Vijay Devarakonda Birthday; ಫೋಟೋ ಶೇರ್ ಮಾಡಿ ಕ್ಯೂಟ್ ವಿಶ್ ಮಾಡಿದ ಸಮಂತಾ
ವಿಜಯ್ ದೇವರಕೊಂಡ ಅವರಿಗೆ ಸ್ಟಾರ್ ನಟಿ ಸಮಂತಾ(Samantha) ಕೂಡ ಕ್ಯೂಟ್ ವಿಶ್ ಮಾಡಿದ್ದಾರೆ. ವಿಜಯ್ ಜೊತೆಗಿರುವ ಸುಂದರ ಫೋಟೋ ಹಂಚಿಕೊಂಡು ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ. ಸಮಂತಾ ಫೋಟೋಗೆ ಅಭಿಮಾನಿಗಳು ಲೈಕ್ ಒತ್ತಿ ಪ್ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.
ಸೌತ್ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ(Vijay Deverakonda) ಅವರಿಗೆ ಹುಟ್ಟುಹಬ್ಬದ(Birthday) ಸಂಭ್ರಮ. ನೆಚ್ಚಿನ ನಟನಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ವಿಶ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇಟ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷೆಯ ಲೈಗರ್ ಸಿನಿಮಾ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ವಿಜಯ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಟ್ಟುಮಸ್ತಾದ ದೇಹ ಪ್ರದರ್ಶಿಸಿರುವ ವಿಜಯ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ವಿಜಯ್ ದೇವರಕೊಂಡ ಅವರಿಗೆ ಸ್ಟಾರ್ ನಟಿ ಸಮಂತಾ(Samantha) ಕೂಡ ಕ್ಯೂಟ್ ವಿಶ್ ಮಾಡಿದ್ದಾರೆ. ವಿಜಯ್ ಜೊತೆಗಿರುವ ಸುಂದರ ಫೋಟೋ ಹಂಚಿಕೊಂಡು ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ. ಸಮಂತಾ ಸಮಾಜಿಕ ಜಾಲತಾಣದಲ್ಲಿ ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡು 'ಶುಭಾಶಯಗಳು ಲಿಗರ್ ವಿಜಯ್ ದೇವರಕೊಂಡ. ಪ್ರೀತಿ ಮತ್ತು ಎಲ್ಲಾ ಮೆಚ್ಚುಗೆಗಳಿಗೆ ನೀವು ಅರ್ಹರು. ನೀವು ಮಾಡುವ ಕೆಲಸ ಸ್ಫೂರ್ತಿದಾಯಕವಾಗಿದೆ. ದೇವರು ಒಳ್ಳೆಯದು ಮಾಡಲಿ' ಎಂದು ಹೇಳಿದ್ದಾರೆ. ಸಮಂತಾ ಕ್ಯೂಟ್ ಫೋಟೋಗೆ ಅಭಿಮಾನಿಗಳು ಲೈಕ್ ಒತ್ತಿ ಪ್ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ವಿಜಯ್ ಮತ್ತು ಸಮಂತಾ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾದ ಮುಹೂರ್ತ ಇತ್ತೀಚಿಗಷ್ಟೆ ನೆರವೇರಿದೆ. ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಕಾಶ್ಮೀರ ಚಿತ್ರೀಕರಣ ಸೆಟ್ ನಲ್ಲಿ ತೆಗೆದ ಫೋಟೋವನ್ನೇ ಸಮಂತಾ ಶೇರ್ ಮಾಡಿದ್ದಾರೆ. ಕಾಶ್ಮೀರದ ಚಿತ್ರೀಕರಣ ಸೆಟ್‌ನಲ್ಲೇ ವಿಜಯ್ ದೇವರಕೊಂಡ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಫೋಟೋಗಳು ವೈರಲ್ ಆಗಿವೆ.
Rashmika Mandanna ಮದುವೆ, ನಟ ವಿಜಯ್ ದೇವರಕೊಂಡ ರಿಯಾಕ್ಷನ್ ವೈರಲ್!
ಅಂದಹಾಗೆ ಇತ್ತೀಚಿಗಷ್ಟೆ ಸಮಂತಾ ಹುಟ್ಟುಹಬ್ಬವನ್ನು ಕಾಶ್ಮೀರದಲ್ಲಿ ಸೆಲೆಬ್ರೇಟ್ ಮಾಡಲಾಗಿತ್ತು. ಆಗ ವಿಜಯ್ ದೇವರಕೊಂಡ ಸರ್ಪ್ರೈಸ್ ವಿಶ್ ಮಾಡಿದ್ದರು. ಸಿನಿಮಾತಂಡ ಕೇಕ್ ಕತ್ತರಿಸಿ ಸಮಂತಾ ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಅಂದಹಾಗೆ ಸಮಂತಾ ಮತ್ತು ವಿಜಯ್ ದೇವರಕೊಂಡ ಎರಡನೇ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. 2018ರಲ್ಲಿ ಬಂದ ಬಯೋಪಿಕ್ ಮಹಾನಟಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆಫ್ ಸ್ಕ್ರೀನ್‌ನಲ್ಲೂ ಇಬ್ಬರೂ ಇತ್ತ ಸ್ನೇಹಿತರು. ಇದೀಗ ಇಬ್ಬರೂ ಮತ್ತೆ ತೆರೆಮೇಲೆ ಒಟ್ಟಿಗೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
Wedding Rumor: ರಶ್ಮಿಕಾ ಜೊತೆ ಮದುವೆ ಗಾಸಿಪ್, ಮೌನ ಮುರಿದ ವಿಜಯ್ ದೇವರಕೊಂಡ
ಮೈತ್ರಿ ಮೂವಿ ಮೇಕರ್ಸ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಹೃದಯಂ ಖ್ಯಾತಿಯ ಹೇಶಮ್ ಅಬ್ದುಲ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಸಿನಿಮಾ ಕೂಡ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಇನ್ನು ಈ ಸಿನಿಮಾ ಜೊತೆಗೆ ವಿಜಯ್ ದೇವರಕೊಂಡ ಜನಗಣಮನ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಪುರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಇದಾಗಿದ್ದು ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಆರ್ಮಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿಜಯ್‌ಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ವಿಜಯ್ ಬ್ಯುಸಿಯಾಗಿದ್ದು ಲಿಗರ್ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.