Asianet Suvarna News Asianet Suvarna News

ರಾಯರ ಹುಂಡಿಯಲ್ಲಿ ದಾಖಲೆ ₹3 ಕೋಟಿ 53 ಲಕ್ಷ ಕಾಣಿಕೆ ಸಂಗ್ರ​ಹ!

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠ​ದ​ಲ್ಲಿ​ರುವ ಹುಂಡಿಯಲ್ಲಿ ರು.3 ಕೋಟಿ 53 ಲಕ್ಷ ದಾಖಲೆ ಮೊತ್ತದ ಕಾಣಿಗೆ ಸಂಗ್ರ​ಹ​ಗೊಂಡಿದ್ದು, ಶ್ರೀಮ​ಠದ ಇತಿ​ಹಾ​ಸ​ದ​ಲ್ಲಿಯೇ ಹುಂಡಿ​ಯಲ್ಲಿ ಇಷ್ಟೊಂದು ಮೊತ್ತದ ಕಾಣಿಗೆ ಸಂಗ್ರಹ​ವಾ​ಗಿದೆ.

Mantralaya shri guru raghavendram temple hundi collection 3 crore 53 lakhs in 32 days rav
Author
First Published Jun 1, 2023, 8:32 AM IST

ರಾಯಚೂರು (ಜೂ.1) : ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠ​ದ​ಲ್ಲಿ​ರುವ ಹುಂಡಿಯಲ್ಲಿ ರು.3 ಕೋಟಿ 53 ಲಕ್ಷ ದಾಖಲೆ ಮೊತ್ತದ ಕಾಣಿಗೆ ಸಂಗ್ರ​ಹ​ಗೊಂಡಿದ್ದು, ಶ್ರೀಮ​ಠದ ಇತಿ​ಹಾ​ಸ​ದ​ಲ್ಲಿಯೇ ಹುಂಡಿ​ಯಲ್ಲಿ ಇಷ್ಟೊಂದು ಮೊತ್ತದ ಕಾಣಿಗೆ ಸಂಗ್ರಹ​ವಾ​ಗಿದೆ.

ಶ್ರೀಮ​ಠ​ದಲ್ಲಿ ಪ್ರತಿ ತಿಂಗ​ಳಿ​ನಂತೆ ಮೇ ತಿಂಗಳು ಸೇರಿ 34 ದಿನ​ಗ​ಳಲ್ಲಿ ರಾಯರ ಮಠಕ್ಕೆ ಭಕ್ತಸಾಗರವೇ ಹರಿದುಬಂದಿದೆ. ಎಪ್ರಿಲ್- ಮೇ ತಿಂಗಳಲ್ಲಿ ಹೆಚ್ಚಿದ ಭಕ್ತರು ರಾಯರ ದರ್ಶನ ಪಡೆದಿದ್ದಾರೆ. ಬೇರೆ-ಬೇರೆ ರಾಜ್ಯಗಳಿಂದ  ರಾಯರ ದರ್ಶನಕ್ಕೆ ಬಂದಿರುವ ಭಕ್ತರು.

 ಭಕ್ತರು, ದಾನಿ​ಗಳು ಹುಂಡಿ​ಯಲ್ಲಿ ಹಾಕಿದ್ದ ದೇಣಿ​ಗೆ​ಯನ್ನು ಶ್ರೀಮ​ಠದ ಸಿಬ್ಬಂದಿ, ಸೇವಕರು, ನೂರಾರು ಭಕ್ತರು ನಡೆ​ಸಿದ ಎಣಿಕೆ ಕಾರ್ಯದಲ್ಲಿ ರು.3,46,20,432 ಮೌಲ್ಯದ ನೋಟುಗಳು, ರು.7,59,420 ಮೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು ರು.3,53,79,852 ರುಪಾಯಿಗಳು ಹುಂಡಿಯಲ್ಲಿ ಸಂಗ್ರಹವಾಗಿದೆ. ಇದರ ಜೊತೆಗೆ 197 ಗ್ರಾಂ. ಚಿನ್ನ, 1 ಕೆ.ಜಿ. 187 ಗ್ರಾಂ. ಬೆಳ್ಳಿಯನ್ನು ಭಕ್ತರು ಹುಂಡಿ​ಯಲ್ಲಿ ಹಾಕಿ​ದ್ದಾರೆ ಎಂದು ಶ್ರೀಮಠದ ಪ್ರಕ​ಟ​ಣೆ ತಿಳಿಸಿದೆ.
ಮಲೆ ಮಹದೇಶ್ವರ ಹುಂಡಿ ಎಣಿಕೆ : ಒಂದೇ ತಿಂಗಳಲ್ಲಿ 2.53 ಕೋಟಿ ರು.ಸಂಗ್ರಹ!

Follow Us:
Download App:
  • android
  • ios