ವಿಚ್ಛೇದನ ಬಳಿಕ ಐಟಂ ಡಾನ್ಸ್ ಮಾಡಬೇಡ ಅಂದ್ರು; 'ಪುಷ್ಪ' ಹಾಡಿನ ಬಗ್ಗೆ ಸಮಂತಾ ಮಾತು
ವಿಚ್ಛೇದನ ಬಳಿಕ ಪುಷ್ಪ ಸಿನಿಮಾದ ಹಾಡಿಗೆ ಆಫರ್ ಬಂತು. ಆದರೆ ಸ್ನೇಹಿತರು ಮತ್ತು ಕುಟುಂಬದವರು ಐಟಂ ಡಾನ್ಸ್ ಮಾಡಬೇಡ ಅಂತ ಹೇಳಿದ್ರು ಎನ್ನುವ ವಿಚಾರವನ್ನು ಸಮಂತಾ ಬಹಿರಂಗ ಪಡಿಸಿದ್ದಾರೆ.
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಮಂತಾ ಸದ್ಯ ಶಾಕುಂತಲಂ ಸಿನಿಮಾ ರಿಲೀಸ್ ಬ್ಯುಸಿಯಲ್ಲಿದ್ದಾರೆ. ಸಮಂತಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಸದ್ಯ ಸ್ಯಾಮ್ ಶಾಕುಂತಲಂ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಗಮನ ಸೆಳೆದಿರುವ ಶಾಕುಂತಲಂ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳ ಬಗ್ಗೆ ಸಮಂತಾ ಮಾತನಾಡಿದ್ದಾರೆ.
ಸಿನಿಮಾಗಾಗಿ ಸಮಂತಾ ಬ್ಯಾಕ್-ಟು-ಬ್ಯಾಕ್ ಸಂದರ್ಶನ ನೀಡುತ್ತಿದ್ದಾರೆ. ಸ್ಟಾರ್ ನಟಿ ಶಾಕುಂತಲಂಗೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗ ಪಡಿಸುವ ಜೊತೆಗೆ ಅವರ ಆರೋಗ್ಯ, ಟ್ರೋಲ್‌ಗಳು ಸೇರಿದಂತೆ ಅನೇಕ ನಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನಾಗ ಚೈತನ್ಯ ಅವರಿಂದ ದೂರ ಆದ ಬಳಿಕ ಸಮಂತಾ, ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ 'ಹೂಂ ಅಂಟಾವ ಮಾವ ಹೂ ಹು ಅಂತೀಯಾ' ಹಾಡಿಗೆ ಹೆಜ್ಜೆ ಹಾಕುವ ಮೂಲಕ ದೊಡ್ಡದ ಖ್ಯಾತಿ ಗಳಿಸಿದರು. ವಿಚ್ಛೇದನ ಪಡೆದ ಸಮಯದಲ್ಲೇ ಈ ಹಾಡಿಗೆ ಹೆಜ್ಜೆ ಹಾಕುವುದು ಸ್ನೇಹಿತರಿಗೆ, ಕುಟುಂಬದವರಿಗೆ ಇಷ್ಟವಿರಲಿಲ್ಲ ಎಂದು ಸಮಂತಾ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಸಮಂತಾ 'ನನಗೆ ಊ ಅಂತಾವ ಆಫರ್ ಬಂದಾಗ, ನಾನು ವಿಚ್ಛೇದನ ಘೋಷಣೆ ಮಾಡುವ ಮಧ್ಯದಲ್ಲಿದ್ದೆ. ನಾನು ಘೋಷಣೆ ಮಾಡಿದಾಗ ನನ್ನ ಪ್ರತಿಯೊಬ್ಬ ಸ್ನೇಹಿತರು, ಪ್ರತಿಯೊಬ್ಬ ಹಿತೈಷಿಗಳು ಮತ್ತು ನನ್ನ ಕುಟುಂಬದವರು ನೀನು ಮನೆಯಲ್ಲೇ ಕುಳಿತುಕೊ, ನೀವು ವಿಚ್ಛೇದನ ಘೋಷಿಸಿದ ನಂತರ ಈಗ ಐಟಂ ಸಾಂಗ್ ಮಾಡಬೇಡ. ಬೇಡ ಎಂದು ಹೇಳು ಎಂದಿದ್ದರು. ಸೂಪರ್ ಡಿಲಕ್ಸ್ ಮಾಡಲು ಮತ್ತು ಚಾಲೆಂಜ್ ಮಾಡುವಂತೆ ನನ್ನನ್ನು ಸಾಮಾನ್ಯವಾಗಿ ಪ್ರೋತ್ಸಾಹಿಸುತ್ತಿದ್ದ ನನ್ನ ಸ್ನೇಹಿತರು ಕೂಡ ಬೇಡ, ಐಟಂ ಸಾಂಗ್ ಮಾಡಬೇಡ ಎಂದು ಹೇಳಿದರು. ಆದರೆ ನಾನು ಸರಿ, ಅದನ್ನು ಮಾಡುತ್ತೇನೆ ಎಂದು ಹೇಳಿದೆ' ಎಂದು ಸಮಂತಾ ಹೇಳಿದರು.
ಯಾರನ್ನಾದರೂ ಡೇಟ್ ಮಾಡಿ; ಅಭಿಮಾನಿಯ ಪ್ರಶ್ನೆಗೆ ಸಮಂತಾ ರಿಯಾಕ್ಷನ್ ವೈರಲ್
ಸೌತ್ ಸಿನಿಮಾರಂಗದ ಪವರ್ ಕಪಲ್ ಆಗಿದ್ದ ಸಮಂತಾ ಮತ್ತು ನಾಗಚೈತನ್ಯ ಜೋಡಿ 2021ರಲ್ಲಿ ಬೇರೆ ಬೇರೆ ಆಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದರು. ಸಮಂತಾ ಸದ್ಯ ಸಿಂಗಲ್ ಆಗಿ ಲೈಫ್ ಲೀಡ್ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಜೊತೆಗೆ ಹಿಂದಿ ಸಿನಿಮಾಗಳಲ್ಲೂ ಸಮಂತಾ ನಟಿಸುತ್ತಿದ್ದಾರೆ. ವೆಬ್ ಸೀರಿಸ್‌ನಲ್ಲೂ ಸಮಂತಾ ಅಭಿನಯಿಸುತ್ತಿದ್ದಾರೆ.
ಸಂಭಾವನೆಗಾಗಿ ಭಿಕ್ಷೆ ಬೇಡಬಾರದು; ನಟಿ ಸಮಂತಾ
ಶಾಕುಂತಲಂ ಬಗ್ಗೆ
ಶಾಕುಂತಲಂನಲ್ಲಿ ಸಮಂತಾ ಮೇನಕಾ ಮತ್ತು ವಿಶ್ವಾಮಿತ್ರ ಪುತ್ರಿ ಶಕುಂತಲಾ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ ಸಿನಿಮಾ ವೀಕ್ಷಿಸಿದ್ದ ಸಮಂತಾ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹೊರಹಾಕಿದ್ದರು.