Asianet Suvarna News Asianet Suvarna News

ಸಂಭಾವನೆಗಾಗಿ ಭಿಕ್ಷೆ ಬೇಡಬಾರದು; ನಟಿ ಸಮಂತಾ

ಸಂಭಾವನೆಗಾಗಿ ಭಿಕ್ಷೆ ಬೇಡಬಾರದು ಎಂದು ನಟಿ ಸಮಂತಾ ಹೇಳಿದ್ದಾರೆ. 

Shakuntalam actress Samantha says I Should Not Have To Beg For Remuneration sgk
Author
First Published Mar 29, 2023, 10:49 AM IST

ಸೌತ್ ಸ್ಟಾರ್ ಸಮಂತಾ ಸಿನಿರಸಿಕರ ಹಾಟ್ ಫೇವರಿಟ್ ನಟಿಯರಲ್ಲಿ ಒಬ್ಬರು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಸಮಂತಾ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಸದ್ಯ ಸ್ಯಾಮ್ ಶಾಕುಂತಲಂ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಗಮನ ಸೆಳೆದಿರುವ ಶಾಕುಂತಲಂ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ.  

ಶಾಕುಂತಲಂ ಸಿನಿಮಾಗಾಗಿ ಸಮಂತಾ ಬ್ಯಾಕ್-ಟು-ಬ್ಯಾಕ್ ಸಂದರ್ಶನ ನೀಡುತ್ತಿದ್ದಾರೆ. ಸ್ಟಾರ್ ನಟಿ ಶಾಕುಂತಲಂಗೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗ ಪಡಿಸುವ ಜೊತೆಗೆ ಅವರ ಆರೋಗ್ಯ, ಟ್ರೋಲ್‌ಗಳು ಸೇರಿದಂತೆ ಅನೇಕ ನಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗಷ್ಟೆ ಪಿಂಕ್‌ವಿಲ್ಲಾ ಜೊತೆ ಮಾತನಾಡಿದ ನಟಿ ಸಮಂತಾ, ಸಂಭಾವನೆ ವಿಚಾರ ಮಾತನಾಡಿದ್ದಾರೆ. ಸಿನಿಮಾರಂಗದಲ್ಲಿ ವೇತನ ಸಮಾನತೆ ಬಗ್ಗೆ ಸಮಂತಾ ಅವರಿಗೆ ಪ್ರಶ್ನೆ ಮಾಡಲಾಯಿತು. ಸಮಾನ ಸಂಭಾವನೆಗಾಗಿ ಭಿಕ್ಷೆ ಬೇಡಬಾರದು ಮತ್ತು ಅದಕ್ಕಾಗಿ ತುಂಬಾ ಫೈಟ್ ಮಾಡಿರುವುದಾಗಿ ಹೇಳಿದ್ದಾರೆ.  

ಸಂದರ್ಶನದಲ್ಲಿ ಸಮಂತಾ, 'ನಾನು ನೇರವಾಗಿ ಅಲ್ಲ, ಕಷ್ಟಪಟ್ಟು ಹೋರಾಡುತ್ತಿದ್ದೇನೆ... ಹಾಗಂತ ಹೀರೋಗಳಷ್ಟೆ ಸಂಭಾವನೆಗೆ ಹೋರಾಡುತ್ತೇನೆ ಅಂತಲ್ಲ. ಕಠಿಣ ಪರಿಶ್ರಮ ಮತ್ತು ಯಶಸ್ಸು ನೋಡಿ ನಿರ್ಮಾಪಕರೆ ಬಂದು ಹೌದು ನಾವು ನಿಮಗೆ ಇಷ್ಟು ಪಾವತಿಸಲು ಬಯಸುತ್ತೇವೆ ಎಂದು ಹೇಳಬೇಕು. ಅದಕ್ಕಾಗಿ ನಾನು ಭಿಕ್ಷೆ ಬೇಡಬೇಕಾಗಿಲ್ಲ. ಇದಕ್ಕೆ ಕಠಿಣ ಪರಿಶ್ರಮ ಬೇಕು ಎಂದು ನಾನು ನಂಬುತ್ತೇನೆ' ಎಂದು ಹೇಳಿದ್ದಾರೆ. 

ಅನಾರೋಗ್ಯದ ಬಗ್ಗೆ ಸಮಂತಾ ಮಾತು

ಸಮಂತಾ ಅನಾರೋಗ್ಯದ ಬಗ್ಗೆಯೂ ಮಾತನಾಡಿದ್ದಾರೆ. ಮೈಯೋಸಿಟಿಸ್ ರೋಗದ ವಿರುದ್ಧ ನಡೆಸಿದ ಹೋರಾಟದ ಬಗ್ಗೆ ಮಾತನಾಡಿದರು. ಎಲ್ಲಾ ದಿನವೂ ಒಂದೇ ರೀತಿ ಇರುವುದಿಲ್ಲ. ಪ್ರತಿ ದಿನ ವಿಭಿನ್ನವಾಗಿ ಇರುತ್ತದೆ. ಒಂದು ದಿನ ಹೈ ಇದ್ದರೇ ಮತ್ತೊಂದು ದಿನ ಲೋ ಇರುತ್ತೆ. ನಿರ್ಮಾಪಕರು, ನಿರ್ದೇಶಕರು ನನಗಾಗಿ ಸಮಯ ನೀಡಿದರು, ಕಾದರು ಶಕ್ತಿ ತುಂಬಿದರು. ಅದಕ್ಕಾಗಿ ನಾನು ನಿಜಕ್ಕೂ ಕೃತಜ್ಞನಾಗಿದ್ದೇನೆ. ನಾನು ಹೋರಾಡಲು ಮತ್ತು ನಿಜವಾಗಿಯೂ ಹೋರಾಡಲು ಇಷ್ಟಪಡುವ ಒಂದು ವಿಷಯವೆಂದರೆ ಸೆಟ್‌ಗೆ ಹಿಂತಿರುಗುವುದು' ಎಂದು ಸಮಂತಾ ಹೇಳಿದರು.

ಯಾರನ್ನಾದರೂ ಡೇಟ್ ಮಾಡಿ; ಅಭಿಮಾನಿಯ ಪ್ರಶ್ನೆಗೆ ಸಮಂತಾ ರಿಯಾಕ್ಷನ್ ವೈರಲ್

ಯಾರನ್ನಾದರೂ ಡೇಟ್ ಮಾಡಿ ಎಂದ ಅಭಿಮಾನಿಗೆ ಸಮಂತಾ ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ. ಅಭಿಮಾನಿ ಶ್ರಾವಂತಿ ಎನ್ನುವ ಟ್ವಿಟ್ಟರ್ ಖಾತೆಯಿಂದ, 'ನನಗೆ ಗೊತ್ತು ನಾನು ಹೇಳಲು ಇದು ಸರಿಯಾದ ಸ್ಥಳವಲ್ಲ ಎನ್ನುವುದು. ಯಾರನ್ನಾದರೂ ಡೇಟ್ ಮಾಡಿ ಸಮಂತಾ' ಎಂದು ಹೇಳಿದ್ದಾರೆ. ಇದಕ್ಕೆ ಸಮಂತಾ ಉತ್ತರ ನೀಡಿದ್ದಾರೆ. 'ನಿಮ್ಮಂತೆ ನನ್ನನ್ನು ಯಾರು ಪ್ರೀತಿಸುತ್ತಾರೆ' ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದಾರೆ. ಸಮಂತಾ ಅವರ ಈ ಕ್ಯೂಟ್ ಪ್ರತಿಕ್ರಿಯೆ ಅಭಿಮಾನಿಗಳ ಹೃದಯ ಗೆದ್ದಿದೆ.

'ಶಾಕುಂತಲಂ' ಸಿನಿಮಾ ರಿಜೆಕ್ಟ್ ಮಾಡಿದ್ದೆ, ಬಳಿಕ ಒಪ್ಪಿಕೊಂಡೆ; ಶಾಕುಂತಲೆಯಾದ ಕಾರಣ ಬಿಚಿಟ್ಟ ನಟಿ ಸಮಂತಾ

ಶಾಕುಂತಲಂ ಬಗ್ಗೆ

ಶಾಕುಂತಲಂನಲ್ಲಿ ಸಮಂತಾ ಮೇನಕಾ ಮತ್ತು ವಿಶ್ವಾಮಿತ್ರ ಪುತ್ರಿ ಶಕುಂತಲಾ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ ಸಿನಿಮಾ ವೀಕ್ಷಿಸಿದ್ದ ಸಮಂತಾ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹೊರಹಾಕಿದ್ದರು. 

Follow Us:
Download App:
  • android
  • ios