ಗಾಯಕಿ ಮತ್ತು ಕಾರ್ಯಕರ್ತೆಯಾಗಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಬೆಂಗಳೂರು ನಾಗರತ್ನಂ ಅವರ ಜೀವನಾಧಾರಿತ ಸಿನಿಮಾ ಸಿದ್ಧವಾಗುವ ಬಗ್ಗೆ ಮಾರ್ಚ್‌ನಲ್ಲಿಯೇ ಸುದ್ದಿ ಬಂದಿತ್ತು. ಬಾಹುಬಲಿ ಖ್ಯಾತಿಯ ಅನುಷ್ಕಾ ಅವರೇ ನ ಟಿಸಲಿದ್ದಾರೆ ಎನ್ನಲಾಗಿತ್ತು.

ಇದೀಗ ಹಿರಿಯ ನಿರ್ದೇಶಕ ಸಿಂಗೀತ ಶ್ರೀನಿವಾಸನ್ ರಾವ್ ಅವರ ಬೆಂಗಳೂರು ನಾಗರತ್ನಮ್ಮ ಸಿನಿಮಾದಲ್ಲಿ ದೇವಸೇನಾ ಖ್ಯಾತಿಯ ಅನುಷ್ಕಾ ಶೆಟ್ಟಿ ಬದಲು ಸಮಂತಾ ಅಕ್ಕಿನೇನಿ ನಟಿಸಲಿದ್ದಾರೆ.

ಅನುಷ್ಕಾ - ಸಮಂತಾ: ಮೇಕಪ್ ಇಲ್ಲದೇ ಹೇಗೆ ಕಾಣ್ತಾರೆ ನೋಡಿ...!

ವಿಶೇಷವಾಗಿ ಕನ್ನಡಿಗರಿಗೆ ಈ ಸಿನಿಮಾ ಬಗ್ಗೆ ಹೆಚ್ಚೇ ಕುತೂಹಲ ಇತ್ತು. ಬೆಂಗಳೂರು ನಾಗರತ್ನಮ್ಮ ಪಾತ್ರಕ್ಕೆ ಯಾರು ಬರಲಿದ್ದಾರೆ ಎಂಬುದು ಎಲ್ಲರ ಕುತೂಹಲ. ಸೌತ್‌ನ ಪ್ರಮುಖ ನಟಿಯಲ್ಲಿ ಒಬ್ಬರಾದ ಸಮಂತಾ ನಾಗರತ್ಮಮ್ಮ ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕ ಸಿಂಗೀತ ಶ್ರೀನಿವಾಸನ್ ಅವರಿಗ ಇದು ಕಂ ಬ್ಯಾಕ್ ಸಿನಿಮಾ. 88 ವರ್ಷ ವಯಸ್ಸಿನಲ್ಲಿ ಸಿನಿಮಾ, ಅದರಲ್ಲೂ ಬಯೋಪಿಕ್ ಮಾಡಲು ಹೊರಟ ನಿರ್ದೇಶಕರ ಉತ್ಸಾಹ ಯುವಜನರಿಗೆ ಮಾದರಿ. ಆದರೆ ಕೊರೋನಾದಿಂದಾಗಿ ಸಿನಿಮಾ ಶೂಟಿಂಗ್‌ಗೆ ತಡೆ ಬಿದ್ದಿದೆ.

ದೇವಸೇನಾ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಶೀಘ್ರದಲ್ಲೇ ನಿಶ್ಯಬ್ದಂ ರಿಲೀಸ್

ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಲಿರುವ ಸಿನಿಮಾ ಹಿಂದಿಯಲ್ಲಿಯೂ ರಿಲೀಸ್ ಆಗಲಿದೆ. ದಕ್ಷಿಣದಲ್ಲಿ ಖ್ಯಾತಿ ಹೊಂದಿದ್ದ ಗಾಯಕಿಯ ಸಿನಿಮಾ ದಕ್ಷಿಣದ ಪ್ರಮುಖ ಭಾಷೆಯಲ್ಲಿ ತೆರೆ ಮೇಲೆ ಬರಲಿದೆ.

8 ವರ್ಷದಲ್ಲಿ ದೇವದಾಸಿಯಾದ ನಾಗರತ್ಮಮ್ಮ ಅವರ ಜೀವನ ಕಥೆ ರೋಷಕವಾದದ್ದು. ಪಿಟೀಲು ವಾದಿಕಯಾಗಿ, ನರ್ತಕಿಯಾಗಿ ಗುರುತಿಸಿಕೊಂಡ ಅವರು ಹಾಡಿನಿಂದ ಎಲ್ಲೆಡೆ ಜನಪ್ರಿರಾದು. ಮೈಸೂರು ಮಹಾರಾಜರಿಂದಲೂ ಗೌರವಿಸಲ್ಪಟ್ಟಿದ್ದರು.