ಗ್ಯಾನವಾಪಿ ಮಸೀದಿ ಪ್ರಕರಣ; ನಟ ಅಕ್ಷಯ್ ಕುಮಾರ್ ಹೇಳಿದ್ದೇನು?
ಗ್ಯಾನವಾಪಿ(Gyanvapi) ಮಸೀದಿ ಪ್ರಕರಣ ದೇಶವ್ಯಾಪಿ ಚರ್ಚೆಯಾಗುತ್ತಿದೆ. ವಾರಾಣಸಿಯಲ್ಲಿ ಇತ್ತೀಚಿಗಷ್ಟೆ ಶಿವಲಿಂಗ ರೀತಿಯ ಆಕೃತಿ ಪತ್ತೆಯಾದ ಬಳಿಕ ದೇಶದ ಗಮನ ಗ್ಯಾನವಾಪಿ ಕಡೆ ತಿರುಗಿದೆ. ಮಸೀದಿಯೊಳಗೆ ಪತ್ತೆಯಾದ ಶಿವಲಿಂಗ ಕಪ್ಪುಕಲ್ಲಿನಿಂದ ನಿರ್ಮಾಣ ಮಾಡಿದ್ದಾಗಿದ್ದು, ಅದರ ಗುಮ್ಮಟದ ಮೇಲೆ ರಂಧ್ರ ಕೊರೆದು ಕಾರಂಜಿಯಾಗಿ ಆಗಿ ಪರಿವರ್ತಿಸುವ ಯತ್ನ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಮ್ರಾಟ್ ಪೃಥ್ವಿರಾಜ್(Samrat Prithviraj) ಸಿನಿಮಾ ಬಿಡುಗಡೆ ತಯಾರಿಯಲ್ಲಿರುವ ಅಕ್ಷಯ್ ಕುಮಾರ್(Akshay Kumar) ಗ್ಯಾನವಾಪಿ ವಿವಾದದ ಬಗ್ಗೆ ಮಾತನಾಡಿದ್ದಾರೆ.

ನವ್‌ಭಾರತ ಟೈಮ್ಸ್ ಜೊತೆ ಮಾತನಾಡಿದ ಅಕ್ಷಯ್ ಕುಮಾರ್, 'ಸರ್ಕಾರ, ಭಾರತದ ಪುರಾತತ್ವ ಇಲಾಖೆ ಮತ್ತು ನ್ಯಾಯಾಧೀಶರು ಸದ್ಯ ಸಿಕ್ಕಿರುವ ಸಾಕ್ಷಾಧಾರಗಳ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರಿಗೆ ಹೆಚ್ಚಿನ ಮಾಹಿತಿ ಇರುತ್ತದೆ. ವಿಡಿಯೋದಲ್ಲಿ ಕಾಣುತ್ತಿರುವುದು ಶಿವಲಿಂಗದಂತೆಯೇ ಇದೆ. ಆದರೆ ನಮಗೆ ವಿಡಿಯೋದಲ್ಲಿ ಕಾಣುತ್ತಿರುವುದು ಶಿವಲಿಂಗ ಹೌದಾ ಅಥವಾ ಅಲ್ಲವಾ ಎಂಬ ನಿರ್ಧಾರ ತೆಗೆದುಕೊಳ್ಳುವಷ್ಟು ತಿಳಿವಳಿಕೆ ಇಲ್ಲ' ಎಂದಿದ್ದಾರೆ.
ಬಳಿಕ ಈ ಬಗ್ಗೆ ಮಾತನಾಡಲು ನನಗೆ ಸಾಧ್ಯವಾಗುವುದಿಲ್ಲ, ಯಾಕೆಂದರೆ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಅಕ್ಷಯ್ ಕುಮಾರ್ ಸದ್ಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೂನ್ 3ರಂದು ದೇಶ-ವಿದೇಶಗಳಲ್ಲಿ ತೆರೆಗೆ ಬರುತ್ತಿದೆ. ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ರಾಜ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಈ ಸಿನಿಮಾದ ಟೈಟಲ್ ಬದಲಾಯಿಸಬೇಕೆಂದು ಕರಣಿ ಸೇನಾ ಒತ್ತಾಯ ಮಾಡಿತ್ತು. 12ನೇ ಶತಮಾನದ ರಾಜ ಪೃಥ್ವಿರಾಜ್ ಘನತೆಯನ್ನು ಗೌರವಿಸಲು ಚಿತ್ರದ ಶೀರ್ಷಿಕೆಯಲ್ಲಿ ಪೃಥ್ವಿರಾಜ್ ಹೆಸರಿನ ಮೊದಲು ಸಾಮ್ರಾಟ್ ಎಂದು ಸೇರಿಸಬೇಕೆಂದು ನಿರ್ಮಾಪಕರಿಗೆ ಕರಣಿಸೇನಾ ಒತ್ತಾಯ ಮಾಡಿ ಅರ್ಜಿ ಸಲ್ಲಿಸಿತ್ತು. ಒಂದು ವೇಳೆ ತಮ್ಮ ಬೇಡಿಕೆ ಈಡೇರಿಸದಿದ್ದರೆ ಸಿನಿಮಾವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿತ್ತು. ಒತ್ತಾಯಕ್ಕೆ ಮಣಿದು ಯಶ್ ರಾಜ್ ಫಿಲ್ಮ್ಸ್ ಟೈಟಲ್ ಬದಲಾವಣೆ ಮಾಡಿತ್ತು. ಬಳಿಕ ಪೃಥ್ವಿರಾಜ್ ಹೆಸರಿನ ಮೊದಲು ಸಾಮ್ರಾಟ್ ಸೇರಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿತ್ತು.
ಗ್ಯಾನವಾಪಿ ಮಸೀದಿ ಪ್ರಕರಣ,ವಿಚಾರಣೆ ಮುಂದೂಡಿದ ವಾರಣಾಸಿ ಕೋರ್ಟ್!
ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ಟ್ರೈಲರ್ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರೇಕ್ಷಕರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೃಥ್ವಿರಾಜ್‌ನ ಆಳ್ವಿಕೆನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಅಂದಹಾಗೆ ಬಹುನಿರೀಕ್ಷೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ರಾಜ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮಹಮ್ಮದ್ ಘೋರಿಯನ್ನು ಎದುರಿಸಿದ ತರೈನ್ ಯುದ್ಧದ ಸುತ್ತ ಸುತ್ತುತ್ತದೆ.
ಕರಣಿ ಸೇನಾ ವಿರೋಧ; ಅಕ್ಷಯ್ ಕುಮಾರ್ 'ಪೃಥ್ವಿರಾಜ್' ಸಿನಿಮಾದ ಟೈಟಲ್ ಬದಲಾವಣೆ
ಈ ಸಿನಿಮಾದಲ್ಲಿ ನಾಯಕಿಯಾಗಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಮಾನುಷಿ ಮೊದಲ ಬಾರಿಗೆ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇನ್ನು ಉಳಿದಂತೆ ಸಂಜಯ್ ದತ್, ಸೋನು ಸೂದ್ ಸೇರಿದಂತೆ ಅನೇಕ ಕಲಾವಿದರು ಬಣ್ಣಹಚ್ಚಿದ್ದಾರೆ. ಚಂದ್ರಪ್ರಕಾಶ್ ದ್ವಿವೇದಿ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಜೂನ್ 3ರಂದು ತೆರೆಗೆ ಬರ್ತಿದೆ.