ಸಮಂತಾ ವಿಶ್ರಾಂತಿಯಲ್ಲಿದ್ದಾರೆ; ವೈರಲ್ ಆಗಿದ್ದ ಗಾಸಿಪ್‌ಗೆ ಸ್ಯಾಮ್ ತಂಡದ ರಿಯಾಕ್ಷನ್

ಸಮಂತಾ ಬಗ್ಗೆ ವೈರಲ್ ಆಗಿದ್ದ ಗಾಸಿಪ್‌ಗೆ  ಅವರ ತಂಡ ಪ್ರತಿಕ್ರಿಯೆ ನೀಡಿದೆ. ಸಮಂತಾ ಸದ್ಯ ವಿಶ್ರಾಂತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. 

Samantha Ruth Prabhu's rep denies reports of her exit from upcoming films due to myositis diagnosis sgk

ಟಾಲಿವುಡ್ ಸ್ಟಾರ್ ನಟಿ ಸಮಂತಾ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ.  ಸ್ಯಾಮ್ ಸಿನಿಮಾ, ಶೂಟಿಂಗ್, ಫೋಟೋಶೂಟ್ ಅಂತ ಸಖತ್ ಅಕ್ಟೀವ್ ಆಗಿದ್ದರು. ಆದರೀಗ Myositis ಕಾಯಿಲೆ ಬಳಿಕ ಸೈಲೆಂಟ್ ಆಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಸಮಂತಾ ಅನಾರೋಗ್ಯ ವಿಚಾರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.  ಸಮಂತಾ, ಯಶೋದಾ ಸಿನಿಮಾ ಬಳಿಕ ಯಾವುದೇ ಪೋಸ್ಟ್ ಶೇರ್ ಮಾಡಿಲ್ಲ. ಈ ನಡುವೆ ಸಮಂತಾ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಅನಾರೋಗ್ಯದ ಕಾರಣ ಸಮಂತಾ ಹಿಂದಿ ಸಿನಿಮಾಗಳಿಂದ ಹೊರ ನಡೆದಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಈ ಬಗ್ಗೆ ಸಮಂತಾ ತಂಡ ಪ್ರತಿಕ್ರಿಯೆ ನೀಡಿದ್ದು ಬೇಸರ ವ್ಯಕ್ತಪಡಿಸಿದ್ದಾರೆ. ಸಮಂತಾ ಯಾವುದೇ ಸಿನಿಮಾದಿಂದ ಹೊರ ಹೋಗಿಲ್ಲ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. 

ಸಮಂತಾ ಬಗ್ಗೆ ಹಬ್ಬಿದ್ದ ಗಾಸಿಪ್‌ಗೆ ಅವರ ತಂಡ ಪ್ರತಿಕ್ರಿಯೆ ನೀಡುವ ಮೂಲಕ ವೈರಲ್ ಸುದ್ದಿಗೆ ಬ್ರೇಕ್ ಹಾಕಿದೆ.  ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ ಸಮಂತಾ ತಂಡ, 'ಸದ್ಯ ಸಮಂತಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಜನವರಿಯಲ್ಲಿ ಅಂದರೆ ಸಂಕ್ರಾಂತಿ ನಂತರ ಖುಷಿ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ಬಾಲಿವುಡ್ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನವರಿಯಿಂದ ಹಿಂದಿ ಸಿನಿಮಾಗೆ ಡೇಟ್ಸ್ ಕೊಟ್ಟಿದ್ದೆವು. ಆದರೆ ಅನಿರೀಕ್ಷಿತ ಕಾರಣಗಳಿಂದ ಸಿನಿಮಾಗಳ ಶೂಟಿಂಗ್ ಸುಮಾರು ಆರು ತಿಂಗಳು ತಡವಾಗಬಹುದು. ಹಾಗಾಗಿ ಸಮಂತಾ ಹಿಂದಿ ಚಿತ್ರದ ಶೂಟಿಂಗ್‌ನಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಿನಿಂದ ಭಾಗಿಯಾಗಲಿದ್ದಾರೆ. ಮೊದಲು ಪ್ಲಾನ್ ಮಾಡಿದ ಪ್ರಕಾರ ಹಿಂದಿ ಪ್ರಾಜೆಕ್ಟ್  ಜನವರಿಯಲ್ಲಿ ಪ್ರಾರಂಭವಾಗಬೇಕಿತ್ತು. ಆದರೀಗ ಬದಲಾಗಿದೆ' ಎಂದು ಹೇಳಿದ್ದಾರೆ. 

ಸಿನಿಮಾದಿಂದ ನಟಿ ಸಮಂತಾ ದೀರ್ಘ ಬ್ರೇಕ್; ಬಾಲಿವುಡ್‌ ಚಿತ್ರದಿಂದ ಹೊರ ಬಂದ ಸ್ಯಾಮ್

'ಸಿನಿಮಾ ನಿರ್ಮಾಣ ತುಂಬಾ ಶ್ರಮದ ಕೆಲಸವಾಗಿದೆ. ಹಾಗಾಗಿ ಯಾರನ್ನಾದರೂ ದೀರ್ಘಕಾಲ ಕಾಯುವಂತೆ ಮಾಡುವುದು ಒಳ್ಳೆಯದಲ್ಲ. ಹಾಗಾಗಿ ಕಾಯಲು ಸಾಧ್ಯವಾಗದಿದ್ದರೆ ಯೋಜಿತ ವೇಳಾಪಟ್ಟಿಯ ಪ್ರಕಾರ ಮುಂದುವರಿಯಲು ನಾವು ಮೊದಲಿನಿಂದಲೂ ಸಿದ್ಧವಿದ್ದೇವೆ. ಈ ಬಗ್ಗೆ ಸಿನಿಮಾತಂಡಕ್ಕೂ ಮೊದಲೇ ಹೇಳಿದ್ದೀವಿ. ಅಧಿಕೃತವಾಗಿ ಒಪ್ಪಿಕೊಂಡಿರುವ ಯಾವುದೇ ಪ್ರಾಜೆಕ್ಟ್‌ಗಳಿಂದ ಸಮಂತಾ ಹೊರನಡೆದಿಲ್ಲ. ತನ್ನ ಮುಂಬರುವ ಪ್ರಾಜೆಕ್ಟ್‌ಗಳಿಂದ ಅವರು ಹೊರಬಂದಿದ್ದಾರೆ ಎನ್ನುವ ಸುದ್ದಿಗೆ ಯಾವುದೇ ಸತ್ಯವಿಲ್ಲ' ಎಂದು ಹೇಳಿದರು. ಈ ಮೂಲಕ ಸಮಂತಾ ಬಗ್ಗೆ ಹರಿದಾಡುತ್ತಿದ್ದ ಗಾಸಿಪ್‌ಗೆ ಪುಲ್ ಸ್ಟಾಪ್ ಇಟ್ಟಿದ್ದಾರೆ. 

'IMDb' 2022ರ ಪಟ್ಟಿಯಲ್ಲಿ ಸೌತ್ ಸ್ಟಾರ್ಸ್‌; ಯಶ್ ಪಡೆದಿರುವ ಸ್ಥಾನ ಯಾವುದು?

ಅಂದಹಾಗೆ ಸಮಂತಾ ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಖುಷಿ ಸಿನಿಮಾದ  ಶೂಟಿಂಗ್ ಅರ್ಧಕ್ಕೆ ನಿಂತಿದೆ. ವಿಜಯ್ ದೇವರಕೊಂಡ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಡಿಸೆಂಬರ್ ನಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಸಮಂತಾ ಅನಾರೋಗ್ಯದ ಕಾರಣ ಇನ್ನೂ ಚಿತ್ರೀಕರಣ ಪೂರ್ಣಗೊಂಡಿಲ್ಲ. ಹಾಗಾಗಿ ಈ ಸಿನಿಮಾ ಮುಂದಿನ ವರ್ಷಕ್ಕೆ ಪೋಸ್ಟ್‌ಪೋನ್ ಆಗಿದೆ. ಇನ್ನೂ ಈಗಾಗಲೇ ಶಾಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದರು. ಈ ಸಿನಿಮಾ ಕೂಡ ಮುಂದಿನ ವರ್ಷಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ಶೂಟಿಂಗ್ ಪ್ರಾರಂಭಿಸಿರುವ ಸಿನಿಮಾಗಳ ಜೊತೆಗೆ ಹೊಸ ಸಿನಿಮಾಗಳನ್ನು ಮುಂದಿನ ವರ್ಷ ಪ್ರಾರಂಭಿಸಲಿದ್ದಾರೆ. 

Latest Videos
Follow Us:
Download App:
  • android
  • ios