ಬಣ್ಣದ ಲೋಕದಲ್ಲಿ ಯಶಸ್ಸು ಸಾಧಿಸಿದ ನಂತರ ಸಿನಿಮಾದರಂಗದಿಂದ ದೂರ ಸರಿದ ಬಗ್ಗೆ ನಟಿ ಸನಾ ಖಾನ್ ಮನಬಿಚ್ಚಿ ಮಾತನಾಡಿದ್ದಾರೆ. ಖಿನ್ನತೆಗೆ ಒಳಗಾಗಿದ್ದು, ತನ್ನ ಜೀವ ಶೈಲಿ ಬದಲಾಯಿಸಿಕೊಂಡ ಬಗ್ಗೆ ಬಹಿರಂಗ ಪಡಿಸಿದ್ದಾರೆ. 

'ಜೈ ಹೋ' ಖ್ಯಾತಿಯ ನಟಿ ಸನಾ ಖಾನ್ ಧರ್ಮದ ಕಾರಣಕ್ಕೆ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಬಣ್ಣದ ಲೋಕದಿಂದ ದೂರಾದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಿನಿಮಾರಂಗಕ್ಕೆ ಗುಡ್ ಬೈ ಹೇಳುವುದಾಗಿ ಹೇಳಿ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದ ನಟಿ ಮನರಂಜನಾ ಕ್ಷೇತ್ರಕ್ಕೆ ವಿದಾಯ ಹೇಳಿ ಧರ್ಮದ ಸೇವೆ ಮಾಡುವುದಾಗಿ ಹೇಳಿದ್ದರು. ನಟಿ ಸನಾ ಖಾನ್ ಸಿನಿಮಾ ಮತ್ತು ಕಿರುತೆರೆ ಜೊತೆಗೆ ಬಿಗ್ ಬಾಸ್ ನಲ್ಲಿಯೂ ಕಾಣಿಸಿಕೊಂಡು ಸಾಕಷ್ಟು ಜನಪ್ರಿಯಗಳಿಸಿದ್ದರು.

2020ರಲ್ಲಿ ಸನಾ ಖಾನ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಅನಾಸ್ ಸೈಯದ್ ಜೊತೆ ವೈವಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಸನಾ ಖಾನ್ ತಾನು ತೆಗೆದುಕೊಂಡ ನಿರ್ಧಾರದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಬಣ್ಣದ ಲೋಕದಲ್ಲಿ ಯಶಸ್ಸು ಸಾಧಿಸಿದ ನಂತರ ಸಿನಿಮಾದರಂಗದಿಂದ ದೂರ ಸರಿದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಖಿನ್ನತೆಗೆ ಒಳಗಾಗಿದ್ದು, ತನ್ನ ಜೀವನ ಶೈಲಿ ಬದಲಾಯಿಸಿಕೊಂಡ ಬಗ್ಗೆ ಬಹಿರಂಗ ಪಡಿಸಿದ್ದಾರೆ. 

ವಿಡಿಯೋದಲ್ಲಿ ನಟಿ ಸನಾ ಖಾನ್ ಕಪ್ಪು ಬುರ್ಕಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೈಗೆ ಗೋರಂಟಿ ಹಾಕಿದ್ದಾರೆ. 'ನನ್ನ ಹಳೆಯ ಜೀವನದಲ್ಲಿ ಸಹಜವಾಗಿ ನೇಮ್, ಫೇಮ್, ಹಣ ಎಲ್ಲವೂ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೀಗ ಎಲ್ಲಾ ಮಿಸ್ ಆಗಿದೆ, ಆದರೆ ಶಾಂತಿ ಇದೆ. ನಾನು ಎಲ್ಲವನ್ನೂ ಹೊಂದಿದ್ದೇನೆ ಆದರೆ ನಾನು ಏಕೆ ಸಂತೋಷವಾಗಿಲ್ಲ? ಎಂದು ಯೋಚಿಸುತ್ತಿದ್ದೆ. ತುಂಬಾ ಕಠಿಣವಾಗಿತ್ತು ಮತ್ತು ಖಿನ್ನತೆಯಿಂದ ಬಳಲುತ್ತಿದೆ. ಅಲ್ಲಾನ ಸಂದೇಶದ ದಿನಗಳು ಅವನ ಚಿಹ್ನೆಗಳ ಮೂಲಕ ನಾನು ನೋಡಬಹುದು.

ತನ್ನ ಜೀವನ ಬದಲಾಯಿಸಿದ ವರ್ಷದ ಬಗ್ಗೆ ಮಾತನಾಡಿದ ಸನಾ ಖಾನ್, '2019 ರಲ್ಲಿ ನನಗೆ ಇನ್ನೂ ನೆನಪಿದೆ, ರಂಜಾನ್ ಸಮಯದಲ್ಲಿ, ನನ್ನ ಕನಸಿನಲ್ಲಿ ನಾನು ಸಮಾಧಿಯನ್ನು ನೋಡುತ್ತಿದ್ದೆ. ನಾನು ಸುಡುವ, ಉರಿಯುತ್ತಿರುವ ಸಮಾಧಿಯನ್ನು ನೋಡುತ್ತೇನೆ ಮತ್ತು ನಾನು ಸಮಾಧಿಯಲ್ಲಿ ನನ್ನನ್ನು ನೋಡುತ್ತಿದ್ದೆ. ನಾನು ಖಾಲಿ ಸಮಾಧಿಯನ್ನು ನೋಡಲಿಲ್ಲ, ನನ್ನನ್ನೇ ನಾನು ನೋಡಿಕೊಳ್ಳುತ್ತಿದೆ. ಅದು ನನಗೆ ದೇವರ ಸೂಚನೆಯಾಗಿತ್ತು. ಬದಲಾಗದಿದ್ದರೆ ನನ್ನ ಅಂತ್ಯ ಹೀಗೆ ಇರುತ್ತದೆ ಎಂದು ದೇವರು ನನಗೆ ನೀಡುತ್ತಿರುವ ಸಂಕೇತವಾಗಿತ್ತು ಎಂದು ನಾನು ಭಾವಿಸಿದೆ. ಅದು ನನಗೆ ಸ್ವಲ್ಪ ಆತಂಕವನ್ನುಂಟು ಮಾಡಿತು. ಆಗುತ್ತಿದ್ದ ಬದಲಾವಣೆಗಳು ನನಗೆ ಇನ್ನೂ ನೆನಪಿದೆ. ನಾನು ಎಲ್ಲಾ ಸ್ಫೂರ್ತಿದಾಯಿಕ ಇಸ್ಲಾಮಿಕ್ ಭಾಷಣಗಳನ್ನು ಕೇಳುತ್ತೇನೆ. ಮತ್ತು ಒಂದು ರಾತ್ರಿ ನಾನು ತುಂಬಾ ಸುಂದರವಾದದ್ದನ್ನು ಓದಿದ್ದೇನೆ' ಎಂದರು.

ಮಾಲ್ಡೀವ್ಸ್‌ನಲ್ಲಿ ಸನಾ ಖಾನ್: ಮಾಜಿ ನಟಿಯ ಬೀಚ್ ವೈಬ್ಸ್ ಹೀಗಿದೆ

    'ನಿನ್ನ ಕೊನೆಯ ದಿನವು ಹಿಜಾಬ್ ಧರಿಸಿದ ಮೊದಲ ದಿನವಾಗಿರಲು ನೀವು ಬಯಸುತ್ತೀರಾ ಎಂದು ಸಂದೇಶವು ಹೇಳಿದೆ. ಅದು ನನ್ನನ್ನು ತುಂಬಾ ಆಳವಾಗಿ ಸ್ಪರ್ಶಿಸಿದ ವಿಷಯ' ಎಂದರು.

    ಹಿಜಾಬ್ ಧರಿಸಿದ್ದಕ್ಕೆ ಟ್ರೋಲ್: ಖಡಕ್ ಉತ್ತರ ಕೊಟ್ಟ ಸನಾ ಖಾನ್

    ಜೀವನದಲ್ಲಿ ಶಾಶ್ವತವಾಗಿ ಹಿಜಾಬ್ ಧರಿಸುವುದಾಗಿ ಭರವಸೆ ನೀಡಿರುವ ಸನಾ, 'ಮರುದಿನ ಬೆಳಿಗ್ಗೆ ನಾನು ಎದ್ದದ್ದು ನನಗೆ ನೆನಪಿದೆ ಮತ್ತು ಅದು ನನ್ನ ಜನ್ಮದಿನವಾಗಿತ್ತು. ನಾನು ಮೊದಲು ಸಾಕಷ್ಟು ಸ್ಕಾರ್ಫ್‌ಗಳನ್ನು ಖರೀದಿಸಿದ್ದೆ. ನಾನು ಕ್ಯಾಪ್ ಅನ್ನು ಒಳಗೆ ಹಾಕಿದೆ, ಸ್ಕಾರ್ಫ್ ಅನ್ನು ಧರಿಸಿದೆ ಮತ್ತು ನಾನು ಇದನ್ನು ಇನ್ನೆಂದಿಗೂ ತೆಗೆಯುವುದಿಲ್ಲ ಎಂದು ಹೇಳಿಕೊಂಡೆ' ಎಂದರು. ಬದಲಾದ ವ್ಯಕ್ತಿಯಾಗಿ ಪತಿ ಅನಾಸ್ ಸೈಯದ್ ಜೊತೆ ಧಾರ್ಮಿಕ ಪ್ರವಾಸಕ್ಕೆ ಹೋಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ನಟಿ, 'ಈಗ ನಾನು ಬದಲಾಗಿದ್ದೇನೆ, ನಾನು ಹಿಂತಿರುಗುವುದಿಲ್ಲ ಮತ್ತು ನನ್ನ ಹಿಜಾಬ್ ತೆಗೆಯಲ್ಲ, ನನಗೆ ಸಂತೋಷವಾಗಿದೆ' ಎಂದರು.