ಮುಟ್ಟು ನಿಲ್ಲುವ ಮೊದಲೇ ಗರ್ಭಿಣಿ ಹೌದೋ, ಅಲ್ವೋ ತಿಳಿದುಕೊಳ್ಳೋ 9 ಲಕ್ಷಣಗಳಿವು: ವೈದ್ಯೆಯಿಂದ ಮಾಹಿತಿ
ಮುಟ್ಟು ನಿಲ್ಲುವ ಮೊದಲೇ ಗರ್ಭಿಣಿ ಹೌದೋ, ಅಲ್ವೋ ತಿಳಿದುಕೊಳ್ಳಬಹುದಾಗಿದ್ದು, ಆ 9 ಲಕ್ಷಣಗಳಾವುವು? ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ...
ಗರ್ಭಿಣಿ ಎಂದು ಮಹಿಳೆಯರಿಗೆ ತಿಳಿಯುವುದು ಮುಟ್ಟು ನಿಂತ ಸಂದರ್ಭದಲ್ಲಿ. ಪ್ರತಿ ತಿಂಗಳೂ ಸರಿಯಾದ ರೀತಿಯಲ್ಲಿ ಮುಟ್ಟಾಗುತ್ತಿದ್ದರೆ, ಒಂದೇ ತಿಂಗಳಿನಲ್ಲಿ ಗರ್ಭಿಣಿ ಇರಬಹುದಾ ಎನ್ನುವ ಅನುಮಾನ ಶುರುವಾಗುತ್ತದೆ. 2-3 ತಿಂಗಳು ಮುಟ್ಟು ನಿಂತರೆ ಅದು ಕನ್ಫರ್ಮ್ ಆಗುತ್ತದೆ. ಮತ್ತೆ ಕೆಲವು ಮಹಿಳೆಯರಿಗೆ ಪ್ರತಿ ತಿಂಗಳೂ ಮುಟ್ಟು ಸರಿಯಾದ ರೀತಿಯಲ್ಲಿ ಆಗುತ್ತಿರುವುದಿಲ್ಲ. ಅಂಥವರಿಗೂ ಸಾಮಾನ್ಯವಾಗಿ 2-3 ತಿಂಗಳಿನಲ್ಲಿಯೇ ತಿಳಿಯುತ್ತದೆ. ಆದರೆ ಮುಟ್ಟು ನಿಲ್ಲುವ ಮೊದಲೇ ಗರ್ಭಿಣಿಯಾಗಿರಬಹುದಾ ಎನ್ನುವುದು ತಿಳಿದುಕೊಳ್ಳಲಾಗದೇ ಕೆಲವರು ಪೇಚಿಗೆ ಸಿಲುಕುವ ಸಂದರ್ಭಗಳೂ ಬರುತ್ತವೆ. ಕೆಲವರಿಗೆ ಬೇಗನೇ ಗರ್ಭ ಧರಿಸುವ ಇಚ್ಛೆ ಇರುವುದಿಲ್ಲ, ಮತ್ತೆ ಎರಡನೆಯ ಮಗುವಿನ ಸಮಯದಲ್ಲಿ ಗ್ಯಾಪ್ ಇರಬೇಕು ಎನ್ನಿಸುತ್ತದೆ. ಮತ್ತೆ ಕೆಲವರು ಈ ತಿಂಗಳಾದರೂ ನಾನು ಪ್ರೆಗ್ನೆಂಟ್ ಆಗಬಹುದಾ ಎನ್ನುವ ಆಸೆಯಲ್ಲಿ ಇರುತ್ತಾರೆ. ಇಂಥವರು ಅರ್ಲಿ ಪ್ರೆಗ್ನೆನ್ಸಿ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
ಮುಟ್ಟಾಗಿ ನಾಲ್ಕನೇ ದಿನವಾದ ಬಳಿಕ ಕನಿಷ್ಠ ಮೂರು ವಾರ ಆದ ಮೇಲೆ, ನೀವು ಗರ್ಭಿಣಿ ಹೌದೋ ಅಲ್ಲವೋ ಎಂದು ತಿಳಿದುಕೊಳ್ಳಲು ದೇಹದಲ್ಲಿ 9 ರೀತಿಯ ಬದಲಾವಣೆಗಳು ಆಗುತ್ತವೆ ಎನ್ನುತ್ತಾರೆ ವೈದ್ಯರು. ಈ ಕುರಿತು ಡಾ,ಮಾನಸಾ ಮತ್ತು ಡಾ. ನೃತ್ಯಾ ಎನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ಅರ್ಲಿ ಪ್ರೆಗ್ನೆನ್ಸಿ ಟೆಸ್ಟ್ ಬಗ್ಗೆ ವಿವರಿಸಲಾಗಿದೆ. (Early pregnancy symptoms before missing the periods). ಇದರಲ್ಲಿ ವೈದ್ಯೆ ಏನು ಹೇಳಿದ್ದಾರೆ ಎನ್ನುವ ಡಿಟೇಲ್ಸ್ ಇಲ್ಲಿದೆ...
ಪನೀರ್ ಎಂದು ಪ್ರಾಣಕ್ಕೆ ಕುತ್ತಾಗ್ತಿರೋ ವಿಷ ಸೇವಿಸ್ತಾ ಇದ್ದೀರಾ? ನಕಲಿ ಕಂಡುಹಿಡಿಯೋ ಸುಲಭದ ಉಪಾಯ ಹೀಗಿದೆ..
- ಮೊದಲನೆಯದ್ದಾಗಿ ಸ್ತನಗಳಲ್ಲಿ ಬದಲಾವಣೆ ಆಗುತ್ತದೆ. ಸ್ತನಗಳನ್ನು ಜಸ್ಟ್ ಮುಟ್ಟಿದರೂ ಅಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಅದು ಭಾರವಾಗಿದ್ದಂತೆ ಕಾಣಿಸುತ್ತದೆ ಅಥವಾ ಸ್ವಲ್ಪ ಊದಿಕೊಂಡಿರುವ ರೀತಿಯಲ್ಲಿ ಭಾಸವಾಗುತ್ತದೆ. ನಿಪ್ಪಲ್ ಸುತ್ತಲೂ ಚುಕ್ಕೆ ಅಥವಾ ಪಿಂಪಲ್ ರೀತಿ ಕಾಣಿಸಿಕೊಳ್ಳುತ್ತದೆ. ಇದು ತಾಯಿ ಸ್ತನ್ಯಪಾನ್ಯ ಮಾಡಲು ರೆಡಿ ಆಗುವ ಲಕ್ಷಣ ಇದಾಗಿರುತ್ತದೆ. ಬಾಯಿಯಲ್ಲಿ ಸಲೈವಾ ಅಂದರೆ ಜೊಲ್ಲು ಉತ್ಪಾದನೆ ಹೆಚ್ಚಾಗುತ್ತದೆ. ಕೆಲವೊಬ್ಬರಿಗೆ ಕಹಿ ಕಹಿ ಅನ್ನಿಸಲು ಶುರುವಾಗುತ್ತದೆ. ಕೆಲವರಿಗೆ ಯಾವುದಾದರೂ ಒಂದು ಟೇಸ್ಟ್ ಅಗತ್ಯಕ್ಕಿಂತ ಹೆಚ್ಚಿಗೆ ಗಾಢ ಎನಿಸಬಹುದು. ಉದಾಹರಣೆಗೆ ಮಾವಿನಕಾಯಿ ಚಿತ್ರಾನ್ನ ಮಾಡಿದ್ದರೆ, ಬೇರೆಯವರಿಗೆ ಅದು ಅಷ್ಟು ಹುಳಿ ಅನ್ನಿಸಿರಲಾರದು, ಆದರೆ, ಪ್ರೆಗ್ನೆಂಟ್ ಆದವರಿಗೆ ಅವರಿಗಿಂತಲೂ ಹೆಚ್ಚು ಹುಳಿ ಎನ್ನಿಸಬಹುದು.
ಹೊಟ್ಟೆ ಉಬ್ಬಿದ ಹಾಗೆ, ಅಜೀರ್ಣ ಆದಂತೆ ಆಗಬಹುದು. ಮಲ ವಿಸರ್ಜನೆ 2-3 ದಿನಗಳಿಗೆ ಒಮ್ಮೆ ಆಗಬಹುದು ಇಲ್ಲವೇ ಗಟ್ಟಿಯಾದ ಮಲ ವಿಸರ್ಜನೆ ಆಗಬಹುದು. ಕೆಲವೊಬ್ಬರಿಗೆ ವಾಂತಿ ಬರಲು ಶುರುವಾಗುತ್ತದೆ. ಯಾವುದಾದರೂ ಸ್ಮೆಲ್ ಕಂಡ ತಕ್ಷಣ ಮೊದಲಿಗೆ ಆಗದ ರೀತಿಯಲ್ಲಿ ವಾಕರಿಕೆ ಬರಬಹುದು. ಒಗ್ಗರಣೆ, ಪರ್ಫ್ಯೂಮ್ ಇತ್ಯಾದಿ. ಹೆಚ್ಚು ಆಯಾಸವಾಗುತ್ತದೆ. ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದು, ತಲೆ ಸುತ್ತುವ ಲಕ್ಷಣಗಳೂ ಕಾಣಬಹುದು. ಕೆಲವೊಮ್ಮೆ ಹಿಬ್ಬೊಟ್ಟೆ ನೋವು, ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಗರ್ಭ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಅದಕ್ಕೆ ಸಹಾಯ ಮಾಡಲು ಸೊಂಟ ಸ್ಟ್ರೆಚ್ ಆಗುವ ಕಾರಣ ಹೀಗಾಗುತ್ತದೆ. ಕೆಲವೊಬ್ಬರಿಗೆ ಒಂದೆರಡು ದಿನ ಹನಿ ಹನಿ ಬ್ಲಡ್ ಕಾಣಿಸಿಕೊಳ್ಳಬಹುದು. ಇದು ಪಿರಿಯಡ್ಸ್ ಅಂತ ಕನ್ಫ್ಯೂಸ್ ಮಾಡಿಕೊಳ್ಳುತ್ತಾರೆ. ಆದರೆ ಇದು ಸ್ವಲ್ಪ ಸ್ವಲ್ಪ ಬರುತ್ತೆ ಅಷ್ಟೇ ಎಂದಿದ್ದಾರೆ.
ಅದೇ ವೇಳೆ, ವೈದ್ಯೆ ಕೊನೆಯಲ್ಲಿ ಒಂದು ಮಾತು ಹೇಳಿದ್ದಾರೆ. ಅದೇನೆಂದರೆ, ಇವೆಲ್ಲಾ ನೀವು ಪ್ರೆಗ್ನೆಂಟ್ ಆಗಿರುವ ಸಾಧ್ಯತೆ ಇದೆ ಎಂದು ಹೇಳುತ್ತದೆಯಷ್ಟೇ. ಆದರೆ ನೀವು ನಿಜವಾಗಿಯೂ ಅದರ ಬಗ್ಗೆ ತಿಳಿದುಕೊಳ್ಳಬೇಕಾದರೆ ನಿಮ್ಮ ಪೀರಿಯಡ್ಸ್ ಮಿಸ್ ಆದ 5-7 ಆದ ಮೇಲೆ ಯೂರಿನ್ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಬೇಕು. ಅವಶ್ಯಕತೆ ಬಿದ್ದರೆ ವೈದ್ಯರ ಬಳಿ ಹೋಗಬೇಕು ಎಂದಿದ್ದಾರೆ.