ಸಮಂತಾ ಕ್ಯೂಟ್ ಹುಡುಗನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮದ್ವೆ ಬಗ್ಗೆಯೂ ಮಾತಾಡಿದ್ದಾರೆ. ಯಾರು ಈ ಚಂದದ ಹುಡುಗ. ಏನು ಆತನ ಕಥೆ?

ಸಮಂತಾ ರುತ್‌ ಪ್ರಭು ಟಾಲಿವುಡ್‌ ಕಂಡ ಅದ್ಭುತ ಪ್ರತಿಭಾವಂತೆ. ಸಿನಿಮಾ ಸಕ್ಸಸ್ ಆಗಲಿ, ತೋಪಾಗಲೀ ನಟಿಯ ಜನಪ್ರಿಯತೆ ಕುಂದೋದಿಲ್ಲ. ಹಾಗೆ ನೋಡಿದರೆ ರೀಸೆಂಟಾಗಿ ತೆರೆ ಕಂಡ ಸಮಂತಾ ನಟನೆಯ ಸ್ತ್ರೀ ಪ್ರಧಾನ ಚಿತ್ರಗಳು ಮಕಾಡೆ ಮಲಗಿದವು. ಯಶೋದಾ, ಶಾಕುಂತಳಂ ಸಿನಿಮಾಗಳು ಬಿಡುಗಡೆಗೆ ಮೊದಲು ಸೌಂಡ್‌ ಮಾಡಿದ್ದೇ ಮಾಡಿದ್ದು. ಆದರೆ ರಿಲೀಸ್ ಆದ್ಮೇಲೆ ಠುಸ್ ಪಟಾಕಿ ಆಯ್ತು. ಆದರೆ ಇದರಿಂದ ಸಮಂತಾ ಬೇಡಿಕೆ ಕಡಿಮೆ ಆದಂತಿಲ್ಲ. ಬೇಡ ಬೇಡ ಅಂದರೂ ಅವಕಾಶಗಳು ಒದ್ದುಕೊಂಡು ಬಂದ ಹಾಗೆ ಬರುತ್ತಲೇ ಇವೆ. ಸಮಂತಾ ಸಖತ್ ಚ್ಯೂಸಿಯಾಗಿ ಆಗಾಗ ತನ್ನ ಅನಾರೋಗ್ಯದ ನೆಪ ಒಡ್ಡಿ ಸಾಕಷ್ಟು ಆಫರ್‌ಗಳನ್ನು ರಿಜೆಕ್ಟ್ ಮಾಡುತ್ತಲೇ ಇದ್ದಾರೆ. ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಇದು ಅವರ ಸಿನಿಮಾಕ್ಕೆ ಸಂಬಂಧಿಸಿದ ಸುದ್ದಿಯಲ್ಲ. ಬದಲಿಗೆ ಮದುವೆಗೆ ಸಂಬಂಧಿಸಿದ್ದು.

ಹೌದು, ಮದುವೆಯ ವಿಚಾರಕ್ಕೆ ಸಮಂತಾ ಮತ್ತೆ ಸುದ್ದಿಯಲ್ಲಿದ್ದಾರೆ. ಜ್ವೆಲ್ ಗಮಾಡಿಯಾ ಎಂಬ ಗುಡ್‌ ಲುಕಿಂಗ್ ಹುಡುಗನ ಫೋಟೋವನ್ನು ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಮದುವೆಯ ಪ್ರಸ್ತಾವನೆಯನ್ನೂ ಮುಂದಿಟ್ಟಾರೆ. ಅತ್ತ ಸಮಂತಾ ಮಾಜಿ ಪತಿ ನಾಗಚೈತನ್ಯ ಶೋಭಿತಾ ಅನ್ನೋ ಹುಡುಗಿಯ ಜೊತೆಗೆ ಲಂಡನ್, ಪ್ಯಾರಿಸ್ ಅಂತ ಸುತ್ತುತ್ತಿರುವಾಗಲೇ ಸಮಂತಾ ಈ ಹುಡುಗನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಹಾಗೆ ನೋಡಿದರೆ ನಟಿ ಸಮಂತಾ ರುತ್ ಪ್ರಭು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದಾರೆ. ನಟ ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅವರು ಅಂತ್ಯ ಹಾಡಿದ ಬಳಿಕ ಒಂಟಿಯಾಗಿ ಬದುಕುತ್ತಿದ್ದಾರೆ. ವಿಚ್ಛೇದನ ಪಡೆದ ಅವರು ಸಂಪೂರ್ಣವಾಗಿ ಸಿನಿಮಾ ಮತ್ತು ವೆಬ್ ಸಿರೀಸ್ ಕಡೆಗೆ ಗಮನ ಹರಿಸಿದ್ದಾರೆ. ಹಲವು ವರ್ಷ ಪ್ರೀತಿಸಿ ಮದುವೆಯಾದ ಅವರು ಡಿವೋರ್ಸ್ ಪಡೆಯುವಂತಾಗಿದ್ದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ತಂದಿತ್ತು. ಒಂದು ಹಂತದಲ್ಲಿ ತನ್ನ ವೈವಾಹಿಕ ಬದುಕು ಈ ನಟಿಗೆ ದುಃಸ್ವಪ್ನದ ಹಾಗಿದ್ದರೂ ಸಮಂತಾಗೆ ಮದುವೆ ಬಗ್ಗೆ ನಂಬಿಕೆ ಕಡಿಮೆ ಆದಂತಿಲ್ಲ. ಅದಕ್ಕೆ ಅವರ ಇನ್‌ಸ್ಟಾ ಪೋಸ್ಟೇ ಸಾಕ್ಷಿ.

NBK108: ಒಂದು ಹಾಡಿಗೆ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ ನಟಿ ತಮನ್ನಾ?

ಅಂದಹಾಗೆ ಸಮಂತಾ ಪೋಸ್ಟ್ ಮಾಡಿರೋ ಜ್ವೆಲ್ ಗಮಾಡಿಯಾ ಒಬ್ಬ ಡಾಕ್ಟರ್. ಬಾಲಿವುಡ್ ಅನೇಕ ಸೆಲೆಬ್ರಿಟಿಗಳು ಡಾಕ್ಟರ್ ಜ್ವೆಲ್ ಗಮಾಡಿಯಾ ಅವರ ಬಳಿ ತೆರಳುತ್ತಾರೆ. ಅನುಷ್ಕಾ ಶರ್ಮಾ, ಅಜಯ್ ದೇವಗನ್, ಕತ್ರಿನಾ ಕೈಫ್ ಮುಂತಾದವರಿಗೆ ಅವರು ಟ್ರೀಟ್‌ಮೆಂಟ್ ನೀಡಿದ್ದಾರೆ. ಈಗ ಸಮಂತಾ ರುತ್ ಪ್ರಭು ಕೂಡ ಜ್ವೆಲ್ ಗಮಾಡಿಯಾ ಜೊತೆ ಒಡನಾಟ ಬೆಳೆಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಸಮಂತಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ. ಹಾಗಂತ ಇದು ಸಮಂತಾ ಮದುವೆಗೆ ಸಂಬಂಧಿತ ವಿಚಾರ ಅಲ್ಲ. ಈಗಿರುವ ಮಾಹಿತಿಯಂತೆ ಅವರೀಗ ಮರು ಮದುವೆ ಆಗಲು ಸಿದ್ಧರಿಲ್ಲ. ತಮ್ಮ ಸ್ನೇಹಿತರೊಬ್ಬರ ವಿವಾಹಕ್ಕಾಗಿ ಹೆಣ್ಣು ಹುಡುಕುತ್ತಿದ್ದಾರೆ. ಮದುವೆ ಎಂಬ ಕಾನ್ಸೆಪ್ಟ್ ಬಗ್ಗೆ ಅವರಿಗೆ ಈಗಲೂ ನಂಬಿಕೆ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ‘ಇವರಿಗೆ ಒಂದು ಜೋಡಿ ಹುಡುಕುತ್ತಿದ್ದೇನೆ. ಇವರು ತುಂಬ ಸ್ಮಾರ್ಟ್ ಆಗಿದ್ದಾರೆ’ ಎಂದು ಸಮಂತಾ ಅವರು ಡಾಕ್ಟರ್ ಜ್ವೆಲ್ ಗಮಾಡಿಯಾ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಮಂತಾ ಕೂಡ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಡಲಿ ಎಂದು ಅನೇಕರು ಬಯಸುತ್ತಿದ್ದಾರೆ.

ಸುಮಾರು 10 ವರ್ಷಗಳ ಕಾಲ ಸಮಂತಾ ಮತ್ತು ನಾಗ ಚೈತನ್ಯ ಗೆಳೆಯರಾಗಿ, ಪ್ರೇಮಿಗಳಾಗಿದ್ದರು. ನಂತರ ಮದುವೆ ಆದರು. ಇವರ ಮದುವೆಗೆ ನಾಲ್ಕು ವರ್ಷ ತುಂಬುವುದರೊಳಗೆ ವಿಚ್ಛೇದನದ ಸುದ್ದಿ ಹೊರ ಬಿತ್ತು. ಇದೀಗ ತಮ್ಮ ಕ್ಯೂಟ್ ಸ್ನೇಹಿತನ ಫೋಟೋ ಶೇರ್ ಮಾಡಿ ಈತನಿಗೊಬ್ಬಳು ಲೈಫ್‌ ಪಾರ್ಟನರ್ ಬೇಕಾಗಿದ್ದಾಳೆ ಅನ್ನೋ ಥರ ಪೋಸ್ಟ್ ಮಾಡಿದ್ದಾರೆ ಸಮಂತಾ. ಈ ಪೋಸ್ಟ್ ಈಗ ವೈರಲ್ ಆಗಿದೆ.

56 ವರ್ಷದ ಹಳೆಯ ಚಿತ್ರಮಂದಿರ ಖರೀದಿಸಿದ ನಟಿ ನಯನತಾರಾ