ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಸದ್ಯ ವಿಕ್ರಾಂತ್ ರೋಣ(Vikrant Rona) ಸಿನಿಮಾ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಈ ನಡುವೆಯೂ ಸುದೀಪ್ ಕನ್ನಡದ ಸಿನಿಮಾಗಳನ್ನು ವೀಕ್ಷಿಸಿ ವಿಮರ್ಶೆ ಮಾಡುತ್ತಿದ್ದಾರೆ. ಇದೀಗ ಸುದೀಪ್ ಡಾಲಿ ಧನಂಜಯ್ ನಟನೆಯ 21ಅವರ್ಸ್(21 Hours) ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹೌದು, ಧನಂಜಯ್(Dhananjay) ನಟನೆಯ 21ಅವರ್ಸ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ರಿಲೀಸ್‌ಗೂ ಮೊದಲೇ ಸಿನಿಮಾತಂಡ ಸುದೀಪ್ ಅವರಿಗೆ ಚಿತ್ರ ತೋರಿಸಿದ್ದಾರೆ. ಕಿಚ್ಚ ಸುದೀಪ್ ಸಿನಿಮಾ ನೋಡಿ ಸಂತಸ ಪಟ್ಟಿದ್ದಾರೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಸದ್ಯ ವಿಕ್ರಾಂತ್ ರೋಣ(Vikrant Rona) ಸಿನಿಮಾ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಈ ನಡುವೆಯೂ ಸುದೀಪ್ ಕನ್ನಡದ ಸಿನಿಮಾಗಳನ್ನು ವೀಕ್ಷಿಸಿ ವಿಮರ್ಶೆ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಕಿಚ್ಚ ರಿಷಬ್ ಶೆಟ್ಟಿ ನಟನೆಯ ಗರುಡ ಗಮನ ವೃಷಬ ವಾಹನ ಸಿನಿಮಾ ನೋಡಿ ದೀರ್ಘವಾದ ವಿಮರ್ಶೆ ಮಾಡಿದ್ದರು. ರಿಷಬ್ ಮತ್ತು ರಾಜ್ ಬಿ ಶೆಟ್ಟಿ ಅವರನ್ನು ಹಾಡಿ ಹೊಗಳಿದ್ದರು. ಇದೀಗ ಸುದೀಪ್ ಡಾಲಿ ಧನಂಜಯ್ ನಟನೆಯ 21ಅವರ್ಸ್(21 Hours) ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹೌದು, ಧನಂಜಯ್(Dhananjay) ನಟನೆಯ 21ಅವರ್ಸ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ರಿಲೀಸ್‌ಗೂ ಮೊದಲೇ ಸಿನಿಮಾತಂಡ ಸುದೀಪ್ ಅವರಿಗೆ ಚಿತ್ರ ತೋರಿಸಿದ್ದಾರೆ. ಕಿಚ್ಚ ಸುದೀಪ್ ಸಿನಿಮಾ ನೋಡಿ ಸಂತಸ ಪಟ್ಟಿದ್ದಾರೆ.

ಅಂದಹಾಗೆ ಸುದೀಪ್ ಸಿನಿಮಾ ವೀಕ್ಷಿಸಿ ಧನಂಜಯ್ ಮತ್ತು ತಂಡಕ್ಕೆ ರುಚಿಯಾದ ಅಡುಗೆ ಮಾಡಿ ಬಡಿಸಿದ್ದಾರೆ. ಸುದೀಪ್ ಕೈರುಚಿಗೆ ಧನಂಜಯ್ ಫಿದಾ ಆಗಿದ್ದಾರೆ. ಸುದೀಪ್, ಡಾಲಿಗೆ ಅಡುಗೆ ಮಾಡಿ ಬಡಿಸಿದ್ದು ಇದೇ ಮೊದಲಲ್ಲ. ಈ ಮೊದಲು ಸುದೀಪ್ ಧನಂಜಯ್ ಮತ್ತು ಸ್ನೇಹಿತರನ್ನು ಮನೆಗೆ ಕರೆದು ವಿಶೇಷ ಆತಿಥ್ಯ ನೀಡಿದ್ದರು. ಇದೀಗ ಎರಡನೇ ಬಾರಿ ಕಿಚ್ಚನ ಕೈ ರುಚಿ ಸವಿಯುತ್ತಿದ್ದಾರೆ. ಧನಂಜಯ್ ನಟನೆಯ 21 ಅವರ್ಸ್ ಸಿನಿಮಾ ನೋಡಿ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡಿದ್ದಾರೆ. ಇನ್ನು ಧನಂಜಯ್ ಕೂಡ ಸುದೀಪ್ ಆತಿಥ್ಯದ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

'ತಬ್ಬಿ ಬರಮಾಡಿಕೊಂಡು, ತುಂಬು ಪ್ರೀತಿಯಿಂದ ಇಡಿ ತಂಡಕ್ಕೆ ಕೈಯಾರೆ ದೋಸೆ ಮಾಡಿಕೊಟ್ಟು, #21hours ಸಿನಿಮಾ ನೋಡಿ, ಪ್ರಾಮಾಣಿಕವಾಗಿ ಅನಿಸಿದ್ದೆಲ್ಲವನ್ನು ಹೇಳಿ, ಒಳ್ಳೆಯದನ್ನೆ ಹಾರೈಸಿ ಬೀಳ್ಕೊಟ್ಟ ನಿಮ್ಮ ಆತಿಥ್ಯಕ್ಕೆ ಇಡಿ ತಂಡ ಆಭಾರಿ' ಎಂದು ಹೇಳಿದ್ದಾರೆ.

Scroll to load tweet…

Vikrant Rona ಸಿನಿಮಾದಿಂದ ಹೊರಬಿತ್ತು ಬಿಗ್ ಅಪ್‌ಡೇಟ್; ಕಿಚ್ಚನ ಸಿನಿಮಾಗೆ ಸಲ್ಮಾನ್ ಸಾಥ್

ಇನ್ನು ಸುದೀಪ್ ಪ್ರತಿಕ್ರಿಯೆ ನೀಡಿ, '21 ಅವರ್ಸ್ ಅದ್ಭುತವಾದ ಪ್ಲಾಟ್ ಹೊಂದಿದೆ. ತುಂಬಾ ಸುಂದರವಾಗಿ ಮಾಡಿದ್ದೀರಿ. ಬ್ಯಾಗ್ರೌಂಡ್ ಸ್ಕ್ರೋರ್ ಅದ್ಭುತವಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ' ಎಂದು ಸುದೀಪ್ ಹಾರೈಸಿದ್ದಾರೆ. ಸುದೀಪ್ ಚಿತ್ರರಂಗದ ಅನೇಕ ಕಲಾವಿದರ ಜೊತೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಧನಂಜಯ್ ಜೊತೆಯೂ ಸ್ನೇಹದಿಂದ ಇದ್ದಾರೆ. ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ 21 ಅವರ್ಸ್ ಸಿನಿಮಾ ಬಿಡುಗಡೆ ತಯಾರಿಯಲ್ಲಿದ್ದಾರೆ. ಸುದೀಪ್ ವಿಕ್ರಾಂತ್ ರೋಣಗಾಗಿ ಕಾಯುತ್ತಿದ್ದಾರೆ.

Scroll to load tweet…


KGF 2 ಆಯ್ತು ಈಗ ವಿಕ್ರಾಂತ್ ರೋಣ; ಬಾಕ್ಸ್ ಆಫೀಸ್ ಆಳೋಕೆ ಸಜ್ಜಾದ ಸುದೀಪ್

ಈಗಾಗಲೇ ವಿಕ್ರಾಂತ್ ರೋಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪ್ಯಾನ್ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ವಿಕ್ರಾಂತ್ ರೋಣನಿಗೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಸಾಥ್ ನೀಡಿದ್ದಾರೆ. ಹಿಂದಿಯಲ್ಲಿ ಪ್ರೆಸೆಂಟ್ ಮಾಡಲು ಸಲ್ಮಾನ್ ಖಾನ್ ಮುಂದೆ ಬಂದಿದ್ದು ಚಿತ್ರಕ್ಕೆ ಮತ್ತಷ್ಟು ಬಲಬಂದಂತೆ ಆಗಿದೆ.