ಕರಣಿ ಸೇನಾ ವಿರೋಧ; ಅಕ್ಷಯ್ ಕುಮಾರ್ 'ಪೃಥ್ವಿರಾಜ್' ಸಿನಿಮಾದ ಟೈಟಲ್ ಬದಲಾವಣೆ
ಬಾಲಿವುಡ್ ಸ್ಟಾರ್ ಅಕ್ಷಯ ಕುಮಾರ್(Akshay Kumar) ನಟನೆಯ ಪೃಥ್ವಿರಾಜ್(Prithviraj) ಸಿನಿಮಾದ ಟೈಟಲ್ ಬದಲಾವಣೆಗೆ ಮಹಾರಾಷ್ಟ್ರ ಕರಣಿ ಸೇನೆ(Karni Sena) ಒತ್ತಾಯ ಮಾಡಿತ್ತು. ಚಿತ್ರದ ಟೈಟಲ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಕರಣಿಸೇನಾ ಹೆಸರು ಬದಲಾಯಿಸದಿದ್ದರೇ ಸಿನಿಮಾ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಕರಣಿ ಸೇನಾ ಒತ್ತಾಯಕ್ಕೆ ಮಣಿದ ಪೃಥ್ವಿರಾಜ್ ಸಿನಿಮಾತಂಡ ಇದೀಗ ಹೆಸರು ಬದಲಾಯಿಸಿದೆ.
ಬಾಲಿವುಡ್ ಸ್ಟಾರ್ ಅಕ್ಷಯ ಕುಮಾರ್(Akshay Kumar) ನಟನೆಯ ಪೃಥ್ವಿರಾಜ್(Prithviraj) ಸಿನಿಮಾದ ಟೈಟಲ್ ಬದಲಾವಣೆಗೆ ಮಹಾರಾಷ್ಟ್ರ ಕರಣಿ ಸೇನೆ(Karni Sena) ಒತ್ತಾಯ ಮಾಡಿತ್ತು. ಚಿತ್ರದ ಟೈಟಲ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಕರಣಿಸೇನಾ ಹೆಸರು ಬದಲಾಯಿಸದಿದ್ದರೇ ಸಿನಿಮಾ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಕರಣಿ ಸೇನಾ ಒತ್ತಾಯಕ್ಕೆ ಮಣಿದ ಪೃಥ್ವಿರಾಜ್ ಸಿನಿಮಾತಂಡ ಇದೀಗ ಹೆಸರು ಬದಲಾಯಿಸಿದೆ. ಅಂದಹಾಗೆ ಕರಣಿಸೇನಾ ಈ ರೀತಿ ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಸಿನಿಮಾಗೂ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಸಿನಿಮಾದ ಹೆಸರು ಬದಲಾವಣೆ ಮಾಡಿ ಬಿಡುಗಡೆ ಮಾಡಲಾಗಿತ್ತು. ಇದೀಗ ಅಕ್ಷಯ್ ಕುಮಾರ್ ಸಿನಿಮಾಗೂ ಅದೇ ಗತಿ ಎದುರಾಗಿದೆ.
ಸದ್ಯ ಪೃಥ್ವಿರಾಜ್ ಸಿನಿಮಾದ ಟೈಟಲ್ ಬದಲಾಯಿಸುತ್ತಿರುವುದಾಗಿ ಯಶ್ ರಾಜ್ ಫಿಲ್ಮ್ಸ್ ಬಹಿರಂಗ ಪಡಿಸಿದೆ. ಚಿತ್ರದಲ್ಲಿ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿಲ್ಲ. ಸಿನಿಮಾದ ಹೆಸರನ್ನು ಬದಲಾಯಿಸುತ್ತಿದ್ದೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಅಂದಹಾಗೆ ಇದೀಗ ಪೃಥ್ವಿರಾಜ್ ಸಿನಿಮಾಗೆ 'ಸಮ್ರಾಟ್ ಪೃಥ್ವಿರಾಜ್'(Samrat Prithviraj) ಎಂದು ಮರುನಾಮಕರಣ ಮಾಡಲು ಸಿನಿಮಾತಂಡ ನಿರ್ಧರಿಸಿದೆ.
ಅಂದಹಾಗೆ ಕರಣಿಸೇನಾ ಇತ್ತೀಚಿಗಷ್ಟೆ 12ನೇ ಶತಮಾನದ ರಾಜ ಪೃಥ್ವಿರಾಜ್ ಘನತೆಯನ್ನು ಗೌರವಿಸಲು ಚಿತ್ರದ ಶೀರ್ಷಿಕೆಯಲ್ಲಿ ಪೃಥ್ವಿರಾಜ್ ಹೆಸರಿನ ಮೊದಲು ಸಾಮ್ರಾಟ್ ಎಂದು ಸೇರಿಸಬೇಕೆಂದು ನಿರ್ಮಾಪಕರಿಗೆ ಕರಣಿಸೇನಾ ಒತ್ತಾಯ ಮಾಡಿ ಅರ್ಜಿ ಸಲ್ಲಿಸಿತ್ತು. ಒಂದು ವೇಳೆ ತಮ್ಮ ಬೇಡಿಕೆ ಈಡೇರಿಸದಿದ್ದರೆ ಸಿನಿಮಾವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿತ್ತು. ಇದೀಗ ಯಶ್ ರಾಜ್ ಫಿಲ್ಮ್ಸ್ ಪ್ರತಿಕ್ರಿಯೆ ನೀಡಿದ್ದು, ಕರಣಿಸೇನಾ ಬೇಡಿಕೆಗೆ ಒಪ್ಪಿಗೆ ನೀಡುತ್ತಿರುವುದಾಗಿ ಹೇಳಿದೆ.
ನಮ್ಮನ್ನು ಬ್ರಿಟಿಷರು ಒಡೆದು ಆಳಿದ್ದು ಹೀಗೆ: ಉತ್ತರ ದಕ್ಷಿಣ ತಾರತಮ್ಯದ ಬಗ್ಗೆ ಕಿಲಾಡಿ ಮಾತು
'ನಾವು ಬಹುಸುತ್ತಿನ ಮಾತುಕತೆ ಬಳಿಕ ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ಪರಿಹರಿಸಲು ಚಿತ್ರದ ಶೀರ್ಷಿಕೆಯನ್ನು ಸಾಮ್ರಾಟ್ ಪೃಥ್ವಿರಾಜ್ ಎಂದು ಬದಲಾಯಿಸುತ್ತಿದ್ದೇವೆ' ಎಂದು ಹೇಳಿದೆ. ಇನ್ನು ಸಿನಿಮಾಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಇಲ್ಲ, ಹೆಸರು ಬದಲಾಯಿಸಿದ್ದಕ್ಕೆ ಧನ್ಯವಾದ ಎಂದು ಕರಣಿ ಸೇನಾ ತಿಳಿಸಿದೆ.
ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರೇಕ್ಷಕರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೃಥ್ವಿರಾಜ್‌ನ ಆಳ್ವಿಕೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಅಂದಹಾಗೆ ಬಹುನಿರೀಕ್ಷೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ರಾಜ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮಹಮ್ಮದ್ ಘೋರಿಯನ್ನು ಎದುರಿಸಿದ ತರೈನ್ ಯುದ್ಧದ ಸುತ್ತ ಸುತ್ತುತ್ತದೆ.
ಅಕ್ಷಯ್ ಕುಮಾರ್ v/s ಕಮಲ್ ಹಾಸನ್; ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ಮೆಗಾವಾರ್, ಗೆಲ್ಲೋರ್ಯಾರು?
ಈ ಸಿನಿಮಾದಲ್ಲಿ ನಾಯಕಿಯಾಗಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಮಾನುಷಿ ಮೊದಲ ಬಾರಿಗೆ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇನ್ನು ಉಳಿದಂತೆ ಸಂಜಯ್ ದತ್, ಸೋನು ಸೂದ್ ಸೇರಿದಂತೆ ಅನೇಕ ಕಲಾವಿದರು ಬಣ್ಣಹಚ್ಚಿದ್ದಾರೆ. ಚಂದ್ರಪ್ರಕಾಶ್ ದ್ವಿವೇದಿ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಜೂನ್ 3ರಂದು ತೆರೆಗೆ ಬರ್ತಿದೆ.