ಅನುಷ್ಕಾ - ಸಮಂತಾ: ಮೇಕಪ್ ಇಲ್ಲದೇ ಹೇಗೆ ಕಾಣ್ತಾರೆ ನೋಡಿ...!
ತೆರೆ ಮೇಲೆ ಕಾಣುವ ನಮ್ಮ ನೆಚ್ಚಿನ ನಟಿಯರ ಸೌಂದರ್ಯವನ್ನು ನಾವು ಇಷ್ಷಪಡುತ್ತೇವೆ. ಆದರೆ ಅವರು ಮೇಕಪ್ ಇಲ್ಲದೇ ಅಫ್‌ಸ್ಕ್ರೀನ್‌ನಲ್ಲಿ ಹೇಗೆ ಕಾಣುತ್ತಾರೆ ಅನ್ನುವುದು ಎಲ್ಲರಿಗೂ ಇರುವ ಸಹಜ ಕುತೂಹಲ. ಹಾಗೇ ಯಾವುದೇ ಮೇಕಪ್ ಇಲ್ಲದೆ ಸ್ಟಾರ್‌ಗಳು ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಸೌತ್‌ನ ಟಾಪ್ ನಟಿಯರಾದ ತಮನ್ನಾ, ನಯನತಾರಾ, ಸಮಂತಾ, ಕಾಜಲ್ ಇವರೆಲ್ಲಾ ತಮ್ಮ ಬ್ಯೂಟಿಗೆ ಸಖತ್ ಫೇಮಸ್. ಇವರ ವಿಥೌಟ್ ಮೇಕಪ್ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಹೇಗೆ ಕಾಣುತ್ತಾರೆ ನೊಡಿ ನಿಮ್ಮ ಪೇವರೇಟ್ ಹೀರೊಯಿನ್‌ಗಳು ಮೇಕಪ್ ಇಲ್ಲದೆ.
ಅನುಷ್ಕಾ ಶೆಟ್ಟಿ - ಸಮಂತಾ ಅಕ್ಕಿನೇನಿ: ಮೇಕಪ್ ಇಲ್ಲದೇ ಹೇಗೆ ಕಾಣ್ತಾರೆ ನೋಡಿ ದಕ್ಷಿಣದ ನಟಿಯರು
ತಮನ್ನಾ:
ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸುವ 30 ವರ್ಷದ ನಟಿ ತಮ್ಮನ್ನಾ ಹಲವು ಹಿಟ್ ಫಿಲ್ಮ್‌ಗಳನ್ನು ನೀಡಿದ್ದಾರೆ. ಸೌತ್‌ನ ಈ ಫೇಮಸ್ ನಟಿ ಮೇಕಪ್ ಇಲ್ಲದೆ ಸಹ ಮುದ್ದಾಗಿ ಸಿಂಪಲಾಗಿ ಕಾಣುತ್ತಾರೆ. ನಟಿಯ ತೆರೆಯ ಮೇಲಿನ ಲುಕ್‌ಗೂ ಈ ಫೋಟೋಗೂ ಅಷ್ಟೊಂದು ವ್ಯತ್ಯಾಸವಿಲ್ಲ.
ಆಸಿನ್ ತೊಟ್ಟುಮ್ಕಲ್ :
ಮೂಲತಃ ಮಲಯಾಳಿ ನಟಿ ಆಸಿನ್. ಹಿಂದಿ, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯಾಚುರಲ್ ಬ್ಯೂಟಿ ಅಸಿನ್ ಮೇಕಪ್ ಇಲ್ಲದೆಯೂ ಸುಂದರವಾಗಿಯೇ ಇದ್ದಾರೆ.
ಕಾಜಲ್ ಅಗರ್ವಾಲ್:
ಕಾಜಲ್ ಅಗರ್ವಾಲ್ ದಕ್ಷಿಣ ಚಲನಚಿತ್ರೋದ್ಯಮದ ಅತ್ಯಂತ ಜನಪ್ರಿಯ ಹಾಗೂ ಸೆಕ್ಸಿ ನಾಯಕಿ ಎಂದು ಪರಿಗಣಿಸಲಾಗಿದೆ. ಮೇಕಪ್ ಇಲ್ಲದೆ ಈ ನಟಿ ಫೋಟೋಗಳು ನೋಟಿ ಫ್ಯಾನ್‌ಗಳು ಶಾಕ್‌ಗೆ ಒಳಗಾಗಿದ್ದರು. ಮುಂಬೈನ ಕಾಜಲ್‌ರ ವಿಥೌಟ್ ಮೇಕಪ್ ಫೋಟೋಶೂಟ್ ಹಲವಾರು ವಿವಾದಗಳಿಗೆ ಕಾರಣವಾಗಿದೆ. ಆದರೆ ಆಕೆಯ ಬೋಲ್ದ್ ಲುಕ್‌ಗೆ ಅನೇಕರು ನಟಿಯನ್ನು ಹೊಗಳಿದ್ದರು.
ನಯನತಾರಾ:
ಸೌತ್‌ನ ಲೇಡಿ ಸೂಪರ್ ಸ್ಟಾರ್ ನಯನಾತಾರಾ ಮೂಲ ಕೇರಳ. ನಟಿ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮೇಕಪ್ ಇಲ್ಲದ ನಟಿಯ ಫೋಟೋ ಫ್ಯಾನ್ಸ್‌ಗೆ ಆಘಾತವನ್ನುಂಟು ಮಾಡಿದೆ. ಆದರೆ ಆಕೆಯ ನ್ಯಾಚುರಲ್ ಲುಕ್ ಸಖತ್ ಮೆಚ್ಚುಗೆಯನ್ನು ಪಡೆದಿದೆ. ನಯನತಾರಾ ಈ ಪೋಟೋ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು.
ಅನುಷ್ಕಾ ಶೆಟ್ಟಿ:
ಮೇಕಪ್ ಇಲ್ಲದ ಬಾಹುಬಲಿ ನಟಿಯ ಫೋಟೋ ಇಲ್ಲಿದೆ. ಕರ್ನಾಟಕದ ಪುತ್ತೂರಿನಲ್ಲಿ ಜನಿಸಿದ ಅನುಷ್ಕಾ ತೆಲುಗು ಸಿನಿಮಾದ ಟಾಪ್ ನಟಿಯರಲ್ಲಿ ಒಬ್ಬರು. ನಟಿ ನೋ-ಮೇಕಪ್ ಲುಕ್ ಹೀಗಿದೆ. ಆದರೆ ನಟಿಯ ಸ್ಮೈಲ್ ಮಾತ್ರ ಯಾವಾಗಲೂ ಆಕರ್ಷಕ.
ಸಮಂತಾ:
ದಕ್ಷಿಣ ಭಾರತದ ಫೇಮಸ್ ಸ್ಟಾರ್ ಸಮಂತಾ. ಹಲವು ಬ್ಲಾಕ್ ಬಸ್ಟರ್ ಚಲನಚಿತ್ರಗಳನ್ನು ನೀಡಿರುವ ಈ ನಟಿಯ ನೋ ಮೇಕಪ್ ಲುಕ್‌ನಲ್ಲೂ ಯಂಗ್ ಹಾಗೂ ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ.
ರಶ್ಮಿಕಾ ಮಂದಣ್ಣ:
ಸ್ಯಾಂಡಲ್ ವುಡ್‌ನ ಫೇಮಸ್ ನಟಿ ರಶ್ಮಿಕಾ ಮಂದಣ್ಣ ಈಗ ತೆಲುಗು ಸಿನಿಮಾಗಳಲ್ಲಿ ಬ್ಯುಸಿ. ಮೇಕಪ್ ಇಲ್ಲದ ಕನ್ನಡ ನಟಿಯ ಫೋಟೋ ಸಖತ್ ವೈರಲ್ ಆಗಿತ್ತು. ಈ ಫೋಟೋದಲ್ಲಿ ರಶ್ಮಿಕಾ ಚಿಕ್ಕ ಹುಡುಗಿಯ ಹಾಗೆ ಕಾಣುತ್ತಿದ್ದಾರೆ