'ಸಮಂತಾ ಚಾರ್ಮ್ ಕಳೆದುಕೊಂಡಿದ್ದಾರೆ' ಎಂದ ಟ್ರೋಲಿಗರಿಗೆ ಬಾಲಿವುಡ್ ಸ್ಟಾರ್ ಖಡಕ್ ತಿರುಗೇಟು
ಸಮಂತಾ ಚಾರ್ಮ್ ಕಳೆದುಕೊಂಡಿದ್ದಾರೆ ಎಂದು ಟ್ರೋಲ್ ಮಾಡಿದವರಿಗೆ ಬಾಲಿವುಡ್ ನಟ ವರುಣ್ ಧವನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಸೌತ್ ಮತ್ತು ಬಾಲಿವುಡ್ ಚರ್ಚೆ ನಡುವೆ ಸ್ಟಾರ್ ಕಲಾವಿದರು ತಮ್ಮ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ ಎನ್ನುವುದನ್ನು ಸಾಬೀತು ಪಡಿಸುತ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಇದಾಗ ಸಮಾಂತ ಪರ ಬಾಲಿವುಡ್ ಸ್ಟಾರ್ ವರುಣ್ ಧವನ್ ಬ್ಯಾಟ್ ಬೀಸಿರುವುದು. ಸಮಂತಾ ಅನೋರಾಗ್ಯದ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಸದ್ಯ ಶಾಕುಂತಲಂ ಸಿನಿಮಾದ ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಶಾಕುಂತಲಂ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕಾರ್ಯಕ್ರಮದಲ್ಲಿ ಸಮಂತಾ ಕೂಡ ಹಾಜರಿದ್ದರು. ಅನೇಕ ತಿಂಗಳ ಬಳಿಕ ಸಮಂತಾ ಕ್ಯಾಮರಾ ಮುಂದೆ ಬಂದಿದ್ದರು. ಸಮಂತಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಮಂತಾ ಅವರನ್ನು ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಸಮಂತಾ ಅವರನ್ನು ಟ್ರೋಲ್ ಮಾಡಿದ್ದಾರೆ. ಸಮಂತಾ ಮೊದಲಿನ ಚಾರ್ಮ್ ಕಳೆದುಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಟ್ರೋಲಿಗರಿಗೆ ಸಮಂತಾ ತಿರುಗೇಟು ನೀಡಿದ್ದರು. ಅನನ್ನ ಸ್ಥಿತಿ ನಿಮಗೆ ಬರದಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಇದೀಗ ಟ್ರೋಲಿಗೆ ಬಾಲಿವುಡ್ ಸ್ಟಾರ್ ವರುಣ್ ಧವನ್ ಕೂಡ ಪ್ರತಿಕ್ರಿಯೆ ನೀಡುವ ಮೂಲಕ ಸಮಂತಾ ಪರ ನಿಂತಿದ್ದಾರೆ. ಸಮಂತಾ ಚಾರ್ಮ್ ಕಳೆದುಕೊಂಡಿದ್ದಾರೆ ಎಂದು ಮಾಡಿದ್ದ ಟ್ರೋಲ್ ಪೇಜ್ ಅನ್ನು ರೀ ಟ್ವೀಟ್ ಮಾಡಿ, ಧವನ್ ಪ್ರತಿಕ್ರಿಯಿಸಿದ್ದಾರೆ. 'ನನ್ನನ್ನು ನಂಬಿ, ಸಮಂತಾ ಅವರನ್ನು ಭೇಟಿಯಾಗಿ, ಚಾರ್ಮ್ ಹೊಂದಿದ್ದಾರೆ' ಎಂದು ಹೇಳಿದ್ದಾರೆ. ವರುಣ್ ಧವನ್ ರಿಯಾಕ್ಷನ್‌ಗೆ ಸಮಂತಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನನ್ನ ಸ್ಥಿತಿ ನಿಮಗೆ ಬರದಿರಲಿ ಎಂದು ಪ್ರಾರ್ಥಿಸುತ್ತೇನೆ; ಟ್ರೋಲಿಗರಿಗೆ ನಟಿ ಸಮಂತಾ ಪ್ರತಿಕ್ರಿಯೆ ವೈರಲ್
ಟ್ರೋಲಿಗರಿಗೆ ಸಮಂತಾ ಪ್ರತಿಕ್ರಿಯೆ
ನಾನು ತಿಂಗಳಗಟ್ಟಲೆ ಚಿಕಿತ್ಸೆ ಪಡೆದುಕೊಂಡಷ್ಟು ಮತ್ತು ಔಷಧಿಗಳನ್ನು ತೆಗೆದುಕೊಂಡಷ್ಟು ನೀವು ತೆಗೆದುಕೊಳ್ಳದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀವು ಮತ್ತಷ್ಟು ಚಾರ್ಮ್ ಪಡೆಯಲು ನನ್ನ ಕಡೆಯಿಂದ ಒಂದಷ್ಟು ಪ್ರೀತಿ’ ಎಂದು ಸಮಂತಾ ಪ್ರತಿಕ್ರಿಯೆ ನೀಡಿದ್ದರು. ಟ್ರೋಲ್ ಮಾಡಿದವರಿಗೂ ಒಳ್ಳೆದನ್ನೇ ಬಯಸಿದ ಸಮಂತಾ ಪ್ರತಿಕ್ರಿಯೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೈಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದಿದ್ದೇಕೆ ಸಮಂತಾ? ದಿನಕ್ಕೆ 10,008 ಬಾರಿ ಜಪಿಸುತ್ತಾರಂತೆ ಸ್ಯಾಮ್
ಸಿಟಾಡೆಲ್ ಸೀರಿಸ್‌ನಲ್ಲಿ ಸಮಂತಾ-ವರುಣ್ ಧವನ್
ಸಮಂತಾ ಮತ್ತು ಬಾಲಿವುಡ್ ನಟ ವರುಣ್ ಧವನ್ ವೆಬ್ ಸೀರಿಸ್ ನಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿಟಾಡೆಲ್ ಎನ್ನುವ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿಟಾಡೆಲ್ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಸಮಂತಾ ಅನಾರೋಗ್ಯದ ಕಾರಣ ತಡವಾಗಿದೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಸಿಟಾಡೆಲ್ ಸೀರಿಸ್ ಪ್ರಾರಂಭವಾಗಲಿದೆ.