ಕಾಲಿವುಡ್ ಸ್ಟಾರ್ ನಯನತಾರಾ 56 ವರ್ಷಗಳ ಹಳೆಯ ಚಿತ್ರಮಂದಿರವನ್ನು ಖರೀದಿ ಮಾಡಿದ್ದಾರೆ. 

ಸೌತ್ ಸಿನಿಮಾರಂಗದ ಖ್ಯಾತ ನಟಿ, ಲೇಡಿ ಸೂಪರ್ ಎಂದೇ ಕರೆಸಿಕೊಳ್ಳುವ ನಯನತಾರಾ ಸದ್ಯ ಸಿನಿಮಾ ಜೊತೆಗೆ ಇಬ್ಬರೂ ಮುದ್ದಾದ ಮಕ್ಕಳ ಆರೈಕೆಯಲ್ಲೂ ಬ್ಯುಸಿಯಾಗಿದ್ದಾರೆ. ಸೌತ್ ಸಿನಿಮಾ ಜೊತೆಗೆ ನಯನತಾರಾ ಸದ್ಯ ಬಾಲಿವುಡ್ ನಲ್ಲೂ ನಟಿಸುತ್ತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್ ಜೊತೆ ನಯನತಾರಾ ನಟಿಸುತ್ತಿದ್ದಾರೆ. ಈ ನಡುವೆ ನಯನತಾರಾ ಬಗ್ಗೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ನಯನತಾರಾ ಚಿತ್ರಮಂದಿರ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಥಿಯೇಟರ್ ಬ್ಯುಸಿನೆಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ನಯನಾತಾರ ತಮ್ಮ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ಉತ್ತರ ಚೆನ್ನೈನಲ್ಲಿರುವ ಅಗಸ್ತ್ಯ ಥಿಯೇಟರ್ ಅನ್ನು ತಮ್ಮ ನಿರ್ಮಾಣ ಕಂಪನಿ ರೌಡಿ ಪಿಕ್ಚರ್ಸ್ ಅಡಿಯಲ್ಲಿ ಖರೀದಿಸಿದ್ದಾರೆ. ಇದು ಲೇಡಿ ಸೂಪರ್ ಸ್ಟಾರ್ ಚೆನ್ನೈನಲ್ಲಿ ಖರೀದಿಸಿದ ಮೊದಲ ಆಸ್ತಿಯಾಗಿದೆ. ಅಗಸ್ತ್ಯ ಥಿಯೇಟರ್ ಮುಚ್ಚಿಹೋಗಿ ವರ್ಷಗಳೇ ಆಗಿತ್ತು. ಸುಮಾರು 56 ವರ್ಷಗಳ ಹಳೆಯ ಚಿತ್ರಮಂದಿರ ಇದಾಗಿದ್ದು ಸದ್ಯ ನಯನತಾರಾ ತೆಕ್ಕೆಗೆ ಬಂದಿದೆ.

ನಯನತಾರಾ ಲೇಡಿ ಸೂಪರ್‌ಸ್ಟಾರ್ ಆಗಿ ಆಳ್ವಿಕೆ ನಡೆಸುವುದರ ಜೊತೆಗೆ ಹಲವಾರು ಬ್ಯುಸಿನೆಸ್ ಮಾಡುತ್ತಿದ್ದಾರೆ. ಈಗ ಥಿಯೇಟರ್ ವ್ಯವಹಾರಕ್ಕೆ ಇಳಿದಿದ್ದಾರೆ. ದೇವಿ ಥಿಯೇಟರ್ ಗ್ರೂಪ್ ಒಡೆತನದ ಅಗಸ್ತ್ಯ ಥಿಯೇಟರ್ 1967 ರಿಂದ ಉತ್ತರ ಚೆನ್ನೈ ಪ್ರದೇಶದಲ್ಲಿ ಕಾರ್ಯನಿರ್ವಹಿಸಿತು. ಎಂಜಿಆರ್, ಶಿವಾಜಿ ಗಣೇಶನ್ ರಿಂದ ರಜಿನಿಕಾಂತ್, ಕಮಲ್ ಹಾಸನ್, ಅಜಿತ್ ಮತ್ತು ವಿಜಯ್ ವರೆಗೆ ತಮಿಳು ಚಿತ್ರರಂಗದ ದಿಗ್ಗಜರ ಅಸಂಖ್ಯಾತ ಬ್ಲಾಕ್ಬಸ್ಟರ್ ಹಿಟ್ ಚಲನಚಿತ್ರಗಳನ್ನು ಈ ಚಿತ್ರಮಂದಿರ ಪ್ರದರ್ಶಿಸಿದೆ. 

ರಜನಿಕಾಂತ್ ಸಿನಿಮಾದಿಂದ ನನ್ನ ದೂರ ಇಡುವಂತೆ ನಯನತಾರಾ ಬೆದರಿಕೆ ಹಾಕಿದ್ರು; 'ಗೂಳಿ' ನಟಿ ಮಮತಾ ಶಾಕಿಂಗ್ ಹೇಳಿಕೆ

ಅನೇಕ ಸಿಂಗಲ್ ಸ್ಕ್ರೀನ್ ಥಿಯೇಟರ್ ಕೊರೊನಾ ವೈರಸ್ ಲಾಕ್‌ಡೌನ್‌ ಬಳಿಕ ಸಂಕಷ್ಟಕ್ಕೆ ಸಿಲುಕಿವೆ. ಅದರಲ್ಲಿ ಅಗಸ್ತ್ಯ ಥಿಯೇಟರ್ ಕೂಡ ಒಂದು. 53 ವರ್ಷಗಳು ಸುದೀರ್ಘ ಮನರಂಜನೆಯ ನಂತರ 2020 ರಲ್ಲಿ ಈ ಚಿತ್ರಮಂದಿರ ಮುಚ್ಚಲಾಯಿತು. ಸದ್ಯ ನಯನತಾರಾ ಖರೀದಿ ಮಾಡಿರುವ ಅಗಸ್ತ್ಯ ಥಿಯೇಟರ್‌ಅನ್ನು ನವೀಕರಿಸಿ ಎದನ್ನು ಎರಡು ಸ್ಕ್ರೀನ್ ಆಗಿ ಪರಿವರ್ತಿಸಿ ದೊಡ್ಡ ಮಟ್ಟದಲ್ಲಿ ಹೈಫೈ ಆಗಿ ಮಾರ್ಪಡಿಸುತ್ತಿದ್ದಾರೆ. 

JAWAN ಸೆಟ್​ನಲ್ಲಿ ನಯನತಾರಾ- ಶಾರುಖ್​ ರೊಮಾನ್ಸ್​ ದೃಶ್ಯ ಲೀಕ್​!

ನಯನತಾರಾ ಸಿನಿಮಾ 

ನಯನತಾರಾ ಸದ್ಯ ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜವಾನ್ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಆಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಜಾವನ್ ಸಿನಿಮಾ ಹೇಗಿರಲಿದೆ ಎಂದು ನೋಡಲುಅಭಿಮಾನಿಗಳು ಕಾತರರಾಗಿದ್ದಾರೆ.