ಎಷ್ಟು ಜನರ ಜೊತೆ ಡೇಟ್ ಮಾಡಿದ್ರೂ ಕಣ್ಣೀರು ಹಾಕ್ತಾರೆ: ಶೋಭಿತಾ-ನಾಗ ಚೈತನ್ಯ ಡೇಟಿಂಗ್‌ಗೆ ಸಮಂತಾ ರಿಯಾಕ್ಷನ್
ಶೋಭಿತಾ ಜೊತೆ ನಾಗ ಚೈತನ್ಯ ಡೇಟಿಂಗ್ ವದಂತಿ ಬಗ್ಗೆ ಮಾಜಿ ಪತ್ನಿ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ.
ಟಾಲಿವುಡ್ ಸ್ಟಾರ್ ಸಮಂತಾ ಮತ್ತು ನಟ ನಾಗ ಚೈತನ್ಯ ದೂರ ಆಗಿ ವರ್ಷವೇ ಕಳೆಯಿತು. ಟಾಲಿವುಡ್‌ನ ಈ ಕ್ಯೂಟ್ ಕಪಲ್ ವಿಚ್ಛೇದನ ಸುದ್ದಿ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿತ್ತು. ಇದೆಲ್ಲ ಈಗ ಹಳೆಯ ವಿಚಾರ. ಸಮಂತಾ ಮತ್ತು ನಾಗ ಚೈತನ್ಯ ಈ ಘಟನೆಯಿಂದ ತುಂಬಾ ದೂರ ಸಾಗಿದ್ದಾರೆ. ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮಮ್ಮ ಜೀವನ ಸಾಗಿಸುತ್ತಿದ್ದಾರೆ. ಈ ನಡುವೆ ನಾಗ ಚೈತನ್ಯ ಡೇಟಿಂಗ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸಮಂತಾ ಅವರಿಂದ ದೂರ ಆದ ಮೇಲೆ ನಾಗ ಚೈತನ್ಯ ನಟಿ ಶೋಭಿತಾ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇಬ್ಬರೂ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ವದಂತಿಗೆ ದಾರಿ ಮಾಡಿಕೊಟ್ಟಿದ್ದಾರೆ.
ಇತ್ತೀಚಿಗಷ್ಟೆ ನಾಗ ಚೈತನ್ಯ ಮತ್ತು ಶೋಭಿತಾ ಇಬ್ಬರೂ ಲಂಡನ್‌ನ ಹೋಟೆಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಫೋಟೋ ಲೀಕ್ ಆದ ಬಳಿಕ ಇಬ್ಬರ ಡೇಟಿಂಗ್ ವದಂತಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಇದೀಗ ನಾಗ ಚೈತನ್ಯ ಡೇಟಿಂಗ್ ವಿಚಾರವಾಗಿ ಮಾಜಿ ಪತ್ನಿ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ. ನಾಗ ಚೈತನ್ಯ ಹೆಸರು ಹೇಳದೆ ಪರೋಕ್ಷವಾಗಿ ಕಿಡಿ ಕಾರಿದ್ದಾರೆ ಸಮಂತಾ.
ವೆಬ್‌ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಸಮಂತಾ, 'ಯಾರು ಯಾರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಪ್ರೀತಿಯ ಮೌಲ್ಯವನ್ನು ತಿಳಿದಿಲ್ಲದವರು ಎಷ್ಟು ಜನರೊಂದಿಗೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ. ಕನಿಷ್ಠ ಆ ಹುಡುಗಿಯಾದರೂ ಸಂತೋಷವಾಗಿರಲಿ. ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡು ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದಾಗುತ್ತದೆ' ಎಂದು ಸಮಂತಾ ಹೇಳಿದ್ದಾರೆ.
ವಿಚ್ಛೇದನ ಬಳಿಕ ಐಟಂ ಡಾನ್ಸ್ ಮಾಡಬೇಡ ಅಂದ್ರು; 'ಪುಷ್ಪ' ಹಾಡಿನ ಬಗ್ಗೆ ಸಮಂತಾ ಮಾತು
ವಿಚ್ಛೇದನ ಬಗ್ಗೆಯೂ ಸಮಂತಾ ಮಾತನಾಡಿದ್ದಾರೆ. 'ಕಠಿಣ ಸಮಯದಲ್ಲಿ ನಾನು ಕತ್ತಲೆಯಲ್ಲಿದ್ದೆ. ನಾನು ಕೆಲವು ಗಾಢವಾದ ಆಲೋಚನೆಗಳನ್ನು ಹೊಂದಿದ್ದೆ. ಈ ಆಲೋಚನೆಗಳು ನನ್ನನ್ನು ನಾಶಮಾಡಲು ಬಿಟ್ಟಿಲ್ಲ. ಇದರರ್ಥ ನಾನು ಒಂದು ಹೆಜ್ಜೆ ಮುಂದೆ ನೋಡುವುದನ್ನು ಪ್ರಾರಂಭಿಸಬೇಕು. ಅನೇಕ ಆತ್ಮೀಯರು ನನ್ನ ಬೆಂಬಲಕ್ಕೆ ನಿಂತಿರುವುದು ನನ್ನ ಅದೃಷ್ಟ. ನಾನು ಇನ್ನೂ ಅದರಿಂದ ಹೊರಬಂದಿಲ್ಲ. ಆದರೆ ಕೆಟ್ಟ ದಿನಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ' ಎಂದು ಸಮಂತಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಸಂಭಾವನೆಗಾಗಿ ಭಿಕ್ಷೆ ಬೇಡಬಾರದು; ನಟಿ ಸಮಂತಾ
ಶಾಕುಂತಲಂ ಸಿನಿಮಾ ಬಗ್ಗೆ
ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಮೇನಕಾ ಮತ್ತು ವಿಶ್ವಾಮಿತ್ರ ಪುತ್ರಿ ಶಕುಂತಲಾ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ ಸಿನಿಮಾ ವೀಕ್ಷಿಸಿದ್ದ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದರು.