Production House) ಆಗಿದ್ದಾರೆ.
ಸಂಜಯ್ ಮತ್ತು ಮಾನ್ಯತಾ ಲವ್ ಶುರುವಾಗಿದ್ದು ಶೂಟಿಂಗ್ ವೇಳೆ, ಆವಾಗ ಸಂಜುಗಾಗಿ ಮಾನ್ಯತಾ ಅವರಿಗೆ ಇಷ್ಟವಾದ ಆಹಾರ ಮಾಡಿ ಕೊಡುತ್ತಿದ್ದರಂತೆ. ಜೊತೆಗೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರಂತೆ. ಮೊದಲಿಗೆ ಸ್ನೇಹಿತರಾಗಿದ್ದ ಇವರು, ಬಳಿಕ ಪ್ರೇಮಿಗಳಾಗಿ ಎರಡು ವರ್ಷದಲ್ಲಿ ಮದುವೆಯಾಗಿದ್ದರು ಈ ಜೋಡಿ.
ನಿಮಗೆ ಗೊತ್ತಾ ಮಾನ್ಯತಾ ಮತ್ತು ಸಂಜಯ್ ದತ್ ದಂಪತಿಗಳ ವಯಸ್ಸಿನ ನಡುವೆ ಸುಮಾರು 19 ವರ್ಷಗಳ ಅಂತರವಿದೆ. ಆದರೂ ಕಳೆದ 15 ವರ್ಷಗಳಿಂದ ಈ ಜೋಡಿ ಜೊತೆಯಾಗಿ ಆದರ್ಶ ದಂಪತಿಗಳಾಗಿ ಬಾಳುತ್ತಿದ್ದಾರೆ. ಸಂಜಯ್ ದತ್ ಅತ್ಯಂತ ಕಠಿಣ ಸಮಯ ಅಂದರೆ ಸಂಜಯ್ ದತ್ ಕ್ಯಾನ್ಸರ್ ನಿಂದ (cancer) ಬಳಲುತ್ತಿದ್ದ ಸಮಯದಲ್ಲೂ ಸಹ ಮಾನ್ಯತಾ, ಪತಿಗೆ ಸಾತ್ ನೀಡುವ ಮೂಲಕ ಬೆಸ್ಟ್ ಪತ್ನಿ ಎನಿಸಿಕೊಂಡಿದ್ದಾರೆ.
ಸಂಜಯ್ ದತ್ ತಮ್ಮ ಕೆಲಸದ ಜೊತೆಗೆ, ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಆದರೆ ಇವರ ಕುಟುಂಬ ಸದ್ಯ ಮುಂಬೈನಲ್ಲಿ ಇಲ್ಲ. ದುಬೈನಲ್ಲಿ ವಾಸಿಸುತ್ತಿದ್ದಾರೆ. ಸಂಜಯ್ ದತ್ ತಮ್ಮ ಶೂಟಿಂಗ್ ನಿಂದ ಫ್ರೀ ಆದಾಗಲೆಲ್ಲಾ ಫ್ಯಾಮಿಲಿ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ.
ಮಕ್ಕಳು ಸಹ ದುಬೈನಲ್ಲಿ ಶಾಲೆ ಕಲಿಯುತ್ತಿದ್ದು, ಮಾನ್ಯತಾ ಅವರ ಬ್ಯುಸಿನೆಸ್ ಸಹ ದುಬೈನಲ್ಲಿಯೇ ಇದೆ. ಫ್ಯಾಮಿಲಿಗೆ ದುಬೈನಲ್ಲಿ ನೆಲೆಸಲು ಇಷ್ಟವಾಗಿರೋದರಿಂದ, ಅಲ್ಲಿಯೇ ತಾವು ಸೆಟಲ್ ಆಗಿರೋದಾಗಿ ಸಂಜಯ್ ದತ್ ತಿಳಿಸಿದ್ದರು. ಸಂಜಯ್ ಪುತ್ರ ಶಹ್ರಾನ್ ಅಂಡರ್ 14 ಫುಟ್ ಬಾಲ್ ತಂಡದಲ್ಲಿ ಆಡುತ್ತಿದ್ದಾರೆ.