Asianet Suvarna News Asianet Suvarna News

ರಮ್ಯಾ ಮತ್ತೆ ಪಾಲಿಟಿಕ್ಸ್, ಸಾಮಾಜಿಕ ವಿಚಾರಗಳಲ್ಲಿ ಆ್ಯಕ್ಟಿವ್, ಮತ್ತೆ ರಾಜಕೀಯಕ್ಕೆ ಬರ್ತಾರಾ?

ಚಿತ್ರರಂಗದ ವಿಚಾರದಲ್ಲಿ ಸಕ್ರಿಯವಾಗಿ ಇಲ್ಲದ ರಮ್ಯಾ, ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳು ಬಂದಾಗ ಚುರುಕಾಗಿ ಇನ್‌ಸ್ಟಗ್ರಾಮ್‌ನಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕಾಂಗ್ರೆಸ್ ಐಟಿ ಟೀಮ್‌ನಲ್ಲಿ ಮತ್ತೆ ಸಕ್ರಿಯವಾಗೋ ಆಸೆ ಅವರಿಗೆ ಇದೆಯೇ? 

Sandalwood actress Ramya becomes active in social issues and politics again
Author
Bengaluru, First Published Sep 3, 2021, 5:40 PM IST

ಒಂದಷ್ಟು ಕಾಲದಿಂದ ಸಿನಿಮಾದಲ್ಲೂ ಇಲ್ಲ, ರಾಜಕೀಯದಲ್ಲೂ ಇಲ್ಲ ಅಂತ ಸೈಲೆಂಟಾಗಿದ್ದ ರಮ್ಯಾ ಅವರು ಮತ್ತೆ ರಾಜಕೀಯದತ್ತ ತಮ್ಮ ದೃಷ್ಟಿ ಹರಿಸಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಅದಕ್ಕೆ ಕಾರಣ ಇನ್‌ಸ್ಟಗ್ರಾಮ್‌ನಲ್ಲಿ ಅವರ ಪ್ರತಿಕ್ರಿಯೆಗಳು. ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಪರಿಸರವಾದಿ ಡಿ.ವಿ.ಗಿರೀಶ್ ಮೇಲೆ ನಡೆದ ಹಲ್ಲೆಗೆ ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಅದನ್ನು ನೋಡುತ್ತಿದ್ದ ಆ ಹುಡುಗಿಯ ಮನಸ್ಥಿತಿಯ ಮೇಲೆ ಅದು ಯಾವ ದಾರುಣ ಪರಿಣಾಮ ಬೀರಿರಬಹುದು ಎಂದೂ ಪ್ರಶ್ನಿಸಿದ್ದಾರೆ.

''ಚಿಕ್ಕಮಗಳೂರಿನಲ್ಲಿ ಪರಿಸರವಾದಿ ಡಿವಿ ಗಿರೀಶ್ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ಆಗಿರುವ ವಿಚಾರ ಓದಿದೆ. ಇಡೀ ಘಟನೆಯನ್ನು ಆ ವಾಹನದಲ್ಲಿದ್ದ 17 ವರ್ಷದ ಬಾಲಕಿ ಅಸಹಾಯಕವಾಗಿ ನೋಡುತ್ತಿದ್ದಳು. ಇದು ಆಕೆಯ ಮನಸ್ಸಿನ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂದು ಒಮ್ಮೆ ಊಹಿಸಿಕೊಳ್ಳಿ. ಮಾನಸಿಕವಾಗಿ ಈ ಘಟನೆ ಎಷ್ಟು ಘಾಸಿಗೊಳಿಸಬಹುದು. ಆ ದುಷ್ಟರ ಬಂಧನ ಆಗಬೇಕು. ಒಬ್ಬರ ಮೇಲೆ ಇಷ್ಟು ಸುಲಭವಾಗಿ ಹಲ್ಲೆ ಮಾಡಬಹುದೇ? ಕಾನೂನಿನ ಭಯವಿಲ್ಲದಂತಾಗಿದೆ? ಮನುಷ್ಯರ ಮೇಲೆ ಗೌರವ ಇಲ್ಲವೇ''? ಎಂದು ನಟಿ ರಮ್ಯಾ ಚಿಕ್ಕಮಗಳೂರು ಘಟನೆ ಖಂಡಿಸಿದ್ದಾರೆ.
 

Sandalwood actress Ramya becomes active in social issues and politics again

ಚಿಕ್ಕಮಗಳೂರು ಜಿಲ್ಲೆಯ ಭದ್ರಾ ವನ್ಯಜೀವಿ ಅಭಯಾರಣ್ಯದ ಉಳಿವಿಗಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿರುವ ಖ್ಯಾತ ಪರಿಸರವಾದಿ ಡಿವಿ ಗಿರೀಶ್ ಹಾಗೂ ಸ್ನೇಹಿತರ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿತ್ತು. ಆಗಸ್ಟ್ 30ರಂದು ಡಿವಿ ಗಿರೀಶ್ ಅವರು ತಮ್ಮ ಜಿಪ್ಸಿಯಲ್ಲಿ ಕೆಮ್ಮಣ್ಣುಗುಂಡಿ ಸಮೀಪದ ಕಟ್ಟೆಹೊಳೆ ಎಸ್ಟೇಟ್‌ನಿಂದ ಗೆಳೆಯರೊಂದಿಗೆ ಹಿಂತಿರುಗುವ ವೇಳೆ ಸಂತವೇರಿ ತಿರುವಿನ ಸಮೀಪ ನಿಂತಿದ್ದ ಕೆಲವು ಯುವಕರು ವಾಹನದಲ್ಲಿದ್ದ ಬಾಲಕಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಈ ವೇಳೆ ವಾಹನ ನಿಲ್ಲಿಸಿದ ಡಿವಿ ಗಿರೀಶ್, ಹಾಗೆಲ್ಲ ಮಾತನಾಡಬಾರದು ಎಂದು ಯುವಕರಿಗೆ ಬುದ್ಧಿ ಹೇಳುವ ಪ್ರಯತ್ನ ನಡೆಸಿದರು. ಆ ಸ್ಥಳದಲ್ಲಿ ಸುಮ್ಮನಾದ ಯುವಕರು, ನಂತರ ಕಂಬಿಹಳ್ಳಿ ಸಮೀತ ಬೈಕ್‌ಗಳಲ್ಲಿ ಬಂದು ಗಿರೀಶ್ ಅವರ ಜಿಪ್ಸಿಯನ್ನು ಅಡ್ಡಗಟ್ಟಿ, ಗಿರೀಶ್ ಹಾಗೂ ಸ್ನೇಹಿತ ಕೀರ್ತಿ ಕುಮಾರ್ ಅವರ ಮೇಲೆ ಹಲ್ಲೆ ಮಾಡಿದರು. ವಾಹನದಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಎಳೆದಾಡಿದ್ದರು. ಹಲ್ಲೆ ಮಾಡಿದ ಯುವಕರ ಗುಂಪನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ತಾಲಿಬಾನ್‌ ಆಕ್ರಮಣ ಸಂಭ್ರಮಿಸಿದ ಭಾರತೀಯ ಮುಸ್ಲಿಮರಿಗೆ ಶಾ ತರಾಟೆ

ಈ ಹಿಂದೆ ಮೈಸೂರಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಕೂಡ ರಮ್ಯಾ ಖಂಡಿಸಿದ್ದರು. ತಮ್ಮ ಇನ್ಸ್ಟಾಗ್ರಾಂನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. "ನಾವು ಇದನ್ನ ಆಗಾಗ ಕೇಳುತ್ತಿರುತ್ತೇವೆ. ಇದು ನಿಮ್ಮದೇ ತಪ್ಪು, ನೀವು ಹಾಗೆ ಹೇಳಬಾರದಿತ್ತು, ನೀವು ಅದನ್ನು ಮಾಡಬಾರದಿತ್ತು, ನೀವು ಅದನ್ನು ಧರಿಸಬಾರದು, ತುಂಬಾ ಬಿಗಿಯಾಗಿರೋ, ತುಂಬಾ ಚಿಕ್ಕದಾಗಿರೋ, ತುಂಬಾ ಆಕರ್ಷಕವಾಗಿರೋ ಬಟ್ಟೆ ಹಾಕಬಾರದು, ನೀವು ತಡರಾತ್ರಿ ಹೊರಗೆ ಹೋಗಬಾರದು, ನಾವು ಮೇಕಪ್ ಹಾಕಬಾರದು, ಕೆಂಪು ಲಿಪ್ಸ್ಟಿಕ್ ಏಕೆ ಹಾಕುತ್ತೀರಿ, ನಾವು ಕಣ್ಣು ಮಿಟುಕಿಸಬಾರದಿತ್ತು, ನಿಮಗೆ ಅದಿರಬಾರದು, ಇದಿರಬಾರದು..ಯಾಕೆ? ನಾವು ಸ್ತ್ರೀಯರು ಎಲ್ಲದಕ್ಕೂ ರಾಜಿ ಮಾಡಿಕೊಳ್ಳಬೇಕು. ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು, ನಾವು ಸಹಿಸಿಕೊಳ್ಳಬೇಕು. ಈ ರೀತಿಯ ನಾನ್ಸೆಸ್ ಗಳಿಗೆ ಮೊದಲು ಕೊನೆಯಾಗಬೇಕು. ಮಹಿಳೆಯರ ವಿರುದ್ಧದ ಅಪರಾಧಗಳತ್ತಾ ಕಣ್ಣು ಮುಚ್ಚಿ ಕೂರಬೇಡಿ. ದಯವಿಟ್ಟು ಅದರ ಬಗ್ಗೆ ಮಾತನಾಡಿ" ಎಂದು ಆಗ್ರಹಿಸಿದ್ದರು.

ಮಂಗಳೂರು ಕನ್ನಡ ಕಲಿಯುತ್ತಿದ್ದೇನೆ; 'ಕಾಂತಾರ' ಚಿತ್ರದ ನಾಯಕಿ ಸಪ್ತಮಿ ಗೌಡ ಸಂದರ್ಶನ

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ನಟಿ ರಮ್ಯಾ ರಾಜ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್‌ನ ಸೋಶಿಯಲ್ ಮೀಡಿಯಾ ತಂಡದ ಸಾರಥ್ಯ ವಹಿಸಿದ್ದರು ರಾಹುಲ್ ಗಾಂಧಿ ಅವರ ಸಾಮಾಜಿಕ ಖಾತೆಗಳನ್ನು ಹ್ಯಾಂಡಲ್ ಮಾಡುತ್ತಿದ್ದರು. ಆದರೆ ನಿಧಾನವಾಗಿ ಅಲ್ಲಿಂದಲೂ ದೂರವಾಗಿದ್ದರು. ಆದರೆ ಇತ್ತೀಚೆಗೆ ರಾಹುಲ್ ಗಾಂಧಿ ಜನ್ಮದಿನಕ್ಕೆ ಮನಸ್ಫೂರ್ತಿಯಾಗಿ ಶುಭ ಹಾರೈಸಿದ್ದರು. ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗುವ ಆಸೆ ಅವರಿಗೆ ಇದೆ; ಆದರೆ ರಾಜ್ಯ ಕಾಂಗ್ರೆಸ್‌ನ ಚಟುವಟಿಕೆಗಳು ಅವರಿಂದ ತುಂಬ ದೂರ ಮುಂದುವರಿದಿವೆ. ರಾಜ್ಯ ರಾಜಕೀಯದಲ್ಲಿ ಅವರಿಗೆ ವಿಶೇಷವಾದ ಒಲವೇನೂ ಇಲ್ಲ. ರಾಷ್ಟ್ರ ರಾಜಕೀಯದಲ್ಲೂ ಅವರ ಜೊತೆ ಇದ್ದ ಟೀಮ್ ಈಗ ಇಲ್ಲ. ರಾಹುಲ್ ಗಾಂಧಿ ಅವರು ಹೊಸ ಟೀಮ್ ರಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

'ಪುಕ್ಸಟ್ಟೆಲೈಫ್‌' ನಲ್ಲಿ ಪುರುಸೊತ್ತಿಲ್ಲದಂತೆ ನಡೆದುಹೋದ ಸಂಚಾರಿ ವಿಜಯ್‌

 

Follow Us:
Download App:
  • android
  • ios