ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತರಾಮ್‌ ಭೇಟಿ ಮುಂಬರುವ ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ

ಸ್ಯಾಂಡಲ್‌ ವುಡ್‌ನ ಡಿಂಪಲ್‌ ಬೆಡಗಿ ರಚಿತಾರಾಮ್‌ ಅವರಿಂದು ಮಂಗಳೂರು ಹೊರವಲಯದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿತಳಕ್ಕೆ ಭೇಟಿ ನೀಡಿ ತಮ್ಮ ನಟನೆಯ ಹೊಸ ಚಿತ್ರಗಳಾದ ಮ್ಯಾಟ್ನಿ, ಬ್ಯಾಡ್‌ ಮ್ಯಾನರ್ಸ್‌ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು.

Sandalwood actress rachitaram visit kuttaru koragajja temple yesterday  ullala rav

ಉಳ್ಳಾಲ (ಜೂ.31) : ಸ್ಯಾಂಡಲ್‌ ವುಡ್‌ನ ಡಿಂಪಲ್‌ ಬೆಡಗಿ ರಚಿತಾರಾಮ್‌ ಅವರಿಂದು ಮಂಗಳೂರು ಹೊರವಲಯದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿತಳಕ್ಕೆ ಭೇಟಿ ನೀಡಿ ತಮ್ಮ ನಟನೆಯ ಹೊಸ ಚಿತ್ರಗಳಾದ ಮ್ಯಾಟ್ನಿ, ಬ್ಯಾಡ್‌ ಮ್ಯಾನರ್ಸ್‌ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರಣಿಕದ ಬಗ್ಗೆ ಹೇಳಿದ್ರು. ಹಾಗಾಗಿ ನನಗೂ ಇಲ್ಲಿಗೆ ಬರಬೇಕು ಅನ್ನಿಸಿತು ಬಂದ್ಬಿಟ್ಟೆ. ಕೊರಗಜ್ಜನ ಕ್ಷೇತ್ರವು ಪ್ರಾಕೃತಿಕ ಸೌಂದರ್ಯವನ್ನೊಳಗೊಂಡಿದ್ದು ತುಂಬಾ ಚೆನ್ನಾಗಿದೆ. ಮುಂದಿನ ಜೂನ್‌ ತಿಂಗಳಲ್ಲಿ ತೆರೆ ಕಾಣಲಿರುವ ಮ್ಯಾಟ್ನಿ ಮತ್ತು ಬ್ಯಾಡ್‌ ಮ್ಯಾನರ್ಸ್‌ ಚಿತ್ರಗಳು ಯಶಸ್ಸು ಕಾಣಲಿ ಎಂದು ಕೊರಗಜ್ಜನಲ್ಲಿ ಪ್ರಾರ್ಥಿಸಿದೆ ಎಂದು ರಚಿತಾರಾಮ್‌ ಹೇಳಿದರು.

ರಾಯರ ಹುಂಡಿಯಲ್ಲಿ ದಾಖಲೆ ₹3 ಕೋಟಿ 53 ಲಕ್ಷ ಕಾಣಿಕೆ ಸಂಗ್ರ​ಹ!

ಕೊರಗಜ್ಜನ ಆದಿ ಕ್ಷೇತ್ರದ ವತಿಯಿಂದ ರಚಿತಾ ರಾಮ್‌ ಅವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು.

ಎ.ಜೆ. ಆಸ್ಪತ್ರೆ ಮುಖ್ಯಸ್ಥರಾದ ಡಾ. ಪ್ರಶಾಂತ್‌ ಶೆಟ್ಟಿಮಾರ್ಲ, ಆಶ್ರಿತಾ ಶೆಟ್ಟಿ, ಹೊಟೇಲ್‌ ಫುಡ್‌ ಲ್ಯಾಂಡ್‌್ಸ ಮಾಲೀಕ ಆಶೀಶ್‌ ಶೆಟ್ಟಿ, ಮಾಗಣ್ತಡಿ ಫ್ಯಾಮಿಲಿ ಟ್ರಸ್ಟ… ಅಧ್ಯಕ್ಷ ಜಯರಾಮ್‌ ಭಂಡಾರಿ, ಟ್ರಸ್ಟಿಗಳಾದ ಮಹಾಬಲ್‌ ಹೆಗ್ಡೆ , ಪ್ರೀತಮ್‌ ಶೆಟ್ಟಿ, ಮಾಗಣ್ತಡಿ ಕುಟುಂಬದ ಜಗನ್ನಾಥ್‌ ಶೆಟ್ಟಿ, ಸ್ವಾತಿ ಶೆಟ್ಟಿಮೊದಲಾದವರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios