KGF 2 ಯಶ್ ಕಾಸ್ಟ್ಯೂಮ್ ಡಿಸೈನ್ ಮಾಡ್ತಿರೋದು ಈ ಹೆಣ್ಮಗಳು! ಯಾರೀಕೆ?
KGF 2ನಲ್ಲಿ ಯಶ್ ಲುಕ್, ಸ್ಟೈಲ್ ಜೊತೆಗೆ ಅವರ ಡ್ರೆಸ್ ಗೆ ಸಖತ್ ಒಳ್ಳೆಯ ರೆಸ್ಪಾನ್ಸ್ ಬಂತು. ಅವರ ಕಾಸ್ಯೂಮ್ ಡಿಸೈನ್ ಮಾಡಿರೋದು ಒಬ್ಬ ಹೆಣ್ಮಗಳು. ಕಳೆದ ಎಂಟು ವರ್ಷಗಳಿಂದ ಯಶ್ ಕಾಸ್ಟ್ಯೂಮ್ ಡಿಸೈನ್ ಮಾಡ್ತಾ ಬಂದಿರೋ ಇವರ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಒಬ್ಬ ಹೀರೋ ಡೈಲಾಗ್ ಹೇಳೋಕೋ ಮೊದಲೇ ಆತನನ್ನು ಪ್ರೇಕ್ಷಕರ ಕಣ್ಣಲ್ಲಿ ಹಿಡಿದಿಡೋದು ಆತನ ಡ್ರೆಸ್. ಯಾವ ಥರದ ಮೈಂಟ್‌ಸೆಟ್‌ನವನು, ಅವನು ಯಾವ ಕಾಲದಲ್ಲಿದ್ದಾನೆ, ಅವನಲ್ಲಿ ಹಣ ಇದೆಯಾ ಇಲ್ಲವಾ, ಶ್ರೀಮಂತನಾ ಬಡವನಾ, ಹಳೇ ಕಾಲದವನಾ, ಈ ಕಾಲದವನಾ, ಚಿಕ್ಕ ಹುಡುಗನಾ, ಯುವಕನಾ, ಮಧ್ಯ ವಯಸ್ಕನಾ.. ಈ ಎಲ್ಲಾ ಡೀಟೇಲ್ಸ್‌ಅನ್ನೂ ಹೀರೋ ಬಾಯಿ ಬಿಟ್ಟು ಹೇಳ್ಬೇಕಾಗಿಲ್ಲ. ಅವನ ಡ್ರೆಸ್ (Dress), ಅವನ ಲುಕ್ (Look)ಸ್ಕ್ರೀನ್‌ಗೆ ಎಂಟ್ರಿ ಕೊಟ್ಟ ಕೂಡಲೇ ಈ ಎಲ್ಲವನ್ನೂ ರಿವೀಲ್ ಮಾಡಿ ಬಿಡುತ್ತೆ. ಈಗ ಯಶ್ ವಿಚಾರಕ್ಕೆ ಬರೋಣ. ಕೆಜಿಎಫ್ 2 ಸಿನಿಮಾದಲ್ಲಿ, ಈ ಸಿನಿಮಾದ ಪ್ರಚಾರದ ಕಾರ್ಯಕ್ರಮಗಳಲ್ಲಿ ಅವರ ಡ್ರೆಸ್ ಸಖತ್ ಇಂಪ್ರೆಸ್ಸಿವ್ ಆಗಿತ್ತು. ಸಿನಿಮಾದಲ್ಲಿ ಅವರು ೮೦ರ ದಶಕದ ಕೋಟ್ ನಲ್ಲಿ ಮಿಂಚಿದ್ದೇ ಹೆಚ್ಚು. ಅವರ ರೆಟ್ರೋ ಲುಕ್ ಗೆ ಭರ್ಜರಿ ಚಪ್ಪಾಳೆ ಬಂತು. ಈ ಡ್ರೆಸ್‌ಗಳ ಕಲರ್ ಕಾಂಬಿನೇಶನ್ ಅದ್ಭುತವಾಗಿತ್ತು. ಯಶ್ (Yash) ಅವರು ಮೊದಲೇ ಸ್ಮಾರ್ಟ್, ಈ ಡ್ರೆಸ್‌ನಲ್ಲಿ ಸಿಕ್ಕಾಪಟ್ಟೆ ಸ್ಮಾರ್ಟ್ ಆಗಿ ಮಿಂಚಿದರು.
ಬ್ಲಾಕ್ ಬಸ್ಟರ್ KGF 2 ವೀಕ್ಷಿಸಿದ RCB; ಕೊಹ್ಲಿ ಎಲ್ಲಿ ಎನ್ನುತ್ತಿರುವ ಫ್ಯಾನ್ಸ್
ಯಶ್ ಅವರ ಈ ಲುಕ್‌ನ ಹಿಂದಿರೋದು ಒಬ್ಬ ಹೆಣ್ಮಗಳ ದೂರದೃಷ್ಟಿ. ಆಕೆ ಸಿನಿಮಾದ ಕತೆ, ಹೀರೋನಾ ಮೂಡ್, ಆತನಿರೋ ಜಾಗ ಎಲ್ಲವನ್ನೂ ಗಮನಿಸಿ ಅದಕ್ಕೆ ತಕ್ಕ ಉಡುಪಿನ ವಿನ್ಯಾಸ ( Costume Designer) ಮಾಡಿದ್ದಾರೆ. ಈಕೆಯ ಹೆಸರು ಸಾನಿಯಾ ಸರ್ದಾರಿಯಾ (Sania Sardhariya). ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ (Imran Sardhariya) ಹಾಗೂ ಸಾನಿಯಾ ಸರ್ದಾರಿಯಾ ದಂಪತಿಗಳು. ಕೆಜಿಎಫ್ 2 ಸಿನಿಮಾದಲ್ಲಿ ಸಾನಿಯಾ ಸರ್ದಾರಿಯಾ ಯಶ್‌ಗೆ ಮಾತ್ರ ಅಲ್ಲ, ಸಂಜಯ್ ದತ್ತ್ (Sanjay Dutt), ಶ್ರೀನಿಧಿ ಶೆಟ್ಟಿ (Srinidhi shetty) ಅವರಿಗೂ ಕಾಸ್ಯೂಮ್ ಡಿಸೈನ್ ಮಾಡಿದ್ದಾರೆ. ಸಣ್ಣ ಪುಟ್ಟ ಚಿತ್ರಗಳ ಮಂದಿಯೂ ಕಾಸ್ಟ್ಯೂಮ್ ಡಿಸೈನ್ ಅಂದ ಕೂಡಲೇ ಬಾಂಬೆಯತ್ತ ಮುಖ ಮಾಡುತ್ತಾರೆ. ಅಲ್ಲಿನ ಕಾಸ್ಯೂಮ್ ಡಿಸೈನರ್ ಹತ್ರ ಉಡುಗೆ ಡಿಸೈನ್ ಮಾಡಿಸುತ್ತಾರೆ. ಅವರು ಮಾಡಿದ್ದೆಲ್ಲ ಗ್ರೇಟ್ ಅನ್ನೋ ಭಾವ ಸ್ಯಾಂಡಲ್‌ವುಡ್‌ನ ಕೆಲವರಲ್ಲಿದೆ. ಆದರೆ ಕೆಜಿಎಫ್ 2 ಅನ್ನೋ ವರ್ಲ್ಡ್ ವೈಡ್ ಸೆನ್ಸೇಶನ್ (World wide sensetion) ಸೃಷ್ಟಿಸಿರೋ ಸಿನಿಮಾದಲ್ಲಿ ನಮ್ಮ ನೆಲದ ಪ್ರತಿಭಾವಂತ ಕಾಸ್ಯೂಮ್ ಡಿಸೈನರ್‌ಅನ್ನೇ ಹೀರೋ, ಹೀರೋಯಿನ್ ಹಾಗೂ ವಿಲನ್ ಪಾತ್ರಕ್ಕೆ ಕಾಸ್ಟ್ಯೂಮ್ ಮಾಡಿಸಿದ್ದಾರೆ. ಇದರಿಂದ ನಮ್ಮವರ ಡಿಸೈನ್‌ಗೆ ವಿಶ್ವಮಟ್ಟದ ಪ್ರಚಾರ ಸಿಕ್ಕಿದೆ. ಸಿನಿಮಾ ನೆವದಲ್ಲಿ ನಮ್ಮ ನೆಲದ ಪ್ರತಿಭಾವಂತರೂ ಬೆಳೆದಿದ್ದಾರೆ. ಕೆಜಿಎಫ್ ಚಾಪ್ಟರ್ 1ಗೂ ಯಶ್ ಅವರಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿರೋದು ಇದೇ ಸಾನಿಯಾ.
KGF 2 Movie ಕೆಜಿಎಫ್ 2 ಪ್ರದರ್ಶನದ ವೇಳೆ ಗುಂಡಿನ ದಾಳಿ, ಗಾಯಳು ಸ್ಥಿತಿ ಗಂಭೀರ!
ಸಾನಿಯಾ ಸರ್ದಾರಿಯಾ ಕಳೆದ ಎಂಟು ವರ್ಷಗಳಿಂದ ರಾಕಿ ಬಾಯ್ ಗೆ ಕಾಸ್ಯೂಮ್ ಡಿಸೈನರ್ ಆಗಿದ್ದಾರೆ. ಕೆಜಿಎಫ್ 2 ಚಿತ್ರದಲ್ಲಿ ಮಾತ್ರ ಅಲ್ಲ, ಅವರು ಸಿನಿಮಾ ಪ್ರಚಾರಕ್ಕೆ ಹೊರಟಾಗ ಅವರು ತೊಡೋ ಡ್ರೆಸ್ ಹೇಗಿದ್ರೆ ಚಂದ ಅಂತ ಇಮ್ಯಾಜಿನ್ ಮಾಡಿ ಆ ಥರ ಡ್ರೆಸ್ ಡಿಸೈನ್ ಮಾಡಿಕೊಡೋರು ಸಾನಿಯಾ. ಯಶ್ ಗೆ ಇವರ ಡಿಸೈನ್‌ನ ಡ್ರೆಸ್ ಎಷ್ಟಿಷ್ಟ ಅಂದರೆ ಯಶ್ ಯಾವತ್ತೂ ಇವರ ಡಿಸೈನ್ ಡ್ರೆಸ್‌ಗಳನ್ನೇ ಪ್ರಿಫರ್ ಮಾಡ್ತಾರೆ. ಸಾನಿಯಾ ಅವರು ರಾಧಿಕಾ ಪಂಡಿತ್ (Radhika Pandith) ಅವರಿಗೂ ಡ್ರೆಸ್ ಡಿಸೈನ್ ಮಾಡುತ್ತಾರೆ. ಜೊತೆಗೆ ಶ್ರೀರಾಮಲು (Shree Ramulu) ಪುತ್ರಿಯ ಅದ್ದೂರಿ ವಿವಾಹಕ್ಕೆ ಕಾಸ್ಟ್ಯೂಮ್ ಡಿಸೈನ್ (Costume Designer)ಮಾಡಿರೋದು ಇವರೇ.
ವೆಬ್‌ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಾನಿಯಾ ಕೆಜಿಎಫ್ 2 ಸಿನಿಮಾದ ತನ್ನ ಡಿಸೈನ್‌ಗಳ ಬಗ್ಗೆ ಹೀಗಂತಾರೆ..'ಕೆಜಿಎಫ್ 2ನಲ್ಲಿ ಯಶ್ ಒಮ್ಮೆ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡರೆ, ಇನ್ನೊಮ್ಮೆ ಕ್ರಿಮಿನಲ್ ( Criminal) ಆಗಿ, ಮತ್ತೊಮ್ಮೆ ಅಮ್ಮನ ಆಸೆ ಈಡೇರಿಸುವ ಮಗನಾಗಿ ಕಾಣಿಸಿಕೊಳ್ಳುತ್ತಾರೆ. ಆ ಪಾತ್ರಗಳ ಧ್ವನಿಗೆ ಪೂರಕವಾಗಿ ನಾನು ಅವರ ಡ್ರೆಸ್ ಡಿಸೈನ್ ಮಾಡಬೇಕಿತ್ತು. ಇದಕ್ಕಾಗಿ ಸಾಕಷ್ಟು ರೀಸರ್ಚ್ ಮಾಡಿದ್ದೇನೆ, ಲುಕ್ ಟೆಸ್ಟ್‌ಗಳಾಗಿವೆ, ಕೆಜಿಎಫ್ 2ನ ಇಡೀ ಜರ್ನಿಯೇ ಅಮೇಜಿಂಗ್ ಅನ್ನೋ ಹಾಗಿತ್ತು. ಯಶ್ ನನ್ನ ಜೊತೆಗೆ ಒಬ್ಬ ಮೆಂಟರ್ ಥರ ಇದ್ದರು. ರಾಕಿ ಭಾಯ್ ( Rockey Bhai) ಪಾತ್ರ ಇವತ್ತು ಎಲ್ಲರ ಮನ ಗೆದ್ದಿದೆ. ಆದರೆ ಈ ರಾಕಿಭಾಯ್‌ಅನ್ನು ನಾನು ನನ್ನ ಕಾಸ್ಯೂಮ್‌ಗಳ ಮೂಲಕ ಮತ್ತಷ್ಟು ಭಿನ್ನವಾಗಿ, ಗಾಢವಾಗಿ ನೋಡಿದ್ದೇನೆ.'
IPL 2022: RCB ಪಂದ್ಯ ವೀಕ್ಷಿಸಿದ KGF 2 ಅಧೀರ ಮತ್ತು ರಮಿಕಾ ಸೇನ್; ಫೋಟೋ ವೈರಲ್
ತನ್ನ ಡೆಡಿಕೇಶನ್ ಮೂಲಕವೂ ಗಮನ ಸೆಳೆಯೋ ಈ ಸರಳ ಹೆಣ್ಮಗಳು ಕೆಜಿಎಫ್ 2ನ ಕಾಸ್ಯೂಮ್ ಮೂಲಕ ಇದೀಗ ಮುಂಬೈನ ಕಾಸ್ಯೂಮ್ ಡಿಸೈನರ್‌ಗಳೂ ಅಚ್ಚರಿ ಪಡುವಂತೆ ಮಾಡಿದ್ದಾರೆ. ಇಂಥಾ ಟ್ಯಾಲೆಂಟ್‌ಗೆ All the best.