Asianet Suvarna News Asianet Suvarna News

ಸಿನಿಮಾದಿಂದ ನಟಿ ಸಮಂತಾ ದೀರ್ಘ ಬ್ರೇಕ್; ಬಾಲಿವುಡ್‌ ಚಿತ್ರದಿಂದ ಹೊರ ಬಂದ ಸ್ಯಾಮ್

ನಟಿ ಸಮಂತಾ ಸಿನಿಮಾದಿಂದ ದೀರ್ಘ ಬ್ರೇಕ್ ಪಡೆಯಲು ನಿರ್ಧರಿಸಿದ್ದು ಹಿಂದಿ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. 

Samantha Ruth Prabhu Walks Out of Bollywood Films Due to Health Issue sgk
Author
First Published Dec 20, 2022, 1:13 PM IST

ಟಾಲಿವುಡ್ ಸ್ಟಾರ್ ನಟಿ ಸಮಂತಾ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ.  ಸ್ಯಾಮ್ ಸಿನಿಮಾ, ಶೂಟಿಂಗ್, ಫೋಟೋಶೂಟ್ ಅಂತ ಸಖತ್ ಅಕ್ಟೀವ್ ಆಗಿದ್ದರು. ಆದರೀಗ Myositis ಕಾಯಿಲೆ ಬಳಿಕ ಸೈಲೆಂಟ್ ಆಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಸಮಂತಾ ಅನಾರೋಗ್ಯ ವಿಚಾರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಇನ್ನೇನು ಸಮಂತಾ ಮತ್ತೆ ವಾಪಾಸ್ ಆಗ್ತಾರೆ ಎನ್ನುತ್ತಿರುವಾಗಲೇ ಮತ್ತೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರು, ಹೆಚ್ಚಿನ ಚಿಕಿತ್ಸೆಗಾಗಿ ಕೊರಿಯಾಗೆ ಹೋಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದ ಸಮಂತಾ ಯಶೋದಾ ಸಿನಿಮಾ ಬಳಿಕ ಯಾವುದೇ ಪೋಸ್ಟ್ ಶೇರ್ ಮಾಡಿಲ್ಲ. ಈ ನಡುವೆ ಸಮಂತಾ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. 

ಸಮಂತಾ ಸಿನಿಮಾದಿಂದ ದೀರ್ಘ ಬ್ರೇಕ್ ಪಡೆಯಲು ನಿರ್ಧಸಿದ್ದಾರೆ ಎನ್ನಲಾಗಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಸಮಂತಾ ನಟನೆಯಿಂದ ಬ್ರೇಕ್ ಪಡೆಯಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇದರಿಂದ ಸಮಂತಾ ಬಾಲಿವುಡ್ ಸಿನಿಮಾಗಳಿಂದನೂ ಹೊರ ಬಂದಿದ್ದಾರೆ ಎನ್ನಲಾಗಿದೆ. ದಿ ಫ್ಯಾಮಿಲಿ ಮ್ಯಾನ್-2 ಸೂಪರ್ ಸಕ್ಸಸ್ ಬಳಿಕ ಸಮಂತಾ ಕೆಲವು ಬಾಲಿವುಡ್ ಸಿನಿಮಾಗಳಿಗೆ ಸಹಿ ಮಾಡಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಸಂಪೂರ್ಣ ವಿಶ್ರಾಂತಿ ಪಡೆಯುವ ಕಾರಣಕ್ಕೆ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಸಮಂತಾ ಜಾಗಕ್ಕೆ ಬೇರೆ ನಟಿಯರ ಹುಡುಕಾಟದಲ್ಲಿದೆಯಂತೆ ಸಿನಿಮಾತಂಡ. 

'IMDb' 2022ರ ಪಟ್ಟಿಯಲ್ಲಿ ಸೌತ್ ಸ್ಟಾರ್ಸ್‌; ಯಶ್ ಪಡೆದಿರುವ ಸ್ಥಾನ ಯಾವುದು?

ಅಂದಹಾಗೆ ಸಮಂತಾ ಈಗಾಗಲೇ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ತೆಲುಗಿನ ಖುಷಿ ಸಿನಿಮಾದ  ಶೂಟಿಂಗ್ ಅರ್ಧಕ್ಕೆ ನಿಂತಿದೆ. ವಿಜಯ್ ದೇವರಕೊಂಡ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲವು ಅಂದುಕೊಂಡಂತೆ ಆಗಿದ್ದರೆ ೀ ಸಿನಿಮಾ ಡಿಸೆಂಬರ್ ನಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಸಮಂತಾ ಅನಾರೋಗ್ಯದ ಕಾರಣ ಇನ್ನೂ ಚಿತ್ರೀಕರಣ ಪೂರ್ಣಗೊಂಡಿಲ್ಲ. ಹಾಗಾಗಿ ಈ ಸಿನಿಮಾ ಮುಂದಿನ ವರ್ಷಕ್ಕೆ ಪೋಸ್ಟ್‌ಪೋನ್ ಆಗಿದೆ. ಇನ್ನೂ ಈಗಾಗಲೇ ಶಾಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದರು. ಈ ಸಿನಿಮಾ ಕೂಡ ಮುಂದಿನ ವರ್ಷಕ್ಕೆ ರಿಲೀಸ್ ಆಗಲಿದೆ. 

Samantha ಆರೋಗ್ಯದಲ್ಲಿ ಏರುಪೇರು; ತುರ್ತು ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ಶಿಫ್ಟ್‌?

ಅಂದಹಾಗೆ ಸಮಂತಾ ಹಿಂದಿಯ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳಬೇಕಿತ್ತು. ವರುಣ್ ಧವನ್ ಜೊತೆ ಸಮಂತಾ ನಟಿಸಬೇಕಿತ್ತು. ಆದರೀಗ ಚಿಕಿತ್ಸೆ ಪಡೆಯುತ್ತಿರುವ ಕಾರಣ ಸಮಂತಾ ಸಿನಿಮಾದಿಂದ ಇರುವ ನಿರ್ಧಾರ ಮಾಡಿದ್ದಾರೆ. ಚೇತರಿಸಿಕೊಂಡ ಬಳಿಕ ಸಮಂತಾ ಮತ್ತೆ ನಟನೆಗೆ ಮರಳಿದ್ದಾರೆ. ಆದಷ್ಟು ಬೇಗ ಸಮಂತಾ ಸಿನಿಮಾಗೆ ವಾಪಾಸ್ ಆಗಲಿ, ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅಂದಹಾಗೆ ಸಮಂತಾ ಆರೋಗ್ಯ ಹೇಗಿದೆ ಎನ್ನುವ ಬಗ್ಗೆ ಯಾವುದೇ ಅಪ್ ಡೇಟ್ ನೀಡಿಲ್ಲ. ಹಾಗಿಗ ಅಭಿಮಾನಿಗಳು ಸಮಂತಾ ಅವರ ಬಗ್ಗೆ ಅಪ್ ಡೇಟ್ ಗಾಗಿ ಕಾಯುತ್ತಿದ್ದಾರೆ. 

Follow Us:
Download App:
  • android
  • ios