ಲಾಕ್‌ಡೌನ್ ಮುಗಿದು ಪ್ರಮುಖ ಸ್ಟಾರ್ಸ್‌ ತಮ್ಮ ಶೂಟಿಂಗ್ ಆರಂಭಿಸಿದ್ರೂ ಅನುಷ್ಕಾ ಶೆಟ್ಟಿ ಮಾತ್ರ ಸೈಲೆಂಟಾಗೇ ಇದ್ರು. ಈಗ ತಮ್ಮ ಸಿನಿಮಾ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ.

ಬಾಹುಬಲಿ ಸಿನಿಮಾ ಖ್ಯಾತಿಯ ಅನುಷ್ಕಾ ಶೆಟ್ಟಿ ಸಿನಿಮಾಗಳಿಗಾಗಿ ಒಟಿಟಿಗಳು ಕಾದು ಕುಳಿತಿವೆ. ಇದಕ್ಕೆ ಕಾರಣ ಅವರಿಗಿರುವ ಫೇಮ್. ಅನುಷ್ಕಾ ಶೆಟ್ಟಿ ನಟ ಮಾಧವನ್ ಜೊತೆ ತೆರೆ ಹಂಚಿಕೊಳ್ಳಲಿದ್ದು, ಥ್ರಿಲ್ಲರ್ ಸಿನಿಮಾಗಾಗಿ ಒಟಿಟಿಗಳು ಕಾಯುತ್ತಿವೆ.

ಸಿನಿಮಾ ಲೋಕಕ್ಕೆ ಬಾಯ್ ಹೇಳ್ತಾರಾ ಬಾಹುಬಲಿಯ ದೇವಸೇನಾ..?

ಆರಂಭದಲ್ಲಿ ಚಿತ್ರಮಂದಿರಗಳು ತೆರೆಯದ ಕಾರಣ ಚಿತ್ರ ತಂಡ ಸ್ವಲ್ಪ ಸಮಯ ಕಾಯುವ ನಿರ್ಧಾರಕ್ಕೆ ಬಂದಿತ್ತು. ಆದರೆ ಬಹಳಷ್ಟು ಸಿನಿಮಾಗಳು ಒಟಿಟಿ ರಿಲೀಸ್‌ ಆಯ್ಕೆ ಮಾಡಿಕೊಂಡಿರುವಾಗ ನಿಶ್ಯಬ್ದಂ ತಂಡ ಕೂಡಾ ಒಟಿಟಿ ರಿಲೀಸ್‌ಗೆ ಸಿದ್ಧವಾಗಿದೆ. ಚಿತ್ರತಂಡ ಒಟಿಟಿ ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಬಗ್ಗೆ ಶೀಘ್ರವೇ ಸ್ಪಷ್ಟ ಮಾಹಿತಿ ಸಿಗಲಿದೆ. 

ನಾನಿಯ ವಿ ರಿಲೀಸ್ ನಂತರ ಕೆಲವೇ ಸಿನ ಕಳೆದು ನಿಶ್ಯಬ್ಧಂ ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗಲಿದೆ. ಬಾಹುಬಲಿ ಮೂಲಕ ಹಿಂದಿಯಲ್ಲೂ ಅನುಷ್ಕಾ ಹಿಟ್ ಆಗಿರೋದ್ರಿಂದ ಹಿಂದಿ ಸೇರಿ ಹಲವು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಮಾಧವನ್ ಕೂಡಾ ಬಾಲಿವುಡ್ ಸೇರಿ ಎಲ್ಲ ಕಡೆಯೂ ತಮ್ಮದೇ ಫ್ಯಾನ್ಸ್ ಬೇಸ್ ಹೊಂದಿದ್ದು, ಒಟಿಟಿಯಲ್ಲಿ ಸಿನಿಮಾ ವರ್ಕೌಟ್ ಆಗುವ ಸಾಧ್ಯತೆ ಇದೆ.