Asianet Suvarna News Asianet Suvarna News

ಸ್ಟಾರ್‌ ನಾಯಕಿಯರೂ ಅಣ್ಣಯ್ಯನ ಹೆಂಡ್ತಿ ಮುಂದೆ ಬಿದ್ದೋದ್ರು: 54ರ ಹರೆಯದಲ್ಲೂ ಮಧು ಗ್ಲಾಮರ್‌ ಗೊಂಬೆಯೇ!

1990ರ ದಶಕದ ಸ್ಯಾಂಡಲ್‌ವುಡ್‌ ಬ್ಲಾಕ್‌ ಬಸ್ಟರ್‌ ಸಿನಿಮಾ ಅಣ್ಣಯ್ಯ ಚಲನಚಿತ್ರದ ನಾಯಕಿ ಮಧು ಶಾ ಅವರಿಗೆ ಈಗ 54 ವರ್ಷವಾಗಿದ್ದು, ಈಗಲೂ ಗ್ಲಾಮರ್‌ ಗೊಂಬೆಯಂತಿದ್ದಾರೆ.

Sandalwood Annayya heroine Madhoo Shah looks like glamor doll even though she is 54 years old sat
Author
First Published Oct 2, 2023, 7:23 PM IST | Last Updated Oct 2, 2023, 7:23 PM IST

ಬೆಂಗಳೂರು (ಅ.02): ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ಗೆ ಬಿಗ್‌ ಬ್ರೇಕ್‌ ನೀಡಿದ ಸಿನಿಮಾಗಳಲ್ಲಿ ಒಂದಾದ ಅಣ್ಣಯ್ಯ ಚಿತ್ರದ ನಾಯಕಿ ಮಧು ಶಾ 1990ರ ದಶಕದ ಬೇಡಿಕೆಯ ಹೀರೋಯಿನ್‌ ಆಗಿದ್ದರು. ಸಿನಿಮಾ ಕ್ಷೇತ್ರದಲ್ಲಿ ಈವರೆಗೆ ಸುಮಾರು 30 ವರ್ಷಗಳನ್ನು ಕಳೆದರೂ ಈಗಲೂ ಬಳುಕುವ ಬಳ್ಳಿಯಂತಿದ್ದಾರೆ. ಬಾಲಿವುಡ್‌, ಕಾಲಿವುಡ್‌, ಸ್ಯಾಂಡಲ್‌ವುಡ್‌ನ 18 ರಿಂದ 35 ವರ್ಷದೊಳಗಿನ ಎಲ್ಲ ಹೀರೋಯಿನ್‌ಗಳಿಗೆ ಸೆಡ್ಡು ಹೊಡೆದು ತಾನೇ ನಾಯಕಿ ಪಟ್ಟವನ್ನು ಅಲಂಕರಿಸುವಂತೆ 54 ವರ್ಷದ ಮಧು ಶಾ ಅವರು ಕಾಣಿಸುತ್ತಿದ್ದಾರೆ.

ಕನ್ನಡ ಸೂಪರ್‌ ಹಿಟ್‌ ಸಿನಿಮಾವಾದ ಅಣ್ಣಯ್ಯ ಸಿನಿಮಾದ ಹೀರೋಯಿನ್‌ ಮಧೂ ಶಾ ಅವರು ಈಗಲೂ ಯಾವ ಹೀರೋಯಿನ್‌ಗೂ ಸರಿಸಾಟಿ ಇಲ್ಲದಂತೆ ಗ್ಲಾಮರ್‌ ಹಾಗೂ ದೇಹ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ಈಗಲೂ ಬಳುಕುವ ಲತೆಯಂತೆ ಇರುವ ಅವರು ಮಾಡ್ರನ್‌ ತುಂಡುಡುಗೆಯಲ್ಲಿ ಮಿಂಚುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಕ್ಕಳೊಂದಿಗೆ ರೀಲ್ಸ್‌ ಮಾಡುತ್ತಾ ಶೇರ್‌ ಮಾಡುವ ಅವರು ಯಾವಾಗಲೂ ಆಕ್ಟಿವ್‌ ಆಗಿದ್ದಾರೆ. ಇನ್ನು ಮುಂಬೈನಲ್ಲಿ ಶಾಪಿಂಗ್‌ಗೆ ಆಗಮಿಸಿದ ಮಧು ಶಾ ಅವರು ಉಡುಗೆಗಳನ್ನು ನೋಡಿ ಯುವಕರೇ ಶಾಕ್‌ ಆಗಿದ್ದಾರೆ.

ಗುಂಡೇಟಿಗೆ ಬಲಿಯಾಗುವ ಭಯದಿಂದ್ಲೇ ಮನ್ಸೂರ್​ ಖಾನ್​ರನ್ನು ಮದ್ವೆಯಾದೆ: ಆ ಕರಾಳ ದಿನ ನೆನೆದ ಶರ್ಮಿಳಾ

ಕಳೆದ ಕೆಲವು ವರ್ಷಗಳಿಂದ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಇನ್ನು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಫ್ಯಾನ್‌ ಫಾಲೋಯಿಂಗ್‌ ಕೂಡ ಹೆಚ್ಚಾಗಿದೆ. ಮಧು ಸಿನಿಮಾದಲ್ಲಿ ನಟಿಸಿದ್ದಾರೆಂಬ ಕಾರಣಕ್ಕೇ ಹಲವರು ಸಿನಿಮಾ ನೋಡಲು ಬರುವ ಪ್ರೇಕ್ಷಕರ ವರ್ಗವಿದೆ. ಇನ್ನು ತಮ್ಮ ಇಬ್ಬರು ಮಕ್ಕಳೊಂದಿಗೆ ವಿವಿಧ ರೀಲ್ಸ್‌ ಮಾಡಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ಈಗ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಲವು ರೀಲ್ಸ್‌ ಸಂಬಂಧಿತ ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ. 

 

ಮಧುಬಾಲಾ ಎಂದೂ ಕರೆಯಲ್ಪಡುವ ಮಧು ಶಾ (ಜನ್ಮನಾಮ ಪದ್ಮಾ ಮಾಲಿನಿ) 1969ರಲ್ಲಿ ಜನಿಸಿದ್ದಾರೆ. ತಮ್ಮ 22ನೇ ವಯಸ್ಸಿಗೆ ಚಿತ್ರರಂಗದಲ್ಲಿ ನಾಯಕಿಯಾಗಿ ಕಾಲಿಟ್ಟ ಮಧು ಹಿಂದಿ , ತಮಿಳು , ತೆಲುಗು , ಮಲಯಾಳಂ ಮತ್ತು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 1990ರ ದಶಕದಲ್ಲಿ ಭಾರತೀಯ ಸಿನಿಮಾ ರಂಗದಲ್ಲಿ ಬೇಡಿಕೆಯ ನಟಿಯಾಗಿದ್ದರು. ಮಧು ಅವರು ಫೂಲ್ ಔರ್ ಕಾಂತೆ (1991), ರೋಜಾ (1992), ಅಲ್ಲರಿ ಪ್ರಿಯುಡು (1992), ಯೋಧಾ (1992), ಮತ್ತು ಜಂಟಲ್‌ಮ್ಯಾನ್ (1993) ಕನ್ನಡದ ಅಣ್ಣಯ್ಯ (1993) ಸೇರಿ ಅನೇಕ ಸಿನಿಮಾಗಳ ನಾಯಕಿಯಾಗಿದ್ದಾರೆ.

BIGGBOSS ಮನೆಗೆ ಹೋಗ್ತಿದ್ದಾರಾ 'ಜೊತೆಜೊತೆಯಲಿ' ಅನು ಸಿರಿಮನೆ? ನಟಿ ಹೇಳಿದ್ದೇನು?

ಇನ್ನು ತಮಿಳುನಾಡು ಮೂಲದವರಾದ ಮಧು ಜನ್ಮ ನಾಮ ಪದ್ಮಾ ಮಾಲಿನಿ ಆದರೆ ಆಕೆಯ ತಂದೆಯು ಶಾಲೆಗೆ ಪ್ರವೇಶಿಸಿದಾಗ ಆಕೆಯ ಹೆಸರನ್ನು ಮಧು ಮಾಲಿನಿ ಎಂದು ಬದಲಾಯಿಸಿದರು. ಅವರು ಜುಹುವಿನ ಸೇಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಮತ್ತು ಮುಂಬೈ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಇನ್ನು ಇವರು ನಟಿ ಹೇಮಾ ಮಾಲಿನಿಯ ಸೊಸೆಯಾಗಿದ್ದಾರೆ. 

 

Latest Videos
Follow Us:
Download App:
  • android
  • ios