Citadel First Look: ಅನಾರೋಗ್ಯದ ಬಳಿಕ ಸಮಂತಾ ಮಾಸ್ ಎಂಟ್ರಿ; ಫ್ಯಾನ್ಸ್ ಫುಲ್ ಖುಷ್

ಟಾಲಿವುಡ್ ನಟಿ ಸಮಂತಾ ಸಿಟಾಡೆಲ್ ಮೂಲಕ ಮಾಸ್ ಎಂಟ್ರಿ ಕೊಟ್ಟಿದ್ದಾರೆ. 

Samantha Ruth Prabhu's first look from Indian version of Russo Brothers Citadel sgk

ಸೌತ್ ಸ್ಟಾರ್ ಸಮಂತಾ ಅನಾರೋಗ್ಯದ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸಮಂತಾ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಜೊತೆಗೆ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲೂ ಸಮಂತಾ ಹಾಜರಿದ್ದರು. ಅನಾರೋಗ್ಯದ ಬಳಿಕ ಸಮಂತಾ ಕಾಣಿಸಿಕೊಂಡ ಮೊದಲ ಕಾರ್ಯಕ್ರಮ ಅದಾಗಿತ್ತು. ಅನೇಕ ತಿಂಗಳುಗಳ ಬಳಿಕ ಸಮಂತಾ ಅವರನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಸದ್ಯ ಸಮಂತಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ತಿಂಗಳ ಬಳಿಕ ಬಣ್ಣ ಹಚ್ಚಿದ್ದು ಸಮಂತಾ ಅವರನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದರು. 

ಸಮಂತಾ ಸದ್ಯ ಹಿಂದಿಯ ಸಿಟಾಡೆಲ್ ಸೀರಿಸ್‌ನ ಶೂಟಿಂಗ್‌ನಲ್ಲಿದ್ದಾರೆ. ಫ್ಯಾಮಿಲಿ ಮ್ಯಾನ್ ಬಳಿಕ ಸಮಂತಾ ನಟಿಸುತ್ತಿರುವ ಸೀರಿಸ್ ಇದಾಗಿದೆ. ಇತ್ತೀಚಿಗಷ್ಟೆ ಶೂಟಿಂಗ್‌ಗೆ ಹಾಜರಾಗಿದ್ದ ಸಮಂತಾ ಇದೀಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಫ್ಯಾಮಿಲಿ ಮ್ಯಾನ್ 2 ಎಲ್ಲರ ಹೃದಯ ಗೆದ್ದಿದ್ದ ಸಮಂತಾ ಸದ್ಯ ಸಿಟಾಡೆಲ್ ಮೂಲಕ ಎಲ್ಲರ ಮನ ಗೆಲ್ಲಲು ಸಜ್ಜಾಗಿದ್ದಾರೆ. ಸದ್ಯ ಪ್ರೈಮ್ ವಿಡಿಯೋ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಫಸ್ಟ್ ಲುಕ್ ಹಂಚಿಕೊಂಡಿದ್ದು ಮಿಷನ್ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. ಸಮಂತಾ ಫಸ್ಟ್ ಲುಕ್ ಶೇರ್ ಮಾಡಿ, 'ಮಿಷನ್ ಪ್ರಾರಂಭವಾಗಿದೆ. ನಾವು ಸಿಟಾಡೆಲ್‌ನ ಭಾರತೀಯ ವರ್ಷನ್ ಪ್ರಾರಂಭಿಸಿದ್ದೇವೆ' ಎಂದು ಹೇಳಿದ್ದಾರೆ. 

ಅಂದಹಾಗೆ ಸೀರಿಸ್ ನಲ್ಲಿ ಸಮಂತಾ ಬಾಲಿವುಡ್ ನಟ ವರುಣ್ ಧವನ್ ಜೊತೆ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಸಮಂತಾ ವರುಣ್ ಜೊತೆ ತೆರೆಹಂಚಿಕೊಳ್ಳುತ್ತಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಈ ಸೀರಿಸ್‌ಗೆ ಫ್ಯಾಮಿಲ್ ಮ್ಯಾನ್ ಖ್ಯಾತಿಯ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 

Shakuntalam; ಅಬ್ಬಾ..!! ಸಮಂತಾ ಧರಿಸಿದ್ದ ಈ ಸೀರೆಯ ಬೆಲೆ ಇಷ್ಟೊಂದಾ?

ವೆರೈಟಿ ಪಾತ್ರದ ಬಗ್ಗೆ ಮಾತನಾಡಿದ ಸಮಂತಾ ರುತ್ ಪ್ರಭು, 'ಸಿಟಾಡೆಲ್ ಯೂನಿವರ್ಸ್, ಭಾರತೀಯ ಕಂತುಗಳ ಸ್ಕ್ರಿಪ್ಟ್ ನಿಜವಾಗಿಯೂ ನನ್ನನ್ನು ರೋಮಾಂಚನಗೊಳಿಸಿತು. ರುಸ್ಸೋ ಬ್ರದರ್ಸ್ ಎಜಿಬಿಒನಿಂದ ಪರಿಕಲ್ಪನೆಗೊಂಡ ಈ ಅದ್ಭುತ ಬ್ರಹ್ಮಾಂಡದ ಭಾಗವಾಗಲು ನಾನು ರೋಮಾಂಚನಗೊಂಡಿದ್ದೇನೆ. ಈ ಯೋಜನೆಯಲ್ಲಿ ಮೊದಲ ಬಾರಿಗೆ ವರುಣ್ ಜೊತೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದಾರೆ.

'ಸಮಂತಾ ಚಾರ್ಮ್ ಕಳೆದುಕೊಂಡಿದ್ದಾರೆ' ಎಂದ ಟ್ರೋಲಿಗರಿಗೆ ಬಾಲಿವುಡ್ ಸ್ಟಾರ್ ಖಡಕ್ ತಿರುಗೇಟು

ಸಮಂತಾ ರುತ್ ಪ್ರಭು ಕಳೆದ ವರ್ಷ ಮಯೋಸಿಟಿಸ್‌ನಿಂದ ಬಳಲುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಸಮಂತಾ ಸಿನಿಮಾದಂದ ಬ್ರೇಕ್ ಪಡೆದಿದ್ದರು. ಸದ್ಯ ಸಂಪೂರ್ಣ ಚೇತರಿಸಿಕೊಂಡಿರುವ ಸಮಂತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  ವರ್ಕೌಟ್, ಶೂಟಿಂಗ್ ಅಂತ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಸಮಂತಾ ಕೊನೆಯದಾಗಿ ಯಶೋದಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಶಾಕುಂತಲಂ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು ಫೆಬ್ರವರಿ 17ರಂದು ರಿಲೀಸ್ ಆಗುತ್ತಿದೆ. 

Latest Videos
Follow Us:
Download App:
  • android
  • ios